ಈ ಟ್ರಿಕ್ ಬಳಸಿದರೆ ಈರುಳ್ಳಿ ಕತ್ತರಿಸುವಾಗ ಕಣ್ಣಿಂದ ನೀರು ಬರುವುದಿಲ್ಲ..! ನೀವೊಮ್ಮೆ ಟ್ರೈ ಮಾಡಿ
ವರದಿ ಪ್ರಕಾರ, ಟ್ರಿನಾ ಮಿಚೆಲ್ ಎಂಬ ಮಹಿಳೆ ಈ ವಿಚಾರವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಮಹಿಳೆಯ ಪ್ರಕಾರ, ಈರುಳ್ಳಿ ಕತ್ತರಿಸಿದಾಗ, ಅದರಿಂದ ಹೊರ ಬರುವ ರಾಸಾಯನಿಕದ ಕಾರಣದಿಂದಾಗಿ, ಕಣ್ಣಲ್ಲಿ ನೀರು ಬರುತ್ತದೆ
ಬೆಂಗಳೂರು : ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರುವುದು ಸಹಜ. ಈ ರೀತಿ ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರುವುದಕ್ಕೆ ಕಾರಣವಿದೆ. ಅದೇನೆಂದರೆ ಈರುಳ್ಳಿಯಿಂದ ಬಿಡುಗಡೆಯಾಗುವ ರಾಸಾಯನಿಕ. ಈ ರಾಸಾಯನಿಕ ಕಣ್ಣುಗಳ ಹೋದರೆ ಕಣ್ಣಿನಲ್ಲಿ ನೀರು ಬರುತ್ತದೆ. ಇದೀಗ ಮಹಿಳೆಯೊಬ್ಬರು ಈ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ಈ ಟ್ರಿಕ್ ಬಳಸಿದರೆ ಕಣ್ಣಿನಲ್ಲಿ ನೀರು ಸುರಿಸದೆ ಈರುಳ್ಳಿಯನ್ನು ಕತ್ತರಿಸಬಹುದು.
ತನಗೆ ತಿಳಿದಿರುವ ಐಡಿಯಾ ಹಂಚಿಕೊಂಡ ಮಹಿಳೆ :
ವರದಿ ಪ್ರಕಾರ, ಟ್ರಿನಾ ಮಿಚೆಲ್ ಎಂಬ ಮಹಿಳೆ ಈ ವಿಚಾರವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಮಹಿಳೆಯ ಪ್ರಕಾರ, ಈರುಳ್ಳಿ ಕತ್ತರಿಸಿದಾಗ, ಅದರಿಂದ ಹೊರ ಬರುವ ರಾಸಾಯನಿಕದ ಕಾರಣದಿಂದಾಗಿ, ಕಣ್ಣಲ್ಲಿ ನೀರು ಬರುತ್ತದೆ. ಯಾಕೆಂದರೆ ಈರುಳ್ಳಿಯಿಂದ ಬರುವ ರಾಸಾಯನಿಕ ಕಣ್ಣಿನಲ್ಲಿರುವ ನೀರಿನ ಸಂಪರ್ಕಕ್ಕೆ ಬಂದಾಗ, ಕಣ್ಣು ಉರಿಯಲು ಆರಂಭವಾಗುತ್ತದೆ. ಹೀಗಾದಾಗ ಕಣ್ಣಿನಿಂದ ಒಂದೇ ಸಮನೆ ನೀರು ಸುರಿಯಲು ಆರಂಭವಾಗುತ್ತದೆ.
