Dhanu Sankranti 2022:  16 ಡಿಸೆಂಬರ್ 2022 ರಂದು ಗ್ರಹಗಳ ರಾಜ ಸೂರ್ಯ ಧನು ರಾಶಿಗೆ ಪ್ರವೇಶಿಸಲಿದ್ದಾರೆ. ವರ್ಷದಲ್ಲಿ ಮಕರ ಸಂಕ್ರಾಂತಿಯನ್ನು ಹೊರತುಪಡಿಸಿ, ಕರ್ಕ, ಧನು ಹಾಗೂ ಮೀನ ಸಂಕ್ರಾಂತಿಗಳಿಗೆ ವಿಶೇಷ ಮಹತ್ವವಿದೆ. ಸೂರ್ಯ ದೇವನು ಧನು ರಾಶಿ ಮತ್ತು ಮೀನ ರಾಶಿಯನ್ನು ಪ್ರವೇಶಿಸಿದಾಗ, ಆ ದಿನದಿಂದ ಕರ್ಮಗಳು ಪ್ರಾರಂಭವಾಗುತ್ತವೆ. ಧನು ಸಂಕ್ರಾಂತಿಗೆಂದೇ ಕೆಲವು ವಿಶೇಷ ಪರಿಹಾರೋಪಾಯಗಳನ್ನೂ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ, ಅವು ಜೀವನದಲ್ಲಿ ಯಶಸ್ಸು, ಸಂಪತ್ತು ಮತ್ತು ಸುಖ-ಸಂತೋಷವನ್ನು ತರುತ್ತವೆ. ನಿಮ್ಮ ರಾಶಿಗೆ ಅನುಗುಣವಾಗಿ ನೀವು ಈ ಉಪಾಯಗಳನ್ನು ಮಾಡಿದರೆ, ಶೀಘ್ರ ಫಲಪ್ರಾಪ್ತಿಯ ಜೊತೆಗೆ ನಿಮ್ಮ ಎಲ್ಲಾ ದುಃಖ, ಸಂಕಷ್ಟಗಳು ನಿವಾರಣೆಯಾಗುತ್ತವೆ. 


COMMERCIAL BREAK
SCROLL TO CONTINUE READING

ರಾಶಿಗೆ ಅನುಗುಣವಾಗಿ ಈ ಉಪಾಯಗಳನ್ನು ಮಾಡಿ
ಮೇಷ ರಾಶಿ -
ಮೇಷ ರಾಶಿಯು ಸೂರ್ಯನ ಶ್ರೇಷ್ಠ ರಾಶಿಯಾಗಿದೆ. ಮೇಷ ರಾಶಿಯವರು ಧನು ಸಂಕ್ರಾಂತಿಯಂದು ಬೆಲ್ಲವನ್ನು ದಾನ ಮಾಡಬೇಕು. ಇದು ಆರ್ಥಿಕ ಲಾಭವನ್ನು ತರುತ್ತದೆ. ಇದರೊಂದಿಗೆ, ಗ್ರಹಗಳ ಅಶುಭ ಪರಿಣಾಮಗಳನ್ನು ಕಡಿಮೆ ಮಾಡಲು, ಹರಿಯುವ ನೀರಿನಲ್ಲಿ ಸ್ವಲ್ಪ ಬೆಲ್ಲ ಮತ್ತು ಅನ್ನವನ್ನು ಹರಿಬಿಡಬೇಕು.

ವೃಷಭ ರಾಶಿ - ಸಂತೋಷ ಮತ್ತು ಅದೃಷ್ಟವನ್ನು ಹೆಚ್ಚಿಸಲು, ಈ ದಿನ ವೃಷಭ ರಾಶಿಯ ಜನರು ನೀರಿನಲ್ಲಿ ಎಳ್ಳು ಬೆರೆಸಿ ಸ್ನಾನ ಮಾಡಬೇಕು. ಅಕ್ಕಿ, ಮೊಸರು ಮತ್ತು ಎಳ್ಳು ಮುಂತಾದ ಬಿಳಿ ಬಣ್ಣದ ವಸ್ತುಗಳನ್ನು ದಾನ ಮಾಡುವುದರಿಂದ ನಿಮಗೆ ಶುಭ ಫಲಗಳು ಪ್ರಾಪ್ತಿಯಾಗುತ್ತವೆ.

