Garuda Purana: ಶರೀರದಿಂದ ಪ್ರಾಣ ಹೇಗೆ ಹೋಗುತ್ತದೆ? ಪ್ರಾಣ ಹೋಗುವಾಗ ಆತ್ಮ ಏಕೆ ಕಿರುಚಾಡುತ್ತದೆ?

Life After Death - ಸಾವಿನ ಸಂದರ್ಭದಲ್ಲಿ ಅನುಭವ ಹೇಗೆ ಇರುತ್ತದೆ? ಇದನ್ನು ತಿಳಿದುಕೊಳ್ಳುವ ಕುತೂಹಲ ಬಹುತೇಕ ಎಲ್ಲರಿಗೂ ಇರುತ್ತದೆ. ಸಾಯುವ ಸಮಯದಲ್ಲಿ ವ್ಯಕ್ತಿಯಲ್ಲಿ ಎಷ್ಟು ಇಂದ್ರಿಯಗಳು  ಕಾರ್ಯನಿರ್ವಹಿಸುತ್ತಿರುತ್ತವೆ ಹಾಗೂ ಅವನ ಅನಿಸಿಕೆ ಏನಾಗಿರುತ್ತದೆ? ಎಂಬುದರ ಕುರಿತು ಗರುಡ ಪುರಾಣದಲ್ಲಿ ವಿಸ್ತಾರವಾಗಿ ಹೇಳಲಾಗಿದೆ.

Written by - Nitin Tabib | Last Updated : Jan 23, 2022, 04:09 PM IST
  • ಮರಣದ ಸಂದರ್ಭದಲ್ಲಿ ವ್ಯಕ್ತಿಯ ಕಿವಿ ಕೇಳುವುದಿಲ್ಲ, ಮಾತನಾಡಲು ಬರುವುದಿಲ್ಲ.
  • ಯಮದೂತರ ಮಾತುಗಳನ್ನು ಕೇಳಿ ಆತ್ಮ ಕಣ್ಣೀರಿಡುತ್ತದೆ.
  • ಆತ್ಮ ಮತ್ತೆ ಶರೀರ ಪ್ರವೇಶಿಸಲು ಯತ್ನಿಸುತ್ತದೆ.
Garuda Purana: ಶರೀರದಿಂದ ಪ್ರಾಣ ಹೇಗೆ ಹೋಗುತ್ತದೆ? ಪ್ರಾಣ ಹೋಗುವಾಗ ಆತ್ಮ ಏಕೆ ಕಿರುಚಾಡುತ್ತದೆ? title=
What Happened With Soul After Death (File Photo)

ನವದೆಹಲಿ: Death Secret In Garuda Purana - ಹಿಂದೂ ಧರ್ಮದಲ್ಲಿ ಮಹಾಪುರಾಣವೆಂದು ಪರಿಗಣಿಸಲ್ಪಟ್ಟಿರುವ ಗರುಡ ಪುರಾಣವು ಜೀವನ ಮತ್ತು ಮರಣದ ಜೊತೆಗೆ ಆತ್ಮದ ಪ್ರಯಾಣವನ್ನು (Soul Journey) ವಿವರಿಸುತ್ತದೆ. ಈ ಪುರಾಣದಲ್ಲಿ, ಶ್ರೀವಿಷ್ಣು ಮತ್ತು ಅವನ ವಾಹನ ಪಕ್ಷಿರಾಜ ಗರುಡನ ನಡುವಿನ ಸಂಭಾಷಣೆಯ ಉಲ್ಲೇಖವಿದೆ. ಇದರಲ್ಲಿ ದೇವರು ಜನನ-ಮರಣ, ಪಾಪ-ಪುಣ್ಯ, ಸ್ವರ್ಗ-ನರಕ ಇತ್ಯಾದಿ ರಹಸ್ಯಗಳನ್ನು ಬಹಿರಂಗಪಡಿಸುತ್ತಾನೆ. ಮನುಷ್ಯನ ದೇಹದಿಂದ ಪ್ರಾಣವು ಹೇಗೆ ಹೊರಬರುತ್ತದೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಇದರ ಹೊರತಾಗಿ, ಸಾವಿನ ನಂತರ ಆತ್ಮದ (How Soul Comes Out From Body) ಪ್ರಯಾಣ ಹೇಗೆ. ಅವನು ಸ್ವರ್ಗ ಅಥವಾ ನರಕದಲ್ಲಿ ಎಲ್ಲಿ ಸ್ಥಾನ ಪಡೆಯುತ್ತಾನೆ? ಎಂಬುದರ ಕುರಿತು ಕೂಡ ಉಲ್ಲೇಖಿಸಲಾಗಿದೆ.

ಸಾಯುತ್ತಿರುವಂತೆ ಭಾಸವಾಗುತ್ತಿದೆ (What Happened With Soul After Death)
ಗರುಡ ಪುರಾಣದ (Garuda Purana) ಪ್ರಕಾರ, ಒಬ್ಬ ವ್ಯಕ್ತಿಯು ಸಾಯುವ ಸಮಯ ಹತ್ತಿರದಲ್ಲಿದ್ದಾಗ, ಅವನು ಬಯಸಿದರೂ ಏನನ್ನೂ ಮಾತನಾಡಲು ಸಾಧ್ಯವಾಗುವುದಿಲ್ಲ. ಅವನ ಮಾತನಾಡುವ ಮತ್ತು ಕೇಳುವ ಸಾಮರ್ಥ್ಯ ಕಳೆದುಹೋಗುತ್ತದೆ. ಅವನು ಯಮದೂತರನ್ನು ಕಂಡು ತುಂಬಾ ಹೆದರುತ್ತಾನೆ. ಅವನ ಸುತ್ತಲೂ ನಿಂತಿರುವ ಸಂಬಂಧಿಕರನ್ನು ಅವನು ನೋಡುವುದಿಲ್ಲ. ವ್ಯಕ್ತಿಯ ದೇಹದಿಂದ ಆತ್ಮ ಹೊರಬಂದ ನಂತರ, ಯಮದೂತರು ಅದನ್ನು ಯಮಲೋಕಕ್ಕೆ ಕೊಂಡೊಯ್ಯುತ್ತಾರೆ.

