Mercury Transit 2023: 8 ರಾಶಿಗಳ ಜನರ ಆದಾಯದಲ್ಲಿ ಭಾರಿ ವೃದ್ಧಿ, ಹೊಸ ಉದ್ಯೋಗಾವಕಾಶದ ಯೋಗ!

Budh Gochar 2023: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧ ಗ್ರಹ ಮುಂದಿನ ತಿಂಗಳು ಧನು ರಾಶಿಯಿಂದ ಹೊರಬಂದು ಮಕರ ರಾಶಿಯನ್ನು ಪ್ರವೇಶಿಸಲಿದೆ ಹಾಗೂ ಇದರ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಮೇಲೆ ಬೀಳಲಿದೆ. ಇದರಿಂದ ಕೆಲ ರಾಶಿಗಳ ಅದೃಷ್ಟ ಭಾರಿ ಮೆರಗನ್ನು ಪಡೆಯಲಿದೆ. ಬನ್ನಿ ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ,   

Written by - Nitin Tabib | Last Updated : Jan 28, 2023, 09:15 AM IST
  • ಮಕರ ರಾಶಿಯಲ್ಲಿ ಬುಧನ ಈ ಸಂಚಾರ ಕೆಲ ರಾಶಿಗಳ ಮೇಲೆ ಕೆಲವು ಕೆಟ್ಟ ಪರಿಣಾಮಗಳನ್ನು ಉಂಟುಮಾಡುತ್ತದೆ,
  • ಆದರೆ ಉಳಿದ ರಾಶಿಗಳು ಇದರಿಂದ ಬಂಪರ್ ಪ್ರಯೋಜನಗಳನ್ನು ಪಡೆಯುತ್ತವೆ.
  • ಹಾಗಾದರೆ ಬುಧನ ಈ ರಾಶಿ ಪರಿವರ್ತನೆ ಯಾವ ರಾಶಿಗಳ ಜನರ ಅದೃಷ್ಟವು ಬೆಳಗಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
Mercury Transit 2023: 8 ರಾಶಿಗಳ ಜನರ ಆದಾಯದಲ್ಲಿ ಭಾರಿ ವೃದ್ಧಿ, ಹೊಸ ಉದ್ಯೋಗಾವಕಾಶದ ಯೋಗ! title=
ಬುಧ ಗೋಚರ 2023

Budh Rashi Parivartan 2023: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಶಿ ಪರಿವರ್ತನೆಗೆ ವಿಶೇಷ ಪ್ರಾಮುಖ್ಯತೆ ಇದೆ ಮತ್ತು ಎಲ್ಲಾ 9 ಗ್ರಹಗಳು ಪ್ರತಿಯೊಬ್ಬ ವ್ಯಕ್ತಿಯ ಮೇಲೆ ವಿಶೇಷ ಪರಿಣಾಮವನ್ನು ಬೀರುತ್ತವೆ. ಒಂದು ಗ್ರಹವು ತನ್ನ ರಾಶಿಯನ್ನು ಪರಿವರ್ತಿಸಿದಾಗ, ಅದು ಎಲ್ಲಾ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಮುಂದಿನ ತಿಂಗಳು ಬುಧ ಗ್ರಹವು ಧನು ರಾಶಿಯನ್ನು ತೊರೆದು ಮಕರ ರಾಶಿಯನ್ನು ಪ್ರವೇಶಿಸಲಿದೆ. ಮಕರ ರಾಶಿಯಲ್ಲಿ ಬುಧನ ಈ ಸಂಚಾರ ಕೆಲ ರಾಶಿಗಳ ಮೇಲೆ ಕೆಲವು ಕೆಟ್ಟ ಪರಿಣಾಮಗಳನ್ನು ಉಂಟುಮಾಡುತ್ತದೆ, ಆದರೆ ಉಳಿದ ರಾಶಿಗಳು ಇದರಿಂದ ಬಂಪರ್ ಪ್ರಯೋಜನಗಳನ್ನು ಪಡೆಯುತ್ತವೆ. ಹಾಗಾದರೆ ಬುಧನ ಈ ರಾಶಿ ಪರಿವರ್ತನೆ ಯಾವ ರಾಶಿಗಳ ಜನರ ಅದೃಷ್ಟವು ಬೆಳಗಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮೇಷ ರಾಶಿ: ಮಕರ ರಾಶಿಯಲ್ಲಿ ಬುಧ ಸಂಚಾರ ಮೇಷ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ಮೇಷ ರಾಶಿಯ ಜನರು ತಮ್ಮ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳುವ ನಿರ್ಧಾರಗಳು ಭಾರಿ ಮೆಚ್ಚುಗೆಗೆ ಪಾತ್ರವಾಗಲಿವೆ. ಇದಲ್ಲದೆ, ಕೆಲಸದ ಸ್ಥಳದಲ್ಲಿ ಪ್ರಭಾವವು ಹೆಚ್ಚಾಗಲಿದೆ ಮತ್ತು ಆದರೆ ಶತ್ರುಗಳು ಪ್ರಾಬಲ್ಯ ಸಾಧಿಸಲಿದ್ದಾರೆ.

