Rath Saptami 2023: ಈ ರಾಶಿಗಳ ಜನರ ಮೇಲಿರುತ್ತೆ ಸೂರ್ಯನ ವಿಶೇಷ ಕೃಪೆ, ಧನ-ಧಾನ್ಯ ವೃದ್ಧಿಗೆ ಈ ಸಣ್ಣ ಉಪಾಯ ಮಾಡಿ
Rath Saptami Upay: ಇಂದು ರಥ ಸಪ್ತಮಿ, ಎರಡು ರಾಶಿಗಳ ಜನರ ಪಾಲಿಗೆ ಇಂದಿನ ದಿನ ತುಂಬಾ ವಿಶೇಷವಾಗಿದೆ. ಏಕೆಂದರೆ, ಈ ಎರಡು ರಾಶಿಗಳ ಮೇಲೆ ಸೂರ್ಯದೇವನ ನಿರಂತರ ಕೃಪೆ ಇರುತ್ತದೆ. ಸೂರ್ಯ ದೇವನ ವಿಶೇಷ ಕೃಪೆಗೆ ಪಾತ್ರರಾಗಲು ಇಂದು ಮೇಷ ಹಾಗೂ ಸಿಂಹ ರಾಶಿಯ ಜಾತಕದವರು ಕೆಲ ವಿಶೇಷ ಕೆಲಸಗಳನ್ನು ಮಾಡಬೇಕು.
Surya Dev Favourite Zodiac Signs: ವೈದಿಕ ಜ್ಯೋತಿಷ್ಯ ಶ್ತಾಸ್ತ್ರದಲ್ಲಿ, ಗ್ರಹಗಳಲ್ಲಿ ಸೂರ್ಯನಿಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಸೂರ್ಯನನ್ನು ಗ್ರಹಗಳ ರಾಜ ಎಂದು ಪರಿಗಣಿಸಲಾಗುತ್ತದೆ. ಸೂರ್ಯ ದೇವರು ಆತ್ಮ ವಿಶ್ವಾಸ, ಆರೋಗ್ಯ ಮತ್ತು ಯಶಸ್ಸಿನ ಕಾರಕನಾಗಿದ್ದಾನೆ. ಸೂರ್ಯನ ಆಶೀರ್ವಾದದಿಂದ, ವ್ಯಕ್ತಿಯು ತನ್ನ ವೃತ್ತಿಜೀವನದಲ್ಲಿ ತ್ವರಿತ ಪ್ರಗತಿಯನ್ನು ಸಾಧಿಸುತ್ತಾನೆ, ಉನ್ನತ ಸ್ಥಾನ ಮತ್ತು ಗೌರವವನ್ನು ಪಡೆಯುತ್ತಾನೆ. ಇಂದು ರಥಸಪ್ತಮಿಯ ದಿನ ಸೂರ್ಯನ ಜನ್ಮದಿನ. ಈ ದಿನ, ಸೂರ್ಯನಿಗಾಗಿ ಮಾಡಲಾಗುವ ಉಪಾಯಗಳು ಸೂರ್ಯನ ಅಪಾರ ಕೃಪೆ ಮತ್ತು ಯಶಸ್ಸನ್ನು ನೀಡುತ್ತವೆ. ಸೂರ್ಯನ ನೆಚ್ಚಿನ ರಾಶಿಗಳು ಯಾವುವು ಮತ್ತು ಸೂರ್ಯ ದೇವರ ಆಶೀರ್ವಾದವನ್ನು ಪಡೆಯಲು ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಮೇಷ ಮತ್ತು ಸಿಂಹ ರಾಶಿಯವರ ಮೇಲೆ ಸೂರ್ಯನ ವಿಶೇಷ ಕೃಪೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನು ಸಿಂಹ ಮತ್ತು ಮೇಷ ರಾಶಿಯ ಅಧಿಪತಿ. ಈ ಕಾರಣಕ್ಕಾಗಿ, ಸೂರ್ಯ ದೇವರು ಈ 2 ರಾಶಿಗಳ ಜನರ ಮೇಲೆ ನಿರಂತರ ಕೃಪೆ ತೋರುತ್ತಾನೆ ಮತ್ತು ಸೂರ್ಯನ ಅನುಗ್ರಹದ ಪರಿಣಾಮ ಈ ಜನರ ಜೀವನದ ಮೇಲೆ ಗೋಚರಿಸುತ್ತದೆ. ಮೇಷ ಮತ್ತು ಸಿಂಹ ರಾಶಿಯ ಜನರು ತುಂಬಾ ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ, ಉತ್ತಮ ನಾಯಕತ್ವದ ಸಾಮರ್ಥ್ಯವನ್ನು ಹೊಂದಿದ್ದಾರೆ ಮತ್ತು ಸೂರ್ಯನ ಅನುಗ್ರಹದಿಂದ ಅದ್ಭುತ ವ್ಯಕ್ತಿತ್ವದ ಮಾಲೀಕರಾಗಿರುತ್ತಾರೆ. ಈ ಜನರು ತಾವು ಹೋದ ಯಾವುದೇ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತಾರೆ. ವಿಶೇಷವಾಗಿ ಈ ಜನರು ರಾಜಕೀಯ, ಆಡಳಿತ ಮತ್ತು ವ್ಯವಹಾರದಲ್ಲಿ ಯಶಸ್ವಿಯಾಗುತ್ತಾರೆ. ಇವರು ಯಶಸ್ವಿ ಉದ್ಯಮಿಗಳಾಗುತ್ತಾರೆ. ಈ ಜನರ ಅದೃಷ್ಟವೂ ಕೂಡ ತುಂಬಾ ಚೆನ್ನಾಗಿರುತ್ತದೆ.
ಸೂರ್ಯ ದೇವನ ಉಪಾಯಗಳು
ರಥಸಪ್ತಮಿಯ ದಿನದಂದು ಮೇಷ ಮತ್ತು ಸಿಂಹ ರಾಶಿಯ ಜನರು ಸೂರ್ಯ ದೇವರನ್ನು ಮೆಚ್ಚಿಸಲು ಕೆಲ ಕ್ರಮಗಳನ್ನು ಕೈಗೊಳ್ಳಬೇಕು. ಇದು ಅವರಿಗೆ ವೃತ್ತಿಜೀವನದಲ್ಲಿ ತ್ವರಿತ ಪ್ರಗತಿಯನ್ನು ನೀಡುತ್ತದೆ. ಉದ್ಯೋಗ-ವ್ಯವಹಾರದಲ್ಲಿ ಪರಿಸ್ಥಿತಿ ಬಲವಾಗಿರುತ್ತದೆ.
>> ರಥಸಪ್ತಮಿಯಂದು ಸೂರ್ಯ ದೇವರನ್ನು ಪೂಜಿಸಿ ಮತ್ತು ಉಪವಾಸವನ್ನು ಆಚರಿಸಿ. ಈ ದಿನ ಉಪ್ಪನ್ನು ಸೇವಿಸಬೇಡಿ.
>> ಇಂದು ಕೆಂಪು ಅಥವಾ ಕೇಸರಿ ಬಣ್ಣದ ಬಟ್ಟೆಗಳನ್ನು ಧರಿಸಿ. ಇದರಿಂದ ಸೂರ್ಯದೇವ ಪ್ರಸನ್ನನಾಗುತ್ತಾನೆ.
>> ಜಾತಕದಲ್ಲಿ ಸೂರ್ಯ ಬಲಗೊಳ್ಳಲು ಬೆಲ್ಲ, ಗೋಧಿ, ತಾಮ್ರ ಮುಂತಾದ ವಸ್ತುಗಳನ್ನು ದಾನ ಮಾಡಿ.
>> ತಜ್ಞರ ಸಲಹೆ ಪಡೆದು ಮಾಣಿಕ್ಯ ರತ್ನ ಧರಿಸಿ.
>> ಸೂರ್ಯ ದೇವರ ಆಶೀರ್ವಾದವನ್ನು ಪಡೆಯಲು, ಏಕಮುಖಿ ರುದ್ರಾಕ್ಷಿಯನ್ನು ಧರಿಸುವುದು ತುಂಬಾ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ.