ಇದನ್ನೂ ಓದಿ : Black Pepper: ಅಧಿಕ ರಕ್ತದೊತ್ತಡಕ್ಕೆ ಕರಿಮೆಣಸಿನಲ್ಲಿದೆ ಪರಿಹಾರ
ಈರುಳ್ಳಿಯಿಂದ ಹೊರ ಬರುವ ರಾಸಾಯನಿಕ ಡೈವರ್ಟ್ ಮಾಡಬೇಕು :
ಟ್ರಿನಾ ಮಿಚೆಲ್ ಪ್ರಕಾರ, 'ಈರುಳ್ಳಿ ಕತ್ತರಿಸುವಾಗ ಕಣ್ಣೀರು ಹರಿಯುವುದನ್ನು ತಡೆಯಬೇಕಾದರೆ, ನಾವು ಆ ರಾಸಾಯನಿಕ ಕಣ್ಣಿನ ಸಂಪರ್ಕಕ್ಕೆ ಬರುವುದನ್ನು ತಪ್ಪಿಸಬೇಕು. ಅಂದರೆ ಈರುಳ್ಳಿ ಕತ್ತರಿಸುವ ಮೊದಲು ಒಂದು ಪೇಪರ್ ಟವಲನ್ನು ಒದ್ದೆ ಮಾಡಿಕೊಂಡು ನಿಮ್ಮ ಬಳಿ ಇಟ್ಟುಕೊಳ್ಳಿ. ಅದರ ಜೊತೆಗೆ ಒಂದು ಸಣ್ಣ ಪಾತ್ರೆಯಲ್ಲಿ ನೀರು ಕೂಡಾ ಇಟ್ಟುಕೊಳ್ಳಿ. ಹೀಗೆ ಒದ್ದೆಯಾದ ಪೇಪರ್ ಟವೆಲ್ ಮತ್ತು ನೀರನ್ನು ಪಕ್ಕದಲ್ಲಿಟ್ಟುಕೊಂಡು ಈರುಳ್ಳಿ ಕಟ್ ಮಾಡುವುದರಿಂದ ಈರುಳ್ಳಿಯಿಂದ ಬಿಡುಗಡೆಯಾಗುವ ರಾಸಾಯನಿಕ ಕಣ್ಣಿನ ಬದಲಿಗೆ ಒದ್ದೆ ಪೇಪರ್ ಟವೆಲ್ ಕಡೆಗೆ ಡೈವರ್ಟ್ ಆಗಿ ಬಿಡುತ್ತದೆ. ಆಗ ನಮ್ಮ ಕಣ್ಣು ಉರಿಯುವುದೂ ಇಲ್ಲ, ಕಣ್ಣಿನಲ್ಲಿ ನೀರು ಸುರಿಯುವುದೂ ಇಲ್ಲ.
ಟ್ರಿನಾ ಟ್ರಿಕ್ ಗೆ ಜನರ ಮೆಚ್ಚುಗೆ :
ಮಹಿಳೆಯ ಈ ಫೇಸ್ ಬುಕ್ ಪೋಸ್ಟ್ ವೈರಲ್ ಆಗಿದೆ. ಟ್ರಿನಾ ಮಿಚೆಲ್ ನೀಡಿದ ಐಡಿಯಾವನ್ನು ಬಹಳಷ್ಟು ಸಂಖ್ಯೆಯ ಮಹಿಳೆಯರು ಮೆಚ್ಚಿದ್ದಾರೆ. ಈ ಟ್ರಿಕ್ ಅನ್ನು ಬಳಸಿ ನಂತರ ಜನರು ಪ್ರತಿಕ್ರಿಯೆ ನೀಡಿದ್ದಾರೆ. ಈ ಐಡಿಯಾ ನಿಜಕ್ಕೂ ಅದ್ಭುತವಾಗಿಗೆ ಎಂಬ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಗ್ಗೆ ಕೆಲವರು ಇನು ಸಂದೇಹವಿದೆ ಎಂದು ಕೂಡಾ ಹೇಳಿದ್ದಾರೆ. ಏನೇ ಆದರೂ ಈ ಟ್ರಿಕ್ ಬಳಸಿ ನೋಡುವುದರಲ್ಲಿ ತಪ್ಪೇನಿಲ್ಲ..
ಇದನ್ನೂ ಓದಿ : Mint Tea Benefits: ಬೇಸಿಗೆಯಲ್ಲಿ ತುಂಬಾ ಪ್ರಯೋಜನಕಾರಿ ಪುದೀನ ಚಹಾ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.