ವೃಷಭ ರಾಶಿ: ಮಕರ ರಾಶಿಯಲ್ಲಿ ಬುಧ ಸಂಚಾರದಿಂದ ವೃಷಭ ರಾಶಿಯ ಜಾತಕದವರ  ವೃತ್ತಿ ಜೀವನದ ಮೇಲೆ ಅನುಕೂಲಕರ ಪರಿಣಾಮ ಬೀರಲಿದ್ದು, ಜೀವನ ಸುಖಮಯವಾಗಿರುತ್ತದೆ. ಕಠಿಣ ಪರಿಶ್ರಮದ ಫಲಿತಾಂಶ ನಿಮಗೆ ಸಿಗಲಿದೆ. ಆದರೂ, ನಿಮ್ಮ ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಮಿಥುನ ರಾಶಿ: ಬುಧನ ಈ ರಾಶಿ ಪರಿವರ್ತನೆ ಮಿಥುನ ರಾಶಿಯವರಿಗೆ ಜೀವನದಲ್ಲಿ ಸಂತಸ ತರಲಿದೆ. ಫೆಬ್ರವರಿ ತಿಂಗಳಲ್ಲಿ ನೀವು ಕೆಲ ಉತ್ತಮ ಬದಲಾವಣೆಗಳನ್ನು ನಿರೀಕ್ಷಿಸಬಹುದು. ಇದರೊಂದಿಗೆ ಜೀವನದಲ್ಲಿ ಶಾಂತಿ ನೆಲೆಸಲಿದೆ.

ಕನ್ಯಾ ರಾಶಿ: ಮಕರ ರಾಶಿಯಲ್ಲಿ ಬುಧ ಗೋಚರ ಕನ್ಯಾ ರಾಶಿಯವರಿಗೆ ಉತ್ತಮ ಆರ್ಥಿಕ ಸ್ಥಿತಿಯನ್ನು ಹೊತ್ತು ತರಲಿದೆ. ಈಗಾಗಲೇ ಮುಂದುವರೆದ ಸಮಸ್ಯೆಗಳು ಅಂತ್ಯವಾಗಳಿವೆ. ಇದರೊಂದಿಗೆ ಕನ್ಯಾ ರಾಶಿಯ ಜನರ ಪ್ರೇಮ ಜೀವನ ಅಥವಾ ವೈವಾಹಿಕ ಜೀವನವೂ ಉತ್ತಮವಾಗಿರಲಿದೆ.

ವೃಶ್ಚಿಕ ರಾಶಿ: ಮಕರ ರಾಶಿಯಲ್ಲಿ ಬುಧ  ವೃಶ್ಚಿಕ ರಾಶಿಯವರಿಗೆ ದುಂದುವೆಚ್ಚದ ಮೇಲೆ ನಿಯಂತ್ರಣ ವಿಧಿಸಿ ಉಳಿತಾಯ ಹೆಚ್ಚಿಸಲಿದೆ. ಇದರಿಂದಾಗಿ ಆರ್ಥಿಕ ಸ್ಥಿತಿ ಬಳವಾಗಿರಲಿದೆ. ನೀವು ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಅದನ್ನು ಎಚ್ಚರಿಕೆಯಿಂದ ಮಾಡಿ, ಆಗ ಮಾತ್ರ ನಿಮಗೆ ಲಾಭ ಸಿಗಲಿದೆ.

