Black Pepper: ಅಧಿಕ ರಕ್ತದೊತ್ತಡಕ್ಕೆ ಕರಿಮೆಣಸಿನಲ್ಲಿದೆ ಪರಿಹಾರ

Black pepper benefits: ಅಧಿಕ ರಕ್ತದೊತ್ತಡಕ್ಕೆ ಕರಿಮೆಣಸು ತುಂಬಾ ಪ್ರಯೋಜನಕಾರಿ. ಕರಿಮೆಣಸು ಅಥವಾ ಕಾಳುಮೆಣಸನ್ನು ಈ ರೀತಿ ಸೇವಿಸುವುದರಿಂದ ಹೈ ಬಿಪಿಯನ್ನು ಕಂಟ್ರೋಲ್‌ನಲ್ಲಿಡಬಹುದು. 

Written by - Chetana Devarmani | Last Updated : May 9, 2022, 01:33 PM IST
  • ಅಧಿಕ ರಕ್ತದೊತ್ತಡಕ್ಕೆ ಕರಿಮೆಣಸಿನಲ್ಲಿದೆ ಪರಿಹಾರ
  • ಈ ರೀತಿ ಸೇವಿಸಿ ಹೈ ಬಿಪಿ ಕಂಟ್ರೋಲ್‌ನಲ್ಲಿಡಬಹುದು
  • ಹೈ ಬಿಪಿ ನಿಯಂತ್ರಣಕ್ಕೆ ಕರಿಮೆಣಸನ್ನು ಹೇಗೆ ಬಳಸುವುದು?
Black Pepper: ಅಧಿಕ ರಕ್ತದೊತ್ತಡಕ್ಕೆ ಕರಿಮೆಣಸಿನಲ್ಲಿದೆ ಪರಿಹಾರ  title=
ಕರಿಮೆಣಸು

Black pepper benefits: ಬದಲಾಗುತ್ತಿರುವ ಜೀವನಶೈಲಿಯಿಂದಾಗಿ, ಹೆಚ್ಚಿನ ಜನರು ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಹೋರಾಡುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಕರಿಮೆಣಸು ಅದನ್ನು ನಿಯಂತ್ರಿಸಲು ವಿವಿಧ ವಿಧಾನಗಳನ್ನು ಅನುಸರಿಸುವ ಜನರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ರಕ್ತದೊತ್ತಡವನ್ನು ನಿಯಂತ್ರಿಸಲು ನೀವು ಕರಿಮೆಣಸನ್ನು ಬಳಸಬಹುದು. ಇದು ಖಂಡಿತವಾಗಿಯೂ ಮನೆಮದ್ದು, ಆದರೆ ಇದರ ಪ್ರಯೋಜನಗಳೊಂದಿಗೆ, ನಿಮ್ಮ ಆರೋಗ್ಯವನ್ನು ನೀವು ಫಿಟ್ ಆಗಿ ಇರಿಸಬಹುದು. ಹಾಗಾದರೆ ಅಧಿಕ ರಕ್ತದೊತ್ತಡ ಇರುವವರು ಕರಿಮೆಣಸನ್ನು ಹೇಗೆ ಬಳಸಬಹುದು ಮತ್ತು ಇದರ ಹೊರತಾಗಿ ಅದರ ಪ್ರಯೋಜನಗಳೇನು ಎಂಬುದನ್ನು ನಾವು ತಿಳಿದುಕೊಳ್ಳೋಣ.

ಇದನ್ನೂ ಓದಿ: Vitamin D Deficiency: ಈ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ

ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಕರಿಮೆಣಸನ್ನು ಹೇಗೆ ಬಳಸುವುದು?

ರಕ್ತದೊತ್ತಡ ಹೆಚ್ಚಿದ್ದರೆ 1 ಗ್ಲಾಸ್ ನೀರಿನಲ್ಲಿ ಅರ್ಧ ಚಮಚ ಕರಿಮೆಣಸಿನ ಪುಡಿಯನ್ನು ಬೆರೆಸಿ ಕುಡಿಯಿರಿ. ಆಗ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಲಾಗುತ್ತದೆ. ಇದಲ್ಲದೇ 2 ಕರಿಮೆಣಸನ್ನು ರುಬ್ಬಿಕೊಂಡು 1 ಲೋಟ ನೀರಿನಲ್ಲಿ ಸೇರಿಸಿ ಕುಡಿಯಬಹುದು. ಕರಿಮೆಣಸಿನಲ್ಲಿ ಕಂಡುಬರುವ ಪೈಪರಿನ್ ಔಷಧಿಯಂತೆ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ: Mint Tea Benefits: ಬೇಸಿಗೆಯಲ್ಲಿ ತುಂಬಾ ಪ್ರಯೋಜನಕಾರಿ ಪುದೀನ ಚಹಾ

ಕರಿಮೆಣಸನ್ನು ಸೇವಿಸುವುದರಿಂದ ದೊರೆಯುವ ಇತರ ಪ್ರಯೋಜನಗಳು:

  • ರಕ್ತದೊತ್ತಡವನ್ನು ನಿಯಂತ್ರಿಸುವುದರ ಜೊತೆಗೆ, ಇದು ನಿಮ್ಮ ಹೃದಯಕ್ಕೆ ಸಹ ಪ್ರಯೋಜನಕಾರಿಯಾಗಿದೆ. ಇದು ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡುತ್ತದೆ.
  • ತೂಕವನ್ನು ಕಡಿಮೆ ಮಾಡಲು ಕರಿಮೆಣಸನ್ನು ಸಹ ಬಳಸಲಾಗುತ್ತದೆ. ನೀವು ಇದನ್ನು ತರಕಾರಿಗಳು ಅಥವಾ ಅನ್ನಕ್ಕೆ ಸೇರಿಸುವ ಮೂಲಕ ಬಳಸಬಹುದು.
  • ಕರಿಮೆಣಸು ಮಲಬದ್ಧತೆ ಮತ್ತು ಅಜೀರ್ಣ ಸಮಸ್ಯೆ ನಿವಾರಿಸಲು ತುಂಬಾ ಪ್ರಯೋಜನಕಾರಿಯಾಗಿದೆ. ಅಂದರೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಇರುವವರು ಇದನ್ನು ಸೇವಿಸಬೇಕು.
  • ಒತ್ತಡವನ್ನು ನಿವಾರಿಸಲು ನೀವು ಕರಿಮೆಣಸನ್ನು ಬಳಸಬಹುದು.
  • ಕರಿಮೆಣಸಿನ ಬಳಕೆಯು ಅಸ್ತಮಾ ಮತ್ತು ಪೈಲ್ಸ್‌ ಸಮಸ್ಯೆಗೂ ಸಹ ತುಂಬಾ ಪ್ರಯೋಜನಕಾರಿಯಾಗಿದೆ. ಅಂದರೆ, ಚಿಕ್ಕದಾಗಿ ಕಾಣುವ ಕರಿಮೆಣಸಿನ ಅನೇಕ ಪ್ರಯೋಜನಗಳಿವೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News