ನವದೆಹಲಿ : ಕಳೆದ  ಮೇ 26, 2021 ರಂದು,  ಈ ವರ್ಷದ ಮೊದಲ ಚಂದ್ರಗ್ರಹಣ (Chandra grahan) ಗೋಚರಿಸಿತ್ತು. ಈಗ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣವು (Lunar eclipse) ನವೆಂಬರ್ 19, 2021 ರ ಶುಕ್ರವಾರ ಸಂಭವಿಸಲಿದೆ. ಭೂಮಿಯ ನೆರಳು ಸೂರ್ಯನಿಂದ ಬರುವ ಬೆಳಕನ್ನು ತಡೆದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಇಲ್ಲಿ ಚಂದ್ರ ಭೂಮಿಯ ನೆರಳಿನಡಿಯಲ್ಲಿ ಬರುತ್ತಾನೆ.  ಇದರ ಪರಿಣಾಮವಾಗಿ ಭಾಗಶಃ ಅಥವಾ ಸಂಪೂರ್ಣ ಚಂದ್ರಗ್ರಹಣವಾಗುತ್ತದೆ.


COMMERCIAL BREAK
SCROLL TO CONTINUE READING

ಭಾರತದಲ್ಲಿ, ಉಪಛಾಯ ಚಂದ್ರಗ್ರಹಣವಾಗಿ (Chandra grahan 2021) ಕಾಣಲಿದೆ. ಈ ಕಾರಣದಿಂದಾಗಿ ಸೂತಕ ಕಾಲ ಮಾನ್ಯವಾಗಿರುವುದಿಲ್ಲ. ಈ ಚಂದ್ರ ಗ್ರಹಣವು ಮುಖ್ಯವಾಗಿ ಪೂರ್ವ ಏಷ್ಯಾ, ಆಸ್ಟ್ರೇಲಿಯಾ, ಪೆಸಿಫಿಕ್, ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕಾದಿಂದ ಗೋಚರಿಸುತ್ತದೆ. ವರ್ಷದ ಈ ಕೊನೆಯ ಚಂದ್ರಗ್ರಹಣದ (Chandragrahan) ಪರಿಣಾಮವನ್ನು ರಾಶಿಚಕ್ರ ಚಿಹ್ನೆಗಳ ಮೇಲೂ ಕಾಣಬಹುದು. 


ಇದನ್ನೂ ಓದಿ : ತಮ್ಮ ಮನಸ್ಸಿಗೆ ಬೇಕಾದಂತೆ ನಡೆದುಕೊಳ್ಳುತ್ತಾರಂತೆ ಈ ಮೂರು ರಾಶಿಯವರು..!


ಚಂದ್ರ ಗ್ರಹಣವು (Lunar eclipse) ಈ ರಾಶಿಯ ಮೇಲೆ ಗರಿಷ್ಠ ಪರಿಣಾಮ ಬೀರುತ್ತದೆ.  ವರ್ಷದ ಕೊನೆಯ ಚಂದ್ರಗ್ರಹಣವು ವೃಷಭ ರಾಶಿ ಮತ್ತು ಕೃತಿಕಾ ನಕ್ಷತ್ರಗಲ್ಲಿ ನಡೆಯಲಿದೆ. ಈ ರಾಶಿ ಮತ್ತು ನಕ್ಷತ್ರದಲ್ಲಿ ಜನಿಸಿದ ಜನರು ಈ ದಿನದಂದು ಜಾಗರೂಕರಾಗಿರಬೇಕು. ವೃಷಭ ರಾಶಿಯವರು (Zodiac sign) ಈ ಅವಧಿಯಲ್ಲಿ ಯಾವುದೇ ಚರ್ಚೆಗೆ ಒಳಗಾಗುವುದನ್ನು ತಪ್ಪಿಸಬೇಕು. ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು, ಅದರ ಬಗ್ಗೆ ಎಚ್ಚರಿಕೆಯಿಂದ ಯೋಚಿಸಿ. ಈ ಸಮಯದಲ್ಲಿ, ವೃಷಭ ರಾಶಿಯ ಜನರು ಪ್ರಯಾಣಿಸುವುದನ್ನು ತಪ್ಪಿಸಬೇಕು. 


ವರ್ಷದ ಕೊನೆಯ ಚಂದ್ರಗ್ರಹಣದ ಸಮಯ  : (Chandra Grahan Time 2021)


ಉಪಛಾಯೆಯ  ಮೊದಲ ಸ್ಪರ್ಶ - 02:18 PM 
ಪ್ರಛಾಯೆಯ ಮೊದಲ ಸ್ಪರ್ಶ - 03:15 PM 
ಖಗ್ರಾಸ ಆರಂಭ - 04:43 PM
ಪರಮಗ್ರಾಸ ಚಂದ್ರಗ್ರಹಣ - 04:48 PM 
ಖಗ್ರಾಸ ಅಂತ್ಯ - 04:54 PM
ಪ್ರಛಾಯೆಯ ಕೊನೆಯ ಸ್ಪರ್ಶ - 06 :21  PM  
ಉಪಛಾಯೆಯ ಕೊನೆಯ ಸ್ಪರ್ಶ  -  07:19 PM
ಖಗ್ರಾಸ ಅವಧಿ - 00 ಗಂಟೆ 11 ನಿಮಿಷ 16 ಸೆಕೆಂಡುಗಳು
ಖಂಡಗ್ರಾಸ ಅವಧಿ - 03 ಗಂಟೆ 06 ನಿಮಿಷ 22 ಸೆಕೆಂಡುಗಳು ಪೆನಂಬ್ರಾ ಅವಧಿ
ಉಪಛಾಯೆಯ ಅವಧಿ - 05 ಗಂಟೆ 00 ನಿಮಿಷ 39 ಸೆಕೆಂಡುಗಳ
ಚಂದ್ರಗ್ರಹಣದ ಪರಿಣಾಮ - 1.01 
ಉಪಛಾಯೆಚಂದ್ರ ಗ್ರಹಣದ ಪರಿಣಾಮ  - 1.95


ಇದನ್ನೂ ಓದಿ : Navratri Navami 2021 Puja Muhurat : ಇಂದು ಮಹಾನವಮಿ : ಪೂಜೆ-ಹವನ ಮಾಡುವ ವಿಧಿ-ವಿಧಾನಗಳ ಸಂಪೂರ್ಣ ಮಾಹಿತಿ ಇಲ್ಲಿದೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