ನವದೆಹಲಿ : ತಮ್ಮ ಜೀವನದಲ್ಲಿ ಪ್ರತಿಯೊಂದು ಸುಖ ಸಿಗಬೇಕೆಂಬುದು ಪ್ರತಿಯೊಬ್ಬರ ಆಸೆ. ಕೆಲವರ ಶ್ರಮ ಮತ್ತು ಅದೃಷ್ಟ ಕೂಡ ಅವರಿಗೆ ಈ ಅವಕಾಶವನ್ನು ನೀಡುತ್ತದೆ. ನಿಮ್ಮ ಅದೃಷ್ಟದಲ್ಲಿ ಇದೆಲ್ಲವೂ ಇದೆಯೇ ಅಥವಾ ಇಲ್ಲವೇ ಎನ್ನುವುದನ್ನು ತಿಳಿದುಕೊಳ್ಳಲು ಬಯಸಿದರೆ, ಹಸ್ತಸಾಮುದ್ರಿಕ ಶಾಸ್ತ್ರದ (Hasta Samudrika Shastra) ಮೂಲಕ ಸುಲಭವಾಗಿ ಕಂಡುಹಿಡಿಯಬಹುದು. ಇದಕ್ಕಾಗಿ, ಅಂಗೈಯಲ್ಲಿ ಕೇತು ಪರ್ವತದ (Ketu Parvath in hand) ಸ್ಥಾನವನ್ನು ಗಮನಿಸಬೇಕು. ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಕೇತು ಪರ್ವತವನ್ನು ಬಹಳ ಮುಖ್ಯ ಎಂದು ಪರಿಗಣಿಸಲಾಗಿದೆ. ಈ ಮೂಲಕ ವ್ಯಕ್ತಿಯ ಜೀವನದ ಬಗೆಗಿನ ಅತ್ಯಂತ ನಿಖರವಾದ ಮುನ್ಸೂಚನೆಗಳನ್ನು  ಪಡೆಯಬಹುದು. ಕೈಯಲ್ಲಿರುವ ಕೇತು ಪರ್ವತವು ಮಣಿಗಂಟಿನಿಂದ ಮೇಲಿರುತ್ತದೆ. ಶುಕ್ರ ಮತ್ತು ಚಂದ್ರನ ಪರ್ವತಗಳ ನಡುವೆ ಇರುತ್ತದೆ.   


COMMERCIAL BREAK
SCROLL TO CONTINUE READING

ಇವರಿಗೆ ಜೀವನದಲ್ಲಿ ಎಲ್ಲಾ ಸಂತೋಷವನ್ನು ಲಭಿಸುತ್ತದೆ :
ಯಾರ ಕೈಯಲ್ಲಿ ಕೇತು ಪರ್ವತವು (Ketu Parvath in hand) ಉತ್ತಮವಾಗಿ ವಿಕಸಿತವಾಗಿರುತ್ತದೆಯೋ, ಅವರು ತಮ್ಮ ಜೀವನದಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಮತ್ತು ಸಾಕಷ್ಟು ಹಣವನ್ನು ಪಡೆಯುತ್ತಾರೆ. ಈ ಜನರು, ಎಲ್ಲಾ ರೀತಿಯ ಭೌತಿಕ ಸಂತೋಷಗಳನ್ನು ಪಡೆಯುತ್ತಾರೆ. ಮತ್ತು ಅತ್ಯಂತ ಐಷಾರಾಮಿ ಜೀವನವನ್ನು ನಡೆಸುತ್ತಾರೆ.  


ಇದನ್ನೂ ಓದಿ : Shani Gochar 2022: ಶನಿ ರಾಶಿ ಬದಲಾವಣೆಯಿಂದ ತೆರೆಯಲಿದೆ ಈ 3 ರಾಶಿಯವರ ಅದೃಷ್ಟ


ಕೈಯಲ್ಲಿ ಕೇತು ಪರ್ವತ ಸರಿಯಾಗಿರುವುದಿಲ್ಲವೋ (Ketu parvath position in hand), ಅವರು ತುಂಬಾ ದುರ್ಬಲರಾಗಿರುತ್ತಾರೆ. ಅಂತಹ ವ್ಯಕ್ತಿಯು ಜೀವನದಲ್ಲಿ ಬಹಳ ಕಡಿಮೆ ಪ್ರಗತಿಯನ್ನು ಸಾಧಿಸುತ್ತಾನೆ. ಈ ಜನರ ಹೆಚ್ಚಿನ ಜೀವನವು ಬಡತನದಲ್ಲಿಯೇ ಕಳೆಯುವಂತಾಗುತ್ತದೆ.  


ಇನ್ನು, ಕೇತು ಪರ್ವತದ (Ketu Parvatha) ಮೇಲೇ ಕ್ರಾಸ್ ಗುರುತು ಇದ್ದಾರೆ, ವ್ಯಕ್ತಿ ಬಾಲ್ಯದಲ್ಲಿ ಕೆಲವು ಪ್ರಮುಖ ಕಾಯಿಲೆಗಲಿಂಡಾ ಬಳಲುತ್ತಾನೆ ಎನ್ನುವುದನ್ನು ತೋರಿಸುತ್ತದೆ. ಅಂತಹ ವ್ಯಕ್ತಿಯ ಶಿಕ್ಷಣದ ಮೇಲೂ ಪರಿಣಾಮ ಬೀರುತ್ತದೆ. 


ಇದನ್ನೂ ಓದಿ : Shukra Rashi Parivartan: ಈ ರಾಶಿಯವರಿಗೆ ಆರಂಭವಾಗಲಿದೆ ಒಳ್ಳೆಯ ಸಮಯ


ಯಾರ ಕೈಯಲ್ಲಿ ಕೇತು ಪರ್ವತ ಸಂಪೂರ್ಣವಾಗಿ ಅಭಿವೃದ್ಧಿಯಾಗಿದ್ದು, ಅದೃಷ್ಟದ ರೇಖೆಯು ಸಹ ಸ್ಪಷ್ಟವಾಗಿದ್ದಾರೆ, ಅಂತಹ ಜನರು ತಮ್ಮ ಜೀವನದಲ್ಲಿ ಎಲ್ಲಾ ಸಂತೋಷವನ್ನು ಪಡೆಯುತ್ತಾರೆ. ಅವರಿಗೆ ಹುದ್ದೆ-ಹಣ, ಪ್ರತಿಷ್ಠೆ, ಒಳ್ಳೆಯ ಸಂಸಾರ ಎಲ್ಲವೂ ಸಿಗುತ್ತದೆ. ಅಂತಹವರು ಬಡತನದಲ್ಲಿ ಹುಟ್ಟಿದರೂ ಎಲ್ಲವನ್ನು ಸಾಧಿಸಿ ಎತ್ತರಕ್ಕೆ ಏರುತ್ತಾರೆ. 



(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ  ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.