Coconut Husk: ತೆಂಗಿನ ಜುಟ್ಟಿನ ಈ ಲಾಭಗಳ ಕುರಿತು ನಿಮಗೆ ತಿಳಿದಿದೆಯೇ? ಬಿಸಾಡಬೇಡಿ... ಈ ರೀತಿ ಉಪಯೋಗಿಸಿ
Coconut Husk: ಸಾಮಾನ್ಯವಾಗಿ ತೆಂಗಿನ ಜುಟ್ಟನ್ನು ತೆಗೆದು ನಾವು ಬಿಸಾಡುತ್ತೇವೆ. ಆದರೆ ಅದನ್ನು ನಾವು ಹಲವು ಮನೆಯ ಕೆಲಸಗಳಿಗೆ ಉಪಯೋಗಿಸಬಹುದು. ಹೇಗೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ನವದೆಹಲಿ: Coconut Husk - ತೆಂಗಿನ ಕಾಯಿಯ ಬಳಕೆಯನ್ನು ನಾವು ಆಹಾರದಿಂದ ಹಿಡಿದು ಸ್ಕಿನ್ ಕೆಯರ್ ಹಲವು ಮನೆ ಕೆಲಸಗಳಿಗೆ ಮಾಡಬಹುದು. ಆದರೆ, ಸಾಮಾನ್ಯವಾಗಿ ತೆಂಗಿನ ಸಿಪ್ಪೆಯನ್ನು ಸುಲಿದು ನಾವು ಬಿಸಾಡುತ್ತೇವೆ. ತೆಂಗಿನ ಜುಟ್ಟು ಎಷ್ಟೊಂದು ಕೆಲಸಕ್ಕೆ ಬರುವ ಸಂಗತಿಯಾಗಿವೆ ಎಂಬುದನ್ನು ನಾವು ನಿಮಗೆ ಹೇಳಲಿದ್ದೇವೆ. ಇದನ್ನು ನೀವು ಹೇಗೆ ಮನೆ ಕೆಲಸಕ್ಕಾಗಿ ಬಳಸಬಹುದು (Uses Of Coconut Husk) ಎಂಬುದನ್ನು ತಿಳಿಯೋಣ.
ಗೊಬ್ಬರದ ರೀತಿ ಉಪಯೋಗಿಸಬಹುದು
ನಾಟಿ ಮಾಡುವ ಮೊದಲು ಮಣ್ಣಿನಲ್ಲಿ ಕೋಕೋ ಪಿಟ್ ಅನ್ನು ಬಳಸಲಾಗುತ್ತದೆ. ಇದನ್ನು ತೆಂಗಿನ ಸಿಪ್ಪೆಯಿಂದ ತಯಾರಿಸಲಾಗುತ್ತದೆ. ಇದರಿಂದ ಸಸ್ಯಗಳು ಪೋಷಣೆಯನ್ನು ಪಡೆಯುತ್ತವೆ ಮತ್ತು ಮಡಕೆಯಲ್ಲಿ ಕೋಕೋಪೀಟ್ ಅನ್ನು ಮಣ್ಣಿನೊಂದಿಗೆ ಬೆರೆಸುವ ಮೂಲಕ ಅವುಗಳ ಬೆಳವಣಿಗೆ ಸರಿಯಾಗಿ ಆಗುತ್ತದೆ. ಕೊಕೊ ಪೀಟ್ ಮಾಡಲು, ತೆಂಗಿನ ಸಿಪ್ಪೆಗಳನ್ನು ನೀರಿನಲ್ಲಿ ದೊಡ್ಡ ಪಾತ್ರೆಯಲ್ಲಿ ಅದ್ದಿ ಮತ್ತು 15 ದಿನಗಳವರೆಗೆ ಬಿಡಿ. 15 ದಿನಗಳ ನಂತರ ಅದನ್ನು ನೀರಿನಿಂದ ತೆಗೆಯಿರಿ ಮತ್ತು ಕತ್ತರಿ ಸಹಾಯದಿಂದ ಅದನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಈಗ ಅದನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.
