ಬೆಂಗಳೂರು : ಜ್ಯೋತಿಷ್ಯದಲ್ಲಿ ಗ್ರಹಗಳು ಚಲನೆಯನ್ನು ಬದಲಾಯಿಸುವುದು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಗ್ರಹಗಳ ನಡೆಯಲ್ಲಿನ ಬದಲಾವಣೆ  ಪ್ರತಿಯೊಬ್ಬರ  ಜೀವನದ ಮೇಲೆ ಪರಿಣಾಮ ಬೀರುತ್ತದೆ. ಬುಧ ಮತ್ತು ಶನಿ ಗ್ರಹಗಳನ್ನು ಸ್ನೇಹಿ ಗ್ರಹಗಳು ಎಂದು ಕರೆಯಲಾಗುತ್ತದೆ. ಜೂನ್ 3 ರಂದು ಅಂದರೆ ಇಂದಿನಿಂದ ಬುಧ ವೃಷಭ ರಾಶಿಯಲ್ಲಿ ನೇರ ಸಂಚಾರ ಆರಂಭಿಸಲಿದ್ದಾನೆ. ಬುಧ ಸಂಕ್ರಮಣದ ನಂತರ ಶನಿಯು ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲಿದ್ದಾನೆ. ಬುಧ ಮತ್ತು ಶನಿಯ ಚಲನೆಯಲ್ಲಿನ ಬದಲಾವಣೆ ಎಲ್ಲಾ ರಾಶಿಯವರ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತದೆ. 


COMMERCIAL BREAK
SCROLL TO CONTINUE READING

ಮೇಷ ರಾಶಿ - ಮನಸ್ಸಿನಲ್ಲಿ ಭರವಸೆ ಮತ್ತು ಹತಾಶೆಯ ಭಾವನೆಗಳು ಮೂಡಬಹುದು. ಉದ್ಯೋಗದಲ್ಲಿ ಅಧಿಕಾರಿಗಳ ಜೊತೆ ಅನಗತ್ಯ ವಾದ ವಿವಾದಗಳಿಂದ ದೂರವಿರಿ. ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಬಹುದು.


ಇದನ್ನೂ ಓದಿ : ಮನೆಯಲ್ಲಿ ಲಕ್ಷ್ಮೀ ನೆಲೆಯಾಗಬೇಕಾದರೆ ಇಂದಿನಿಂದಲೇ ಈ ಕೆಲಸ ಆರಂಭಿಸಿ


ವೃಷಭ ರಾಶಿ - ಆತ್ಮವಿಶ್ವಾಸದ ಕೊರತೆ ಇರುತ್ತದೆ. ಧರ್ಮ ಶ್ರದ್ಧೆ ಹೆಚ್ಚಾಗಬಹುದು. ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವೈದ್ಯಕೀಯ ವೆಚ್ಚಗಳು ಹೆಚ್ಚಾಗಬಹುದು. ಗೆಳೆಯನೊಬ್ಬ ಬಟ್ಟೆಗಳನ್ನು ಉಡುಗೊರೆಯಾಗಿನೀಡಬಹುದು. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.


ಮಿಥುನ ರಾಶಿ - ಮನಸ್ಸು ಕೂಡ ತೊಂದರೆಗೊಳಗಾಗಬಹುದು. ಸ್ವಾವಲಂಬಿಯಾಗಿರಿ. ಉದ್ಯೋಗ ಬದಲಾವಣೆಗೆ ಅವಕಾಶಗಳು ಲಭ್ಯವಾಗಬಹುದು. ಅತಿಯಾದ ಕೋಪವನ್ನು ತಪ್ಪಿಸಿ. ಉದ್ಯೋಗದಲ್ಲಿ ಪ್ರಗತಿಯ ಹಾದಿ ಸುಗಮವಾಗಲಿದೆ. ಬೇರೆ ಜಾಗಕ್ಕೂ ಹೋಗಬೇಕಾಗಬಹುದು. ವ್ಯವಹಾರದಲ್ಲಿ ಪ್ರಗತಿಯ ಸಾಧ್ಯತೆಗಳಿವೆ. ಆತ್ಮವಿಶ್ವಾಸ ಹೇರಳವಾಗಿರುತ್ತದೆ.


