ಅಕ್ಷಯ ತೃತೀಯದಲ್ಲಿ 3 ರಾಜಯೋಗಗಳು! ಈ ಶುಭ ಮುಹೂರ್ತದಲ್ಲಿ ಶಾಪಿಂಗ್ ಮಾಡಿದರೆ ಅಪಾರ ಐಶ್ವರ್ಯ ಪ್ರಾಪ್ತಿ
ಅಕ್ಷಯ ತೃತೀಯ 2022 ಶುಭ ಮುಹೂರ್ತ: ಅಕ್ಷಯ ತೃತೀಯ ಬಹಳ ಮುಖ್ಯವಾದ ಹಬ್ಬವಾಗಿದೆ. ಈ ದಿನ ಶುಭ ಕಾರ್ಯಗಳು ಮತ್ತು ಶಾಪಿಂಗ್ಗೆ ಮಂಗಳಕರ ಎಂದು ಹೇಳಲಾಗುತ್ತದೆ. ಆದರೆ ಈ ವರ್ಷ, ಅಕ್ಷಯ ತೃತೀಯದಂದು 3 ರಾಜಯೋಗಗಳು ರೂಪುಗೊಳ್ಳುವುದರಿಂದ ಈ ದಿನವು ಹೆಚ್ಚು ವಿಶೇಷವಾಗಿದೆ.
ಅಕ್ಷಯ ತೃತೀಯ 2022 ಶಾಪಿಂಗ್‌ಗಾಗಿ ಶುಭ ಮುಹೂರ್ತ: ಅಕ್ಷಯ ತೃತೀಯ ದಿನದಂದು ಭಗವಾನ್ ವಿಷ್ಣು ಮತ್ತು ತಾಯಿ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಇದರೊಂದಿಗೆ ಮದುವೆ, ಗೃಹಪ್ರವೇಶ, ಶಾಪಿಂಗ್‌ಗೂ ಈ ದಿನ ತುಂಬಾ ಶುಭ ಎಂದು ಹೇಳಲಾಗುತ್ತದೆ. ಈ ವರ್ಷ ಮೇ 3 ಮಂಗಳವಾರ ಅಂದರೆ ನಾಳೆ ಅಕ್ಷಯ ತೃತೀಯ ಹಬ್ಬವನ್ನು ಆಚರಿಸಲಾಗುತ್ತದೆ. ಇದನ್ನು ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯದಂದು ಆಚರಿಸಲಾಗುತ್ತದೆ. ಈ ಬಾರಿ ಅಕ್ಷಯ ತೃತೀಯದಂದು 3 ರಾಜಯೋಗಗಳು ನಿರ್ಮಾಣವಾಗಿರುವುದರಿಂದ ಮತ್ತಷ್ಟು ವಿಶೇಷವಾಗಿದೆ.
ಅಕ್ಷಯ ತೃತೀಯದಲ್ಲಿ ಪೂಜೆ, ಸ್ನಾನಕ್ಕೆ ವಿಶೇಷ ಮಹತ್ವ :
ಅಕ್ಷಯ ಎಂದರೆ ಹೆಚ್ಚಾಗುವುದು. ಅಕ್ಷಯ ತೃತೀಯ ದಿನದಂದು ಮಾಡಿದ ಕೆಲಸಗಳು ಕ್ಷೀಣಿಸುವುದಿಲ್ಲ ಅಥವಾ ಈ ದಿನ ಮಾಡಿದ ಕಾರ್ಯಗಳು ಬಹಳಷ್ಟು ಪ್ರಯೋಜನಗಳನ್ನು ನೀಡುತ್ತವೆ ಎಂದು ನಂಬಲಾಗಿದೆ. ಆದ್ದರಿಂದ, ಈ ದಿನ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು, ವಿಶೇಷ ಪೂಜೆ, ದಾನ ಮತ್ತು ಖರೀದಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ.
