Zodiac Signs That Will Win A Fight - ಕೆಲವರು ವಾಗ್ವಾದದಲ್ಲಿ ಹೆಚ್ಚಿನ ನಂಬಿಕೆ ಇಡುವುದಿಲ್ಲ. ಏಕೆಂದರೆ, ಇವರಲ್ಲಿ ಬಹುತೇಕರು ವಾದ-ವಿವಾದಗಳಿಂದ (Debate) ದೂರ ಉಳಿಯಲು ಪ್ರಯತ್ನಿಸುತ್ತಾರೆ. ಇನ್ನೊಂದೆಡೆ ಕೆಲವರು ವಾಗ್ವಾದದ ಯಾವುದೇ ಅವಕಾಶವನ್ನು ಬಿಡಲು ಸಿದ್ಧರಾಗಿರುವುದಿಲ್ಲ. ಇವರು ಯಾರೊಂದಿಗೂ ವಾಗ್ವಾದ ಮಾಡಿದರೂ ಕೂಡ ತಮ್ಮ ವಾದ ಹೇಗೆ ಸರಿಯಾಗಿದೆ ಎಂಬುದನ್ನು ಎದುರಿನ ವ್ಯಕ್ತಿಗೆ  ಮನವರಿಕೆ ಮಾಡಿಯೇ ಬಿಡುತ್ತಾರೆ. ಹಾಗಾದರೆ ಬನ್ನಿ ಯಾವ ರಾಶಿಯ (Zodiac Signs) ಜನರು ತಮ್ಮ ವಾದವೇ ಸರಿ ಎಂದು ನಿರೂಪಿಸಿ ಗೆದ್ದೇ ಗೆಲ್ಲುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

1. ಮೇಷ ರಾಶಿ - ಈ ರಾಶಿಯ (Astrology) ಜನರು ಯಾವಾಗಲು ಎಲ್ಲ ಸಂಗತಿಗಳಲ್ಲಿ ಮುಂದೆ ಇರುತ್ತಾರೆ. 'ತಾವೇ ಬೆಸ್ಟ್' ಎಂಬುದು ಇವರ ನಂಬಿಕೆ. ತಮ್ಮ ವಾದ ಸರಿ ಎಂದು ನಿರೂಪಿಸಲು ಇವರು ತಾರ್ಕಿಕ ವಾದಕ್ಕೆ (Logical Debate) ಹೆಚ್ಚಿನ ಆದ್ಯತೆ ನೀಡುತ್ತಾರೆ (Zodiac Signs That Will Win A Fight).


2. ಮಿಥುನ ರಾಶಿ - ಮಿಥುನ ರಾಶಿಯ ಜನರು ಬೇರೆಯವರೊಂದಿಗೆ ತುಂಬಾ ಬೇಗನೆ ಬೆರೆತುಹೋಗುತ್ತಾರೆ ಹಾಗೂ ಯಾವಾಗಲು ಹೊಸ ಸಂಗತಿಗಳನ್ನು ತಿಳಿದುಕೊಳ್ಳುವಲ್ಲಿ ವಿಶ್ವಾಸವಿಡುತ್ತಾರೆ. ಇದೇ ಕಾರಣದಿಂದ ಈ ಜನರು ಪ್ರತಿಯೊಂದರಲ್ಲಿಯೂ ಕೂಡ ಮುಂದೆ ಇರುತ್ತಾರೆ ಹಾಗೂ ಇವರಿಗೆ ಬಹುತೇಕ ಸಂಗತಿಗಳ ಮಾಹಿತಿ ಇರುತ್ತದೆ ಎಂದು ಇತರರೂ ಕೂಡ ನಂಬುತ್ತಾರೆ. ತಮ್ಮ ವಾದ ಸರಿಯಾಗಿದೆ ಎಂಬುದನ್ನು ನಿರೂಪಿಸಲು ಇವರು ಎಲ್ಲಾ ರೀತಿಯಿಂದ ಪ್ರಯತ್ನಿಸ್ತುತ್ತಾರೆ. ಅದು ತಾರ್ಕಿಕ ಚರ್ಚೆಯೇ  ಆಗಲಿ ಅಥವಾ ಬೇರೆ ಯಾವುದೇ ಚರ್ಚೆ (Dialogue) ಇವರು ಇತರರನ್ನು ಪ್ರಭಾವಿತಗೊಳಿಸಲು ಹಿಂದೆ ಬೀಳುವುದಿಲ್ಲ (Zodiac Sign That Fight The Most)


ಇದನ್ನೂ ಓದಿ- ಅದೃಷ್ಟ ಬದಲಾಯಿಸಬಹುದು ಈ ರತ್ನ : ಅಸಲಿ ಮುತ್ತನ್ನು ಗುರುತಿಸುವುದು ಹೇಗೆ?