ಕರ್ಕ ರಾಶಿ - ಕೆಲಸದಲ್ಲಿ ಉತ್ಸಾಹ ಇರುತ್ತದೆ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಜೀವನ ಅಸ್ತವ್ಯಸ್ತವಾಗಲಿದೆ. ಮಕ್ಕಳಿಂದ ಒಳ್ಳೆಯ ಸುದ್ದಿ ಸಿಗಬಹುದು. ಮಾತುಕತೆ ವೇಳೆ ನಿಗಾ ಇರಲಿ. ಜೀವನದಲ್ಲಿ ಸ್ನೇಹಿತರ ಬೆಂಬಲ ಸಿಗಲಿದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.


ಇದನ್ನೂ ಓದಿ : Budh Margi 2022: ಈ ರಾಶಿಯವರಿಗೆ ಉದ್ಯೋಗ-ವ್ಯವಹಾರದಲ್ಲಿ ತೊಂದರೆ ಹೆಚ್ಚಿಸಲಿದ್ದಾನೆ ಮಾರ್ಗಿ ಬುಧ


ಸಿಂಹ ರಾಶಿ - ಮನಸ್ಸಿನಲ್ಲಿ ನಿರಾಶೆ ಮತ್ತು ಅತೃಪ್ತಿ ಇರುತ್ತದೆ. ವ್ಯಾಪಾರ ವೃದ್ಧಿಯಾಗಲಿದೆ. ಕೆಲಸ ಹೆಚ್ಚಾಗಲಿದೆ. ಲಾಭದ ಅವಕಾಶಗಳೂ ಇರುತ್ತವೆ. ಅಧ್ಯಯನದಲ್ಲಿ ಆಸಕ್ತಿ ಇರುತ್ತದೆ. ಆದರೆ ಶೈಕ್ಷಣಿಕ ಕೆಲಸದಲ್ಲಿ ಅಡೆತಡೆಗಳು ಬರಬಹುದು. ಮಗುವಿಗೆ ಆರೋಗ್ಯ ಸಮಸ್ಯೆಗಳಿರಬಹುದು.


ಕನ್ಯಾ ರಾಶಿ - ಮನಸ್ಸಿನಲ್ಲಿ ಸಂತೋಷದ ಭಾವನೆ ಇರುತ್ತದೆ. ಎಚ್ಚರದಿಂದ ಮಾತನಾಡಿ, ಬೌದ್ಧಿಕ ಕೆಲಸಗಳು ಹಣ ಗಳಿಸುವ ಸಾಧನವಾಗಬಹುದು. ತಾಯಿಗೆ ಆರೋಗ್ಯ ಸಮಸ್ಯೆಗಳು ಎದುರಾಗಲಿವೆ. ಕೆಲಸದ ಸ್ಥಳದಲ್ಲಿ ತೊಂದರೆಗಳಿರಬಹುದು. ಸಹೋದರರೊಂದಿಗೆ ವಿವಾದ ಉಂಟಾಗಬಹುದು.


ತುಲಾ ರಾಶಿ - ಮನಸ್ಸಿಗೆ ತೊಂದರೆಯಾಗಬಹುದು. ಸ್ವಾವಲಂಬಿಯಾಗಿರಿ. ನೀವು ನಿಮ್ಮ ಕುಟುಂಬದೊಂದಿಗೆ ಧಾರ್ಮಿಕ ಸ್ಥಳಕ್ಕೆ ತೀರ್ಥಯಾತ್ರೆಗೆ ಹೋಗಬಹುದು. ಕಲೆ ಮತ್ತು ಸಂಗೀತದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಮಾತಿನಲ್ಲಿ ಸೌಮ್ಯತೆ ಇರುತ್ತದೆ, ಆದರೆ ಮನಸ್ಸಿಗೆ ಕಿರಿಕಿರಿಯೂ ಇರುತ್ತದೆ. ಖರ್ಚು ಅಧಿಕವಾಗಲಿದೆ.