ಮಿಥುನ ರಾಶಿ - ಮಿಥುನ ರಾಶಿಯವರು ಈ ದಿನ ವಿಶೇಷವಾಗಿ ಹಸುವಿಗೆ ಹಸಿರು ಮೇವನ್ನು ತಿನ್ನಿಸಬೇಕು. ಚಂದ್ರ ಮತ್ತು ಶುಕ್ರ ದೋಷಗಳು ಇದರಿಂದ ನಿವಾರಣೆಯಾಗಿ ಜೀವನದಲ್ಲಿ ಉನ್ನತಿ ಪ್ರಾಪ್ತಿಯಾಗಲಿದೆ.


ಕರ್ಕ ರಾಶಿ - ಕರ್ಕ ರಾಶಿಯವರು ಧನು ಸಂಕ್ರಾಂತಿಯಂದು ಸೂರ್ಯ ದೇವರಿಗೆ ತುಪ್ಪ ಮತ್ತು ಅಕ್ಕಿ ಕಿಚಡಿಯನ್ನು ಅರ್ಪಿಸಬೇಕು. ಇದರಿಂದ ಕೆಲಸ ಕಾರ್ಯಗಳಲ್ಲಿ ಬರುವ ಅಡೆತಡೆಗಳು ದೂರಾಗುತ್ತವೆ.

ಸಿಂಹ ರಾಶಿ - ಸಂಕ್ರಾಂತಿಯು ಸೂರ್ಯನಿಗೆ ಸಮರ್ಪಿತವಾಗಿದೆ ಮತ್ತು ಸೂರ್ಯನು ಸಿಂಹ ರಾಶಿಯ ಅಧಿಪತಿ. ಈ ದಿನ ಬ್ರಹ್ಮ ಮುಹೂರ್ತದಲ್ಲಿ ಸಿಂಹ ರಾಶಿಯವರು ತಾಮ್ರದ ಪಾತ್ರೆಯಲ್ಲಿ ಶುದ್ಧ ನೀರು, ಹೂವುಗಳು, ಕೆಂಪು ಚಂದನವನ್ನು ಹಾಕಿ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಬೇಕು. ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ, ನೀವು ಸಾಧಕರು ಪುಣ್ಯವಂತರು ಮತ್ತು ಚಿರಂಜೀವಿಯಾಗುವಿರಿ.

ಕನ್ಯಾ ರಾಶಿ - ಧನು ಸಂಕ್ರಾಂತಿಯಂದು ಕನ್ಯಾ ರಾಶಿಯ ಜನರು ವಿಷ್ಣುವಿಗೆ ಎಳ್ಳನ್ನು ಬೆರೆಸಿದ ಹಾಲಿನಿಂದ  ಅಭಿಷೇಕ ಮಾಡಿ ನಂತರ ತುಳಸಿ ದಳವನ್ನು ಅರ್ಪಿಸಬೇಕು. ಈ ಪರಿಹಾರವು ರೋಗಗಳಿಂದ ಪರಿಹಾರವನ್ನು ನೀಡುತ್ತದೆ.

ತುಲಾ ರಾಶಿ - ಜ್ಯೋತಿಷ್ಯದಲ್ಲಿ, ತುಲಾವನ್ನು ಸೂರ್ಯನ ದುರ್ಬಲ ರಾಶಿ ಎಂದು ಪರಿಗಣಿಸಲಾಗುತ್ತದೆ. ಈ ದಿನ ಬೆಲ್ಲದಿಂದ ಮಾಡಿದ ಭಕ್ಷ್ಯಗಳನ್ನು ದಾನ ಮಾಡುವುದರಿಂದ ತುಲಾ ರಾಶಿಯವರಿಗೆ ಕೌಟುಂಬಿಕ ನೆಮ್ಮದಿ ಸಿಗುತ್ತದೆ.

