ನವದೆಹಲಿ : ಕೈಯಲ್ಲಿರುವ ಗೆರೆಗಳು (Palmistry) ವ್ಯಕ್ತಿಯ ಸ್ವಭಾವ ಭವಿಷ್ಯವನ್ನು ಹೇಳುವುದಷ್ಟೇ ಅಲ್ಲ, ಮುಂದೆ ಏನು ಮಾಡಬಹುದು ಎನ್ನುವುದರ ಮಾರ್ಗದರ್ಶನವನ್ನೂ ನೀಡುತ್ತವೆ. ಹಸ್ತರೇಖೆಗಳು, ಹಸ್ತದಲ್ಲಿರುವ ಗುರುತುಗಳು, ಆಕಾರಗಳು ವ್ಯಕ್ತಿಯು ಯಾವ ಕ್ಷೇತ್ರದಲ್ಲಿ ತನ್ನ ವೃತ್ತಿಜೀವನವನ್ನು ಮುಂದುವರಿಸಬಹುದು ಎನ್ನುವುದನ್ನು ಸೂಚಿಸುತ್ತದೆ. ಯಾವ ಕ್ಷೇತ್ರದಲ್ಲಿ ಮುಂದುವರೆದರೆ (Palmistry Of Career) ಯಶಸ್ಸು ಸಿಗುತ್ತದೆ ಎನ್ನುವುದನ್ನು ಹೇಳುತ್ತದೆ. ಇನ್ನು ವೃತ್ತಿಜೀವನದಲ್ಲಿ ಉಂಟಾಗುವ ತೊಂದರೆಗಳ ಬಗ್ಗೆಯೂ ಸುಳಿವು ನೀಡುತ್ತದೆ.
ಹಸ್ತ ರೇಖೆಗಳಿಂದ ತಿಳಿಯಬಹುದು ವೃತ್ತಿ ಜೀವನ ಹೇಗಿರುತ್ತದೆ ?
ಯಾವ ವ್ಯಕ್ತಿಯ ಹಸ್ತ ಬೆಳ್ಳಗಿರುತ್ತದೆ ಮತ್ತು ಕೈಗಳು ಉದ್ದವಾಗಿರುತ್ತದೆ, ಅಲ್ಲದೆ, ಸೂರ್ಯ, ಗುರು ಮತ್ತು ಬುಧ ಪರ್ವತಗಳು ಅಂಗೈಯಲ್ಲಿ ಚೆನ್ನಾಗಿ ವಿಕಸಿತವಾಗಿರುತ್ತದೆ ಅವರು ರಾಜಕೀಯದಲ್ಲಿ ಆಸಕ್ತಿ (Political interest) ಹೊಂದಿರುತ್ತಾರೆ. ಇದಲ್ಲದೇ ಗುರು ಪರ್ವತದ ತುದಿಯಿಂದ ಮೆದುಳಿನ ರೇಖೆಯು ಪ್ರಾರಂಭವಾಗಿ ಕೆಳಗೆ ಬಂದು 2 ಭಾಗಗಳಾಗಿ ಒಡೆದರೆ, ಆ ವ್ಯಕ್ತಿಗೆ ರಾಜಕೀಯದಲ್ಲಿ ಉತ್ತಮ ಸ್ಥಾನಮಾನ, ಸಿಗುತ್ತದೆ ಎನ್ನುವುದನ್ನು ತೋರಿಸುತ್ತದೆ.
ಇದನ್ನೂ ಓದಿ : Money Remedies: ಹಣಕಾಸಿನ ಸಮಸ್ಯೆ ಹೆಚ್ಚಾಗಿದೆಯೇ? ನಿಮ್ಮ ರಾಶಿಗನುಗುಣವಾಗಿ ಈ ವಿಶೇಷ ಪರಿಹಾರ ಮಾಡಿ
ಸಾಮಾನ್ಯವಾಗಿ, ವಕೀಲ ವೃತ್ತಿಯಲ್ಲಿ (Palmistry Of Lawyer) ಆಸಕ್ತಿ ಹೊಂದಿರುವ ಜನರು, ತುಂಬಾ ಅಗಲವಾದ ಅಂಗೈ ಮತ್ತು ಸಣ್ಣ ಬೆರಳುಗಳನ್ನು ಹೊಂದಿರುತ್ತಾರೆ. ಅಲ್ಲದೆ ಇವರ ಅಂಗೈ ಕೆಂಪಾಗಿದ್ದು, ಬುಧ ಮತ್ತು ಮಂಗಳ ಪರ್ವತಗಳು ಚೆನ್ನಾಗಿ ವಿಕಸನಗೊಂಡಿರುತ್ತವೆ. ಅಲ್ಲದೆ ಮೆದುಳಿನ ರೇಖೆ ಮತ್ತು ಜೀವನ ರೇಖೆಯು ಸಂಪೂರ್ಣವಾಗಿ ಭಿನ್ನವಾಗಿರುತ್ತವೆ.
ಇನ್ನು ಉದ್ದನೆಯ ಬೆರಳುಗಳು, ತೆಳುವಾದ, ಸುಂದರವಾದ, ಮೃದುವಾದ ಕೈಗಳನ್ನು ಹೊಂದಿರುವ ಜನರು, ಕವಿತೆಗಳಲ್ಲಿ ಆಸಕ್ತಿ ಹೊಂದಿರುತ್ತಾರೆ. ಇವರ ಕೈಯಲ್ಲಿ ಸೂರ್ಯ (Sun), ಚಂದ್ರ ಮತ್ತು ಶುಕ್ರ ಪರ್ವತಗಳು ಚೆನ್ನಾಗಿ ಮೂಡಿರುತ್ತವೆ. ಇದರೊಂದಿಗೆ, ಹೃದಯ ರೇಖೆಯು ಹಲವಾರು ದಿಕ್ಕಿನಲ್ಲಿ ವಿಭಜಿಸಿರುತ್ತದೆ.
ಇದನ್ನೂ ಓದಿ : Ketu Transit: ಕೇತು ರಾಶಿ ಪರಿವರ್ತನೆ, ಈ ರಾಶಿಯವರ ಮೇಲೆ ನೇರ ಪರಿಣಾಮ
ಅದೇ ಸಮಯದಲ್ಲಿ, ಗಟ್ಟಿಯಾದ ಬೆರಳುಗಳು, ದಪ್ಪ ಗಂಟುಗಳು, ತೆಳುವಾದ ಮತ್ತು ಕಪ್ಪು ಕೈಗಳು ವ್ಯಕ್ತಿಯು ತತ್ವಜ್ಞಾನಿ ಎನ್ನುವುದನ್ನು ಸೂಚಿಸುತ್ತದೆ (Palmistry). ಗಂಟುಗಳು ಹೆಚ್ಚು ಸ್ಪಷ್ಟವಾಗಿದ್ದರೆ, ಅಂತಹ ಜನರು ಭೌತಿಕ ಸಂತೋಷಕ್ಕಿಂತ ಹೆಚ್ಚು ಉಚ್ಚ ವಿಚಾರಗಳಿಗೆ ಆದ್ಯತೆ ನೀಡುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.