TUESDAY REMEDIES: ಶನಿ ದೇವನನ್ನು ಮೆಚ್ಚಿಸಲು ಮಂಗಳವಾರ ಹನುಮನನ್ನು ಪೂಜಿಸಿ

ಹನುಮಂತನನ್ನು ಭಕ್ತಿಯಿಂದ ಪೂಜಿಸುವುದರಿಂದ ಶನಿ ದೇವ ಶಾಂತನಾಗುತ್ತಾನೆ ಮತ್ತು ಭಜರಂಗಬಲಿಯ  ಭಕ್ತರಿಗೆ ಶನಿದೇವ ತೊಂದರೆ ನೀಡುವುದಿಲ್ಲ ಎಂದು ಹೇಳಲಾಗುತ್ತದೆ. 

Written by - Yashaswini V | Last Updated : Mar 30, 2021, 10:56 AM IST
  • ಹನುಮನ ಭಕ್ತರಿಗೆ ಶನಿ ದೇವನ ಕೃಪಾಕಟಾಕ್ಷ
  • ಭಜರಂಗಬಲಿಯ ಭಕ್ತರ ಮೇಲೆ ಬೀಳುವುದಿಲ್ಲ ಶನಿದೇವನ ವಕ್ರ ದೃಷ್ಟಿ
  • ಹನುಮಾನ್ ಚಾಲಿಸಾ ಪಠಿಸುವುದರಿಂದ ಹಣದ ಕೊರತೆ ಇರುವುದಿಲ್ಲ
TUESDAY REMEDIES: ಶನಿ ದೇವನನ್ನು ಮೆಚ್ಚಿಸಲು ಮಂಗಳವಾರ ಹನುಮನನ್ನು ಪೂಜಿಸಿ title=
How to make hanuman ji happy

ನವದೆಹಲಿ: ಸ್ಕಂದ ಪುರಾಣದ ಪ್ರಕಾರ, ಹನುಮಾನ್ ಜಿ (Lord Hanuman) ಮಂಗಳವಾರ ಜನಿಸಿದರು. ಈ ಕಾರಣದಿಂದಾಗಿ ಮಂಗಳವಾರದ ದಿನವನ್ನು ಹನುಮನ ಪೂಜೆಗಾಗಿ  ಸಮರ್ಪಿಸಲಾಗಿದೆ. ಈ ದಿನ, ಹನುಮನನ್ನು ನಿಷ್ಠೆಯಿಂದ ಪೂಜಿಸುವ ಮೂಲಕ ಭಕ್ತರ ಇಷ್ಟಾರ್ಥ ಸಿದ್ಧಿಯಾಗಲಿದೆ. ಹನುಮನು ತನ್ನ ಭಕ್ತರನ್ನು ಸಂಕಷ್ಟಗಳಿಂದ ರಕ್ಷಿಸುತ್ತಾನೆ ಎಂದು ನಂಬಲಾಗಿದೆ. ಆದರೆ ಹನುಮನ ಆರಾಧನೆಯಿಂದ ಹನುಮ ಮಾತ್ರವಲ್ಲದೆ ಶನಿ ದೇವ ಕೂಡ ಒಲಿಯುತ್ತಾನೆ ಮತ್ತು ಭಜರಂಗಿಯ ಭಕ್ತರ ಮೇಲೆ ಶನಿ ದೇವ ವಕ್ರ ದೃಷ್ಟಿ ಬೀಳುವುದಿಲ್ಲ ಎಂದು ನಿಮಗೆ ತಿಳಿದಿದೆಯೇ?

