Hasta Samudrika:ನಿಮ್ಮ ಕೈಯಲ್ಲಿಯೂ ಈ ರೇಖೆ ಇದೆಯಾ? ಇದ್ರೆ ನೀವೂ ನಿಮ್ಮ ಮಡದಿಯ ಕಾಳಜಿಗೆ ಪಾತ್ರರಗುವಿರಿ
Hasta Samudrika - ಹಸ್ತ ಸಾಮುದ್ರಿಕದಲ್ಲಿ (Hasta Rekha Vijnana) ವಿವಾಹ ರೇಖೆಯ ತುಂಬಾ ಮಹತ್ವವಿರುತ್ತದೆ. ಇದು ವ್ಯಕ್ತಿಯೊಬ್ಬರ ವೈವಾಹಿಕ ಜೀವನದ ಕುರಿತು ಹೇಳುತ್ತದೆ. ವೈವಾಹಿಕ ಜೀವನದ ಆರಂಭ ಹಾಗೂ ಅದರ ಮುಂದುವರೆಯುವಿಕೆಯ ಸ್ಥಿತಿ ಆ ವ್ಯಕ್ತಿಯ ವೈವಾಹಿಕ ಜೀವನದ ಕುರಿತು ಸಾಕಷ್ಟು ಸಂಕೇತ ನೀಡುತ್ತದೆ.
ನವದೆಹಲಿ: Hasta Samudrika - ಹಸ್ತ ಸಾಮುದ್ರಿಕದಲ್ಲಿ ವಿವಾಹ ರೇಖೆಯ ತುಂಬಾ ಮಹತ್ವವಿರುತ್ತದೆ. ಇದು ವ್ಯಕ್ತಿಯೊಬ್ಬರ ವೈವಾಹಿಕ ಜೀವನದ ಕುರಿತು ಹೇಳುತ್ತದೆ. ವೈವಾಹಿಕ ಜೀವನದ ಆರಂಭ ಹಾಗೂ ಅದರ ಮುಂದುವರೆಯುವಿಕೆಯ ಸ್ಥಿತಿ ಆ ವ್ಯಕ್ತಿಯ ವೈವಾಹಿಕ ಜೀವನದ ಕುರಿತು ಸಾಕಷ್ಟು ಸಂಕೇತ ನೀಡುತ್ತದೆ.
- ಹಸ್ತ ಸಾಮುದ್ರಿಕದ (Palmistry) ಪ್ರಕಾರ ಯಾವುದೇ ಓರ್ವ ಪುರುಷನ ಬಲಗೈಯಲ್ಲಿ ಎರಡು ವಿವಾಹ ರೇಖೆಗಳಿದ್ದು, ಮತ್ತು ಆತನ ಎಡಗೈಯಲ್ಲಿ ಒಂದು ರೇಖೆ ಇದ್ದರೆ, ಇಂತಹ ವ್ಯಕ್ತಿಗೆ ಶ್ರೇಷ್ಠ ಹಾಗೂ ಗುಣಶಾಲಿ ಮಡದಿ ಸಿಗುತ್ತಾಳೆ. ಇಂತಹ ಜನರಿಗೆ ತುಂಬಾ ಪ್ರೀತಿ ಮಾಡುವ ಮತ್ತು ತುಂಬಾ ಕಾಳಜಿ ವಹಿಸುವ ಮಡದಿ ಸಿಗುತ್ತಾಳೆ. ಒಂದು ವೇಳೆ ಸ್ಥಿತಿ ಇದಕ್ಕೆ ತೀರಾ ವಿಪರೀತವಾಗಿದ್ದರೆ ಅಂದರೆ ಎಡಗೈಯಲ್ಲಿ ಎರಡು ಹಾಗೂ ಬಲಗೈಯಲ್ಲಿ ಒಂದು ವಿವಾಹ ರೇಖೆ ಇದ್ದರೆ, ಪತ್ನಿ ತನ್ನ ಪತಿಯ ಕಾಳಜಿ ವಹಿಸುವದಿಲ್ಲ.
