ಬೆಂಗಳೂರು: ಚಳಿಗಾಲದಲ್ಲಿ ದೇಹದ ಉಷ್ಣತೆಯನ್ನು ಹೆಚ್ಚಿಸಲು ಸಾಮಾನ್ಯವಾಗಿ ಚಹಾ ಅಥವಾ ಕಾಫಿ ಕುಡಿಯುತ್ತೇವೆ. ಆದರೆ ನಮ್ಮ ಜೀರ್ಣಕ್ರಿಯೆಯನ್ನು ಉತ್ತಮವಾಗಿಡಲು, ನಾವು ಹೆಚ್ಚು ಹಣ್ಣುಗಳನ್ನು ಸೇವಿಸಬೇಕು. ಕಾಲೋಚಿತ ಹಣ್ಣುಗಳನ್ನು ತಿನ್ನುವುದರಿಂದ ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಗೊಳ್ಳುತ್ತದೆ. ಪ್ರಸ್ತುತ ಕರೋನಾವೈರಸ್ (Coronavirus) ಸೋಂಕಿನಿಂದ ರಕ್ಷಣೆ ಪಡೆಯಲು ಎಲ್ಲರಿಗೂ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳುವುದು ಅತ್ಯಾವಶ್ಯಕ. 


COMMERCIAL BREAK
SCROLL TO CONTINUE READING

ಸೋಂಕಿನಿಂದ ದೂರವಿರಲು ಹೆಚ್ಚಿನ ಜನರು ಕಷಾಯ, ಜ್ಯೂಸ್ ಅಥವಾ ಗ್ರೀನ್ ಟೀ ಕುಡಿಯುತ್ತಾರೆ. ಇವುಗಳ ಜೊತೆಗೆ ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲ ಹಲವು ಹಣ್ಣುಗಳು ಲಭ್ಯವಿದ್ದು, ಅವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹವು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಅಂತಹ ಕೆಲವು ಹಣ್ಣುಗಳ ಬಗ್ಗೆ ತಿಳಿಯಲು ಮುಂದೆ ಓದಿ...


* ದಾಳಿಂಬೆ:


Apple) ಪೆಕ್ಟಿನ್ ಫೈಬರ್, ಜೀವಸತ್ವಗಳು, ಖನಿಜಗಳು, ಫೈಟೊನ್ಯೂಟ್ರಿಯೆಂಟ್ಸ್ ಮತ್ತು ಆಂಟಿ-ಆಕ್ಸಿಡೆಂಟ್ಗಳನ್ನು ಹೊಂದಿರುತ್ತದೆ. ಆಪಲ್ ದೇಹದಲ್ಲಿ ಹಿಮೋಗ್ಲೋಬಿನ್ ಮತ್ತು ಕಬ್ಬಿಣದ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ರಕ್ತದ ಕೊರತೆಯನ್ನು ತೆಗೆದುಹಾಕುತ್ತದೆ. ಚಳಿಗಾಲದಲ್ಲಿ ಇದನ್ನು ಸೇವಿಸುವುದರಿಂದ ಹಲವು ರೋಗಗಳಿಂದ ದೂರವಿರುತ್ತದೆ.


ಈ ಮನೆಮದ್ದು ಬಳಸಿ Kidney Stone ಸಮಸ್ಯೆಯನ್ನು ನಿವಾರಿಸಿ


* ಕಿತ್ತಳೆ:


Orange) ಹಣ್ಣಿನಲ್ಲಿ ವಿಟಮಿನ್-ಸಿ ಸಮೃದ್ಧವಾಗಿದೆ. ಚಳಿಗಾಲದಲ್ಲಿ ಕಿತ್ತಳೆ ಹಣ್ಣನ್ನು ಸೇವಿಸುವುದರಿಂದ ಬಹಳ ಪ್ರಯೋಜನಕಾರಿಯಾಗಿದೆ. ಕಿತ್ತಳೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಚಳಿಗಾಲದಲ್ಲಿ ಕಿತ್ತಳೆ ಅಥವಾ ಅದರ ರಸವನ್ನು ಪ್ರತಿದಿನ ಸೇವಿಸುವುದರಿಂದ ಶೀತ ಮತ್ತು ಕೆಮ್ಮಿನ ಜೊತೆಗೆ ಅನೇಕ ಪ್ರಮುಖ ಕಾಯಿಲೆಗಳಿಂದ ದೂರವಿರುತೀರಿ.


ಚಳಿಗಾಲದಲ್ಲಿ ಸೂರ್ಯ ಸ್ನಾನದಿಂದಾಗುವ ಪ್ರಯೋಜನಗಳಿವು


* ಸೀಬೆ:



ಸೀಬೆ ಹಣ್ಣು ಎಂದರೆ ಬಹುತೇಕ ಜನರಿಗೆ ಪ್ರಿಯ. ಹೊಟ್ಟೆಗೆ ಸಂಬಂಧಿಸಿದ ಹಲವು ಕಾಯಿಲೆಗಳನ್ನು ಗುಣಪಡಿಸಲು ಇದನ್ನು ರಾಮಬಾಣವೆಂದು ಪರಿಗಣಿಸಲಾಗುತ್ತದೆ. ಸೀಬೆ ಹಣ್ಣನ್ನು ತಿನ್ನುವ ಮೂಲಕ ಮಲಬದ್ಧತೆ ನಿವಾರಿಸಬಹುದು. ಸೀಬೆಹಣ್ಣಿನಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್-ಸಿ ಇದ್ದು, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.


ನೆನಪಿಡಿ: ನಿಮಗೆ ಸಾಮಾನ್ಯ ಮಾಹಿತಿಯನ್ನು ಒದಗಿಸಲು ಮಾತ್ರ ಈ ಸಲಹೆಯನ್ನು ನೀಡಲಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇದ್ದರೂ ನೀವು ಮೊದಲು ನಿಮ್ಮ ವೈದ್ಯರನ್ನು ಅಥವಾ ತಜ್ಞರನ್ನು ಸಂಪರ್ಕಿಸುವುದು ಒಳ್ಳೆಯದು.