ವೃಶ್ಚಿಕ ರಾಶಿ - ವೃಶ್ಚಿಕ ರಾಶಿಯವರು ಧನು ಸಂಕ್ರಾಂತಿಯಂದು ಹವಳ, ಕೆಂಪು ವಸ್ತ್ರವನ್ನು ದಾನ ಮಾಡಬೇಕು. ಇದರಿಂದ ತೊಂದರೆಗಳು ನಿವಾರಣೆಯಾಗಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.

ಧನು ರಾಶಿ - ಸೂರ್ಯನು ಧನು ರಾಶಿಗೆ ಪ್ರವೇಶಿಸುತ್ತಿದ್ದಾನೆ, ಅಂತಹ ಪರಿಸ್ಥಿತಿಯಲ್ಲಿ, ಈ ದಿನ ಸೂರ್ಯನ ಆರಾಧನೆಯಿಂದ ನೀವು ಘನತೆ ಗೌರವವನ್ನು ಪಡೆಯುವಿರಿ. ಪ್ರಸಿದ್ಧಿ ಪ್ರಾಪ್ತಿಗಾಗಿ ಸೂರ್ಯನ ಮಂತ್ರಗಳನ್ನು ಪಠಿಸಿ.

ಮಕರ ರಾಶಿ - ಮಕರ ರಾಶಿಯವರು ಈ ದಿನ ಕಪ್ಪು ಹೊದಿಕೆ ಮತ್ತು ಎಣ್ಣೆಯನ್ನು ದಾನ ಮಾಡಬೇಕು. ಈ ಪರಿಹಾರವು ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ದುಷ್ಟ ಶಕ್ತಿಗಳಿಂದ ರಕ್ಷಿಸುತ್ತದೆ.

ಕುಂಭ ರಾಶಿ - ಈ ದಿನ ಕುಂಭ ರಾಶಿಯವರು ವಿಷ್ಣುವಿನ ಮುಂದೆ ಹನ್ನೊಂದು ಮುಖದ ಎಳ್ಳೆಣ್ಣೆಯ ದೀಪವನ್ನು ಹಚ್ಚಬೇಕು ಮತ್ತು ವಿಷ್ಣುವಿನ ಮಂತ್ರಗಳನ್ನು ಪಠಿಸಬೇಕು. ಇದರಿಂದ ಮಾನಸಿಕ, ದೈಹಿಕ ಮತ್ತು ಆರ್ಥಿಕ ಬಿಕ್ಕಟ್ಟು ನಿವಾರಣೆಯಾಗುತ್ತದೆ.


ಇದನ್ನೂ ಓದಿ-Relationship Tips: ಪತಿ-ಪತ್ನಿಯರ ನಡುವಿನ ಪ್ರೀತಿ ಹೆಚ್ಚಾಗಬೇಕೆ? ಈ ಸಂಗತಿಗಳು ನಿಮ್ಮ ಆಹಾರದಲ್ಲಿರಲಿ

ಮೀನ ರಾಶಿ - ಮೀನ ರಾಶಿಯವರು ಧನು ಸಂಕ್ರಾಂತಿಯಂದು ಸೂರ್ಯೋದಯಕ್ಕೆ ಮುನ್ನ ಪವಿತ್ರ ನದಿ ನೀರಿನಲ್ಲಿ ಸ್ನಾನ ಮಾಡಿ ಸೂರ್ಯ ಚಾಲೀಸವನ್ನು ಪಠಿಸಬೇಕು. ಸಂತಾನ ಪ್ರಾಪ್ತಿಯಲ್ಲಿ ಮತ್ತು ದಾಂಪತ್ಯದಲ್ಲಿ ಬರುವ ಅಡೆತಡೆಗಳನ್ನು ನಿವಾರಣೆಯಾಗುತ್ತವೆ.


ಇದನ್ನೂ ಓದಿ-Eye Blinking: ಮಹಿಳೆ ಹಾಗೂ ಪುರುಷರಲ್ಲಿ ಯಾವ ಕಣ್ಣು ಹೊಡೆದುಕೊಂಡರೆ ಶುಭ-ಅಶುಭ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.