ನವದೆಹಲಿ: ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ದೇವ ಉತ್ಥಾನ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನದಂದು ಭಗವಾನ್ ವಿಷ್ಣುವು 4 ತಿಂಗಳ ನಂತರ ಯೋಗ ನಿದ್ರಾದಿಂದ ಎಚ್ಚರಗೊಂಡು ಶಿವನಿಂದ ಅಧಿಕಾರ ತೆಗೆದುಕೊಳ್ಳುತ್ತಾನೆ. ಈ ವಿಶೇಷ ದಿನದಂದು ಪೂಜೆ ಮತ್ತು ಉಪವಾಸಕ್ಕೆ ವಿಶೇಷ ಮಹತ್ವವಿದೆ. ಈ ದಿನ ತುಳಸಿಯು ಶಾಲಿಗ್ರಾಮನನ್ನು ವಿವಾಹವಾಗುತ್ತಾಳೆ. ಈ ಬಾರಿ ದೇವ ಉತ್ಥಾನ ಏಕಾದಶಿಯನ್ನು ನವೆಂಬರ್ 4ರಂದು ಆಚರಿಸಲಾಗಿದೆ. ಆದರೆ ತುಳಸಿ ವಿವಾಹ ನವೆಂಬರ್ 5ರಂದು ಅಂದರೆ ಇಂದು ನಡೆಯಲಿದೆ.


COMMERCIAL BREAK
SCROLL TO CONTINUE READING

ಶಾಸ್ತ್ರಗಳ ಪ್ರಕಾರ ಈ ಏಕಾದಶಿಗೆ ಹೆಚ್ಚಿನ ಮಹತ್ವವಿದೆ. ಈ ದಿನ ವಿಷ್ಣುವಿನ ಜೊತೆಗೆ ತುಳಸಿ ಮಾತೆಯನ್ನು ಪೂಜಿಸುವ ನಿಯಮವಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ತುಳಸಿ ವಿವಾಹದ ಸಮಯದಲ್ಲಿ ಕೆಲವು ಪೂಜೆಯ ವಿಷಯಗಳ ಬಗ್ಗೆ ಗಮನಹರಿಸಬೇಕು. ಆಗ ಮಾತ್ರ ಪೂಜೆಯ ಸಂಪೂರ್ಣ ಫಲವು ನಿಮಗೆ ಸಿಗುತ್ತದೆ. ಅಲ್ಲದೆ, ತುಳಸಿ ಮದುವೆ ಮತ್ತು ಪೂಜೆಯ ನಂತರ ವಿಶೇಷ ಆರತಿ ಮತ್ತು ಮಂತ್ರಗಳನ್ನು ಪಠಿಸಬೇಕು. ಅಂದಾಗಲೇ ತುಳಿಸಿ ಪೂಜೆ ಸಂಪನ್ನವಾಗುವುದು ಎನ್ನಲಾಗಿದೆ. ತುಳಸಿ ಪೂಜೆಯ ಪದಾರ್ಥಗಳು ಮತ್ತು ಆರತಿ-ಮಂತ್ರಗಳ ಬಗ್ಗೆ ತಿಳಿಯಿರಿ.


ಇದನ್ನೂ ಓದಿ: Chanakya Niti : ಈ ಗುಣಗಳನ್ನು ಹೊಂದಿರುವ ಪುರುಷರು, ಮಹಿಳೆಯರನ್ನು ತುಂಬಾ ಲವ್ ಮಾಡ್ತಾರೆ!


