ಆರ್ಥಿಕ ಸ್ಥಿತಿಯ ಮೇಲೆ ನೇರ ಪರಿಣಾಮ ಬೀರುತ್ತದೆ ಇಂಥಹ ಕನಸುಗಳು
ಒಳ್ಳೆಯ ಕನಸುಗಳಾಗಲಿ ಅಥವಾ ಭಯಾನಕ ಕನಸುಗಳಾಗಲಿ ಪ್ರತಿ ಕನಸಿಗೂ ಅದರದೇ ಆದ ಅರ್ಥವಿದೆ. ಕನಸುಗಳು ಎಷ್ಟು ವಿಚಿತ್ರವೋ, ಅವುಗಳಿಂದ ಪಡೆಯುವ ಫಲಿತಾಂಶಗಳು ಸಹ ಕೆಲವೊಮ್ಮೆ ಅಷ್ಟೇ ವಿಚಿತ್ರವಾಗಿರುತ್ತವೆ.
ನವದೆಹಲಿ : ಸ್ವಪ್ನ ಶಾಸ್ತ್ರದಲ್ಲಿ ಎಲ್ಲಾ ರೀತಿಯ ಕನಸುಗಳ ಅರ್ಥವನ್ನು ನೀಡಲಾಗಿದೆ. ಒಳ್ಳೆಯ ಕನಸುಗಳಾಗಲಿ ಅಥವಾ ಭಯಾನಕ ಕನಸುಗಳಾಗಲಿ ಪ್ರತಿ ಕನಸಿಗೂ ಅದರದೇ ಆದ ಅರ್ಥವಿದೆ (Dream interpretation). ಕನಸುಗಳು ಎಷ್ಟು ವಿಚಿತ್ರವೋ, ಅವುಗಳಿಂದ ಪಡೆಯುವ ಫಲಿತಾಂಶಗಳು ಸಹ ಕೆಲವೊಮ್ಮೆ ಅಷ್ಟೇ ವಿಚಿತ್ರವಾಗಿರುತ್ತವೆ. ಒಮ್ಮೊಮ್ಮೆ ಕನಸುಗಳು ಮತ್ತು ಅವು ಪಡೆಯುವ ಫಲಗಳ ನಡುವೆ ಯಾವ ಸಂಬಂಧವೂ ಇರುವುದಿಲ್ಲ. ಆದರು ಆ ಕನಸುಗಳು ನಮ್ಮ ಜೀವನದ ಮೇಲೆ ದೊಡ್ಡ ಪ್ರಭಾವ (meanings of dreams) ಬೀರುತ್ತವೆ.
ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುವ ಕನಸುಗಳು :
ಕನಸಿನಲ್ಲಿ(dreams interpretation) ಒಬ್ಬ ವ್ಯಕ್ತಿಯು ಉರಿಯುತ್ತಿರುವುದನ್ನು ಕನಸಿನಲ್ಲಿ ಕಂಡರೆ ಯಾವ ಮೂಲದಿಂದಾದರೂ ಹಣ ಸಿಗುತ್ತದೆ ಎನ್ನುವುದನ್ನು ಸೂಚಿಸುತ್ತದೆ.
ಇದನ್ನೂ ಓದಿ : ಕಠಿಣ ಶ್ರಮ ಬುದ್ದಿವಂತಿಕೆಯಿಂದ ತಮ್ಮ ಅದೃಷ್ಟವನ್ನೇ ಬದಲಿಸುತ್ತಾರೆ ಈ ರಾಶಿಯವರು
ಕನಸಿನಲ್ಲಿ ಶವವನ್ನು ನೋಡುವುದು ಸಹ ತುಂಬಾ ಮಂಗಳಕರವಾಗಿದೆ. ಅಂತಹ ಕನಸು ಅದೃಷ್ಟದ ಸಂಕೇತವಾಗಿರುತ್ತದೆ. ಯಾರಿಗೆ ಇಂಥಹ ಕನಸು ಬೀಳುತ್ತದೆಯೋ ಅವರ ಮೇಲೆ ಲಕ್ಷ್ಮೀ ದೇವಿಯ (godess lakshmi) ಆಶೀರ್ವಾದವಿರುತ್ತದೆ ಎಂದರ್ಥ.
ನಿಮ್ಮದೇ ತಲೆ ಕತ್ತರಿಸಿದ ರೀತಿಯಲ್ಲಿ ಕನಸಿನಲ್ಲಿ ಕಂಡರೆ, ಹಣಕಾಸಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ದೂರವಾಗಲಿವೆ ಎಂದರ್ಥ. ನಿಮ್ಮ ಮುಂದಿನ ದಿನಗಳಲ್ಲಿ ಭಾರೀ ಬದಲಾವಣೆಗಳನ್ನು ಕಾಣಬಹುದು.
ಇದನ್ನೂ ಓದಿ: Budh Rashi Parivartan: ಈ 3 ರಾಶಿಯವರಿಗೆ ಮುಂದಿನ 45 ದಿನ ಬಹಳ ವಿಶೇಷ, ಸುರಿಯಲಿದೆ ಹಣದ ಮಳೆ
ಕನಸಿನಲ್ಲಿ ರಕ್ತವನ್ನು ನೋಡುವುದು (Blood in dreams) ಕೂಡಾ ಶುಭ ಎಂದು ಸ್ವಪ್ನ ಶಾಸ್ತ್ರದಲ್ಲಿ ಹೇಳಲಾಗಿದೆ. ನೀವು ಹತ್ಯೆಯಾದಂತೆ ಅಥವಾ ನಿಮಗೆ ಗಾಯವಾದಂತೆ ಕನಸಿನಲ್ಲಿ ಕಂಡರೆ, ಹಣ ಮತ್ತು ಗೌರವ ಎರಡೂ ಪ್ರಾಪ್ತಿಯಾಗಲಿದೆ ಎನ್ನುವುದನ್ನು ಸೂಚಿಸುತ್ತದೆ.
ಕನಸಿನಲ್ಲಿ ಕೂದಲನ್ನು (hair cut) ಕತ್ತರಿಸುವುದನ್ನು ನೋಡುವುದು ಧನಾಗಮನದ ಸಂಕೇತವಾಗಿದೆ. ಋಣಭಾರದಿಂದ ಮುಕ್ತಿ ಹೊಂದಲು ಈ ಕನಸು ಅತ್ಯಂತ ಮಂಗಳಕರವಾಗಿರುತ್ತದೆ.
ನಿಮ್ಮ ಕನಸಿನಲ್ಲಿ ನಿಮ್ಮ ಮನೆ ಉರಿಯುತ್ತಿರುವುದನ್ನು ನೋಡಿದರೆ ನಿಮ್ಮ ಕೆಲವು ದೊಡ್ಡ ಆಸೆಗಳು ಈಡೇರಲಿವೆ ಎಂದರ್ಥ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.