Grah Gochar Impact 2022: ವೈದಿಕ ಜ್ಯೋತಿಷ್ಯದಲ್ಲಿ, ಪ್ರತಿ ಗ್ರಹವು ಒಂದು ನಿರ್ದಿಷ್ಟ ಕಾಲಾವಧಿಯ ಬಳಿಕ ತನ್ನ ರಾಶಿಯನ್ನು ಬದಲಾಯಿಸುತ್ತದೆ ಎನ್ನಲಾಗಿದೆ. ಡಿಸೆಂಬರ್ ತಿಂಗಳಿನಲ್ಲಿ ಅನೇಕ ಗ್ರಹಗಳು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗಲಿವೆ. ಇನ್ನೊಂದೆಡೆ, ಹೊಸ ವರ್ಷದ ಆರಂಭ ಕೂಡ ಸನ್ನಿಹಿತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಹೊಸ ವರ್ಷವು ತಮ್ಮ ಪಾಲಿಗೆ ಮಂಗಳಕರ, ಶುಭಫಲಪ್ರದ ಮತ್ತು ಎಲ್ಲರಿಗೂ ಪ್ರಯೋಜನಕಾರಿಯಾಗಲಿ ಎಂದು ಎಲ್ಲರೂ ಬಯಸುತ್ತಾರೆ. ಹೀಗಾಗಿ, ಕೆಲವು ರಾಶಿಗಳ ಜನರ ಪಾಲಿಗೆ ಕೊನೆಯ ತಿಂಗಳು ಬಹಳ ಫಲ ನೀಡಿ ಹೋಗಲಿದೆ. ಡಿಸೆಂಬರ್ ಕೊನೆಯ ವಾರದಲ್ಲಿ, ಅನೇಕ ಗ್ರಹಗಳು ಒಂದು ರಾಶಿಯನ್ನು ತೊರೆದು ಮತ್ತೊಂದು ರಾಶಿಗೆ ಪ್ರವೇಶಿಸಲಿವೆ.


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧ ಗ್ರಹ ಡಿಸೆಂಬರ್ 28 ರಂದು ಮತ್ತು ಶುಕ್ರ ಡಿಸೆಂಬರ್ 29 ರಂದು ಮಕರ ರಾಶಿಯನ್ನು ಪ್ರವೇಶಿಸಲಿವೆ. ಇನ್ನೊಂದೆಡೆ, ಬುಧವು ತನ್ನ ಹಿಮ್ಮುಖ ಸ್ಥಿತಿಯಲ್ಲಿ ಡಿಸೆಂಬರ್ 31 ರಂದು ಧನು ರಾಶಿಗೆ ಪ್ರವೇಶಿಸಲಿದೆ. ಈ ಗ್ರಹಗಳ ಸಂಕ್ರಮಣದ ಪರಿಣಾಮವು ಕೆಲವು ರಾಶಿಗಳ ಜಾತಕದವರ ಅದೃಷ್ಟದಲ್ಲಿ ಮಹತ್ತರವಾದ ಬದಲಾವಣೆಯನ್ನು ತರಲಿದೆ. ಈ ಅವಧಿಯಲ್ಲಿ ಅವರಿಗೆ ವಿಶೇಷ ಆರ್ಥಿಕ ಲಾಭಗಳು ಪ್ರಾಪ್ತಿಯಾಗಲಿವೆ,


ಮೇಷ ರಾಶಿ- ಡಿಸೆಂಬರ್ ಕೊನೆಯ ವಾರದಲ್ಲಿ ಗ್ರಹಗಳ ಸಂಚಾರದಿಂದ ಮೇಷ ರಾಶಿಯವರಿಗೆ ಭಾರಿ ಲಾಭವಾಗಲಿದೆ. ವ್ಯಾಪಾರ ಮತ್ತು ಕಾರ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರಿಗೆ ಈ ಸಮಯವು ಅತ್ಯಂತ ಫಲಪ್ರದವಾಗಿರುತ್ತದೆ. ಮತ್ತೊಂದೆಡೆ, ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ, ಈ ಸಮಯವು ಅದಕ್ಕೆ ಉತ್ತಮವಾಗಿದೆ.


