Chandra Grahan 2021 Pregnancy Precautions: ಚಂದ್ರಗ್ರಹಣದ ಸಮಯದಲ್ಲಿ ಗರ್ಭವತಿ ಮಹಿಳೆಯರು ಈ ಕೆಲಸಗಳನ್ನು ಮಾಡಬಾರದು

ಈ ವರ್ಷದ ಮೊದಲ ಚಂದ್ರ ಗ್ರಹಣ ನಾಳೆ ಸಂಭವಿಸಲಿದೆ. ಭಾರತದಲ್ಲಿ ಇದೊಂದು ಉಪಛಾಯೆ ಚಂದ್ರಗ್ರಹವಾಗಿರಲಿದೆ. ಅಂದರೆ, ಗ್ರಹಣ  ಭಾರತದಲ್ಲಿ ಗೋಚರಿಸುವುದಿಲ್ಲ.  ಆದರೆ  ಗ್ರಹಣ ಅವಧಿಯಲ್ಲಿ ಗರ್ಭಿಣಿಯವರು ಕೆಲವು ನಿಯಮಗಳನ್ನು ಪಾಲಿಸುವಂತೆ , ಜ್ಯೋತಿಷಿಗಳು ಸಲಹೆ ನೀಡುತ್ತಾರೆ.  

Written by - Ranjitha R K | Last Updated : May 25, 2021, 06:54 PM IST
  • ನಾಳೆ ವರ್ಷದ ಮೊದಲ ಚಂದ್ರಗ್ರಹಣ
  • ಗರ್ಭಿಣಿಯರು ಎಚ್ಚರಿಕೆಯಿಂದಿರಲು ಜ್ಯೋತಿಷ್ಯ ಶಾಸ್ತ್ರ ಸಲಹೆ
  • ಕೆಲ ನಿಯಮಗಳನ್ನು ಪಾಲಿಸುವಂತೆ ಸೂಚನೆ
Chandra Grahan 2021 Pregnancy Precautions:  ಚಂದ್ರಗ್ರಹಣದ ಸಮಯದಲ್ಲಿ ಗರ್ಭವತಿ ಮಹಿಳೆಯರು ಈ ಕೆಲಸಗಳನ್ನು ಮಾಡಬಾರದು title=
ನಾಳೆ ವರ್ಷದ ಮೊದಲ ಚಂದ್ರಗ್ರಹಣ (photo india.com)

ನವದೆಹಲಿ : ಜ್ಯೋತಿಷ್ಯ ದೃಷ್ಟಿಕೋನದಿಂದ ಚಂದ್ರ ಗ್ರಹಣ (Chandra grahan 2021) ಪ್ರತಿಯೊಬ್ಬ ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಈ ಅವಧಿಯಲ್ಲಿ, ಹೆಚ್ಚು ಜಾಗರೂಕರಾಗಿರುವಂತೆ ಗರ್ಭಿಣಿಯರಿಗೆ ಸೂಚಿಸಲಾಗುತ್ತದೆ. ಗ್ರಹಣದ ಪ್ರಭಾವ ಗರ್ಭಿಣಿ ಮಹಿಳೆಯರು ಮತ್ತು ಅವರ ಗರ್ಭದಲ್ಲಿರುವ ಮಗುವಿನ ಮೇಲೆ ಯಾವುದೇ ಪರಿಣಾಮ ಬೀರದಿರಲಿ ಎಂಬ ಕಾರಣಕ್ಕೆ ಅವರನ್ನು ಹೆಚ್ಚು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗುತ್ತದೆ. 

