ಗ್ಯಾಸ್‌ನಲ್ಲಿಟ್ಟ ಹಾಲು ಉಕ್ಕಿ ಚೆಲ್ಲುತ್ತಿದ್ಯಾ? ಹಾಗಾದ್ರೆ ಹೀಗೆ ಮಾಡಿ... ಮತ್ತೆ ಯಾವತ್ತೂ ಈ ಸಮಸ್ಯೆಯೇ ಇರಲ್ಲ
Tips To Stop Milk From Boiling Over: ಹಾಲು ಉಕ್ಕದಂತೆ ಮಾಡಲು ಸುಲಭ ಮಾರ್ಗವೆಂದರೆ ಹಾಲು ಕುದಿಸುವ ಪಾತ್ರೆಗೆ ಬೆಣ್ಣೆ ಹಚ್ಚಬೇಕು. ಬೆಣ್ಣೆಯನ್ನು ತೆಗೆದುಕೊಂಡು ಅದನ್ನು ಪಾತ್ರೆಯ ಬದಿಗಳಲ್ಲಿ ಮತ್ತು ಸ್ವಲ್ಪ ಒಳಭಾಗದಲ್ಲಿ ಉಜ್ಜಿಕೊಳ್ಳಿ.
Tips to prevent milk from spilling on gas stove: ಹಾಲು ಕುದಿಯುತ್ತಿರುವಾಗ ಎಷ್ಟೇ ಸೂಕ್ಷ್ಮವಾಗಿ ಗಮನಿಸಿದರೂ ಒಂದು ಸೆಕೆಂಡಿನ ತಪ್ಪಿಗೆ ಅದು ಒಲೆಯ ಮೇಲೆಲ್ಲ ಚೆಲ್ಲಿ ಗಲೀಜಾಗಲು ಕಾರಣವಾಗುತ್ತದೆ. ಇದನ್ನು ಸ್ವಚ್ಛ ಮಾಡೋದೇ ತಲೆನೋವು...ಹೀಗಿರುವಾಗ ಒಂದಷ್ಟು ಸುಲಭ ಟಿಪ್ಸ್ ಮೂಲಕ ಗ್ಯಾಸ್‌ನಲ್ಲಿಟ್ಟ ಹಾಲು ಉಕ್ಕಿ ಚೆಲ್ಲದಂತೆ ನೋಡಿಕೊಳ್ಳಬಹುದು. ಅವು ಯಾವುವು? ಎಂಬುದನ್ನು ಮುಂದೆ ತಿಳಿಯೋಣ,
ಹಾಲು ಉಕ್ಕದಂತೆ ಮಾಡಲು ಸುಲಭ ಮಾರ್ಗವೆಂದರೆ ಹಾಲು ಕುದಿಸುವ ಪಾತ್ರೆಗೆ ಬೆಣ್ಣೆ ಹಚ್ಚಬೇಕು. ಬೆಣ್ಣೆಯನ್ನು ತೆಗೆದುಕೊಂಡು ಅದನ್ನು ಪಾತ್ರೆಯ ಬದಿಗಳಲ್ಲಿ ಮತ್ತು ಸ್ವಲ್ಪ ಒಳಭಾಗದಲ್ಲಿ ಉಜ್ಜಿಕೊಳ್ಳಿ. ಈಗ ಪಾತ್ರೆಯಲ್ಲಿ ಹಾಲನ್ನು ಸುರಿದು ಉರಿಯಲ್ಲಿ ಇರಿಸಿ. ಈ ಟಿಪ್ಸ್ ಹಾಲು ಅತಿಯಾಗಿ ಕುದಿಯುವುದನ್ನು ಅಥವಾ ಸುಡುವುದನ್ನು ತಡೆಯುತ್ತದೆ.
ಇತ್ತೀಚಿನ ದಿನಗಳಲ್ಲಿ, ಸ್ಪಿಲ್ ಸ್ಟಾಪರ್ (Spill stopper)ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇದು ಹಾಲು ಹೆಚ್ವು ಕುದಿಯದಂತೆ ಮಾಡುತ್ತದೆ. ಇದು ಸಿಲಿಕೋನ್-ಆಧಾರಿತ ರಬ್ಬರ್ ಡಿಸ್ಕ್‌ಳಾಗಿವೆ. ಇದನ್ನು ಕುದಿಯುವ ಪಾತ್ರೆಯನ್ನು ಮುಚ್ಚಲು ಬಳಸಬಹುದು.
ಕೆಲವೊಮ್ಮೆ, ಒಲೆಯನ್ನು ಸಿಮ್‌ನಲ್ಲಿಟ್ಟರೂ ಸಹ ಹಾಲು ಉಕ್ಕಿ ಚೆಲ್ಲುತ್ತದೆ. ಹೀಗಿರುವಾಗ ಹಾಲಿನ ನೊರೆಯ ಮೇಲೆ ಸ್ವಲ್ಪ ನೀರನ್ನು ಸಿಂಪಡಿಸಿ, ಹೀಗೆ ಮಾಡುವುದರಿಂದ ಕಡಿಮೆ ಉರಿಯಲ್ಲಿ ಸ್ವಲ್ಪ ಸಮಯ ಕುದಿಸಲು ಸಾಧ್ಯವಾಗುತ್ತದೆ.
ಇನ್ನು ಹಾಲು ಕುದಿಯುವ ಮಡಕೆಯ ಮೇಲೆ ಮರದ ಸೌಟನ್ನು ಇಡುವುದು ಮತ್ತೊಂದು ಸುಲಭವಾದ ಟ್ರಿಕ್ ಆಗಿದೆ. ಈ ಮರದ ಸೌಟ ಸುರಕ್ಷತಾ ಕವಾಟದಂತೆ ಕೆಲಸ ಮಾಡುತ್ತದೆ. ಹಾಲು ಕುದಿಯುತ್ತಿದ್ದರೂ, ಈ ಕುಂಜವು ಅದನ್ನು ಸುರಿಯದಂತೆ ತಡೆಯುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