Dhanatrayodashi 2022: ಧನತ್ರಯೋದಶಿಯ ದಿನ ಖರೀದಿಗಾಗಿ ನಿರ್ಮಾಣಗೊಳ್ಳುತ್ತಿದೆ ಈ ಅದ್ಭುತ ಯೋಗಗಳು
Dhanatrayodashi 2022 Date And Time: ಸ್ಕಂದ ಪುರಾಣದ ಪ್ರಕಾರ, ಕಾರ್ತಿಕ ಕೃಷ್ಣ ಪಕ್ಷ ತ್ರಯೋದಶಿಯ ಪ್ರದೋಷ ಕಾಲದಲ್ಲಿ, ಯಮರಾಜನಿಗೆ ದೀಪಗಳನ್ನು ಮತ್ತು ನೈವೇದ್ಯವನ್ನು ಅರ್ಪಿಸುವುದರಿಂದ ಅಕಾಲ ಮೃತ್ಯು ಅಕಾಲ ಮರಣ ಭಯದಿಂದ ಮುಕ್ತಿ ಸಿಗುತ್ತದೆ.
Dhanatrayodashi 2022: ಈ ಬಾರಿಯ ಧನತ್ರಯೋದಶಿ ಹಬ್ಬವನ್ನು ಹಸ್ತಾ ನಕ್ಷತ್ರದಲ್ಲಿ ಆಚರಿಸಲಾಗುತ್ತಿದೆ. ಇದರ ಜೊತೆಗೆ ಈ ಈ ಸಲ ಧನತ್ರಯೋದಶಿಯ ದಿನ ಸರ್ವಾರ್ಥ ಸಿದ್ಧಿ ಮತ್ತು ಅಮೃತ ಸಿದ್ಧ ಯೋಗಗಳು ನಿರ್ಮಾಣಗೊಳ್ಳುತ್ತಿವೆ. ಇವುಗಳನ್ನು ಅತ್ಯಂತ ಶುಭ ಯೋಗಗಳೆಂದು ಪರಿಗಣಿಸಲಾಗುತ್ತದೆ. ಈ ವರ್ಷ ಕಾರ್ತಿಕ ಕೃಷ್ಣ ತ್ರಯೋದಶಿ ಅಕ್ಟೋಬರ್ 22 ಮತ್ತು 23 ರಂದು ಪ್ರದೋಷ ಕಾಲವು ಎರಡೂ ದಿನಗಳಲ್ಲಿ ಸಂಜೆ 5:45 ರಿಂದ ರಾತ್ರಿ 8:15 ರವರೆಗೆ ಇರಲಿದೆ.
ತ್ರಯೋದಶಿಯ ಪ್ರದೋಷ-ವ್ಯಾಪಿನಿ ಎರಡೂ ದಿನಗಳದ್ದಾಗಿದ್ದರೆ, ಎರಡನೇ ದಿನ ಈ ಉಪವಾಸ ಮಾಡಬೇಕು ಎನ್ನುತ್ತಾರೆ ಜೋತಿಷ್ಯ ಪಂಡಿತರು. ಈ ನಂಬಿಕೆಯ ಪ್ರಕಾರ, ಧನತ್ರಯೋದಶಿಯ ಹಬ್ಬವನ್ನು ಅಕ್ಟೋಬರ್ 23 ರಂದು ಆಚರಿಸಬೇಕು. ಐದು ದಿನಗಳ ದೀಪಾವಳಿಯ ಮೊದಲ ದಿನವು ಧನ ತ್ರಯೋದಶಿಯೊಂದಿಗೆ ಪ್ರಾರಂಭವಾಗುತ್ತದೆ. ಈ ವರ್ಷ, ಧನತ್ರಯೋದಶಿಯ ಹಬ್ಬದಂದು, ಕನ್ಯಾರಾಶಿಯಲ್ಲಿ ಚಂದ್ರನ ಸಂಚಾರ ಮಂಗಳಕರವಾಗಿರುತ್ತದೆ. ಈ ಸಂಕ್ರಮಣದ ಅವಧಿಯಲ್ಲಿ, ಶುಕ್ರ-ಬುಧ ಗ್ರಹಗಳ ಕಾರಣ ರಾಜಯೋಗವು ಸಹ ರಚನೆಯಾಗುತ್ತಿದೆ, ಇದರಿಂದ ನೀವು ಧನತ್ರಯೋದಶಿಯ ದಿನ ಕುಬೇರನನ್ನು ಪ್ರಸನ್ನಗೊಳಿಸಿ, ವ್ಯಾಪಾರ ಚಟುವಟಿಕೆಗಳ ಶುಭಾರಂಭ ಮಾಡಲು ಕೂಡ ಅತ್ಯುತ್ತಮವಾಗಿರುತ್ತದೆ. ಪೌರಾಣಿಕ ನಂಬಿಕೆಯ ಪ್ರಕಾರ, ಆಯುರ್ವೇದದ ಪಿತಾಮಹ ಧನ್ವಂತರಿ ದೇವ ಈ ದಿನ ಜನಿಸಿದನು ಎನ್ನಲಾಗುತ್ತದೆ.
