ನವದೆಹಲಿ : ನೆಲ್ಲಿಕಾಯಿ ಆರೋಗ್ಯಕ್ಕೆ (Benefits of amla) ತುಂಬಾ ಪ್ರಯೋಜನಕಾರಿ. ವಿಟಮಿನ್ ಸಿ, ಟ್ಯಾನಿನ್, ಫಾಸ್ಪರಸ್, ಕಬ್ಬಿಣ ಮತ್ತು ಕ್ಯಾಲ್ಸಿಯಂ ನೆಲ್ಲಿಕಾಯಿಯಲ್ಲಿ ಕಂಡುಬರುತ್ತವೆ, ಇದು ಆರೋಗ್ಯಕ್ಕೆ ಹಾಗೂ ಕೂದಲಿಗೆ ತುಂಬಾ ಪ್ರಯೋಜನಕಾರಿ (amla for hair). ಆಯುರ್ವೇದದಲ್ಲಿ ನೆಲ್ಲಿಕಾಯಿ ಅಥವಾ ಆಮ್ಲಾದ ಹಲವು ಪ್ರಯೋಜನಗಳನ್ನು ಹೇಳಲಾಗಿದೆ. ಆಮ್ಲಾ ಪೌಡರ್, ಆಮ್ಲಾ ಕ್ಯಾಂಡಿ, ಆಮ್ಲಾ ಜಾಮ್ ಮತ್ತು ಉಪ್ಪಿನಕಾಯಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ,  ಇಂದು ನಾವು ನಿಮಗೆ ನೆಲ್ಲಿಕಾಯಿ ರಸ ಬಗ್ಗೆ ಹೇಳಲಿದ್ದೇವೆ. ನೆಲ್ಲಿಕಾಯಿಯಂತೆ ಇದರ ರಸ ಕೂಡಾ ತುಂಬಾ ಪ್ರಯೋಜನಕಾರಿ (benefits of amla juice). ಆಮ್ಲಾ ರಸ ಕೂದಲಿಗೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. 


COMMERCIAL BREAK
SCROLL TO CONTINUE READING

ನೆಲ್ಲಿಕಾಯಿಯಿಂದ ಕೂದಲಿಗೆ ಆಗುವ ಪ್ರಯೋಜನಗಳು :
ತಲೆ ಕೂದಲು (hair care) ಬೇಗನೆ ಬೆಳ್ಳಗಾಗುತ್ತಿದ್ದರೆ ಕೂದಲಿಗೆ ನೆಲ್ಲಿಕಾಯಿ ರಸವನ್ನು ಬಳಸಬೇಕು. ಸ್ನಾನಕ್ಕೆ ಒಂದು ಗಂಟೆ ಮೊದಲು ನೆಲ್ಲಿಕಾಯಿ ರಸವನ್ನು (amla juice) ಕೂದಲಿಗೆ ಹಚ್ಚಬೇಕು. ನಂತರ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ. 


ಇದನ್ನೂ ಓದಿ : ಈ ತರಕಾರಿಗಳನ್ನು ಹಸಿ ಅಥವಾ ಅರ್ಧ ಬೇಯಿಸಿ ತಿನ್ನುವುದು ವಿಷದಷ್ಟೇ ಅಪಾಯ


ಕೂದಲಿಗೆ ಎಣ್ಣೆಯನ್ನು (oil on hair) ಹಚ್ಚಿದಂತೆ, ಒಂದು ಬಟ್ಟಲಿನಲ್ಲಿ ನೆಲ್ಲಿಕಾಯಿಯನ್ನು ರಸವನ್ನು ತೆಗೆದಿಟ್ಟುಕೊಳ್ಳಿ. ನಂತರ ಹತ್ತಿಯ ಸಹಾಯದಿಂದ ನೆಲ್ಲಿಕಾಯಿಯ ರಸವನ್ನು (benefits of amla juice). ಕೂದಲಿನ ಬುಡಕ್ಕೆ ಹಚ್ಚಿ. ಪೂರ್ತಿ ಕೂದಲಿಗೆ ನೆಲಿಕಾಯಿ ರಸವನ್ನು ಹಚ್ಚಿದ ನಂತರ ಅರ್ಧ ಗಂಟೆ ಬಿಟ್ಟು ಕೂದಲನ್ನು ಶಾಂಪೂವಿನಿಂದ ತೊಳೆಯಿರಿ. 


ನೀವು ಕೂದಲಿಗೆ ಗೋರಂಟಿ (mehandi) ಹಚ್ಚಿದರೆ, ಅದಕ್ಕೂ ನೆಲ್ಲಿಕಾಯಿ ರಸವನ್ನು ಸೇರಿಸಬಹುದು. ಮೆಹಂದಿಗೆ ನೆಲ್ಲಿಕಾಯಿ ರಸವನ್ನು ಸೇರಿಸಿ, ರಾತ್ರಿಯಿಡೀ ಹಾಗೆ ಬಿಡಿ. ಬೆಳಗಾಗುವಷ್ಟರಲ್ಲಿ ಮೆಹಂದಿ ಬಣ್ಣ ಕಪ್ಪಗಾಗುತ್ತದೆ (hair care tips) . ಇದನ್ನು ಕೂದಲಿಗೆ ಹಚ್ಚಿದರೆ ತಲೆ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ. ಯಾವುದೇ ರಾಸಾಯ್ನಿಕ್ ಕಲರ್ ಬಳಸುವ ಅಗತ್ಯವಿರುವುದಿಲ್ಲ.  


ಇದನ್ನೂ ಓದಿ ಕಿಡ್ನಿ ಆರೋಗ್ಯವಾಗಿರಬೇಕಾದರೆ ಸೇವಿಸಿ ಈ ಐದು ಆಹಾರ, ಸಿಗಲಿದೆ ಪ್ರಯೋಜನ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