ಅಕ್ಷಯ ತೃತೀಯದಂದು ಇದನ್ನು ದಾನ ಮಾಡಿದರೆ ಚಾರ್ ಧಾಮ್ ಯಾತ್ರೆ ಮಾಡಿದಷ್ಟೇ ಫಲ

ಅಕ್ಷಯ ತೃತೀಯ ಶಾಪಿಂಗ್ ಮತ್ತು ದಾನ: ಅಕ್ಷಯ ತೃತೀಯದಲ್ಲಿ ಕೆಲವು ವಿಶೇಷ ವಸ್ತುಗಳನ್ನು ಖರೀದಿಸುವುದು ಮಂಗಳಕರ. ಇದರೊಂದಿಗೆ ಈ ದಿನದಂದು ದಾನವನ್ನು ಖಂಡಿತವಾಗಿಯೂ ಮಾಡಬೇಕು. ಶಾಸ್ತ್ರಗಳಲ್ಲಿ, ಅಕ್ಷಯ ತೃತೀಯ ದಿನದಂದು ಕೆಲವು ವಿಶೇಷ ವಸ್ತುಗಳ ದಾನವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ.  

Written by - Yashaswini V | Last Updated : Apr 28, 2022, 09:48 AM IST
  • ಅಕ್ಷಯ ತೃತೀಯ ದಿನದಂದು ಕೆಲವು ವಸ್ತುಗಳನ್ನು ದಾನ ಮಾಡುವುದು ತುಂಬಾ ಒಳ್ಳೆಯದು.
  • ಶಾಸ್ತ್ರಗಳ ಪ್ರಕಾರ ಅಕ್ಷಯ ತೃತೀಯ ದಿನದಂದು ದಾನಕ್ಕೆ ವಿಶೇಷ ಪ್ರಾಮುಖ್ಯತೆ ಇದೆ.
  • 2022ರ ಅಕ್ಷಯ ತೃತೀಯದಂದು ವಿಶೇಷ ಸಂಯೋಗ ರೂಪುಗೊಳ್ಳುತ್ತಿದೆ
ಅಕ್ಷಯ ತೃತೀಯದಂದು ಇದನ್ನು ದಾನ ಮಾಡಿದರೆ ಚಾರ್ ಧಾಮ್ ಯಾತ್ರೆ ಮಾಡಿದಷ್ಟೇ ಫಲ  title=
Daan On Akshaya Tritiya

ಅಕ್ಷಯ ತೃತೀಯ 2022 ಶುಭ ಮುಹೂರ್ತ: ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯದಂದು  ಅಕ್ಷಯ ತೃತೀಯವನ್ನು  ಆಚರಿಸಲಾಗುತ್ತದೆ. ಈ ವರ್ಷ   2022ರ  ಮೇ 3ರಂದು ಮಂಗಳವಾರ ಅಕ್ಷಯ ತೃತೀಯ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ದಿನದಂದು ಭಗವಾನ್ ವಿಷ್ಣು ಮತ್ತು ತಾಯಿ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಈ ದಿನ ಗುಡ್ಡ-ಗೊಂಬೆಯನ್ನು ಮದುವೆಯಾಗುವ ಸಂಪ್ರದಾಯವೂ ಇದೆ. ವಾಸ್ತವವಾಗಿ, ಈ ದಿನ ಮದುವೆ ಸೇರಿದಂತೆ ವಿವಿಧ ಶುಭ ಕಾರ್ಯಗಳನ್ನು ಮಾಡಲು ಸಮಯವು ತುಂಬಾ ಮಂಗಳಕರ ಎಂದು ಹೇಳಲಾಗುತ್ತದೆ. ಅಂದರೆ ಮುಹೂರ್ತವನ್ನು ನೋಡದೆಯೇ ಈ ದಿನ ಯಾವುದೇ ಶುಭ ಕಾರ್ಯವನ್ನು ಮಾಡಬಹುದು ಎಂದು ಹೇಳಲಾಗುತ್ತದೆ.

ಸಾಮಾನ್ಯವಾಗಿ ಅಕ್ಷಯ ತೃತೀಯ ದಿನದಂದು ಚಿನ್ನ ಸೇರಿದಂತೆ ಕೆಲವು ವಸ್ತುಗಳನ್ನು ಮನೆಗೆ ತರುವುದು ತುಂಬಾ ಮಂಗಳಕರ ಎಂದು ಎಲ್ಲರಿಗೂ ತಿಳಿದಿದೆ. ಆದರೆ, ಅಕ್ಷಯ ತೃತೀಯ ದಿನದಂದು ಖರೀದಿಗೆ ಮಾತ್ರವಲ್ಲ, ದಾನಕ್ಕೂ ಮಹತ್ವವಿದೆ. ಖರೀದಿಗಳನ್ನು ಮಾಡುವುದರ ಜೊತೆಗೆ, ಅಕ್ಷಯ ತೃತೀಯವನ್ನು ದಾನ ಮಾಡಲು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. 