3. ವೃಶ್ಚಿಕ ರಾಶಿ - ಈ ರಾಶಿಯ ಜನರು ತಮ್ಮ ಪ್ರತಿಸ್ಪರ್ಧಿ ವಿರುದ್ಧ ಹೇಗೆ ಹೋರಾಟ ನಡೆಸಬೇಕು ಮತ್ತು ಹೇಗೆ ಗೆಲ್ಲಬೇಕು ಎಂಬುದನ್ನು ಚೆನ್ನಾಗಿ ಅರಿತಿರುತ್ತಾರೆ. ಪ್ರತಿಯೊಂದು ಮಾತಿಗೆ ಇವರು ತಕ್ಕ ಉತ್ತರ ನೀಡುತ್ತಾರೆ ಮತ್ತು ಎದುರಿನ ವ್ಯಕ್ತಿಗೆ ತಮ್ಮ ಅನಿಸಿಕೆಯನ್ನು ಮನವರಿಕೆ ಮಾಡಿಯೇ ತೀರುತ್ತಾರೆ (Zodiac Sign In An Argument).


ಇದನ್ನೂ ಓದಿ-ಈ ಅಕ್ಷರಗಳಿಂದ ನಿಮ್ಮ ಹೆಸರೂ ಆರಂಭವಾಗುತ್ತದೆಯೇ? ಹೆಸರಿನ ಪ್ರಕಾರ ಗುಣ ಹೇಗಿರಲಿದೆ?


4. ಕುಂಭ ರಾಶಿ - ಈ ರಾಶಿಯ ಜನರು ತಮ್ಮ ಎದುರಿಗೆ ವಾದ ಮಾಡುತ್ತಿರುವ ವ್ಯಕ್ತಿಯ ವಾದವನ್ನು ಮೊದಲು ಗಮನವಿಟ್ಟು ಆಲಿಸುತ್ತಾರೆ. ಈ ಅವಧಿಯಲ್ಲಿ ಅವರು ವಾದಕ್ಕಾಗಿ ಸಾಕಷ್ಟು ವಿಷಯಗಳ ಸಂಗ್ರಹ ಕೂಡ ಮಾಡುತ್ತಾರೆ. ಈ ವ್ಯಕ್ತಿಗಳು ಮೊದಲು ತೀರಾ ಸಾಮಾನ್ಯವಾಗಿ ತಮ್ಮ ಪಕ್ಷವನ್ನು ಪ್ರಸ್ತುತ ಪಡಿಸುತ್ತಾರೆ. ಒಂದು ವೇಳೆ ಇವರ ಪ್ರಸ್ತುತಪಡಿಸಿರುವ ಪಕ್ಷವನ್ನು ಇತರರು ಒಪ್ಪದೇ ಹೋದಲ್ಲಿ ಇವರು ವಾದಕ್ಕಿಳಿಯುತ್ತಾರೆ (Zodiac Signs That Are Good At Fighting).


(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯ ಹಾಗೂ ಸ್ಫುಟವಾಗಿದೆ ಎಂದು ಝೀ ಹಿಂದೂಸ್ತಾನ್ ಪುಷ್ಟೀಕರಿಸುವುದಿಲ್ಲ. ಈ ಮಾಹಿತಿಯನ್ನು ಅನುಸರಿಸುವ ಮೊದಲು ಕ್ಷೇತ್ರಕ್ಕೆ ಸಂಬಂಧಿಸಿದ ತಜ್ಞರ ಸಲಹೆ ಪಡೆದುಕೊಳ್ಳಿ)


ಇದನ್ನೂ ಓದಿ-Mantra For Marriage: ಶೀಘ್ರದಲ್ಲಿಯೇ ಕಂಕಣ ಬಲ ಕೂಡಿ ಬಂದು ಸುಂದರ ಮಡದಿ ಪಡೆಯಲು ಇಲ್ಲಿದೆ ಮಂತ್ರ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.