ದೇಹದಲ್ಲಿ ಕಂಡು ಬರುವ ಮಚ್ಚೆಗಳು ನಮ್ಮ ಜೀವನದ ಅನೇಕ ರಹಸ್ಯಗಳನ್ನು ಹೇಳುತ್ತವೆ. ಮಹಿಳೆಯರ ಕೆನ್ನೆ ಅಥವಾ ಗಲ್ಲದ ಮೇಲಿನ ಮಚ್ಚೆಗಳು ಅವರ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ಅವರ ಭವಿಷ್ಯದ ಕೆಲವು ಸೂಚನೆಗಳನ್ನು ಸಹ ನೀಡುತ್ತವೆ.


COMMERCIAL BREAK
SCROLL TO CONTINUE READING

ಪುರುಷರ ಬಲ ಹುಬ್ಬಿನ ಮೇಲೆ ಮಚ್ಚೆ ಮತ್ತು ಮಹಿಳೆಯ ಎಡ ಹುಬ್ಬಿನ ಮೇಲೆ ಇರುವ ಮಚ್ಚೆಯು ಸಂತೋಷ ಜೀವನದ ಸಂಕೇತವಾಗಿದೆ. ಸಾಕಷ್ಟು ಪ್ರಮಾಣದ ಸೌಕರ್ಯಗಳು ಇವರಿಗೆ ಲಭ್ಯವಾಗುತ್ತವೆ.  ಪುರುಷರ ಬಲ ಕೆನ್ನೆಯ ಮೇಲೆ ಮಚ್ಚೆ ಇದ್ದರೆ ಅದು ಸಹ ಹಣದ ಕೊರತೆಯಿರುವುದಿಲ್ಲ ಎಂಬ ಶುಭ ಸುದ್ದಿ ಹೇಳುತ್ತದೆ.


ಇದನ್ನೂ ಓದಿ: ʼಪ್ರೀತಿ ಮಾಯೆ ಹುಷಾರುʼ : ಲವ್‌ ಫೈಲ್ಯೂರ್‌ ಆಗಿದ್ರೆ ಹೀಗೆ ಮಾಡಿ..!


ಇನ್ನು ಪುರುಷರಿಗೆ ಎಡಭಾಗದಲ್ಲಿ ಮಚ್ಚೆಯಿದ್ದರೆ ಹಣಕಾಸಿನ ಸಮಸ್ಯೆಯಿರುತ್ತದೆ ಎಂದರ್ಥ. ಅಂತಹ ಜನರು ವ್ಯಾಪಾರ ಪಾಲುದಾರಿಕೆಯನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕು. ಇದು ಮಹಿಳೆಯರಲ್ಲಿ ವಿರುದ್ಧ ಪರಿಣಾಮವನ್ನು ಬೀರುತ್ತದೆ.


ಪುರುಷರು ತಮ್ಮ ಮೂಗಿನ ಮೇಲೆ ಮಚ್ಚೆಯನ್ನು ಹೊಂದಿದ್ದರೆ, ಅವರು ಪ್ರತಿಭಾವಂತರು ಮತ್ತು ಸಂತೋಷವಾಗಿರುತ್ತಾರೆ, ಅದೇ ರೀತಿ ಮಹಿಳೆಯರ ಮೂಗಿನ ಮೇಲಿನ ಮಚ್ಚೆಯಿದ್ದರೆ ಅದು ಅದೃಷ್ಟದ ಸಂಕೇತವಾಗಿದೆ. ಅಷ್ಟೇ ಅಲ್ಲದೆ ಅವರ ಪತಿ ಪ್ರಗತಿ ಹೊಂದುತ್ತಾನೆ. ಕೈಯಲ್ಲಿ ಸಮೃದ್ಧಿ ಇರುತ್ತದೆ ಮತ್ತು ಯಾವುದೇ ಹಾನಿ ಇರುವುದಿಲ್ಲ ಎಂಬುದನ್ನು ಸೂಚಿಸುತ್ತದೆ.


