Astrology On Corona End In India: ಭಾರತದಲ್ಲಿ ಕೊರೊನಾ ಅಂತ್ಯದ ಕುರಿತು ಜೋತಿಷ್ಯ ಶಾಸ್ತ್ರ ಏನು ಹೇಳುತ್ತೆ?

When Corona Will End In India? - ಈ ತಿಂಗಳ ನಾಲ್ಕನೇ ತಾರೀಖಿಗೆ ಅಪರಾಹ್ನ 1.26 ನಿಮಿಷಕ್ಕೆ ಶುಕ್ರ ತನ್ನ ಸ್ವಂತ ರಾಶಿಯಾಗಿರುವ ವೃಷಭ ರಾಶಿಯಲ್ಲಿ ಗೋಚರಿಸಿದ್ದಾನೆ. ವೃಷಭ ರಾಶಿಯ ಕುರಿತು ಹೇಳುವುದಾದರೆ ಏಪ್ರಿಲ್ 30 ರಂದು ಈ ರಾಶಿಗೆ ಬುಧನ ಪ್ರವೇಶವಾಗಿದೆ.

Written by - Nitin Tabib | Last Updated : May 5, 2021, 10:51 PM IST
  • ಭಾರತದ ಜನ್ಮ ಜಾತಕದ ಲಗ್ನ ಸ್ಥಾನದಲ್ಲಿ ರಾಹು, ಬುಧ ಹಾಗೂ ಶುಕ್ರನ ಯುತಿಯ ಪ್ರಭಾವ ಶ್ರೇಷ್ಠ ಎಂದು ಹೇಳಲಾಗಿದೆ.
  • ಶನಿ ಹಾಗೂ ಬೃಹಸ್ಪತಿಯ ಕಾರಣ ನಡೆದುಕೊಂಡು ಬರುತ್ತಿರುವ ಕೊರೊನಾ ಮಹಾಮಾರಿ ಕಡಿಮೆಯಾಗಲಿದೆ ಎನ್ನಲಾಗಿದೆ.
  • ಆದರೆ, ಅರಾಕತೆ ಹುಟ್ಟುಹಾಕುವ ಶಕ್ತಿಗಳ ಮೇಲೆ ನಿಗಾ ಇಡುವುದು ಆವಶ್ಯಕವಾಗಿದೆ
Astrology On Corona End In India: ಭಾರತದಲ್ಲಿ ಕೊರೊನಾ ಅಂತ್ಯದ ಕುರಿತು ಜೋತಿಷ್ಯ ಶಾಸ್ತ್ರ ಏನು ಹೇಳುತ್ತೆ? title=
When Corona Will End In India?(Representational Image)

ನವದೆಹಲಿ:  When Corona Will End In India? - ಈ ತಿಂಗಳ ನಾಲ್ಕನೇ ತಾರೀಖಿಗೆ ಅಪರಾಹ್ನ 1.26 ನಿಮಿಷಕ್ಕೆ ಶುಕ್ರ ತನ್ನ ಸ್ವಂತ ರಾಶಿಯಾಗಿರುವ ವೃಷಭ ರಾಶಿಯಲ್ಲಿ ಗೋಚರಿಸಿದ್ದಾನೆ. ವೃಷಭ ರಾಶಿಯ ಕುರಿತು ಹೇಳುವುದಾದರೆ ಏಪ್ರಿಲ್ 30 ರಂದು ಈ ರಾಶಿಗೆ ಬುಧನ ಪ್ರವೇಶವಾಗಿದೆ. ಇದಲ್ಲದೆ ರಾಹು ಕೂಡ ವೃಷಭ ರಾಶಿಯಲ್ಲಿಯೇ ಸಂಚರಿಸುತ್ತಿದ್ದಾನೆ. ಇಂತಹ ಸ್ಥಿತಿಯಲಿ ವೃಷಭ ರಾಶಿಯ ಮೇಲೆ ರಾಹು, ಬುಧ ಹಾಗೂ ಶುಕ್ರನ ಯುತಿ ಮುಂದುವರೆದಿದೆ. ವೃಷಭ ರಾಶಿ ಶುಕ್ರನ ಸ್ವಂತ ರಾಶಿ ಎಂದು ಜೋತಿಷ್ಯಶಾಸ್ತ್ರದಲ್ಲಿ (Astrology) ಹೇಳಲಾಗುತ್ತದೆ.

