ಗುರುವಾರ ಈ ಗಿಡವನ್ನು ಪೂಜಿಸಿದರೆ ಸಂಸಾರದಲ್ಲಿ ಕಾಣಿಸಿಕೊಳ್ಳಲಿದೆ ಸುಖ ಶಾಂತಿ
ಗುರುವಾರವನ್ನು ಭಗವಾನ್ ವಿಷ್ಣು ಮತ್ತು ಗುರು ಬೃಹ್ಪತಿಯ ದಿನ ಎಂದು ಪರಿಗಣಿಸಲಾಗುತ್ತದೆ. ಈ ದಿನ, ಶ್ರೀಹರಿಯ ಜೊತೆಗೆ , ಬೃಹಸ್ಪತಿಯ ಪೂಜೆ ಮಾಡಲಾಗುತ್ತದೆ. ಇದರ ಜೊತೆ ಬಾಳೆ ಗಿಡಕ್ಕೂ ಪೂಜೆ ಸಲ್ಲಿಸಲಾಗುತ್ತದೆ.
ನವದೆಹಲಿ : ಹಿಂದೂ ಧರ್ಮದಲ್ಲಿ ದೇವರುಗಳಿಗೆ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವವನ್ನು ಪ್ರಕೃತಿಗೂ (Nature) ನೀಡಲಾಗಿದೆ. ಸೂರ್ಯ, ಚಂದ್ರ, ನಕ್ಷತ್ರ, ಮರ ಗಿಡಗಳಿಗೂ ಪೂಜೆ ಸಲ್ಲಿಸಲಾಗುತ್ತದೆ. ಅಶ್ವತ್ಥ ಮರದಿಂದ ಆಲದ ಮರದವರೆಗೂ, ಬಾಳೆ ಗಿಡದಿಂದ ಶಮಿ ವೃಕ್ಷದವರೆಗೂ ಪ್ರತಿಯೊಂದು ಸಸಿಯಲ್ಲೂ ಯಾವುದಾದರೂ ದೇವರು ನೆಲೆಸಿರುತ್ತಾನೆ ಎಂಬ ನಂಬಿಕೆಯಿಂದ ಪೂಜೆ ಸಲ್ಲಿಸಲಾಗುತ್ತದೆ. ಹಾಗೆಯೇ ಗುರುವಾರದ (Thursday) ದಿನ ಬಾಳೆ ಗಿಡಕ್ಕೆ ಪೂಜೆ ಸಲ್ಲಿಸಿದರೆ, ಮನೋಇಚ್ಛೆ ಈಡೇರುತ್ತದೆಯಂತೆ.
ಭಗವಾನ್ ವಿಷ್ಣುವಿನ ಜೊತೆ ಬಾಳೆ ಗಿಡಕ್ಕೂ ಪೂಜೆ :
ಗುರುವಾರವನ್ನು ಭಗವಾನ್ ವಿಷ್ಣು (Lord Vishnu) ಮತ್ತು ಗುರು ಬೃಹ್ಪತಿಯ (Brihaspati) ದಿನ ಎಂದು ಪರಿಗಣಿಸಲಾಗುತ್ತದೆ. ಈ ದಿನ, ಶ್ರೀಹರಿಯ ಜೊತೆಗೆ , ಬೃಹಸ್ಪತಿಯ ಪೂಜೆ ಮಾಡಲಾಗುತ್ತದೆ. ಇದರ ಜೊತೆ ಬಾಳೆ ಗಿಡಕ್ಕೂ (Banana tree) ಪೂಜೆ ಸಲ್ಲಿಸಲಾಗುತ್ತದೆ. ಬಹಳಷ್ಟು ಜನ ಗುರುವಾರದ ವೃತಾಚರಣೆ ಪೂಜೆ ಮಾಡುವ ವೇಳೆ ಬಾಳೆಗಿಡವನ್ನು ಕೂಡಾ ಇಟ್ಟು ಪೂಜಿಸುತ್ತಾರೆ. ಬಾಳೆಗಿಡಕ್ಕೆ ನೀರು ಹಾಕಿ ತುಪ್ಪದ ( Ghee) ದೀಪ ಹಚ್ಚಿ, ಆರತಿ ಬೆಳಗಲಾಗುತ್ತದೆ. ಇಷ್ಟಕ್ಕೂ ಬಾಳೆಗಿಡಕ್ಕೆ ಪೂಜೆ ಸಲ್ಲಿಸುವ ಉದ್ದೇಶ, ಹಿಂದಿನ ಕಾರಣ ಏನು ಅನ್ನೋದನ್ನು ನೊಡೋಣ .
