ನವದೆಹಲಿ : ಜಗತ್ತಿನಲ್ಲಿ ಬಹಳಷ್ಟು ಜನರಿರುತ್ತಾರೆ. ಅವರಿಗೆ ಮದುವೆ (Marriage),  ಸಂಸಾರ ಇವುಗಳಲ್ಲಿ ಯಾವುದೇ ಆಸಕ್ತಿ ಇರುವುದಿಲ್ಲ. ಇವುಗಳಿಂದ ಸಾಧ್ಯವಾದಷ್ಟು ದೂರ ಇರಲು ಬಯಸುತ್ತಾರೆ.  ಸದಾ ಏಕಾಂಗಿಯಾಗಿರುವುದೇ ಇವರಿಗೆ ನೆಮ್ಮದಿ ಕೊಡುತ್ತದೆ. ಒಂದರ್ಥದಲ್ಲಿ ತಮ್ಮದೇ ಲೋಕದಲ್ಲಿ ಇವರ ಬದುಕ ಬಂಡಿ ಸಾಗುತ್ತಿರುತ್ತದೆ. 


COMMERCIAL BREAK
SCROLL TO CONTINUE READING

ಇನ್ನು ಕೆಲವರಿರುತ್ತಾರೆ ತಮ್ಮ ಜೀವನಕ್ಕೆ ಉತ್ತಮ ದಿಕ್ಕು ಸಿಗಬೇಕಾದರೆ ವಿವಾಹ ಬಂಧನದಿಂದಲೇ ಎಂದು ನಂಬುವವರು. ಮದುವೆಯಾದರೆ ತನ್ನ ಜೀವನವೇ ಬದಲಾಗಿ ಬಿಡುತ್ತದೆ ಎಂದು ನಂಬುವವರು. ಇವರ ಪ್ರಕಾರ ಮದುವೆಯಾದರೆ  ಜೀವನ ಸರಿ ದಾರಿಗೆ ಬರುತ್ತದೆ.  ಜ್ಯೋತಿಷ್ಯದ (Astrology) ಪ್ರಕಾರ, ಅಂತಹ 4 ರಾಶಿಚಕ್ರಗಳಿವೆ. ಈ ರಾಶಿಯ ಜನರಿಗೆ ಮಾಡುವೆ ಎಂದರೆ ಬಹಳ ಆಸಕ್ತಿ. ಇವರುಗಳು ಬಹಳ ಬೇಗ ಮದುವೆಯಾಗಲು ಬಯಸುತ್ತಾರೆ. ಹಾಗಿದ್ದರೆ ಆ 4 ರಾಶಿಗಳು (Zodiac sign) ಯಾವುವು ನೋಡೋಣ. 


ಇದನ್ನು ಓದಿ : ನಾಗರಪಂಚಮಿಯಂದು ರೂಪುಗೊಳ್ಳಲಿದೆ ವಿಶೇಷ ಸಂಯೋಗ, ಈ ದಿನ ಸಾಧ್ಯ ಈ ದೋಷ ಪರಿಹಾರ


ಕನ್ಯಾರಾಶಿ : ಜೀವನದಲ್ಲಿ ಏನೇ ಬರಲಿ ಕಷ್ಟವೋ, ಸುಖವೋ ಎಲ್ಲವನ್ನು ತಮ್ಮ ಸಾಮರ್ಥ್ಯದ ಮೇಲೆ ನಿಭಾಯಿಸಿಕೊಳ್ಳುತ್ತಾರೆ.   ಅವರು ತುಂಬಾ ಶ್ರಮಜೀವಿಗಳು. ಸದಾ ತಮ್ಮ ಸುತ್ತ ತಮ್ಮನ್ನು ಪ್ರೀತಿಸುವವರು ಇರಬೇಕು ಎಂದು ಬಯಸುತ್ತಾರೆ. ತಮ್ಮ ಅಗತ್ಯಗಳನ್ನು ಪೂರೈಸಲು ಅತಿ ಸಣ್ಣ ವಯಸ್ಸಿನಲ್ಲಿಯೇ ಮದುವೆಯಾಗುತ್ತಾರೆ (Mariage). 


ಮಿಥುನ ರಾಶಿ : ಇವರಿಗೆ ಬೇರೆ ಬೇರೆ ಜನರನ್ನು ಭೇಟಿಯಾಗುವುದು, ಇತರರೊಂದಿಗೆ ಬೆರೆಯುವುದು ಎಂದರೆ ಬಹಳ ಇಷ್ಟ.  ಇವರು ಕೂಡಾ ಪ್ರೀತಿಸುವ ಜನರಿಂದ ಸುತ್ತುವರಿಯಲು (Companion) ಇಷ್ಟಪಡುತ್ತಾರೆ. ಮದುವೆಯ ವಿಚಾರಕ್ಕೆ ಬಂದರೆ, ಬೇಗನೆ ಮದುವೆಯಾಗುವುದರಲ್ಲಿ ಉತ್ಸುಕರಾಗಿರುತ್ತಾರೆ. 


ಇದನ್ನು ಓದಿ :  Arranged Marriage: ಈ 4 ರಾಶಿಯ ಜನರಿಗೆ ಅರೇಂಜ್ಡ್ ಮ್ಯಾರೇಜ್ ಮೇಲೆ ನಂಬಿಕೆ ಹೆಚ್ಚು, ಕಾರಣ ಏನ್ ಗೊತ್ತಾ!


ತುಲಾ ರಾಶಿ : ಈ ರಾಶಿಯವರು ಇತರ ಜನರಿಗೆ ತುಂಬಾ ಪ್ರೀತಿಯನ್ನು ನೀಡುತ್ತಾರೆ. ಆದರೆ, ತಾವು ಮಾತ್ರ ಒಂಟಿತನವನ್ನು ಅನುಭವಿಸುತ್ತಾರೆ. ತಮ್ಮ ಒಂಟಿತನವನ್ನು ಹೋಗಲಾಡಿಸಲು ಬೇಗನೆ ಮದುವೆಯಾಗಲು  ಬಯಸುತ್ತಾರೆ.  ತಮ್ಮನ್ನು ಪ್ರೀತಿಸುವ , ಕಾಳಜಿ ವಹಿಸುವ , ಬೆಂಬಲಿಸುವ ಜನ ತಮ್ಮ ಜೊತೆ ಸದಾ ಇರಬೇಕು ಎಂದು ಬಯಸುತ್ತಾರೆ. ಈ ಕಾರಣದಿಂದಾಗಿ ಬೇಗನೆ ಮದುವೆಯಾಗುತ್ತಾರೆ. 


ಕಟಕ ರಾಶಿ : ಈ ರಾಶಿಯವರು,  ತಮ್ಮ ಜೀವನದಲ್ಲಿ ಭಾವನಾತ್ಮಕವಾಗಿ ಯಾರಾದರು ತಮ್ಮೊಂದಿಗೆ ಇರಬೇಕು ಎಂದು ಬಯಸುತ್ತಾರೆ. ಅವರು ಜೀವನದಲ್ಲಿ ಆತ್ಮೀಯತೆ ಮತ್ತು ನಿಷ್ಠೆಯನ್ನು ಬಯಸುತ್ತಾರೆ. ವಿವಾಹದ ಕಲ್ಪನೆಯು ಅವರನ್ನು ಬಹಳಷ್ಟು ಆಕರ್ಷಿಸುತ್ತದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.