ನೈಸರ್ಗಿಕ ಡಾಯ್ (Natural Die) ರೂಪದಲ್ಲಿ ಬಳಕೆ ಮಾಡಬಹುದು
ತೆಂಗಿನ ಜುಟ್ಟನ್ನು (Coconut Husk) ನೈಸರ್ಗಿಕ ಡಾಯ್ ತಯಾರಿಸಲು ಬಳಕೆ ಮಾಡಲಾಗುತ್ತದೆ. ಇದಕ್ಕಾಗಿ ಲೋಹದ ಬಾಣಲೆಯನ್ನು ತೆಗೆದುಕೊಳ್ಳಿ ಹಾಗೂ ಅದನ್ನು ಬಿಸಿ ಮಾಡಿ. ಈಗ ಅದರಲ್ಲಿ ತೆಂಗಿನ (Coconut) ಜುಟ್ಟನ್ನು ಇಡಿ ಹಾಗೂ ಅವುಗಳಲ್ಲಿನ ಒಂದು ಅಥವಾ ಎರಡು ಜುಟ್ಟನ್ನು ಬೆಂಕಿಯಿಂದ ಸುಟ್ಟುಹಾಕಿ. ಇದರಿಂದ ನಿಧಾನಕ್ಕೆ ಎಲ್ಲಾ ಜುತ್ತುಗಳು ಹೊತ್ತಿಕೊಳ್ಳಲಿವೆ. ತೆಂಗಿನ ಜುಟ್ಟನ್ನು ಸರಿಯಾಗಿ ಸುಟ್ಟುಕೊಳ್ಳಿ. ಇದರ ಪೌಡರ್ ತಯಾರಿಸಿಕೊಳ್ಳಿ. ಪೌಡರ್ ತಯಾರಿಸಿದ ಬಳಿಕ ಇದು ಚಾರ್ಕೋಲ್ ರೀತಿ ಕಪ್ಪಾಗಲಿದೆ. ಇದೀಗ ಅದರಲ್ಲಿ 3 ಚಮಚೆ ತೆಂಗಿನ ಪೌಡರ್ ನಲ್ಲಿ 2 ಚಮಚೆ ಸಾಸಿವೆ ಎಣ್ಣೆಯನ್ನು ಬೆರೆಸಿ ಹಾಗೂ ಅದನ್ನು ಡಾಯ್ ರೀತಿಯಲ್ಲಿ ಬಳಸಬಹುದು.
ಪಾತ್ರೆ ತೊಳೆಯಲು
ತೆಂಗಿನ ಜುಟ್ಟಿನ ಬಳಕೆಯನ್ನು ಅಡುಗೆ ಮನೆಯ (Kitchen)ಪಾತ್ರೆ ತೊಳೆಯಲು ಸ್ಕ್ರಬರ್ ರೀತಿ ಮಾಡಬಹುದು. ಇದರಿಂದ ಸುಟ್ಟ (Hacks) ಹಾಗೂ ಜಿಡ್ಡಿನಿಂದ ಕೂಡಿದ ಪಾತ್ರೆಗಳು ಸ್ವಚ್ಛವಾಗಲಿವೆ.
ಹಲ್ಲುಗಳ ಶುಚಿತ್ವಕ್ಕೆ ಬಳಸಬಹುದು
ಹಲ್ಲುಗಳ ಸ್ವಚ್ಚತೆಗಾಗಿಯೂ ಕೂಡ ನೀವು ಇದನ್ನು ಬಳಕೆ ಮಾಡಬಹುದು. ಇದು ಹಲ್ಲುಗಳ ಮೇಲೆ ಉಂಟಾಗಿರುವ ಹಳದಿ ಕಲೆಗಳನ್ನು ತೊಡೆದು ಹಾಕುತ್ತದೆ. ತೆಂಗಿನ ಜುಟ್ಟನ್ನು ಸುಟ್ಟ ಬಳಿಕ ಅದರ ಪೌಡರ್ ಅನ್ನು ಒಂದು ಬಾಟಲಿಯಲ್ಲಿ ಸಂಗ್ರಹಿಸಿ ಹಾಗೂ ನಿತ್ಯ ಅದನ್ನು ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸಲು ಬಳಕೆ ಮಾಡಿ. ಬಳಿಕ ಬೆರಳುಗಳ ಸಹಾಯದಿಂದ ಹಲ್ಲುಗಳ ಮೇಲೆ ಮೆಲ್ಲಗೆ ಮಸಾಜ್ ಮಾಡಿ. ಇಲ್ಲದಿದ್ದರೆ ವಸಡುಗಳಿಗೆ ಹಾನಿ ಉಂಟಾಗಲಿದೆ.
