Kedar Yoga: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ಒಂದು ಮಗು ಜನಿಸಿದಾಗ ಆ ಮಗುವಿನ ಜನ್ಮ ಜಾತಕದಲ್ಲಿ ಶುಭ ಹಾಗೂ ಅಶುಭ ಎರಡೂ ಬಗೆಯ ಯೋಗಗಳು ನಿರ್ಮಾಣಗೊಳ್ಳುತ್ತವೆ ಮತ್ತು ಆ ಯೋಗಗಳ ಪ್ರಭಾವ ಮಗುವಿನ ಜೀವನ ಹಾಗೂ ವೃತ್ತಿಜೀವನದ ಮೇಲೆ ಬೀಳುತ್ತದೆ. ಇದಲ್ಲದೆ ಯಾವ ಗ್ರಹಗಳು ಆ ಯೋಗವನ್ನು ನಿರ್ಮಿಸುತ್ತವೆಯೋ ಅವುಗಳ ದೆಸೆ ಕೂಡ ಮಗುವಿಗೆ ಬರುತ್ತವೆ ಮತ್ತು ಆ ಮಗುವಿಗೆ ಆ  ಯೋಗಗಳ ಸಂಪೂರ್ಣ ಲಾಭ ಪ್ರಾಪ್ತಿಯಾಗುತ್ತದೆ. ಇಂದು ನಾವು ನಿಮಗೆ ಕೇದಾರ ಯೋಗದ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ. ಅತ್ಯಂತ ಅದೃಷ್ಟವಂತರ ಕುಂಡಲಿಯಲ್ಲಿ ಈ ಯೋಗ ಇರುತ್ತದೆ. ಯಾವ ವ್ಯಕ್ತಿಯ ಜಾತಕದಲ್ಲಿ ಈ ಯೋಗವಿರುತ್ತದೆಯೋ ಆ ವ್ಯಕ್ತಿಗೆ ರಾಜಗದ್ದುಗೆ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ. ಇದರ ಜೊತೆಗೆ ಸಮಾಜದಲ್ಲಿ ಅಪಾರ ಸ್ಥಾನಮಾನ ಮನ್ನಣೆ ಪ್ರಾಪ್ತಿಯಾಗುತ್ತದೆ. ಇಂತಹ ವ್ಯಕ್ತಿಗೆ ಜೀವನದಲ್ಲಿ ಅಪಾರ ಯಶಸ್ಸು ಹಾಗೂ ವೈಭವ ಪ್ರಾಪ್ತಿಯಾಗುತ್ತದೆ. ಹಾಗಾದರೆ ಬನ್ನಿ ಈ ಯೋಗ ಹೇಗೆ ನಿರ್ಮಾಣಗೊಳ್ಳುತ್ತದೆ ಮತ್ತು ಅದರ ಲಾಭಗಳೇನು ತಿಳಿದುಕೊಳ್ಳೋಣ. 

COMMERCIAL BREAK
SCROLL TO CONTINUE READING

ಕೇದಾರ ಯೋಗ ಹೇಗೆ ರೂಪುಗೊಳ್ಳುತ್ತದೆ?
ಜೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ಓರ್ವ ವ್ಯಕ್ತಿಯ ಜನ್ನ್ಮ ಜಾತಕದ 4 ಭಾವಗಳಲ್ಲಿ 7 ಗ್ರಹಗಳು ಒಟ್ಟಿಗೆ ಬಂದರೆ, ಗ್ರಹಗಳು ಯಾವುದೇ ರಾಶಿಯಲ್ಲಿರಲಿ ಅವು ಕೇದಾರ ಯೋಗ ರೂಪಿಸುತ್ತವೆ. 


ಇದನ್ನೂ ಓದಿ- Sun-Jupiter Conjunction: ಹಲವು ವರ್ಷಗಳ ಬಳಿಕ ಮಂಗಳನ ಮನೆಯಲ್ಲಿ 2 'ಪವರ್ಫುಲ್ ಗ್ರಹಗಳ' ಮೈತ್ರಿ, 4 ರಾಶಿಗಳ ಜನರ ಭಾಗ್ಯೋದಯ ಪಕ್ಕಾ!

