ನವದೆಹಲಿ : ಅಂಗೈಯಲ್ಲಿ ಹಲವು ರೇಖೆಗಳು ಮತ್ತು ಚಿಹ್ನೆಗಳನ್ನು ಕಾಣಬಹುದು. ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ (Palmistry) ಇವುಗಳನ್ನು ಅಧ್ಯಯನ ಮಾಡುವ ಮೂಲಕ ವ್ಯಕ್ತಿಯ ಭವಿಷ್ಯವನ್ನು ಹೇಳಲಾಗುತ್ತದೆ. ಇದಲ್ಲದೆ, ಅಂಗೈಯಲ್ಲಿನ ಪರ್ವತಗಳು ವ್ಯಕ್ತಿಯ ಜೀವನದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹೇಳುತ್ತವೆ. ಅಂಗೈಯಲ್ಲಿರುವ ಶುಕ್ರ ಪರ್ವತವು (Venus mountain) ಸಂಪತ್ತು, ಐಶ್ವರ್ಯ, ಪ್ರೀತಿ ಮತ್ತು ಸಂತೋಷ ಮತ್ತು ಸಮೃದ್ಧಿಯ ಬಗ್ಗೆ ಹೇಳುತ್ತದೆ. 


COMMERCIAL BREAK
SCROLL TO CONTINUE READING

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ (Palmistry), ಅಂಗೈಯಲ್ಲಿ ಶುಕ್ರನ ಪರ್ವತವು ಬಲವಾಗಿ ವಿಕಸನಗೊಂಡಿದ್ದರೆ,  ವ್ಯಕ್ತಿಯು ಜೀವನದಲ್ಲಿ ಹಣಕಾಸಿಗೆ ಸಂಬಂಧಿಸಿದ ಯಾವ ಸಮಸ್ಯೆಗಳೂ  ಎದುರಾಗುವುದಿಲ್ಲ. ಇದಲ್ಲದೆ, ಇಂಥಹ ವ್ಯಕ್ತಿಯು ಜೀವನದಲ್ಲಿ  ಎಲ್ಲಾ ರೀತಿಯ ಸೌಕರ್ಯಗಳನ್ನು ಅನುಭವಿಸುತ್ತಾರೆ. 


ಇದನ್ನೂ ಓದಿ : ಈ 4 ಕನಸುಗಳು ತುಂಬಾ ಅಶುಭ, ಹಣ ಮತ್ತು ವೃತ್ತಿಜೀವನದ ಮೇಲೆ ಬೀರುತ್ತದೆ ಪರಿಣಾಮ


ಶುಕ್ರ ಪರ್ವತದ ಮೇಲೆ ಮಚ್ಚೆ :
ಶುಕ್ರ ಕ್ಷೇತ್ರದಲ್ಲಿ  ಮಚ್ಚೆ ಇದ್ದರೆ ಅದನ್ನು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ತಮ್ಮ ಅಂಗೈಯ ಶುಕ್ರ ಪ್ರದೇಶದಲ್ಲಿ ಮಚ್ಚೆ ಇರುವವರ  ವೈವಾಹಿಕ ಜೀವನವು (married life) ತೊಂದರೆಗೊಳಗಾಗುತ್ತದೆ. ಅಂತಹವರು ತಮ್ಮ ಸಂಗಾತಿಯೊಂದಿಗೆ ಸಣ್ಣ ಸಣ್ಣ ವಿಷಯಗಳಿಗೂ ಜಗಳಕ್ಕೆ ನಿಲ್ಲುತ್ತಾರೆ. ಮತ್ತೊಂದೆಡೆ, ಶುಕ್ರ ಪರ್ವತದ (Venus mountain) ಮೇಲೆ ಮಚ್ಚೆ ಇದ್ದರೆ ಅದನ್ನು ಶುಭ ಎಂದು ಹೇಳಲಾಗುತ್ತದೆ. ಯಾಕೆಂದರೆ ಅವರ ಆರ್ಥಿಕ ಸ್ಥಿತಿಯು ಸದಾ ಪ್ರಗತಿಯಲ್ಲಿರುತ್ತದೆ. ಅವರು ವ್ಯಾಪಾರದಲ್ಲಿಯೂ ಉತ್ತಮ ಪ್ರಗತಿಯನ್ನು ಸಾಧಿಸುತ್ತಾರೆ. 


ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಶುಕ್ರ ಪರ್ವತ ಸ್ಪಷ್ಟವಾಗಿರದಿದ್ದರೆ  ಶುಭ ಫಲಿತಾಂಶಗಳನ್ನು ನೀಡುವುದಿಲ್ಲ. ಅವರ ಜೀವನದಲ್ಲಿ ಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿರುತ್ತಾರೆ. ಇದರೊಂದಿಗೆ, ಅವರು  ದೈಹಿಕ ನೋವನ್ನು ಕೂಡಾ ಅನುಭವಿಸುತ್ತಾರೆ. ಇದಲ್ಲದೆ, ಶುಕ್ರನ ಪರ್ವತದ ಮೇಲೆ ಬಲೆಯ ಗುರುತು ಇದ್ದರೆ, ವ್ಯಕ್ತಿಯು ಮಾನಸಿಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.  


ಇದನ್ನೂ ಓದಿ : Shadgrahi Yoga : ಈ 6 ಗ್ರಹಗಳು ಕೂಡುವುದು ತುಂಬಾ ಅಪರೂಪ : ಇದರಿಂದ 3 ರಾಶಿಯವರಾಗುತ್ತಾರೆ ಶ್ರೀಮಂತರು!


ಶುಕ್ರ ಪರ್ವತದ ಮೇಲೆ ತ್ರಿಕೋನ :
ಹಸ್ತದ ಶುಕ್ರ ಪರ್ವತದ ಮೇಲೆ ತ್ರಿಕೋನದ ಗುರುತು ಇದ್ದರೆ, ಬಹಳ ಮಂಗಳಕರ ಎಂದು ಹೇಳಲಾಗುತ್ತದೆ. ತಮ್ಮ ಅಂಗೈಯಲ್ಲಿ ಶುಕ್ರ ಪರ್ವತದ ಮೇಲೆ ಈ ಗುರುತು ಹೊಂದಿರುವ ಜನರು ಐಷಾರಾಮಿ ಜೀವನವನ್ನು ನಡೆಸುತ್ತಾರೆ. ಇವರಿಗೆ ಜೀವನದಲ್ಲಿ ಹಣದ ಕೊರತೆಯಿರುವುದಿಲ್ಲ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.