Good Luck Signs in Home: ಜೀವನದಲ್ಲಿ ಒಳ್ಳೆಯ ಮತ್ತು ಕೆಟ್ಟ ಸಮಯಗಳು ಎರಡೂ ಇರುತ್ತವೆ. ಯಾವುದೇ ವ್ಯಕ್ತಿಯ ಜೀವನದಲ್ಲಿ ಒಳ್ಳೆಯ ಮತ್ತು ಕೆಟ್ಟ ಸಮಯಗಳ ಆಗಮನದ ಮೊದಲು ವಿವಿಧ ರೀತಿಯಲ್ಲಿ ಸಂಕೇತಗಳನ್ನು ನೀಡುತ್ತದೆ. ಧರ್ಮ, ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಹೊರತಾಗಿ, ಅಂತಹ ಶುಭ ಮತ್ತು ಅಶುಭ ಚಿಹ್ನೆಗಳನ್ನು ಶಕುನ ಶಾಸ್ತ್ರದಲ್ಲಿ  ಸಹ ವಿವರವಾಗಿ ವಿವರಿಸಲಾಗಿದೆ. ಇಂದು ನಾವು ಅಂತಹ ಕೆಲವು ಶುಭ ಚಿಹ್ನೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಅವು ನಮಗೆ ಜೀವನದಲ್ಲಿ ಸಾಮಾನ್ಯ ಘಟನೆಗಳಂತೆ ತೋರುತ್ತದೆ. ಆದರೆ ಈ ಚಿಹ್ನೆಗಳು ಸುವರ್ಣ ದಿನಗಳ ಆರಂಭವನ್ನು ಸೂಚಿಸುತ್ತವೆ. 


COMMERCIAL BREAK
SCROLL TO CONTINUE READING

ಸುವರ್ಣ ದಿನಗಳು ಆರಂಭವಾಗುವ ಸಂಕೇತ ನೀಡ ಚಿಹ್ನೆಗಳಿವು:
ಮನೆಗೆ ಗುಬ್ಬಚ್ಚಿಯ ಆಗಮನ-

ಮನೆಗೆ ಗುಬ್ಬಚ್ಚಿಯ ಆಗಮನವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಗುಬ್ಬಚ್ಚಿಗಳು ನಿಮ್ಮ ಮನೆಯ ಬಾಲ್ಕನಿಯಲ್ಲಿ ಅಥವಾ ಅಂಗಳದಲ್ಲಿ ಮುಂಜಾನೆಯೇ ಬಂದು ಚಿಲಿಪಿಲಿಗುಟ್ಟಲು ಪ್ರಾರಂಭಿಸಿದರೆ, ಅದು ಶುಭ ಸಂಕೇತವಾಗಿದೆ. ಈ ಘಟನೆಯು ನಿಮ್ಮ ಒಳ್ಳೆಯ ಸಮಯ ಪ್ರಾರಂಭವಾಗಲಿದೆ. ನಿಮ್ಮ ಜೀವನದಲ್ಲಿ ಸಂತೋಷ, ಯಶಸ್ಸು ಮತ್ತು ಸಂಪತ್ತು ಬರಲಿದೆ ಎಂಬುದನ್ನು ಸೂಚಿಸುತ್ತವೆ.


ಇದನ್ನೂ ಓದಿ- Mangal Dosh Upay: ಮಂಗಳ ದೋಷ ಪರಿಹಾರಕ್ಕಾಗಿ ಇಂದು ಈ ವಸ್ತುಗಳನ್ನು ತಪ್ಪದೇ ದಾನ ಮಾಡಿ