ಭಾರತದ ಜನ್ಮ ಕುಂಡಲಿ ಕುರಿತು ಹೇಳುವುದಾದರೆ, ಜಾತಕದ ಲಗ್ನ ಸ್ಥಾನದಲ್ಲಿ ರಾಹು, ಬುಧ ಹಾಗೂ ಶುಕ್ರನ ಯುತಿಯ ಪ್ರಭಾವ ಶ್ರೇಷ್ಠ ಎಂದು ಹೇಳಲಾಗಿದೆ. ಶನಿ ಹಾಗೂ ಬೃಹಸ್ಪತಿಯ ಕಾರಣ ನಡೆದುಕೊಂಡು ಬರುತ್ತಿರುವ ಕೊರೊನಾ (Covid-19) ಮಹಾಮಾರಿಯಿಂದ ನೆಮ್ಮದಿ ಸಿಗುವ ಸಾಧ್ಯತೆ ಇದೆ. ಶುಕ್ರ ಪ್ರೇಮ, ಸೌಂದರ್ಯ, ಭೋಗ-ವಿಳಾಸದ ಪ್ರತೀಕ. ಪ್ರಸ್ತುತ ಸಮಯದಲ್ಲಿ ಆಟ ತನ್ನ ರಾಶಿಯಲ್ಲಿ ಬಂದು ಜನಮಾನಸದಲ್ಲಿ ತಮ್ಮ ಕುಟುಂಬದ ಪ್ರತಿ ಪ್ರೇಮ ಸಂಚರಿಸುವಂತೆ ಮಾಡುತ್ತಾನೆ.

ಈ ಅವಧಿಯಲ್ಲಿ ಮನೆ ಹಾಗೂ ಮನೆ ಸದಸ್ಯರ ಸುಖ ಹಾಗೂ ಸೌಕರ್ಯದ ಕುರಿತು ಜನ ಗಮನಹರಿಸಲಿದ್ದಾರೆ ಹಾಗೂ ಪರಸ್ಪರ ಅಸೂಯೆ ಭಾವನೆ ಕೊನೆಗೊಳ್ಳಲಿದೆ. ಆದರೆ, ಶುಕ್ರ ದೈತ್ಯರ ಗುರು ಕೂಡ ಆಗಿದ್ದು, ರಾಹುವಿನ ಜೊತೆಗೆ ಯುತಿಯಲ್ಲಿದ್ದಾನೆ. ಈ ಕಾರಣದಿಂದ ದೈತ್ಯ ಪ್ರವೃತ್ತಿಯ ಜನರು ಅರ್ಥಾತ್ ಹಿಂಸಾಚಾರ ಮತ್ತು ಅರಾಜಕತೆ ಹಬ್ಬಿಸುವ ಜನರು ಸಕ್ರೀಯರಾಗಿ ದೇಶದಲ್ಲಿ ಮತ್ತಷ್ಟು ಅರಾಜಕತೆಯ ವಾತಾವರಣ ಸೃಷ್ಟಿಸುವ ಸಾಧ್ಯತೆ ಇದೆ. ಇದರಿಂದ ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಸ್ಥಿತಿ  ಎದುರಾಗಲಿದೆ.

ಇದನ್ನೂ ಓದಿ- Akshaya Tritiya 2021: ಶುಭ ಯೋಗಗಳನ್ನು ಹೊತ್ತು ತರಲಿದೆ ಅಕ್ಷಯ ತೃತೀಯ.! ಹೆಚ್ಚಾಗಲಿದೆ ಸುಖ ಸಮೃದ್ಧಿ