ಧನು ರಾಶಿ: ಬುಧ ರಾಶಿ ಪರಿವರ್ತನೆ ಧನು ರಾಶಿಯವರಿಗೆ ಒಳ್ಳೆಯ ದಿನಗಳನ್ನು ತರಲಿದೆ, ಆಲೋಚನೆ ಮತ್ತು ತಿಳುವಳಿಕೆಯೊಂದಿಗೆ ನಿರ್ಧಾರ ತೆಗೆದುಕೊಳ್ಳುವ ನಿಮ್ಮ ಸಾಮರ್ಥ್ಯ ಉತ್ತಮವಾಗಿದೆ. ಇದರಿಂದ, ನೀವು ಕೆಲಸದ ಸ್ಥಳದಲ್ಲಿ ಕಠಿಣ ಪರಿಶ್ರಮದ ಫಲವನ್ನು ಪಡೆಯಬಹುದು.

ಮಕರ ರಾಶಿ: ಬುಧ ನಿಮ್ಮ ರಾಶಿಗೆ ಪ್ರವೇಶಿಸುತ್ತಿದ್ದಾನೆ ಮತ್ತು ಇದರಿಂದ ನಿಮಗೆ ನೇರ ಆರ್ಥಿಕ ಲಾಭ ಇರಲಿದೆ. ಮಕರ ರಾಶಿಯವರಿಗೆ ಹಠಾತ್ ಧನ ಲಾಭದ ಸಾಧ್ಯತೆಗಳಿವೆ ಮತ್ತು ಆದಾಯದ ಹೆಚ್ಚಳದಿಂದ ಆರ್ಥಿಕ ಭಾಗ ಉತ್ತಮವಾಗಲಿದೆ. ಮಕರ ರಾಶಿಯ ಜಾತಕ ಬಲವು ಈ ಪರಿವರ್ತನೆಯಿಂದ ಹೆಚ್ಚಾಗಲಿದೆ ಮತ್ತು ಶತ್ರುಗಳ ಮೇಲೆ ನಿಮ್ಮ ಪ್ರಭಾವ ಹೆಚ್ಚಾಗಲಿದೆ.

ಇದನ್ನೂ ಓದಿ-Horoscope: ಗ್ರಹಗಳ ಸ್ಥಿತಿ ಸಾಮಾನ್ಯ, ಮೇಷ, ವೃಷಭ, ಧನು ರಾಶಿಯವರು ಎಚ್ಚರಿಕೆಯಿಂದ ಇರಬೇಕಾದ ದಿನ

ಮೀನ ರಾಶಿ: ಮಕರ ರಾಶಿಯಲ್ಲಿ ಬುಧ ಗೋಚರ ಮೀನ ರಾಶಿಯವರಿಗೆ ವೃತ್ತಿಜೀವನಕ್ಕೆ ತುಂಬಾ ಉಪಯುಕ್ತ ಸಬೀತಾಗಲಿದೆ ಮತ್ತು ನೀವು ಹೊಸ ಉದ್ಯೋಗದ ಭರವಸೆಯನ್ನು ಪಡೆಯಬಹುದು. ಇದಲ್ಲದೆ, ಉದ್ಯಮಿಗಳಿಗೂ ಕೂಡ ಇದರಿಂದ ಲಾಭ ಸಿಗಲಿದೆ.  ಹೊಸ ವ್ಯವಹಾರವನ್ನು ಪ್ರಾರಂಭಿಸಲು ಯೋಜಿಸುತ್ತಿರುವವರಿಗೆ ಯಶಸ್ಸು ಸಿಗಲಿದೆ.

ಇದನ್ನೂ ಓದಿ-ಶನಿಯೊಂದಿಗೆ ಧನ-ಸಂಪತ್ತಿನ ಕಾರಕ ಗ್ರಹದ ಸಂಯೋಜನೆ, ಈ 4 ರಾಶಿಗಳಿಗೆ ಭಾರಿ ಧನಲಾಭ! ನಿಮ್ಮ ರಾಶಿ ಯಾವುದು?

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News