ಧನ್ವಂತರಿ ಪೂಜೆ ಮುಹೂರ್ತ
ಪೂಜೆಗೆ ಮುಹೂರ್ತ ಬೆಳಗ್ಗೆ 7:40 ರಿಂದ 12:04 ರವರೆಗೆ. ಪಾತ್ರೆಗಳು ಮತ್ತು ಆಭರಣಗಳನ್ನು ಖರೀದಿಸಲು ಶುಭ ಮುಹೂರ್ತ ಮಧ್ಯಾಹ್ನ 1:28 ರಿಂದ 2:53 ರವರೆಗೆ ಮತ್ತು ಸಂಜೆ 5:47 ರಿಂದ ರಾತ್ರಿ 10:28 ರವರೆಗೆ. ಯಮ ದೀಪ ದಾನ ಮುಹೂರ್ತ ಕಾಲ (ಪ್ರದೋಷ ಕಾಲ) ಬೆಳಗ್ಗೆ 5:44 ರಿಂದ 7:14 ರವರೆಗೆ ಇರುತ್ತದೆ.
ಇದನ್ನೂ ಓದಿ-Surya Grahan 2022: ಒಂದೇ ಮಾಸದಲ್ಲಿ 2 ಗ್ರಹಣ, ಮಹಾಭಾರತ ಯುದ್ಧದಂತಹ ಸ್ಥಿತಿ ನಿರ್ಮಾಣ...ಎಚ್ಚರ!
ಧನ ತ್ರಯೋದಶಿಯಂದು ದೀಪವನ್ನು ದಾನ ಮಾಡಿ
ಸ್ಕಂದ ಪುರಾಣದ ಪ್ರಕಾರ, ಕಾರ್ತಿಕ ಕೃಷ್ಣ ಪಕ್ಷ ತ್ರಯೋದಶಿಯ ಪ್ರದೋಷ ಕಾಲದಲ್ಲಿ, ಯಮರಾಜನಿಗೆ ದೀಪ ಮತ್ತು ನೈವೇದ್ಯವನ್ನು ಅರ್ಪಿಸಿದರೆ, ಅಪಮೃತ್ಯು ಅಥವಾ ಅಕಾಲಿಕ ಮರಣ ಭಯದಿಂದ ಮುಕ್ತಿ ಸಿಗುತ್ತದೆ. ಸಂಜೆ 5:44 ರಿಂದ 7:14 ರವರೆಗೆ ಪ್ರದೋಷ ಕಾಲ ಮುಹೂರ್ತದಲ್ಲಿ ಮಾತ್ರ ಯಮದೀಪ ದಾನ ಮಾಡಬೇಕು ಎನ್ನುತ್ತಾರೆ ಜೋತಿಷ್ಯ ಪಂಡಿತರು. ಯಮದೀಪ ದಾನಕ್ಕಾಗಿ, ಒಂದು ದೊಡ್ಡ ಮಣ್ಣಿನ ದೀಪವನ್ನು ತೆಗೆದುಕೊಂಡು ಅದನ್ನು ಶುದ್ಧ ನೀರಿನಿಂದ ತೊಳೆದುಕೊಳ್ಳಿ, ಎರಡು ಹತ್ತಿ ಬತ್ತಿಗಳನ್ನು (ನಾಲ್ಕು ಮುಖದ ದೀಪ) ಮಾಡಿದ ನಂತರ ಅದರಲ್ಲಿ ಎಳ್ಳೆಣ್ಣೆ ತುಂಬಿಸಿ ಅದರಲ್ಲಿ ಸ್ವಲ್ಪ ಕಪ್ಪು ಎಳ್ಳನ್ನು ಹಾಕಿ. ಪ್ರದೋಷ ಕಾಲದಲ್ಲಿ ತಯಾರಿಸಿದ ದೀಪವನ್ನು ಕುಂಕುಮ, ಅಕ್ಷತೆ ಮತ್ತು ಹೂವುಗಳಿಂದ ಪೂಜಿಸಿ, ನಂತರ ಮನೆಯ ಮುಖ್ಯ ಬಾಗಿಲಲ್ಲಿ ಗೋಧಿ ರಾಶಿಯನ್ನು ಮಾಡಿ ಮತ್ತು ಅದರ ಮೇಲೆ ದೀಪವನ್ನು ಇರಿಸಿ ಪ್ರಾರ್ಥನೆ ಸಲ್ಲಿಸಿ.
ಇದನ್ನೂ ಓದಿ-Surya Grahan 2022: ದೀಪಾವಳಿ ಮರುದಿನ ಸಂಭವಿಸಲಿದೆ ಸೂರ್ಯಗ್ರಹಣ: ಅಂದು ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ!
(ಹಕ್ಕುತ್ಯಾಗ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