October Horoscope 2022 : ಅಕ್ಟೋಬರ್ ತಿಂಗಳ ಪ್ರಾರಂಭಕ್ಕೆ ಕೇವಲ 10 ದಿನಗಳು ಮಾತ್ರ ಉಳಿದಿವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅಕ್ಟೋಬರ್‌ನಲ್ಲಿ 3 ಪ್ರಮುಖ ಗ್ರಹಗಳ ರಾಶಿ ಪರಿವರ್ತನೆಯಾಗಲಿದೆ. ಈ ಕಾರಣದಿಂದಾಗಿ 5 ರಾಶಿಯವರಿಗೆ ಭಾರೀ ಶುಭ ಫಲ ಲಭಿಸುತ್ತವೆ. ಅಕ್ಟೋಬರ್‌ನಲ್ಲಿ, ಸೂರ್ಯ ಮತ್ತು ಮಂಗಳನ ರಾಶಿ ಪರಿವರ್ತನೆಯಾಗಲಿದೆ.  ಮಾತ್ರವಲ್ಲ,  ಹಿಮ್ಮುಖ ಚಲನೆಯಲ್ಲಿರುವ ಶನಿ ತನ್ನ ಸ್ವಂತ ರಾಶಿಯಾದ ಮಕರದಲ್ಲಿ ನೇರ ನಡೆ ಆಂಭಿಸುತ್ತಾನೆ. ಈ ಗ್ರಹಗಳ ಸಂಕ್ರಮಣವು ಎಲ್ಲಾ 12 ರಾಶಿಗಳ ವೃತ್ತಿ, ಆರ್ಥಿಕ ಸ್ಥಿತಿ ಇತ್ಯಾದಿಗಳ ಮೇಲೆ ದೊಡ್ಡ ಮಟ್ಟದ ಪ್ರಭಾವ ಬೀರುತ್ತದೆ. ಮಾಸಿಕ ಜಾತಕದ ಪ್ರಕಾರ, ಅಕ್ಟೋಬರ್ ತಿಂಗಳು ಕೆಲವು ರಾಶಿಯವರಿಗೆ ಶುಭ ಫಲಗಳನ್ನು ನೀಡಲಿದೆ. 


COMMERCIAL BREAK
SCROLL TO CONTINUE READING

ಮಿಥುನ ರಾಶಿ : ಅಕ್ಟೋಬರ್ ತಿಂಗಳ ಗ್ರಹಗಳ ಸಂಕ್ರಮಣವು ಮಿಥುನ ರಾಶಿಯವರಿಗೆ ಲಾಭದಾಯಕವಾಗಿರುತ್ತದೆ. ವ್ಯಾಪಾರ ಮತ್ತು ಉದ್ಯೋಗ ಎರಡರಲ್ಲೂ ಪ್ರಗತಿಯ ಸಾಧ್ಯತೆಗಳಿವೆ. ಕೆಲವು ಹೊಸ ಅವಕಾಶಗಳು ಎದುರಾಗುವುದು.  ಈ ಅವಕಾಶಗಳನ್ನು ಬಳಸಿಕೊಂಡು  ಯಶಸ್ಸು ಪಡೆಯಬಹುದು. 


ಇದನ್ನೂ ಓದಿ : Personality Test: ಹಣೆಯ ಆಕಾರದಿಂದ ತಿಳಿಯಬಹುದು ವ್ಯಕ್ತಿತ್ವ: ನಿಮ್ಮ ‘ಹಣೆ’ಬರಹ ಹೇಗಿದೆ ಎಂದು ಈಗಲೇ ಅರಿಯಿರಿ


ಕರ್ಕ ರಾಶಿ: ಅಕ್ಟೋಬರ್ ತಿಂಗಳು ಕರ್ಕ ರಾಶಿಯವರಿಗೆ ಬಹಳ ಪ್ರಯೋಜನಕಾರಿಯಾಗಿರಲಿದೆ. ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯಲಿದ್ದೀರಿ. ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಹೂಡಿಕೆಯಿಂದ ಲಾಭದಾಯಕವಾಗಬಹುದು. 


ತುಲಾ ರಾಶಿ : ಇದುವರೆಗೆ ಜೀವನದಲ್ಲಿ ಎದುರಾಗಿದ್ದ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಆದಾಯದಲ್ಲಿ ಹೆಚ್ಚಳವಾಗುವುದು. ನೀವು ಹೊಸ ಕೆಲಸಕ್ಕೆ ಸೇರಬಹುದು. ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. 


ಇದನ್ನೂ ಓದಿ : Palmistry: ಕೈಯಲ್ಲಿ ಈ ಒಂದು ರೇಖೆಯಿದ್ದರೆ ಅತ್ಯಂತ ಶ್ರೀಮಂತ ಕುಟುಂಬದಲ್ಲಿ ನಡೆಯುತ್ತದೆ ನಿಮ್ಮ ಮದುವೆ!


ವೃಶ್ಚಿಕ ರಾಶಿ :  ಅಕ್ಟೋಬರ್ ತಿಂಗಳ ಗ್ರಹ ಸಂಚಾರದಿಂದ ಆದಾಯ ಹೆಚ್ಚಲಿದೆ. ಕೌಟುಂಬಿಕ ಜೀವನದಲ್ಲಿ ನಡೆಯುತ್ತಿರುವ  ಸಮಸ್ಯೆಗಳು ದೂರವಾಗುತ್ತದೆ. ಹಣದ ಕೊರತೆ ನೀಗುವುದು. ಹೂಡಿಕೆಯಿಂದ ಲಾಭವಾಗಲಿದೆ. ಮನೆ ಕಾರು ಖರೀದಿಸಬಹುದು. 


ಮೀನ ರಾಶಿ : ಅಕ್ಟೋಬರ್‌ನಲ್ಲಿ ನೀವು ಪ್ರವಾಸಕ್ಕೆ ಹೋಗಬಹುದು. ಲಾಭದ ಸಾಧ್ಯತೆ ಇರುತ್ತದೆ. ಹಳೆಯ ತೊಂದರೆಗಳು ಕೊನೆಗೊಳ್ಳುತ್ತವೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ. ಅನಿರೀಕ್ಷಿತವಾಗಿ ಹಣವನ್ನು ಪಡೆಯುವ ಸಾಧ್ಯತೆ ಇದೆ.  ವೃತ್ತಿಜೀವನ ಉತ್ತಮವಾಗಿರಲಿದೆ. 


(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು  ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ 
ಮಾಡಿ.