ಕರ್ಕ ರಾಶಿ- ಕರ್ಕ ರಾಶಿಯವರಿಗೆ ತಿಂಗಳಾಂತ್ಯದಲ್ಲಿ ಬುಧ ಗ್ರಹದ ಬೆಂಬಲ ಸಿಗಲಿದೆ. ನೀವು ಪಾರ್ಟ್ನರ್ ಶಿಪ್ ನಲ್ಲಿ ಕೆಲಸ ಮಾಡುತ್ತಿದ್ದರೆ, ಈ ಅವಧಿಯಲ್ಲಿ ನಿಮಗೆ ವಿಶೇಷ ಪ್ರಯೋಜನಗಳು ಪ್ರಾಪ್ತಿಯಾಗಳಿವೆ. ಈ ಅವಧಿಯಲ್ಲಿ ನೀವು ವಿದೇಶಿ ಪ್ರವಾಸಕ್ಕೆ ಹೋಗಬಹುದು. ಬಾಳ ಸಂಗಾತಿಯೊಂದಿಗೆ ಈ ಸಮಯ ತುಂಬಾ ಅನುಕೂಲಕರವಾಗಿರುತ್ತದೆ. ಪೂರ್ವಜರ ಆಸ್ತಿಯಿಂದ ನಿಮಗೆ ಭಾರಿ ಲಾಭವಾಗುವ ಸಾಧ್ಯತೆ ಇದೆ. ಮತ್ತೊಂದೆಡೆ, ಶುಕ್ರನ ನಡೆ ನಿಮಗೆ ಶುಭ ಮತ್ತು ಅಶುಭ ಪರಿಣಾಮಗಳು ಪ್ರಾಪ್ತಿಯಾಗಲಿವೆ.


ಇದನ್ನೂ ಓದಿ-ವ್ಯಕ್ತಿಯ ಬುದ್ಧಿ ಭೃಷ್ಟವಾಗಲು ಕಾರಣವೇನು, ಆಚಾರ್ಯ ಚಾಣಕ್ಯರು ಹೇಳಿದ್ದೇನು?

ಕನ್ಯಾ ರಾಶಿ- ಈ ರಾಶಿಯವರಿಗೆ ಡಿಸೆಂಬರ್ ಕೊನೆಯ ವಾರ ತುಂಬಾ ಫಲಪ್ರದವಾಗಿರಲಿದೆ. ಉದ್ಯೋಗಾಕಾಂಕ್ಷಿಗಳಿಗೆ ಈ ಸಮಯ ಉತ್ತಮವಾಗಿದೆ. ಉತ್ತಮ ಉದ್ಯೋಗಾವಕಾಶಗಳು ನಿಮ್ಮನ್ನರಸಿ ಬರಲಿವೆ. ವೃತ್ತಿಯಲ್ಲಿಯೂ ಕೂಡ ಅಭಿವೃದ್ಧಿಯ ದಾರಿಗಳು ತೆರೆದುಕೊಳ್ಳುತ್ತವೆ. ವ್ಯಾಪಾರದಲ್ಲಿ ಹೆಚ್ಚಿನ ಲಾಭವನ್ನು ಗಳಿಸುವಿರಿ. ಇದೇ ವೇಳೆ, ವ್ಯವಹಾರದಲ್ಲಿ ಹೊಸ ಕಲ್ಪನೆಯು ನಿಮಗೆ ಪ್ರಚಂಡ ಪ್ರಯೋಜನಗಳನ್ನು ನೀಡಲಿದೆ.


ಇದನ್ನೂ ಓದಿ-Personality Development: ನಿಮ್ಮೊಳಗೂ ಇದೆಯಾ ಹದ್ದಿನ ಈ ಗುಣ, ಹಾಗಾದರೆ ಯಶಸ್ಸು ಪಕ್ಕಾ ನಿಮ್ಮದು

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.