ಇದನ್ನೂ ಓದಿ- ಅಕ್ಷಯ ತೃತೀಯದಂದು ಚಿನ್ನ ಮಾತ್ರವಲ್ಲ ಈ ವಸ್ತುಗಳನ್ನು ಖರೀದಿಸುವುದೂ ತುಂಬಾ ಮಂಗಳಕರ

ಅಕ್ಷಯ ತೃತೀಯ ದಿನದಂದು ಕೆಲವು ವಸ್ತುಗಳನ್ನು ದಾನ ಮಾಡುವುದು ತುಂಬಾ ಒಳ್ಳೆಯದು. ಶಾಸ್ತ್ರಗಳ ಪ್ರಕಾರ ಅಕ್ಷಯ ತೃತೀಯ ದಿನದಂದು ನೀರು ದಾನ ಮಾಡುವುದು ತುಂಬಾ ಶ್ರೇಯಸ್ಕರ. ಈ ದಿನ ನೀರು ತುಂಬಿದ ಹೂಜಿಗಳನ್ನು ದಾನ ಮಾಡಿ.  ಹೀಗೆ ಮಾಡುವುದರಿಂದ ಚಾರ್ಧಾಮ್ ಯಾತ್ರೆ ಮಾಡಿದಷ್ಟೇ ಪುಣ್ಯ ಸಿಗುತ್ತದೆ ಎಂದು ಹೇಳಲಾಗುತ್ತದೆ.

ಇದಲ್ಲದೆ, ಅಕ್ಷಯ ತೃತೀಯ ದಿನದಂದು ಸಸಿಗಳನ್ನು ನೆಡುವುದು, ಪ್ರಾಣಿ-ಪಕ್ಷಿಗಳಿಗೆ ಧಾನ್ಯಗಳು ಮತ್ತು ನೀರಿನ ವ್ಯವಸ್ಥೆ ಮಾಡುವುದು ಸಹ ತುಂಬಾ ಮಂಗಳಕರವಾಗಿದೆ. ಇದರಿಂದ ಮನೆಯಲ್ಲಿ ಸುಖ-ಶಾಂತಿ ನೆಮ್ಮದಿ ನೆಲೆಸಲಿದೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ- ಸೂರ್ಯ ಗ್ರಹಣ: 100 ವರ್ಷಗಳ ನಂತರ ಸೂರ್ಯಗ್ರಹಣದಲ್ಲಿ ವಿಶಿಷ್ಟ ಕಾಕತಾಳೀಯ!

2022ರ ಅಕ್ಷಯ ತೃತೀಯದಂದು ವಿಶೇಷ ಸಂಯೋಗ:
ಈ ಬಾರಿಯ ಅಕ್ಷಯ ತೃತೀಯ ಹಲವು ರೀತಿಯಲ್ಲಿ ವಿಶೇಷವಾಗಿದೆ. ಈ ವರ್ಷದ ಅಕ್ಷಯ ತೃತೀಯದಂದು ಮೂರು ವಿಶೇಷ ಯೋಗಗಳು ರೂಪುಗೊಳ್ಳುತ್ತಿವೆ. 
>> ಮೊದಲನೆಯದಾಗಿ, ಈ ಬಾರಿಯ ಅಕ್ಷಯ ತೃತೀಯವನ್ನು ರೋಹಿಣಿ ನಕ್ಷತ್ರ ಮತ್ತು ಶೋಭನ ಯೋಗದ ನಡುವೆ ಆಚರಿಸಲಾಗುತ್ತದೆ, ಇದು ತುಂಬಾ ಮಂಗಳಕರವಾಗಿದೆ. 
>> ಇದಲ್ಲದೇ ಈ ದಿನ ಮಂಗಳ ರೋಹಿಣಿ ಯೋಗ ಕೂಡ ನಿರ್ಮಾಣವಾಗುತ್ತಿದೆ.
>> ಅಲ್ಲದೆ, ಈ ದಿನ ಶನಿಯು ತನ್ನದೇ ಆದ ಕುಂಭ ರಾಶಿಯಲ್ಲಿ ಮತ್ತು ಗುರು ತನ್ನದೇ ಆದ ಮೀನ ರಾಶಿಯಲ್ಲಿ ಇರುತ್ತಾನೆ. ಈ ಪರಿಸ್ಥಿತಿಗಳು ಅಕ್ಷಯ ತೃತೀಯದಲ್ಲಿ ಅತ್ಯಂತ ಮಂಗಳಕರ ಯೋಗವನ್ನು ರೂಪುಸುತ್ತಿವೆ.

ಮಂಗಳವಾರ, ಮೇ 3, 2022 ರಂದು ಬೆಳಿಗ್ಗೆ 05:39 ರಿಂದ ಮಧ್ಯಾಹ್ನ 12:18 ರವರೆಗೆ ಅಕ್ಷಯ ತೃತೀಯದಲ್ಲಿ ಪೂಜೆಗೆ ಮಂಗಳಕರ ಸಮಯ. ಮತ್ತೊಂದೆಡೆ, ಚಿನ್ನ ಮತ್ತು ಬೆಳ್ಳಿ, ಬಾರ್ಲಿ, ಮಣ್ಣಿನ ಮಡಕೆ ಇತ್ಯಾದಿಗಳನ್ನು ಖರೀದಿಸಲು ಶುಭ ಮುಹೂರ್ತವು ಮುಂಜಾನೆ 05:39 ರಿಂದ ಮರುದಿನ 05:38 ರವರೆಗೆ ಇರುತ್ತದೆ ಎನ್ನಲಾಗಿದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ  ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News