- ಒಂದು ವೇಳೆ ಎರಡೂ ಕೈಗಳಲ್ಲಿ ವಿವಾಹ ರೇಖೆಗಳ (Marriage Line) ಉದ್ದ ಸಮನಾಗಿದ್ದರೆ ಹಾಗೂ ಸಮಾನ ಶುಭಲಕ್ಷಣಗಳಿಂದ ಕೂಡಿದ್ದರೆ. ಇಂತಹ ಜನರ ವೈವಾಹಿಕ ಜೀವನ (Married Life) ತುಂಬಾ ಸುಖದಿಂದ ಕೂಡಿರುತ್ತದೆ. ಯಾರ ಕೈಯಲ್ಲಿ ಈ ಯೋಗ ಇರುತ್ತದೆಯೋ, ಅವರ ಹಾಗೂ ಅವರ ಜೀವನ ಸಂಗಾತಿಯ ನಡುವೆ ಉತ್ತಮ ಸಾಮರಸ್ಯ ಇರುತ್ತದೆ.
ಇದನ್ನೂ ಓದಿ-TUESDAY REMEDIES: ಶನಿ ದೇವನನ್ನು ಮೆಚ್ಚಿಸಲು ಮಂಗಳವಾರ ಹನುಮನನ್ನು ಪೂಜಿಸಿ
- ಒಂದು ವೇಳೆ ವ್ಯಕ್ತಿಯ ಕೈಯಲ್ಲಿರುವ ವಿವಾಹ ರೇಖೆ ಮೇಲ್ಭಾಗಕ್ಕೆ ತಿರುಚಿಕೊಂಡಿದ್ದಾರೆ ಹಾಗೂ ಕಿರುಬೆರಳವರೆಗೆ ಚಾಚಿಕೊಂಡಿದ್ದರೆ, ಇಂತಹ ವ್ಯಕ್ತಿಗಳು ವೈವಾಹಿಕ ಜೀವನ ತುಂಬಾ ಅಡಚಣೆಗಳಿಂದ ಕೂಡಿರುತ್ತದೆ. ಇದಲ್ಲದೆ ಇಂತಹ ವಿವಾಹ ರೇಖೆ ಇರುವ ವ್ಯಕ್ತಿಗಳ ಮದುವೆಯಲ್ಲಿಯೂ ಕೂಡ ತುಂಬಾ ಅಡಚಣೆ ಎದುರಾಗುತ್ತದೆ ಮತ್ತು ಇವರು ಅವಿವಾಹಿತರಾಗಿ ಇರಬೇಕಾದ ಸಾಧ್ಯತೆಗಳು ಹೆಚ್ಚಾಗಿರುತ್ತದೆ.
ಇದನ್ನೂ ಓದಿ- ಇದು ಶನಿ ದೇವನ ವಕ್ರ ದೃಷ್ಟಿಯಿಂದ ತಪ್ಪಿಸಿಕೊಳ್ಳುವ ಸರಳ ವಿಧಾನ
(ಸೂಚನೆ - ಧಾರ್ಮಿಕ ನಂಬಿಕೆ ಹಾಗೂ ಲೌಕಿಕ ಮಾನ್ಯತೆಗಳ ಆಧಾರದ ಮೇಲೆ ಈ ಮಾಹಿತಿಯನ್ನು ಕಲೆ ಹಾಕಲಾಗಿದೆ. ಸಾಮಾನ್ಯ ಜನರ ಅಭಿರುಚಿಯನ್ನು ಗಮನದಲ್ಲಿಟ್ಟುಕೊಂಡು ಮಾತ್ರ ಇದನ್ನು ಪ್ರಸ್ತುತಪಡಿಸಲಾಗಿದೆ)
ಇದನ್ನೂ ಓದಿ-Astrology : ಮುಂಜಾನೆ ಸೂರ್ಯನಿಗೆ ನೀರು ಅರ್ಪಿಸುವುದರಿಂದ ಅದ್ಭುತ ಪ್ರಯೋಜನಗಳಿವೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.