ರಾಹು, ಶುಕ್ರರ ಜೊತೆಗೆ ಬುಧನ ಯುತಿ ಇಂತಹ ಪ್ರವೃತ್ತಿಗಳಿಗೆ ಬಲ ನೀಡಲಿದೆ. ರಾಹು ರಾಜಕೀಯದಲ್ಲಿ ಸಫಲತೆಯ ಪ್ರತೀಕ ಕೂಡ ಹೌದು. ಹೀಗಾಗಿ ರಾಹು ಆಡಳಿತಾರೂಢ ಪಕ್ಷಕ್ಕೆ ಹಲವು ಸಮಸ್ಯೆಗಳನ್ನು ತರುವುದರ ಜೊತೆಗೆ ರಾಷ್ಟ್ರ ಮುಖಂಡರಲ್ಲಿ ದೃಢ ನಿರ್ಣಯಗಳನ್ನೂ ಕೈಗೊಳ್ಳುವ ಕ್ಷಮತೆಯನ್ನು ಬಲ ಪಡಿಸಲಿದ್ದಾನೆ.  ಕಠಿಣ ನೀತಿಗಳ ಜಾರಿಯಿಂದ ಕೊರೊನಾ ಹಾಗೂ ಅರಾಜಕತೆ ಹುಟ್ಟುಹಾಕುವ ಶಕ್ತಿಗಳಿಗೆ ವಿರಾಮ ಬೀಳುವ ಸಾಧ್ಯತೆ ಇದೆ.  ಬುಧ ಹಾಗೂ ಶುಕ್ರನ ಜೊತೆಗೆ ರಾಹುವಿನ ಯುತಿ ಇರುವ ಕಾರಣ ಕೊರೊನಾ (Covid-19) ಪ್ರಭಾವ ಕೂಡ ಕಡಿಮೆಯಾಗಲಿದೆ. ಮೇ ತಿಂಗಳಾಂತ್ಯದವರೆಗೆ ಕೊರೊನಾ ಪ್ರಭಾವ ಕಡಿಮೆಯಾಗಲಿದೆ. ನಂತರ ಅದರ ವೇಗದ ಮೇಲೆ ಕ್ರಮೇಣ ಬ್ರೇಕ್ ಬೀಳಲಿದೆ. ಆದರೆ, ಅರಾಜಕತೆ ಹುಟ್ಟುಹಾಕುವ ಶಕ್ತಿಗಳ ಮೇಲೆ ನಿಗಾ ಮುಂದುವರೆಸಬೇಕಾಗಲಿದೆ. ಏಕೆಂದರೆ ರಾಹುವಿನ ಜೊತೆಗೆ ಶುಕ್ರ ಶುಭ ಅಥವಾ ಒಳ್ಳೆಯ ಯೋಗ ನಿರ್ಮಿಸುವುದಿಲ್ಲ .

ಇದನ್ನೂ ಓದಿ- Turtle Ring Effects: ಈ 4 ರಾಶಿಯವರು ಎಂದಿಗೂ ಆಮೆ ಉಂಗುರವನ್ನು ಧರಿಸಬಾರದು!

(ಸೂಚನೆ- ಧಾರ್ಮಿಕ ನಂಬಿಕೆ ಹಾಗೂ ಲೌಕಿಕ ಮಾನ್ಯತೆಗಳ ಮೇಲೆ ಈ ಮಾಹಿತಿ ಆಧರಿಸಿದೆ. ಇದನ್ನು ಸಾಮಾನ್ಯ ಜನರ ಸದಭಿರುಚಿಯನ್ನು ಗಮನದಲ್ಲಿಟ್ಟುಕೊಂದು ಪ್ರಸ್ತುತಪಡಿಸಲಾಗಿದೆ. ಝೀ ಹಿಂದೂಸ್ಥಾನ ಕನ್ನಡ ಈ ಮಾಹಿತಿಯನ್ನು ಪುಷ್ಟೀಕರಿಸುವುದಿಲ್ಲ )

ಇದನ್ನೂ ಓದಿ-Health Tips: ಶರೀರದಲ್ಲಿ Oxygen ಮಟ್ಟವನ್ನು ಹೆಚ್ಚಿಸಲು ಬಹಿರಂಗವಾಗಿ ನಕ್ಕು ನಲಿಯಿರಿ, ಇಲ್ಲಿವೆ Laughing Therapy ಲಾಭಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News