rice for hair growth: ಹುಡುಗಿಯೂ ತನ್ನ ಕೂದಲು ಸುಂದರ, ದಪ್ಪ ಮತ್ತು ಉದ್ದವಾಗಿರಬೇಕು ಎಂದು ಬಯಸುತ್ತಾರೆ. ಇದಕ್ಕಾಗಿ ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ. ವಿಶೇಷವಾಗಿ ಕೂದಲಿನ ಬೆಳವಣಿಗೆಗೆ ವಿವಿಧ ತೈಲಗಳು ಮತ್ತು ಶ್ಯಾಂಪೂಗಳನ್ನು ಬಳಸಲಾಗುತ್ತದೆ. ಆದರೆ ರಾಸಾಯನಿಕ ಉತ್ಪನ್ನಗಳ ಅತಿಯಾದ ಬಳಕೆಯು ಕೂದಲಿಗೆ ಹಾನಿ ಮಾಡುತ್ತದೆ. ಕೂದಲು ಕೂಡ ಡ್ರೈ ಆಗುತ್ತದೆ. ಹಾಗಾಗಿ ಕೂದಲಿನ ಆರೈಕೆಗೆ ನೈಸರ್ಗಿಕ ವಿಧಾನಗಳನ್ನು ಅನುಸರಿಸುವುದು ಉತ್ತಮ ಎನ್ನುತ್ತಾರೆ ತಜ್ಞರು.


COMMERCIAL BREAK
SCROLL TO CONTINUE READING

ತಜ್ಞರ ಪ್ರಕಾರ, ಬೇಯಿಸಿದ ಅಕ್ಕಿ ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇವು ನಮ್ಮ ಕೂದಲನ್ನು ಆರೋಗ್ಯಕರವಾಗಿ ಇಡುತ್ತದೆ. ಕೂದಲಿನೆ ಪೋಷಣೆಗೆ ಅನ್ನ ತುಂಬಾ ಪ್ರಯೋಜನಕಾರಿಯಾಗಿದೆ. ಅನ್ನವನ್ನು ಬಳಸುವುದರಿಂದ ನಮ್ಮ ಕೂದಲನ್ನು ಉದ್ದವಾಗಿ, ದಪ್ಪವಾಗಿ ಮತ್ತು ಬಲವಾಗಿ ಬೆಳೆಯಬಹುದು. ಹಾಗಾದರೆ ನಮ್ಮ ಕೂದಲಿಗೆ ಅನ್ನವನ್ನು ಹೇಗೆ ಬಳಸಬೇಕು ಎಂದು ತಿಳಿದುಕೊಳ್ಳೋಣ.


ಇದನ್ನೂ ಓದಿ:ರಾತ್ರಿ ಮಲಗುವ ಮುನ್ನ ಇದನ್ನು ಕುಡಿಯಿರಿ... ಒಂದೇ ವಾರದಲ್ಲಿ ಅಧಿಕ ತೂಕ ಕಡಿಮೆಯಾಗಿ ಹೊಟ್ಟೆ ಬೊಜ್ಜು ಕರಗುವುದು!


ಒಂದು ಕಪ್ ಬೇಯಿಸಿದ ಅನ್ನ, ಮೆಂತ್ಯ ಬೀಜಗಳು, ಬೀಟ್ ರೂಟ್ ರಸ, ತಾಜಾ ಅಲೋವೆರಾ ಜೆಲ್ 1 ದೊಡ್ಡ ಬೌಲ್ ಈ ಇಷ್ಟು ಪದಾರ್ಥಗಳನ್ನು ತೆಗೆದುಕೊಳ್ಳಿ. ಮೆಂತ್ಯ ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಈ ನೆನೆಸಿದ ಮೆಂತ್ಯವನ್ನು ಬೇಯಿಸಿದ ಅನ್ನದೊಂದಿಗೆ ಬೆರೆಸಿ ನಯವಾದ ಪೇಸ್ಟ್ ಮಾಡಿ. ಇದಕ್ಕೆ ಬೀಟ್ ರೂಟ್ ಜ್ಯೂಸ್ ಮತ್ತು ಅಲೋವೆರಾ ಜೆಲ್ ಹಾಕಿ ಮಿಶ್ರಣ ಮಾಡಿ.


ಕೂದಲಿಗೆ ಬುಡದಿಂದ ತುದಿಯವರೆಗೆ ಈ ಹೇರ್‌ ಮಾಸ್ಕ್‌ನ್ನು ಹಚ್ಚಿಕೊಳ್ಳಿ. ಒಂದು ಗಂಟೆ ಒಣಗಲು ಬಿಟ್ಟು ಸೌಮ್ಯವಾದ ಶಾಂಪೂ ಮತ್ತು ಬೆಚ್ಚಗೆನೆಯ ನೀರಿನಿಂದ ತಲೆಸ್ನಾನ ಮಾಡಿ. ಇದರ ನಿಯಮಿತ ಬಳಕೆಯು ನಿಮ್ಮ ಕೂದಲಿಗೆ ಉತ್ತಮ ಪೋಷಣೆಯನ್ನು ನೀಡುತ್ತದೆ. ಕೂದಲು ಉದುರುವಿಕೆ ನಿಂತು ಉದ್ದವಾಗಿ ಬೆಳೆಯುತ್ತದೆ.


ಗಮನಿಸಿ - ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.


ಇದನ್ನೂ ಓದಿ: ಈರುಳ್ಳಿ ರಸವನ್ನು ಇದರಲ್ಲಿ ಬೆರೆಸಿ ಹಚ್ಚಿ.. ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುವುದರ ಜೊತೆ ದಪ್ಪವಾಗಿ ಮಾರುದ್ದ ಬೆಳೆಯುವುದು!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.