ಬೆಂಗಳೂರು : ಸೂರ್ಯನನ್ನು ಗ್ರಹಗಳ ರಾಜ ಎಂದೇ ಕರೆಯಲಾಗುತ್ತದೆ. ಇನ್ನೇನು ಕೆಲವೇ ದಿನಗಳಲ್ಲಿ ಸೂರ್ಯ ತನ್ನ ಸ್ಥಾನವನ್ನು ಬದಲಿಸಲಿದ್ದಾನೆ.   ಸೆಪ್ಟೆಂಬರ್ 17, 2022 ರಂದು, ಸೂರ್ಯನು ಸಿಂಹ ರಾಶಿಯಿಂದ ಹೊರಬಂದು ಕನ್ಯಾರಾಶಿ ಪ್ರವೇಶಿಸಲಿದ್ದಾನೆ.  ಅಂದು ಬೆಳಿಗ್ಗೆ 07:35 ರ ಸುಮಾರಿಗೆ ಸೂರ್ಯ ತನ್ನ ರಾಶಿಯನ್ನು ಬದಲಿಸಲಿದ್ದಾನೆ. ಕನ್ಯಾರಾಶಿಯಲ್ಲಿ ಸೂರ್ಯನ ಸಂಚಾರವು  ಆರು ರಾಶಿಯವರಿಗೆ ಮಂಗಳಕರ ಫಲವನ್ನು ಕರುಣಿಸಲಿದೆ.  


COMMERCIAL BREAK
SCROLL TO CONTINUE READING

ಮೇಷ ರಾಶಿ : ಸೂರ್ಯನ ಸಂಕ್ರಮಣದೊಂದಿಗೆ ಮೇಷ ರಾಶಿಯ ಜನರ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ. ಯಾವುದೇ ಕೆಲಸಕ್ಕೆ ಎದುರಾಗುವ ಅಡೆತಡೆಗಳು ಕ್ಷಣ ಮಾತ್ರದಲ್ಲಿ ನಿವಾರಣೆಯಾಗುತ್ತವೆ. ಯಶಸ್ಸು ಒಂದರ ನಂತರ ಒಂದರಂತೆ ಬರುತ್ತವೆ. ನಿಮ್ಮ ಮತ್ತು ಸಂಗಾತಿಯ ಆರೋಗ್ಯವು ಉತ್ತಮವಾಗಿರುತ್ತದೆ.


ಇದನ್ನೂ ಓದಿ :  Panchak September 2022: ನಾಳೆಯಿಂದ 'ಚೋರ ಪಂಚಕ' ಆರಂಭ, ಹಣಕಾಸಿನ ವಿಚಾರದಲ್ಲಿ ಎಚ್ಚರ ಅಗತ್ಯ!


ಕರ್ಕಾಟಕ : ಸೂರ್ಯನ ಸಂಚಾರವು ಕರ್ಕಾಟಕ ರಾಶಿಯವರ ಎಲ್ಲಾ ರೋಗಗಳನ್ನು ನಿವಾರಿಸುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ. ಬಹಳ ದಿನಗಳಿಂದ ತೊಂದರೆ ಅನುಭವಿಸುತ್ತಿದ್ದವರ ಸಮಸ್ಯೆಗಳು ದೂರವಾಗುತ್ತವೆ. 


ತುಲಾ:  ಸೂರ್ಯ ಸಂಚಾರದ ಪರಿಣಾಮ ತುಲಾ ರಾಶಿಯವರಿಗೆ ವಿದೇಶಿ ಪ್ರವಾಸದ ಯೋಗ ಎದುರಾಗಬಹುದು. ಬಹಳ ದಿನಗಳಿಂದ ವಿದೇಶಕ್ಕೆ ಹೋಗುವ ಯೋಜನೆ ಹೊಂದಿದ್ದ ಜನರ ಆಸೆ ಈ ಸಂದರ್ಭದಲ್ಲಿ ನೆರವೇರುತ್ತದೆ. ಕೆಲವು ಉತ್ತಮ ಸುದ್ದಿಗಳು ಸಹ ಕೇಳಿ ಬರುತ್ತದೆ.  


ವೃಶ್ಚಿಕ ರಾಶಿ : ಸೂರ್ಯನ ರಾಶಿ ಬದಲಾವಣೆಯು ಈ ರಾಶಿಯವರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಗಳಿಕೆ  ಹೆಚ್ಚಾಗುವ ಮೂಲಕ ಸಂತೋಷ ಕೂಡಾ ದುಪ್ಪಟ್ಟಾಗಲಿದೆ. ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳುತ್ತವೆ. ಮನೆಯಲ್ಲಿ ಸಂತೋಷ ಇರುತ್ತದೆ. 


ಇದನ್ನೂ ಓದಿ : Palmistry : ಅಂಗೈಯಲ್ಲಿರುವ ಈ ಗುರುತುಗಳು ರಾಜಯೋಗ ಸೂಚಿಸುತ್ತವೆ 


ಧನು ರಾಶಿ : ಕನ್ಯಾರಾಶಿಗೆ ಸೂರ್ಯನ ಪ್ರವೇಶದಿಂದ ಧನು ರಾಶಿಯವರಿಗೆ ವೃತ್ತಿ ಜೀವನದಲ್ಲಿ ಹೊಸ ಅವಕಾಶಗಳು ಬರಲಿವೆ. ಲಾಭ ಹೆಚ್ಚುತ್ತಲೇ ಇರುತ್ತದೆ. ಆರೋಗ್ಯ ಸುಧಾರಿಸಲಿದೆ. ಸಮಸ್ಯೆಗಳು ಕಡಿಮೆಯಾಗಲಿವೆ. 


ಮೀನ ರಾಶಿ :  ಸೂರ್ಯನ ಸಂಚಾರವು ಮೀನ ರಾಶಿಯವರಿಗೆ ತಮ್ಮ ವೃತ್ತಿಯಲ್ಲಿ ಹೊಸ ಮತ್ತು ಉತ್ತಮ ಅವಕಾಶಗಳನ್ನು ನೀಡುತ್ತದೆ. ಹೂಡಿಕೆ ಮಾಡಲು, ಮನೆ ಮತ್ತು ಕಾರು ಖರೀದಿಸಲು ಇದು ಉತ್ತಮ ಸಮಯ. ಅವಿವಾಹಿತರಿಗೆ  ಮದುವೆ ಭಾಗ್ಯ ಕೂಡಿ ಬರಲಿದೆ. 



 
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
.