ಧನ-ಧಾನ್ಯ ವೃದ್ಧಿಗೆ ಈ ಉಪಾಯ ಮಾಡಿ
ಜಾತಕದಲ್ಲಿ ಸೂರ್ಯನ ಬಲವಾದ ಸ್ಥಾನ ಜೀವನದಲ್ಲಿ ದೈಹಿಕ, ಮಾನಸಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದರೊಂದಿಗೆ ಸಮಾಜದಲ್ಲಿ ಗೌರವ, ಪ್ರತಿಷ್ಠೆಯೂ ಪ್ರಾಪ್ತಿಯಾಗುತ್ತದೆ. ಮತ್ತೊಂದೆಡೆ, ದುರ್ಬಲ ಸೂರ್ಯ ವ್ಯಕ್ತಿಯ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಜ್ಯೋತಿಷ್ಯ ಶಾಸ್ತ್ರದಲ್ಲಿ ಮನೆಯಲ್ಲಿ ಸೂರ್ಯ ಯಂತ್ರವನ್ನು ಪ್ರತಿಷ್ಠಾಪಿಸಲು ಸಲಹೆ ನೀಡಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅಚಲಾ ಸಪ್ತಮಿಯ ದಿನದಂದು ಸೂರ್ಯ ಯಂತ್ರವನ್ನು ಪ್ರತಿಷ್ಠಾಪಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನ ಸೂರ್ಯದೇವನು ತನ್ನ ರಥದಲ್ಲಿ ಪ್ರಕಟನಾದ ಎಂಬ ಪ್ರತೀತಿ ಇದೆ. ಹೀಗಾಗಿ ಇದನ್ನು ರಥಸಪ್ತಮಿ, ಸೂರ್ಯ ಜಯಂತಿ, ಮಾಘ ಸಪ್ತಮಿ ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ. ಈ ದಿನದಂದು ಸೂರ್ಯ ಯಂತ್ರವನ್ನು ಪ್ರತಿಷ್ಟಾಪಿಸುವುದರಿಂದ, ವ್ಯಕ್ತಿಯು ಎಲ್ಲಾ ತೊಂದರೆಗಳಿಂದ ಮುಕ್ತಿಯನ್ನು ಪಡೆಯುತ್ತಾನೆ ಎಂಬುದು ಧಾರ್ಮಿಕ ನಂಬಿಕೆ ಮತ್ತು ಪ್ರತಿಯೊಂದು ಕೆಲಸದಲ್ಲೂ ಆತನಿಗೆ ಯಶಸ್ಸು ಸಿಗುತ್ತದೆ.
ಸೂರ್ಯ ಯಂತ್ರದ ಪ್ರತಿಷ್ಠಾಪನೆಯ ಪ್ರಯೋಜನಗಳು
ಶಾಸ್ತ್ರಗಳ ಪ್ರಕಾರ, ಸೂರ್ಯ ಯಂತ್ರವನ್ನು ಮನೆಯಲ್ಲಿ ಪ್ರತಿಷ್ಟಾಪಿಸುವುದರಿಂದ, ಒಬ್ಬ ವ್ಯಕ್ತಿಯು ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸನ್ನು ಪಡೆಯುತ್ತಾನೆ. ಸಮಾಜದಲ್ಲಿ ಗೌರವ ಪ್ರಾಪ್ತಿಯಾಗುತ್ತದೆ. ಜೊತೆಗೆ ವ್ಯಕ್ತಿ ಸರ್ಕಾರಿ ಕೆಲಸ, ವ್ಯಾಪಾರ ಮತ್ತು ಉದ್ಯೋಗ ಇತ್ಯಾದಿ ವಿಷಯಗಳಲ್ಲಿಯೂ ಸಹ ಯಶಸ್ಸನ್ನು ಪಡೆಯುತ್ತಾನೆ. ತಮ್ಮ ಜಾತಕದಲ್ಲಿ ಸೂರ್ಯನ ಕೆಟ್ಟ ಸ್ಥಾನವನ್ನು ಹೊಂದಿರುವ ಜನರು ಸೂರ್ಯ ಯಂತ್ರವನ್ನು ಪ್ರತಿಷ್ಠಾಪಿಸುವ ಮೂಲಕ ಪ್ರಯೋಜನಗಳನ್ನು ಪಡೆಯುತ್ತಾರೆ.