ತುಳಸಿ ವಿವಾಹಕ್ಕೆ ಬೇಕಾಗುವ ಪದಾರ್ಥಗಳು


ತುಳಸಿ ವಿವಾಹದ ವೇಳೆ ಪೂಜೆಯಲ್ಲಿ ಕೆಲವು ವಿಷಯಗಳ ಬಗ್ಗೆ ಗಮನಹರಿಸುವುದರಿಂದ ತಾಯಿ ಲಕ್ಷ್ಮಿದೇವಿಯು ಪ್ರಸನ್ನಳಾಗುತ್ತಾಳೆ ಮತ್ತು ಭಕ್ತರಿಗೆ ಆಶೀರ್ವಾದ ನೀಡುತ್ತಾಳಂತೆ. ಹಣ್ಣುಗಳು, ಹೂವುಗಳು, ಧೂಪದ್ರವ್ಯಗಳು, ದೀಪಗಳು, ಎಡೆ ನೈವೇದ್ಯ, ಅರಿಶಿನ, ಕುಂಕುಮ, ಎಳ್ಳು, ಅರಿಶಿನ ಗಂಟು, ಬೆಂಡು-ಬತ್ತಾಸ್(ಗೋಳಾಕಾರದ ಗರಿಗರಿಯಾದ ಸಕ್ಕರೆ ಕ್ಯಾಂಡಿ), ದೀಪ, ತುಳಸಿ ಮತ್ತು ವಿಷ್ಣು ದೇವರ ಚಿತ್ರ, ಶಾಲಿಗ್ರಾಮ್, ಗಣೇಶನ ಪ್ರತಿಮೆ, ಸುಂದರ ಕರವಸ್ತ್ರ, ಮೇಕಪ್ ವಸ್ತುಗಳು, ಕರ್ಪೂರ, ತುಪ್ಪವನ್ನು ಒಳಗೊಂಡಿರಬೇಕು. ಮಂಟಪ ಮಾಡಲು ನೆಲ್ಲಿಕಾಯಿ, ಹೆಸರುಬೇಳೆ, ಎಳನೀರು, ಹವನ ಸಾಮಗ್ರಿ, ಕಬ್ಬು, ಕೆಂಪು ಚುನರಿ, ವಧು-ವರರಿಗೆ ನೀಡಬೇಕಾದ ಅಗತ್ಯ ವಸ್ತುಗಳು ತುಳಿಸಿ ಪೂಜಾ ಸಮಯದಲ್ಲಿರಬೇಕು.   


ತಾಯಿ ತುಳಸಿ ದೇವಿಗೆ ಪೂಜೆ ಸಲ್ಲಿಸುವಾಗ ಈ ಮಂತ್ರವನ್ನು ಪಠಿಸುವ ಮೂಲಕ ಆರಾಧಿಸಿರಿ. ಇದರಿಂದ ನಿಮಗೆ ತುಳಿಸಿದೇವಿಯ ಅನುಗ್ರಹ ದೊರೆತು ಒಳಿತಾಗಲಿದೆ.


‘‘ತುಳಸಿ ಶ್ರೀಮಹಾಲಕ್ಷ್ಮಿ ವಿದ್ಯಾವಿದ್ಯಾ ಯಶಸ್ವಿನೀ|


ಧರ್ಮಾಯ ಧರ್ಮಾನನಾ ದೇವಿ ದೇವಿದೇವಮನಃ ಪ್ರಿಯಾ||


ಲಭತೇ ಸೂತರಾಂ ಭಕ್ತಿಮನ್ತೇ ವಿಷ್ಣುಪದಂ ಲಭೇತ್|


ತುಳಸಿ ಭೂರ್ಮಹಾಲಕ್ಷ್ಮಿಃ ಪದ್ಮಿನಿ ಶ್ರೀಹರಪ್ರಿಯಾ||’’


ಅದೇ ರೀತಿ ತುಳಸಿ ದೇವಿಗೆ ನೀರನ್ನು ಅರ್ಪಿಸುವಾಗ ಈ ವಿಶೇಷ ಮಂತ್ರವನ್ನು ಪಠಿಸಿರಿ.


‘‘ಮಹಾಪ್ರಸಾದ ಜನನಿ, ಸರ್ವ ಸೌಭಾಗ್ಯವರ್ಧಿನಿ


ಆಧಿ ವ್ಯಾಧಿ ಹರ ನಿತ್ಯಂ, ತುಳಸಿ ತ್ವಂ ನಮೋಸ್ತುತೇ’’


ಈ ಮಂತ್ರವನ್ನು ಪಠಿಸಿದರೆ ನಿಮ್ಮ ಕಷ್ಟಗಳು ಶೀಘ್ರವೇ ನಿವಾರಣೆಯಾಗುತ್ತವೆ. ತುಳಸಿದೇವಿ ಸದಾ ನಿಮ್ಮ ಮೇಲೆ ಅನುಗ್ರಹ ನೀಡಲಿದ್ದಾಳೆ.


ಇದನ್ನೂ ಓದಿ: Lord Shiva: ಭಗವಾನ್ ಶಂಕರನ ಈ ಅದ್ಭುತ ಮಂತ್ರ ಪಠಿಸಿದ್ರೆ ಎಲ್ಲಾ ಸಮಸ್ಯೆಗಳಿಗೂ ಮುಕ್ತಿ ಸಿಗಲಿದೆ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.