ಇದನ್ನೂ ಓದಿ- ಅಕ್ಷಯ ತೃತೀಯದಂದು ತಾಯಿ ಲಕ್ಷ್ಮಿಯ ಆಶೀರ್ವಾದಕ್ಕಾಗಿ ಈ ವಿಷಯಗಳ ಬಗ್ಗೆ ಇರಲಿ ಎಚ್ಚರ
ಅಕ್ಷಯ ತೃತೀಯ ದಿನದಂದು ವಿಷ್ಣು ಮತ್ತು ಮಾತಾ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಈ ದಿನದಂದು ಲಕ್ಷ್ಮಿ-ವಿಷ್ಣುವನ್ನು ನಿಯಮಾನುಸಾರ ಪೂಜಿಸುವುದರಿಂದ ಅವರ ವಿಶೇಷ ಅನುಗ್ರಹವು ಸದಾ ಉಳಿಯಲಿದೆ ಎಂದು ಹೇಳಲಾಗುತ್ತದೆ. ಇದರೊಂದಿಗೆ ಅಕ್ಷಯ ತೃತೀಯ ದಿನದಂದು ಚಿನ್ನ-ಬೆಳ್ಳಿ, ಮನೆ-ಕಾರು ಮುಂತಾದ ಬೆಲೆಬಾಳುವ ವಸ್ತುಗಳನ್ನು ಖರೀದಿಸುವುದರಿಂದ ಮನೆಯಲ್ಲಿ ಸದಾ ಸುಖ-ಸಮೃದ್ಧಿ ನೆಲೆಸಿರುತ್ತದೆ ಎಂದು ಹೇಳಲಾಗುತ್ತದೆ.
ಅಕ್ಷಯ ತೃತೀಯದಂದು ರೂಪುಗೊಳ್ಳುತ್ತಿದೆ 3 ರಾಜಯೋಗ :
ಈ ವರ್ಷ ಮೇ 3, ಅಕ್ಷಯ ತೃತೀಯ ದಿನದಂದು ಗ್ರಹಗಳ ಸ್ಥಾನವು ತುಂಬಾ ವಿಶೇಷವಾಗಿರಲಿದೆ. ಈ ದಿನ ಮಾಲವ್ಯ ರಾಜಯೋಗ, ಹಂಸ ರಾಜಯೋಗ ಮತ್ತು ಶಶರಾಜಯೋಗವು ರೂಪುಗೊಳ್ಳುತ್ತಿದೆ. ಅಕ್ಷಯ ತೃತೀಯದಂದು ಈ ರಾಜಯೋಗಗಳ ರಚನೆಯು ಬಹಳ ಮಂಗಳಕರವಾಗಿದೆ. ಈ ರಾಜಯೋಗದಲ್ಲಿ ಯಾವುದೇ ಶುಭ ಕಾರ್ಯ ಅಥವಾ ಶುಭ ಕೆಲಸ ಆರಂಭಿಸುವುದರಿಂದ ಉತ್ತಮ ಫಲಿತಾಂಶ ಪ್ರಾಪ್ತಿಯಾಗಲಿದೆ.
ಇದನ್ನೂ ಓದಿ- ಅಕ್ಷಯ ತೃತೀಯದಂದು ಇದನ್ನು ದಾನ ಮಾಡಿದರೆ ಚಾರ್ ಧಾಮ್ ಯಾತ್ರೆ ಮಾಡಿದಷ್ಟೇ ಫಲ
ಅಕ್ಷಯ ತೃತೀಯ 2022 ಶುಭ ಮುಹೂರ್ತ:
* ಅಕ್ಷಯ ತೃತೀಯದಂದು ಪೂಜೆಗೆ ಮಂಗಳಕರ ಸಮಯವೆಂದರೆ ಬೆಳಿಗ್ಗೆ 05:39 ರಿಂದ ಮಧ್ಯಾಹ್ನ 12:18 ರವರೆಗೆ.
* ಅದೇ ಸಮಯದಲ್ಲಿ, ಚಿನ್ನ-ಬೆಳ್ಳಿ, ಮನೆ-ಕಾರು ಇತ್ಯಾದಿಗಳನ್ನು ಖರೀದಿಸುವ ಶುಭ ಮುಹೂರ್ತವು ಮರುದಿನ ಬೆಳಿಗ್ಗೆ 05:39 ರಿಂದ 05:38 ರವರೆಗೆ ಇರುತ್ತದೆ ಎನ್ನಲಾಗಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.