ಇದನ್ನೂ ಓದಿ : Astrology On Corona End In India: ಭಾರತದಲ್ಲಿ ಕೊರೊನಾ ಅಂತ್ಯದ ಕುರಿತು ಜೋತಿಷ್ಯ ಶಾಸ್ತ್ರ ಏನು ಹೇಳುತ್ತೆ?
ಬಾಳೆ ಗಿಡಕ್ಕೆ ಪೂಜೆ ಸಲ್ಲಿಸುವುದರ ಮಹತ್ವ :
ಪುರಾಣಗಳು ಮತ್ತು ಧರ್ಮಗ್ರಂಥಗಳು ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ, ಬಾಳೆ ಗಿಡದಲ್ಲಿ ಭಗವಾನ್ ವಿಷ್ಣು ವಾಸಿಸುತ್ತಾನೆ ಎನ್ನುವುದು ನಂಬಿಕೆ. ಈ ಕಾರಣಕ್ಕಾಗಿಯೇ, ಗುರುವಾರ ಶ್ರೀಹರಿಗೆ ಪೂಜೆ ಸಲ್ಲಿಸಿದ ನಂತರ ಬಾಳೆಗಿಡವನ್ನು ಪೂಜಿಸಲಾಗುತ್ತದೆ. ಹೀಗೆ ಮಾಡುವುದರಿಂದ ವಿಷ್ಣು ಪ್ರಸನ್ನನಾಗಿ, ಮನೋಕಾಮನೆಯನ್ನು ಈಡೇರಿಸುತ್ತಾನಂತೆ. ಅಲ್ಲದೆ, ಗುರುವಾರ ಬಾಳೆಗಿಡವನ್ನು ಪೂಜಿಸುವುದರಿಂದ ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ ಎನ್ನುತ್ತಾರೆ. ಇದರೊಂದಿಗೆ ಇದಲ್ಲದೆ, ಗುರುವಾರ ಬಾಳೆಗಿಡಕ್ಕೆ ಪೂಜೆ ಸಲ್ಲಿಸುವುದರಿಂದ ಗುರುಬಲ ಹೆಚ್ಚಾಗುತ್ತದೆಯಂತೆ. ವಿವಾಹ (Marriage) ವಿಷಯಗಳಲ್ಲಿ ಅಡೆತಡೆಗಳಿದ್ದರೆ ಅದು ಕೂಡಾ ನಿವಾರಣೆಯಾಗುತ್ತದೆಯಂತೆ.
ಬಾಳೆಗಿಡವನ್ನು ಪೂಜಿಸುವ ವಿಧಾನ ಹೇಗೆ ?
- ಬಾಳೆ ಗಿಡ ಪೂಜೆಗೂ ಮುನ್ನ ಭಗವಾನ್ ವಿಷ್ಣುಗೆ ಪೂಜೆ ಸಲ್ಲಿಸಿ.
-- ಮನೆಯ ಹೊರಗಿರುವ ಬಾಳೆ ಗಿಡಕ್ಕೆ ನೀರು (water) ಹಾಕಿ
- ಬಾಳೆ ಗಿಡಕ್ಕೆ ನಮಸ್ಕರಿಸಿ, ಅರಶಿನ ತುಂಡು (Turmeric) , ಕಡಲೆಬೇಳೆ, ಬೆಲ್ಲವನ್ನು ಅರ್ಪಿಸಿ
- ಅಕ್ಷತೆ, ಪುಷ್ಪವನ್ನು ಸಮರ್ಪಿಸಿ ಬಾಳೆಗಿಡಕ್ಕೆ ಪ್ರದಕ್ಷಿಣೆ ಹಾಕಿ
ಹೀಗೆ ಮಾಡಿದರೆ, ಸರ್ವ ಇಷ್ಟಾರ್ಥವೂ ನೆರೆವೇರುತ್ತದೆ ಎನ್ನುವುದು ನಂಬಿಕೆ.
ಇದನ್ನೂ ಓದಿ : Akshaya Tritiya 2021: ಶುಭ ಯೋಗಗಳನ್ನು ಹೊತ್ತು ತರಲಿದೆ ಅಕ್ಷಯ ತೃತೀಯ.! ಹೆಚ್ಚಾಗಲಿದೆ ಸುಖ ಸಮೃದ್ಧಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