ಕೆಸುವಿನ ಗೆಡ್ಡೆ ಸುಲಿಯಲು
ಹಲವು ಬಾರಿ ಕೆಸುವಿನ ಗೆಡ್ಡೆ ಸುಲಿದಾಗ ಕೈಗಳಲ್ಲಿ ತುರಿಕೆ ಉಂಟಾಗುತ್ತದೆ. ಇದರಿಂದ ಪಾರಾಗಲು ತೆಂಗಿನ ಜುಟ್ಟಿನ ಬಳಕೆ ಮಾಡಬಹುದು. ತೆಂಗಿನ ಜುಟ್ಟಿನ ಸಹಾಯದಿಂದ ಕೆಸುವಿನ ಗೆಡ್ಡೆಯನ್ನು ಸುಲಭವಾಗಿ ಸುಲಿಯಬಹುದು.
ಪೆಟ್ಟು, ಉಳುಕು ಹಾಗೂ ಬಾವು ನಿವಾರಕ
ತೆಂಗಿನ ಸಿಪ್ಪೆಯ ಪುಡಿಯನ್ನು ಏಟು, ಉಳುಕು ಮತ್ತು ಬಾವು ನಿವಾರಿಸಲು ಕೂಡ ಬಳಸಬಹುದು. ಆದರೆ ಇದೊಂದು ದೇಸಿ ಉಪಾಯವಾಗಿದೆ. ಮೊದಲಿಗೆ, ತೆಂಗಿನಕಾಯಿಯ ಕೂದಲಿನಿಂದ ಹೊರಬರುವ ಮರದ ಪುಡಿ ಸಂಗ್ರಹಿಸಿ ಮತ್ತು ಅದರಲ್ಲಿ ಸ್ವಲ್ಪ ಅರಿಶಿನವನ್ನು ಮಿಶ್ರಣ ಮಾಡಿ. ಈಗ ಅದನ್ನು ಪೆಟ್ಟು ಬಿದ್ದ ಜಾಗಕ್ಕೆ ಹಚ್ಚಿ ಮತ್ತು ಬ್ಯಾಂಡೇಜ್ ಕಟ್ಟಿಕೊಳ್ಳಿ.
ಇದನ್ನೂ ಓದಿ-Swapna Shastra: ಅದೃಷ್ಟವಂತರ ಕನಸಿನಲ್ಲಷ್ಟೇ ಕಾಣುತ್ತದೆಯಂತೆ ಈ ಜೀವಿಗಳು..! ನೀವು ಆ ಭಾಗ್ಯಶಾಲಿಗಳೇ?
(ಸೂಚನೆ - ಇಲ್ಲಿ ನೀಡಲಾಗಿರುವ ಮಾಹಿತಿ, ಮನೆಮದ್ದು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ಚಿಕಿತ್ಸಕರ ಸಲಹೆ ಪಡೆಯಲು ಮರೆಯಬೇಡಿ)
ಇದನ್ನೂ ಓದಿ-Raksha Bandhan 2021 : ಇಂದು ರಕ್ಷಾಬಂಧನ, ನೀವು ತಿಳಿದುಕೊಳ್ಳಲೇಬೇಕಾದ ಕೆಲವು ಅತೀ ಪ್ರಮುಖ ಅಂಶಗಳಿವು!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.