ಇದನ್ನೂ ಓದಿ : Shani Vakri Effect: ಎರಡು ದಿನಗಳ ಬಳಿಕ ಈ ರಾಶಿಯವರಿಗೆ ಅದೃಷ್ಟ ಕರುಣಿಸಲಿದ್ದಾನೆ ಶನಿದೇವ


ವೃಶ್ಚಿಕ ರಾಶಿ - ಆರೋಗ್ಯದ ಬಗ್ಗೆ ಎಚ್ಚರವಿರಲಿ. ಕೌಟುಂಬಿಕ ಸಮಸ್ಯೆಗಳತ್ತ ಗಮನ ಕೊಡಿ. ಆದಾಯದಲ್ಲಿ ಇಳಿಕೆಯಾಗಬಹುದು. ವೆಚ್ಚ ಹೆಚ್ಚಾಗಬಹುದು. ಸಹೋದರರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರುತ್ತದೆ. ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆಗಳು ಕಂಡುಬರುತ್ತವೆ. 


ಧನು ರಾಶಿ - ಆತ್ಮವಿಶ್ವಾಸದ ಕೊರತೆ ಇರುತ್ತದೆ. ಮನಸ್ಸು ವಿಚಲಿತವಾಗುತ್ತದೆ. ಮನಸ್ಸಿನ ಶಾಂತಿಗಾಗಿ ಪ್ರಯತ್ನಿಸಿ. ಮಿತ್ರರ ನೆರವಿನಿಂದ ಆದಾಯ ಹೆಚ್ಚಾಗಬಹುದು. ಕೌಟುಂಬಿಕ ಸಮಸ್ಯೆಗಳ ಪರಿಹಾರಕ್ಕೆ ತಂದೆಯ ಬೆಂಬಲ ದೊರೆಯುತ್ತದೆ. ವಿಪರೀತ ಖರ್ಚುಗಳಿಂದ ಮನಸ್ಸು ವಿಚಲಿತವಾಗಬಹುದು. ವಿವಾದಗಳಿರಬಹುದು.


ಮಕರ ರಾಶಿ  - ಮನಸ್ಸು ಸಂತೋಷದಿಂದ ಕೂಡಿರುತ್ತದೆ. ಆತ್ಮವಿಶ್ವಾಸ ಹೇರಳವಾಗಿರುತ್ತದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ಪ್ರತಿಕೂಲ ಸಂದರ್ಭಗಳನ್ನು ಎದುರಿಸಬೇಕಾಗಬಹುದು. ಉನ್ನತ ಅಧಿಕಾರಿಗಳೊಂದಿಗೆ ವಿವಾದಗಳು ಉಂಟಾಗಬಹುದು.


ಕುಂಭ ರಾಶಿ - ಕಲೆ ಅಥವಾ ಸಂಗೀತದಲ್ಲಿ ಆಸಕ್ತಿ ಹೆಚ್ಚಾಗಬಹುದು. ಕುಟುಂಬದಲ್ಲಿ ಧಾರ್ಮಿಕ ಕೆಲಸ ಮಾಡಬಹುದು. ಉಡುಗೊರೆಯಾಗಿ ಉಡುಪುಗಳನ್ನು ಪಡೆಯಬಹುದು.  ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಸ್ನೇಹಿತರ ಸಹಾಯದಿಂದ ಉದ್ಯೋಗಾವಕಾಶಗಳು ದೊರೆಯುತ್ತವೆ. 


ಇದನ್ನೂ ಓದಿ : Vastu Tips : ನಿಮ್ಮ ಅಡುಗೆ ಮನೆ-ಅಂಗಡಿಯಲ್ಲಿ ಈ ವಸ್ತುಗಳಿವೆಯಾ? ಕೂಡಲೇ ತೆಗೆದುಬಿಡು, ಹಣಕಾಸಿನ ಸಮಸ್ಯೆ ತಪ್ಪಿದಲ್ಲ!


ಮೀನ ರಾಶಿ - ಮನಃಶಾಂತಿ ಇರುತ್ತದೆ. ಸಂಭಾಷಣೆಯಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಿ. ಆರೋಗ್ಯಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳು ಎದುರಾಗಬಹುದು.  ಆತ್ಮವಿಶ್ವಾಸದ ಕೊರತೆ ಇರುತ್ತದೆ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಬಹುದು. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.