ಹನುಮಾನ್ ಚಾಲಿಸಾ ಪಠಿಸುವುದರಿಂದ ಹಣದ ಕೊರತೆ ಇರುವುದಿಲ್ಲ:
ಹನುಮನ ಭಕ್ತರ ಮೇಲೆ ಶನಿ ದೇವನ ಅನುಗ್ರಹ ಕೂಡ ಇರುತ್ತದೆ ಎಂದು ಹೇಳಲಾಗುತ್ತದೆ. ಪ್ರತಿ ಮಂಗಳವಾರ ಹನುಮನನ್ನು ಭಕ್ತಿಯಿಂದ ಪೂಜಿಸಿ ಹನುಮಾನ್ ಚಾಲಿಸಾವನ್ನು (Hanuman Chalisa) ಪಠಿಸುವುದರಿಂದ ಎಂತಹ ಆರ್ಥಿಕ ಸಂಕಷ್ಟವಿದ್ದರೂ ನಿವಾರಣೆಯಾಗುತ್ತದೆ. ವಾಸ್ತವವಾಗಿ ಹನುಮನನ್ನು ಶಕ್ತಿ, ಬುದ್ಧಿವಂತಿಕೆ ಮತ್ತು ನಿರ್ಭಯತೆಯ ಸಂಕೇತವೆಂದು ಪರಿಗಣಿಸಲಾಗಿದೆ. ಧರ್ಮಗ್ರಂಥಗಳ ಪ್ರಕಾರ, ಯಾವುದೇ ಬಿಕ್ಕಟ್ಟು ಅಥವಾ ತೊಂದರೆಯ ಸಮಯದಲ್ಲಿ ಭಕ್ತಿಯಿಂದ ಹನುಮನನ್ನು ನೆನೆದರೆ  ಅವನು ಭಕ್ತರ ತೊಂದರೆಗಳನ್ನು ನಿವಾರಿಸುತ್ತಾನೆ. ಹಾಗಾಗಿಯೇ ಹನುಮನನ್ನು ಸಂಕಟ ವಿಮೋಚಕ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ-  ಅಮೇರಿಕಾದಲ್ಲಿ ಸ್ಥಾಪನೆಯಾದ 25 ಅಡಿ ಎತ್ತರದ ಆಂಜನೇಯ ಮೂರ್ತಿ, ತಯಾರಾಗಿದ್ದು ಎಲ್ಲಿ ಗೊತ್ತಾ?

ಹನುಮನ ಭಕ್ತರಿಗೆ ಶನಿ ದೇವನ ಕೃಪಾಕಟಾಕ್ಷ:
ಹನುಮನನ್ನು ಶಿವನ (Lord Shiva) ಅವತಾರ ಎಂದು ನಂಬಲಾಗಿದೆ. ಹಾಗಾಗಿ ಹನುಮನ ಭಕ್ತರ ಮೇಲೆ ಶನಿದೇವನ ಕೃಪಾಕಟಾಕ್ಷವೂ ಇರುತ್ತದೆ ಎಂದು ಹೇಳಲಾಗುತ್ತದೆ. ಹನುಮಂತನನ್ನು ಭಕ್ತಿಯಿಂದ ಪೂಜಿಸುವುದರಿಂದ ಶನಿ ದೇವ (Shanidev) ಶಾಂತನಾಗುತ್ತಾನೆ ಮತ್ತು ಭಜರಂಗಬಲಿಯ  ಭಕ್ತರಿಗೆ ಶನಿದೇವ ತೊಂದರೆ ನೀಡುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ ಇದು ಹೇಗೆ ಎಂಬ ಪ್ರಶ್ನೆ ಸಹಜವಾಗಿಯೇ ಹಲವರ ಮನಸ್ಸಿನಲ್ಲಿ ಮೂಡುತ್ತದೆ. ಇದಕ್ಕೆ ಒಂದು ದಂತಕಥೆ ಇದೆ. ಸೀತಾಮಾತೆ ಅಪಹರಣವಾದಾಗ ಸೀತಾಮಾತೆಯನ್ನು ಹುಡುಕಲು ಹನುಮನು ಲಂಕಾ ತಲುಪಿದಾಗ ಅಲ್ಲಿ ಶನಿದೇವನನ್ನು ಕಾಣುತ್ತಾನೆ. ಈ ಸಂದರ್ಭದಲ್ಲಿ ಹನುಮನು ಶನಿದೇವನು ಲಂಕಾದಲ್ಲಿರುವ ಬಗ್ಗೆ ಪ್ರಶ್ನಿಸಿದಾಗ ರಾವಣನು ತನ್ನ ಯೋಗ ಬಲದಿಂದ ತನ್ನನ್ನು ಬಂಧನದಲ್ಲಿರಿಸಿರುವ ಬಗ್ಗೆ ಹೇಳುತ್ತಾರೆ. ಇದನ್ನು ಕೇಳಿದ ಹನುಮಂತನು ಶನಿದೇವನನ್ನು ರಾವಣನ ಸೆರೆಯಿಂದ ಮುಕ್ತಗೊಳಿಸಿದರು. ಇದರಿಂದ ಸಂತಸಗೊಂಡ ಶನಿದೇವನನ್ನು ತನಗೆ ಬೇಕಾದ ವರವನ್ನು ಕೇಳುವಂತೆ ಹೇಳುತ್ತಾನೆ. ಆಗ ಭಜರಂಗಿಯು ಕಲಿಯುಗದಲ್ಲಿ ನನ್ನನ್ನು ಭಕ್ತಿಯಿಂದ ಪೂಜಿಸುವ, ಆರಾಧಿಸುವ ಭಕ್ತರಿಗೆ ನೀವು ಎಂದಿಗೂ ಕೆಟ್ಟದ್ದನ್ನು ಮಾಡಬಾರದು ಎಂದು ಕೇಳಿದರಂತೆ. ಹಾಗಾಗಿಯೇ ಹನುಮನ ಭಕ್ತರ ಮೇಲೆ ಶನಿದೇವನ ಕೃಪಾಕಟಾಕ್ಷ ಇರಲಿದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ-  Tuesday Tips : ಮಂಗಳವಾರ ತಪ್ಪಿಯೂ ಈ 5 ಕೆಲಸಗಳನ್ನು ಮಾಡ್ಬೇಡಿ..!