ಕೇದಾರ ಯೋಗದ ಲಾಭಗಳೇನು?
ಕೇದಾರ ಯೋಗವಿರುವ ವ್ಯಕ್ತಿಯ ಮೇಲೆ ದೇವಾಧಿದೇವ ಮಹಾದೇವನ ವಿಶೇಷ ಕೃಪೆ ಇರುತ್ತದೆ. ಜೊತೆಗೆ ವ್ಯಕ್ತಿಗೆ ಆತನ ಅದೃಷ್ಟದ ಭಾರಿ ಬೆಂಬಲ ಯಾವಾಗಲೂ ಇರುತ್ತದೆ. ಇಂತಹ ವ್ಯಕ್ತಿಗಳ ವ್ಯಕ್ತಿತ್ವ ತುಂಬಾ ಆಕರ್ಷಕವಾಗಿರುತ್ತದೆ. ಈ ವ್ಯಕ್ತಿಗಳು ಕಲಾ ಪ್ರೇಮಿಗಳಾಗಿರುವುದರ ಜೊತೆಗೆ ಕಲೆ ಬಲ್ಲವರು ಮತ್ತು ಅದರ ಆರಾಧಕರಾಗಿರುತ್ತಾರೆ. ಈ ವ್ಯಕ್ತಿಗಳಿಗೆ ಜೀವನದಲ್ಲಿ ಎಂದಿಗೂ ಕೂಡ ಹಣದ ಕೊರತೆ ಎದುರಾಗುವುದಿಲ್ಲ. ಅರ್ಥಾತ್ ಅವರ ಆರ್ಥಿಕ ಸ್ಥಿತಿ ತುಂಬಾ ಬಲಿಷ್ಠವಾಗಿರುತ್ತದೆ. ಈ ಜನರಿಗೆ ಎಲ್ಲಾ ರೀತಿಯ ಭೌತಿಕ ಸುಖಗಳು ಪ್ರಾಪ್ತಿಯಾಗುತ್ತವೆ. ಸತ್ಯ ಹೇಳುವಲ್ಲಿ ಇವರು ಯಾವಾಗಲೂ ಮುಂದೆ ಇರುತ್ತಾರೆ ಮತ್ತು ಇವರು ಸುಳ್ಳು ಹೇಳುವವರನ್ನು ದ್ವೇಷಿಸುತ್ತಾರೆ. 


ಇದನ್ನೂ ಓದಿ-Auspicious Kedar Yog 2023: 5 ಶತಮಾನಗಳ ಬಳಿಕ ರೂಪುಗೊಳ್ಳುತ್ತಿದೆ ಈ ಅಪರೂಪದ ಕಾಕತಾಳೀಯ, ಈ ಜನರ ಮೇಲೆ ಹಣದ ಸುರಿಮಳೆ!


ಭೂಮಿ-ಆಸ್ತಿಪಾಸ್ತಿಯಿಂದ ಇವರಿಗೆ ಲಾಭ ಸಿಗುತ್ತದೆ
ಕೇದಾರ ರಾಜಯೋಗ ಇರುವ ಜನರಿಗೆ ಭೂಮಿ-ಆಸ್ತಿಪಾಸ್ತಿಯಿಂದ ಅಪಾರ ಲಾಭ ಪ್ರಾಪ್ತಿಯಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ಇವರು ಕೃಷಿಯಲ್ಲಿ ಸಾಧನೆ ಮಾಡುವವರಾಗಿರುತ್ತಾರೆ. ಯಾವುದೇ ಪರಿಸ್ಥಿತಿ ಬರಲಿ ಇವರು ಯಾವಾಗಲೂ ಸುಖೀ ಜೀವನ ನಡೆಸುತ್ತಾರೆ. ಮುಖದ ಮೇಲೆ ಇದ್ದಕ್ಕಿದ್ದಂತೆ ಹೇಳುವುದು ಇವರ ಜಾಯಮಾನವಾಗಿರುತ್ತದೆ. ಜನ್ಮ ಜಾತಕದಲ್ಲಿ ಈ ಯೋಗವಿರುವವರ ತರ್ಕ ಸಾಮರ್ಥ್ಯ ಉತ್ತಮವಾಗಿರುತ್ತದೆ ಮತ್ತು ಹಣ ಉಳಿತಾಯ ಮಾಡುವುದರಲ್ಲಿ ಇವರು ನಿಷ್ಣಾತರಾಗಿರುತ್ತಾರೆ.


ಇದನ್ನೂ ಓದಿ-May 2 ರಂದು ಸ್ವರಾಶಿಯನ್ನು ತೊರೆದು ಮಿಥುನ ರಾಶಿಗೆ ಶುಕ್ರನ ಪ್ರವೇಶ, 3 ರಾಶಿಗಳ ಜನರು ಮುಟ್ಟಿದ್ದೆಲ್ಲಾ ಚಿನ್ನ!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.