ತುಟಿಗಳ ಮೇಲೆ ಮಚ್ಚೆ ಇರುವವರು ಆಹಾರವನ್ನು ಇಷ್ಟಪಡುತ್ತಾರೆ. ಯಾವ ರುಚಿಕರವಾದ ವಸ್ತುವನ್ನು ಎಲ್ಲಿ ಕಂಡುಹಿಡಿಯಬೇಕೆಂದು ಅವರಿಗೆ ತಿಳಿದಿರುತ್ತದೆ. ಗಲ್ಲದ ಮೇಲೆ ಮಚ್ಚೆ ಇರುವವರು ಕೆಲವೇ ಸ್ನೇಹಿತರನ್ನು ಹೊಂದಿರುತ್ತಾರೆ, ಅವರು ಕೆಲವೇ ಜನರೊಂದಿಗೆ ಆತ್ಮೀಯ ಸಂಬಂಧವನ್ನು ಹೊಂದಿರುತ್ತಾರೆ ಮತ್ತು ಕೆಲವೇ ಜನರೊಂದಿಗೆ ತಮ್ಮ ಹೃದಯವನ್ನು ಹಂಚಿಕೊಳ್ಳುತ್ತಾರೆ. 


ಕಾಲುಗಳಲ್ಲಿ ಮಚ್ಚೆ ಇರುವವರು ಪ್ರಯಾಣ ಮಾಡಲು ಇಷ್ಟಪಡುತ್ತಾರೆ. ಬಲಗಾಲಿನಲ್ಲಿ ಮಚ್ಚೆಯಿದ್ದರೆ ಒಳ್ಳೆಯದು. ಎಡ ಕಾಲಿನಲ್ಲಿ ಇದ್ದರೆ ಅದು ನಕಾರಾತ್ಮಕ ಅಂಶವಾಗಿರುತ್ತದೆ.  ಮಹಿಳೆಯರಲ್ಲಿ ಇದು ವಿರುದ್ಧವಾಗಿರುತ್ತದೆ.


ಬೆನ್ನಿನ ಮೇಲೆ ಮಚ್ಚೆ ಇರುವ ಜನರು ಭೌತಿಕ ಮತ್ತು ಮಹತ್ವಾಕಾಂಕ್ಷೆಯವರಾಗಿದ್ದಾರೆ, ಅವರು ಕೆಲಸ ಮಾಡುವ ಇಲಾಖೆಯಲ್ಲಿ ಪ್ರಗತಿಯನ್ನು ಪಡೆಯುತ್ತಾರೆ ಮತ್ತು ಯಾವಾಗಲೂ ಪ್ರಗತಿಯ ಬಯಕೆಯನ್ನು ಹೊಂದಿರುತ್ತಾರೆ.


ಹೊಟ್ಟೆಯಲ್ಲಿ ಮಚ್ಚೆ ಇರುವವರು ತಿನ್ನಲು ಮತ್ತು ಕುಡಿಯಲು ಇಷ್ಟಪಡುತ್ತಾರೆ. ಇನ್ನು ಬಲ ಅಂಗೈಯಲ್ಲಿ ಮಚ್ಚೆ ಇದ್ದರೆ ಮುಷ್ಟಿಯನ್ನು ಮುಚ್ಚಿದ ನಂತರ ಮಚ್ಚೆಯು ಒಳಗೆ ಬಂದರೆ, ಅಂತಹ ವ್ಯಕ್ತಿಯು ಶ್ರೀಮಂತನಾಗಿರುತ್ತಾನೆ, ಅವನಿಗೆ ಎಂದಿಗೂ ಹಣದ ಕೊರತೆಯಿಲ್ಲ.


ಇದನ್ನೂ ಓದಿ: ತೆಂಗಿನಕಾಯಿಯಲ್ಲಿ ಅಡಗಿದೆ ಸಂತಾನ ಪ್ರಾಪ್ತಿಯ ರಹಸ್ಯ


ಬಲ ಭುಜದ ಮೇಲಿನ ಮಚ್ಚೆಯು ಒಬ್ಬ ವ್ಯಕ್ತಿಯನ್ನು ಜವಾಬ್ದಾರನನ್ನಾಗಿ ಮಾಡುತ್ತದೆ, ಅವರು ಯಾವುದೇ ನಿರ್ಧಾರ ತೆಗೆದುಕೊಂಡರೂ, ಅವರು ಅದನ್ನು ಕೊನೆಯ ಉಸಿರು ಇರುವವರೆಗೂ ಎಲ್ಲಾ ಕಠಿಣ ಪರಿಶ್ರಮದಿಂದ ಮಾಡುತ್ತಾರೆ, ಆದರೆ ಎಡ ಭುಜದ ಮೇಲಿನ ಮೋಲ್ ಅವರನ್ನು ಜವಾಬ್ದಾರಿಗಳಿಂದ ರಕ್ಷಿಸುತ್ತದೆ, ಅಂತಹ ಜನರು ಕೆಲಸದಿಂದ ಹೇಗೆ ತಪ್ಪಿಸಿಕೊಳ್ಳುವುದು ಎಂದು ಆಲೋಚನೆ ಮಾಡುತ್ತಾರೆ.


 ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.