ಮಂಗಳವಾರ ನೀವು ಹನುಮನನ್ನು ಈ ರೀತಿ ಪೂಜಿಸಬೇಕು :
ಮಂಗಳವಾರ ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದು ಸ್ನಾನ ಮಾಡಿ, ನಂತರ ಕೆಂಪು ಬಟ್ಟೆಗಳನ್ನು ಧರಿಸಿ ಶುದ್ಧ ನೀರನ್ನು ತಂದು ಹನುಮನ  ಮುಂದೆ ವ್ರತ ಸಂಕಲ್ಪ ಮಾಡಬೇಕು. ನಂತರ ಹನುಮನ ಮುಂದೆ ತುಪ್ಪದ ದೀಪವನ್ನು ಬೆಳಗಿಸಿ ಹೂವಿನ ಹಾರವನ್ನು ಅರ್ಪಿಸಿ. ಹತ್ತಿಯಲ್ಲಿ ಮಲ್ಲಿಗೆ ಎಣ್ಣೆಯನ್ನು ತೆಗೆದುಕೊಂಡು ಅವರ ಮುಂದೆ ಇರಿಸಿ. ನಂತರ ಮಂಗಳವಾರ ವ್ರತ ಕಥೆಯನ್ನು ಪಠಿಸಿ, ನಂತರ ಹನುಮಾನ್ ಚಾಲಿಸಾ ಮತ್ತು ಸುಂದರಕಾಂಡ ಪಠಿಸಿ. ಅಂತಿಮವಾಗಿ, ಆರತಿ ಮಾಡಿ ನೈವೇದ್ಯವನ್ನು ಅರ್ಪಿಸಿ. ಮಂಗಳವಾರದಂದು ಕೇವಲ ಒಂದೊತ್ತು ಮಾತ್ರ ಭೋಜನ ಸೇವಿಸಿ. ಸಂಜೆ ಸಮಯದಲ್ಲಿಯೂ ಶ್ರದ್ಧಾ, ಭಕ್ತಿಯಿಂದ ಹನುಮನನ್ನು ಪೂಜಿಸಿ ದೇವರ ಮುಂದೆ ದೀಪ ಬೆಳಗಿಸಿ ಆರತಿ ಮಾಡಿ. 

(ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ನ್ಯೂಸ್ ಇವುಗಳನ್ನು ಖಚಿತಪಡಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News