ಇದನ್ನೂ ಓದಿ-ಶನಿಯೊಂದಿಗೆ ಧನ-ಸಂಪತ್ತಿನ ಕಾರಕ ಗ್ರಹದ ಸಂಯೋಜನೆ, ಈ 4 ರಾಶಿಗಳಿಗೆ ಭಾರಿ ಧನಲಾಭ! ನಿಮ್ಮ ರಾಶಿ ಯಾವುದು?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕಣ್ಣುಗಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇರುವವರು, ಸೂರ್ಯ ಯಂತ್ರವನ್ನು ನಿಯಮಿತವಾಗಿ ಪೂಜಿಸಬೇಕು. ಇದರಿಂದ ಅವರಿಗೆ ಸಾಕಷ್ಟು ಪ್ರಯೋಜನ ಸಿಗುತ್ತದೆ. ಮತ್ತೊಂದೆಡೆ, ಯಾರು ತಮ್ಮ ತಂದೆಯ ಜೊತೆಗೆ ಉತ್ತಮ ಬಾಂಧವ್ಯ ಹೊಂದಿಲ್ಲವೋ ಅಥವಾ ತಮ್ಮ ತಂದೆಯೊಂದಿಗೆ ಉತ್ತಮ ಸಂಬಂಧವನ್ನು ಹೊಂದಿಲ್ಲವೋ, ಅವರು ಸೂರ್ಯ ಯಂತ್ರವನ್ನು ಕ್ರಮಬದ್ಧವಾಗಿ ಪ್ರತಿಷ್ಟಾಪಿಸಬೇಕು. ಇದಲ್ಲದೆ, ಸಮಾಜದಲ್ಲಿ ಗೌರವವನ್ನು ಹೆಚ್ಚಿಸಲು ಸೂರ್ಯ ಯಂತ್ರದ ಪ್ರತಿಷ್ಠಾಪನೆ ತುಂಬಾ ಫಲಪ್ರದ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ-Mercury Transit 2023: 8 ರಾಶಿಗಳ ಜನರ ಆದಾಯದಲ್ಲಿ ಭಾರಿ ವೃದ್ಧಿ, ಹೊಸ ಉದ್ಯೋಗಾವಕಾಶದ ಯೋಗ!
ಸೂರ್ಯ ಯಂತ್ರವನ್ನು ಈ ರೀತಿ ಪ್ರತಿಷ್ಠಾಪಿಸಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ ದೇವರ ಆಶೀರ್ವಾದ ಪಡೆಯಲು ಸೂರ್ಯ ಸಪ್ತಮಿಯ ದಿನದಂದು ವಿಶೇಷ ಪೂಜೆ ಮಾಡುವುದು ಒಳ್ಳೆಯದು. ಇದಲ್ಲದೆ, ಭಾನುವಾರ ಬೆಳಗ್ಗೆ ಸ್ನಾನದ ನಂತರ, ಒಂದು ಚೌರಂಗದ ಮೇಲೆ ಕೆಂಪು ಬಣ್ಣದ ಬಟ್ಟೆಯನ್ನು ಹರಡಿ. ನಂತರ ಸೂರ್ಯ ದೇವರ ಬೀಜ ಮಂತ್ರವನ್ನು 11 ಅಥವಾ 21 ಬಾರಿ ಜಪಿಸಿ. ಸೂರ್ಯ ಯಂತ್ರವನ್ನು ಗಂಗಾಜಲ ಅಥವಾ ಹಸಿ ಹಾಲಿನಿಂದ ಶುದ್ಧೀಕರಿಸಿ ಅದಕ್ಕೆ ಶ್ರೀಗಂಧ, ಕುಂಕುಮ ಮತ್ತು ಕೆಂಪು ಹೂವುಗಳನ್ನು ಅರ್ಪಿಸಿ. ಇದರ ನಂತರ, ಕೈಗಳನ್ನು ಮುಗಿದು, ಸೂರ್ಯ ದೇವರಿಗೆ ನಿಮ್ಮ ಆಸೆಯನ್ನು ಹೇಳಿ ಮತ್ತು ಗರಿಷ್ಠ ಮಂಗಳಕರ ಫಲಿತಾಂಶಗಳಿಗಾಗಿ ಪ್ರಾರ್ಥಿಸಿ. ಸೂರ್ಯ ಯಂತ್ರದ ನಿಯಮಿತ ಪೂಜೆಯು ಭಾರಿ ಪ್ರಯೋಜನಗಳನ್ನು ನೀಡುತ್ತದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.