ಆತ್ಮವು ಜೋರಾಗಿ ಅಳುತ್ತದೆ (How Feel When Dying)
ಯಮದೂತರು ಆತ್ಮವನ್ನು ಯಮಲೋಕಕ್ಕೆ ಕೊಂಡೊಯ್ಯುತ್ತಿರುವಾಗ ಆತ್ಮವು ಸಾಕಷ್ಟು ನರಳುತ್ತದೆ. ಈ ಸಂದರ್ಭದಲ್ಲಿ ಯಮದೂತರು ಆತ್ಮಕ್ಕೆ  ಅದರ ಪಾಪಗಳಿಗಾಗಿ ಅದು ಪಡೆಯುವ ಶಿಕ್ಷೆ ಮತ್ತು ಚಿತ್ರಹಿಂಸೆಯ ಬಗ್ಗೆ ವಿವರಿಸುತ್ತಾರೆ, ಇದರಿಂದಾಗಿ ಆತ್ಮ ತುಂಬಾ ಅಳುತ್ತದೆ. ದಾರಿಯಲ್ಲಿ ಯಮದೂತರು ಆತ್ಮವನ್ನು ಚಾವಟಿಯಿಂದ ಹೊಡೆಯುತ್ತಾರೆ. ಹೇಗೋ ಆತ್ಮವು ತನ್ನ ಪ್ರಯಾಣವನ್ನು ಮುಗಿಸಿ ಯಮಲೋಕವನ್ನು ತಲುಪುತ್ತದೆ ಮತ್ತು ಅದರ ಕಾರ್ಯಗಳಿಗೆ ಅನುಗುಣವಾಗಿ ಸ್ವರ್ಗ ಮತ್ತು ನರಕವನ್ನು ಅದಕ್ಕೆ ನೀಡಲಾಗುತ್ತದೆ.

ಇದನ್ನೂ ಓದಿ-Shagun Shastra : ಚಿನ್ನ ಸಿಗುವುದು, ಕಳೆದುಕೊಳ್ಳುವುದು ಎರಡು ಅಶುಭ! ಯಾಕೆ ಇಲ್ಲಿದೆ ನೋಡಿ

ಆತ್ಮ ಮತ್ತೆ ತನ್ನ ಮನೆಗೆ ಬರುತ್ತದೆ (Death Experience)
ಯಮಲೋಕದಲ್ಲಿ, ಆತ್ಮವು ಯಮರಾಜನ ಮುಂದೆ ತನ್ನ ಮನೆಗೆ ಹೋಗಲು ಅನುಮತಿ ನೀಡುವಂತೆ ಮನವಿ ಮಾಡುತ್ತದೆ ಮತ್ತು ಮತ್ತೆ ತನ್ನ ಮನೆಗೆ ಹಿಂದಿರುತುತ್ತದೆ. ಈ ಸಂದರ್ಭದಲ್ಲಿ ಅದು ಮತ್ತೊಮ್ಮೆ ತನ್ನ ದೇಹವನ್ನು ಪ್ರವೇಶಿಸಲು ಬಯಸುತ್ತದೆ. ಆದರೆ ಯಮದೂತರು ಅದಕ್ಕೆ ಮುಕ್ತಿ ನೀಡುವುದಿಲ್ಲ. ತನ್ನ ಕುಟುಂಬದ ವ್ಯಾಮೋಹದ ಕಾರಣ ಅದು ಅವರಿಂದ ದೂರ ಹೋಗಲು ಬಯಸುವುದಿಲ್ಲ. ಆದ್ದರಿಂದ ಆತ್ಮವು ಕುಟುಂಬದ ಬಾಂಧವ್ಯದಿಂದ ಮುಕ್ತವಾಗಲು ಪಿಂಡ್ ದಾನ ಕ್ರಿಯೆ ನಡೆಸಲಾಗುತ್ತದೆ. ಇಲ್ಲದಿದ್ದರೆ, ಅದು ಪ್ರೇತದ ರೂಪದಲ್ಲಿ ಹಲವು ವರ್ಷಗಳವರೆಗೆ ಸತ್ತ ಜಗತ್ತಿನಲ್ಲಿ ಅಲೆದಾಡುತ್ತದೆ. ಗರುಡ ಪುರಾಣದ ಪ್ರಕಾರ, ಒಬ್ಬ ವ್ಯಕ್ತಿಯ ಮರಣದ ನಂತರ, ಅವನ ಪಿಂಡ ದಾನವನ್ನು 10 ದಿನಗಳಲ್ಲಿ ಮಾಡಬೇಕು.

ಇದನ್ನೂ ಓದಿ-Omicron Variant: ಆಯುರ್ವೇದಲ್ಲಿ ಹೇಳಿರುವ ಈ 5 ವಿಷಯಗಳು ಕೊರೊನಾದಿಂದ ರಕ್ಷಿಸುತ್ತವೆ, ಏನೆಂದು ತಿಳಿಯಿರಿ

(Disclaimer: ಇಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಝೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ಓದಿ-Health Tips: ನೀವೂ ಈ ರೀತಿ ಲ್ಯಾಪ್‌ಟಾಪ್ ಬಳಸುತ್ತಿದ್ದರೆ ಇಂದೇ ಎಚ್ಚರಿಕೆ ವಹಿಸಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News