ನಾಗರಪಂಚಮಿಯಂದು ರೂಪುಗೊಳ್ಳಲಿದೆ ವಿಶೇಷ ಸಂಯೋಗ, ಈ ದಿನ ಸಾಧ್ಯ ಈ ದೋಷ ಪರಿಹಾರ

ಜ್ಯೋತಿಷ್ಯ  ಶಾಸ್ತ್ರದ ಪ್ರಕಾರ, ಈ ಬಾರಿ ನಾಗ ಪಂಚಮಿ ಹಲವು ರೀತಿಯಲ್ಲಿ ವಿಶೇಷವಾಗಿರುತ್ತದೆ. ಈ ವರ್ಷ ನಾಗ ಪಂಚಮಿ ದಿನ 108 ವರ್ಷಗಳ ನಂತರ ಅಪರೂಪದ ಸಂಯೋಗ ಸಂಭವಿಸಲಿದೆ.

Written by - Ranjitha R K | Last Updated : Aug 11, 2021, 06:14 PM IST
  • ನಾಗ ಪಂಚಮಿಗೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ.
  • ನಾಗರಾಜನಿಗೆ ಈ ದಿನ ಪೂಜೆ ಸಲ್ಲಿಸಿದರೆ ವಿಶೇಷ ಫಲ ಸಿಗುತ್ತದೆಯಂತೆ.
  • ನಾಗ ಪಂಚಮಿ ದಿನ 108 ವರ್ಷಗಳ ನಂತರ ಅಪರೂಪದ ಸಂಯೋಗ
  ನಾಗರಪಂಚಮಿಯಂದು ರೂಪುಗೊಳ್ಳಲಿದೆ ವಿಶೇಷ ಸಂಯೋಗ, ಈ ದಿನ ಸಾಧ್ಯ ಈ ದೋಷ ಪರಿಹಾರ  title=
ನಾಗ ಪಂಚಮಿಗೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. (file photo)

ನವದೆಹಲಿ : ನಾಗ ಪಂಚಮಿಗೆ (Nagara Panchami) ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಈ ದಿನ ನಾಗದೇವರನ್ನು ಪೂಜಿಸಲಾಗುತ್ತದೆ.  ಈ ಬಾರಿ ಆಗಸ್ಟ್ 13 ರಂದು ನಾಗರ ಪಂಚಮಿಯನ್ನು ಆಚರಿಸಲಾಗುತ್ತದೆ. ನಾಗನ ಪೂಜೆಗೆ ಶ್ರಾವಣ ಮಾಸದ  ಪಂಚಮಿ ತಿಥಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ನಾಗ ಪಂಚಮಿ ಒಂದು ಪ್ರಮುಖ ದಿನವಾಗಿದೆ. ಈ ಹಬ್ಬವನ್ನು ಶ್ರಾವಣ ಮಾಸದ (Shrawana maasa) ಶುಕ್ಲ ಪಕ್ಷ ಪಂಚಮಿಯಂದು ಆಚರಿಸಲಾಗುತ್ತದೆ. ನಾಗರಾಜನಿಗೆ ಈ ದಿನ ಪೂಜೆ ಸಲ್ಲಿಸಿದರೆ ವಿಶೇಷ ಫಲ ಸಿಗುತ್ತದೆಯಂತೆ.  ಈ ದಿನ ನಾಗ ದೇವನಿಗೆ ಸಲ್ಲಿಸುವ ಪೂಜೆ, ಅರ್ಪಿಸುವ ನೈವೆದ್ಯಗಳು ನಾಗಪ್ಪನಿಗೆ ತಲುಪುತ್ತದೆ ಎನ್ನುವುದು ನಂಬಿಕೆ. ಈ ದಿನ   ನಾಗರ ದೇವರ ಪ್ರತಿನಿಧಿಗಳಂತೆ ಜೀವಂತ ಹಾವುಗಳನ್ನು ಪೂಜಿಸಲಾಗುತ್ತದೆ.  

ಜ್ಯೋತಿಷ್ಯ (Astrology) ಶಾಸ್ತ್ರದ ಪ್ರಕಾರ, ಈ ಬಾರಿ ನಾಗ ಪಂಚಮಿ ಹಲವು ರೀತಿಯಲ್ಲಿ ವಿಶೇಷವಾಗಿರುತ್ತದೆ. ಈ ವರ್ಷ ನಾಗ ಪಂಚಮಿ ದಿನ 108 ವರ್ಷಗಳ ನಂತರ ಅಪರೂಪದ ಸಂಯೋಗ ಸಂಭವಿಸಲಿದೆ. ಕಾಳಸರ್ಪ ದೋಷವನ್ನು (Kala sarpa dosha) ತೊಡೆದು ಹಾಕಲು ಈ  ಅಪರೂಪದ ಸಂಯೋಗ ಸಹಾಯಕ್ಕೆ ಬರಲಿದೆ.  ಕಾಳ ಸರ್ಪ ದೋಷ ಇದ್ದವರು ಈ ದಿನ ವಿಶೇಷ ಪೂಜೆ ಸಲ್ಲಿಸಬೇಕು. 

ಇದನ್ನೂ ಓದಿ : Arranged Marriage: ಈ 4 ರಾಶಿಯ ಜನರಿಗೆ ಅರೇಂಜ್ಡ್ ಮ್ಯಾರೇಜ್ ಮೇಲೆ ನಂಬಿಕೆ ಹೆಚ್ಚು, ಕಾರಣ ಏನ್ ಗೊತ್ತಾ!

ಈ ಬಾರಿ ನಾಗರ ಪಂಚಮಿಯಂದು (Nagarapanchami) ಉತ್ತರ ಯೋಗ ಮತ್ತು ಹಸ್ತ ನಕ್ಷತ್ರದ ವಿಶೇಷ ಸಂಯೋಗ ರೂಪುಗೊಳ್ಳುತ್ತಿದೆ. ಇಂತಹ ಸನ್ನಿವೇಶದಲ್ಲಿ, ಕಾಳ ಸರ್ಪ ದೋಷವನ್ನು ಹೋಗಲಾಡಿಸಲು ಮಾಡಿಸುವ ಪೂಜೆ ಅತ್ಯಂತ ಪರಿಣಾಮಕಾರಿಯಾಗಿರಲಿದೆ. 

ಇದನ್ನೂ ಓದಿ : Vastu: ಮನೆಯಲ್ಲಿ ಗಾಜು ಒಡೆಯುವುದು ಶುಭವೋ? ಅಶುಭವೋ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News