ಮನೆ ಬಾಗಿಲಿಗೆ ಹಸು ಬರುವುದು-
ಹಿಂದೂ ಧರ್ಮದಲ್ಲಿ ಹಸುವನ್ನು ಪೂಜನೀಯವೆಂದು ಪರಿಗಣಿಸಲಾಗಿದೆ ಮತ್ತು ಹಸುವಿನ ಹಾಲು, ಗೋವಿನ ಸಗಣಿ ಇತ್ಯಾದಿಗಳಿಗೂ ಪೂಜನೀಯ ಸ್ಥಾನಮಾನವನ್ನು ನೀಡಲಾಗಿದೆ. ಹಸು ಮುಂಜಾನೆಯೇ ನಿಮ್ಮ ಮನೆ ಬಾಗಿಲಿಗೆ ಬಂದರೆ ಅಥವಾ ನಿಮ್ಮ ಮನೆ ಮುಂದೆ ಸಗಣಿ ಹಾಕಿ ಹೊರಟು ಹೋದರೆ. ಅದು ಜೀವನದಲ್ಲಿ ಸಮೃದ್ಧಿಯ ಸಂಕೇತವಾಗಿದೆ. ಇಂತಹ ಸಂದರ್ಭದಲ್ಲಿ ಗೋವಿಗೆ ಆಹಾರವನ್ನು ನೀಡುವುದರಿಂದ ಸಂಪತ್ತಿನ ಅಧಿದೇವತೆಯಾದ ತಾಯಿ ಲಕ್ಷ್ಮಿ ಸಂತುಷ್ಟಲಾಗುತ್ತಾಳೆ. ಜೀವನದಲ್ಲಿ ಶೀಘ್ರದಲ್ಲೇ ಬಹಳಷ್ಟು ಸಂತೋಷ ಮತ್ತು ಸಮೃದ್ಧಿಯನ್ನು ನೀಡುತ್ತಾಳೆ ಎಂಬ ನಂಬಿಕೆಯಿದೆ.


ಪೂಜೆಯ ತೆಂಗಿನಕಾಯಿಯನ್ನು ನೋಡುವುದು-
ಮುಂಜಾನೆ ಪೂಜೆಯ ತೆಂಗಿನಕಾಯಿಯನ್ನು ನೋಡುವುದು ಅಥವಾ ದೇವಾಲಯದ ಗಂಟೆಯ ಸದ್ದನ್ನು ಕೇಳುವುದು ಸಹ ಅತ್ಯಂತ ಮಂಗಳಕರ ಸಂಕೇತವಾಗಿದೆ. ಹಾಗೆಯೇ, ಮುಂಜಾನೆ ಶಂಖದ ಶಬ್ದವನ್ನು ಕೇಳುವುದು ಸಹ ನೀವು ಉತ್ತಮ ಯಶಸ್ಸನ್ನು ಪಡೆಯುತ್ತೀರಿ ಎಂದು ಸೂಚಿಸುತ್ತದೆ. ಮಾತ್ರವಲ್ಲ ತಾಯಿ ಲಕ್ಷ್ಮಿ ಶೀಘ್ರದಲ್ಲೇ ನಿಮಗೆ ದಯೆ ತೋರಲಿದ್ದಾರೆ ಎಂದು ಇದು ಸೂಚಿಸುತ್ತದೆ.


ಇದನ್ನೂ ಓದಿ- ತಮ್ಮ ವಿಶೇಷ ಪ್ರತಿಭೆ ಮೂಲಕ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸುತ್ತಾರೆ ಈ ರಾಶಿಯವರು .!


ನೀರು ತುಂಬಿದ ಕಲಶ- 
ಬೆಳಿಗ್ಗೆ ಮನೆಯಿಂದ ಹೊರಡುವಾಗ ನೀರು ತುಂಬಿದ ಪಾತ್ರೆಯನ್ನು ನೋಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ಕೆಲಸದಲ್ಲಿ ಯಶಸ್ಸನ್ನು ಪಡೆಯುವ ಸಂಕೇತವಾಗಿದೆ, ಹಣ ಅಥವಾ ಯಾವುದೇ ಮಂಗಳಕರ ಘಟನೆ ನಡೆಯಲಿದೆ ಎಂಬುದನ್ನು ಇದು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.