ಈ ವರ್ಷದ ಮೊದಲ ಚಂದ್ರ ಗ್ರಹಣ (Chandra grahan) ನಾಳೆ ಸಂಭವಿಸಲಿದೆ. ಭಾರತದಲ್ಲಿ ಇದೊಂದು ಉಪಛಾಯೆ ಚಂದ್ರಗ್ರಹವಾಗಿರಲಿದೆ. ಅಂದರೆ, ಗ್ರಹಣ  ಭಾರತದಲ್ಲಿ ಗೋಚರಿಸುವುದಿಲ್ಲ.  ಆದರೆ  ಗ್ರಹಣ ಅವಧಿಯಲ್ಲಿ ಗರ್ಭಿಣಿಯವರು ಕೆಲವು ನಿಯಮಗಳನ್ನು ಪಾಲಿಸುವಂತೆ (Pregnancy Precautions) , ಜ್ಯೋತಿಷಿಗಳು ಸಲಹೆ ನೀಡುತ್ತಾರೆ.  ಆದ್ದರಿಂದ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರಬಾರದು ಎಂಬ ಕಾರಣಕ್ಕೆ ಗರ್ಭಿಣಿಯರು ಗ್ರಹಣ ಅವಧಿಯಲ್ಲಿ ಕೆಲವು ನಿಯಮಗಳನ್ನು ಪಾಲಿಸುವಂತೆ ಹೇಳಲಾಗುತ್ತದೆ. 

ಇದನ್ನೂ ಓದಿ :  Chandra Grahan 2021 : ಬುದ್ದ ಪೂರ್ಣಿಮದ ದಿನವೇ ವರ್ಷದ ಮೊದಲ ಚಂದ್ರಗ್ರಹಣ

ಚಂದ್ರಗ್ರಹಣದ ವೇಳೆ ಗರ್ಭಿಣಿಯರು ಏನು ಮಾಡಬೇಕು ಏನು ಮಾಡಬಾರದು ತಿಳಿಯಿರಿ : 
ಗರ್ಭಿಣಿಯರು ಗ್ರಹಣ ಅವಧಿಯಲ್ಲಿ ಮನೆಯಲ್ಲಿಯೇ ಇರಬೇಕು.
ಗ್ರಹಣ ಸಮಯದಲ್ಲಿ ಚಂದ್ರನನ್ನು (moon) ನೋಡಬಾರದು. ಇದು ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಚಾಕು, ಕತ್ತರಿ, ಸೂಜಿ ಮುಂತಾದ ಮೊನಚಾದ ವಸ್ತುಗಳನ್ನು ಬಳಸಬೇಡಿ.
ಗ್ರಹಣ ಸಮಯದಲ್ಲಿ ಏನನ್ನೂ ತಿನ್ನಬೇಡಿ.
ಗ್ರಹಣ ಅವಧಿಯಲ್ಲಿ ಬಟ್ಟೆಗಳನ್ನು ಹೊಲಿಯುವುದು ಕೂಡಾ ನಿಷೇಧ 
ಬಾಯಿಯಲ್ಲಿ ತುಳಸಿ (Tulsi) ಯನ್ನಿಟ್ಟುಕೊಂಡು ಹನುಮಾನ್ ಚಾಲಿಸಾ ಪಠಿಸಿ.
ಗ್ರಹಣ ಮುಗಿದ ನಂತರ, ಶುದ್ಧ ನೀರಿನಿಂದ ಸ್ನಾನ ಮಾಡಿ (Take bath) .

ಇದನ್ನೂ ಓದಿ :  Super Blood Moon 2021 In India: ಏನಿದು ಸೂಪರ್ ಬ್ಲಡ್ ಮೂನ್ ? ಭಾರತದಲ್ಲಿ ಯಾವಾಗ ಗೋಚರಿಸಲಿದೆ?

2021 ರ ಮೊದಲ ಚಂದ್ರ ಗ್ರಹಣವು (Chandra garhan 2021) ವೈಶಾಖ ಮಾಸದ ಹುಣ್ಣಿಮೆಯ ದಿನವಾದ ಮೇ 26, 2021 ರಂದು ಅಂದರೆ ನಾಳೆ ನಡೆಯಲಿದೆ. ಗ್ರಹಣವು ಮೇ 26 ರಂದು ಮಧ್ಯಾಹ್ನ 02: 17 ಕ್ಕೆ ಪ್ರಾರಂಭವಾಗಲಿದ್ದು, ಸಂಜೆ 07.19 ಕ್ಕೆ ಕೊನೆಗೊಳ್ಳಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News