Vasant Panchami 2022: ದೇವಿ ಶಾರದೆಯ ಕೃಪೆಗೆ ಪಾತ್ರರಾಗಲು ಈ ಶುಭ ಮುಹೂರ್ತದಲ್ಲಿ ಪೂಜೆ ಸಲ್ಲಿಸಿ, ಇಲ್ಲಿವೆ 3 ಪ್ರಭಾವಶಾಲಿ ಮಂತ್ರಗಳು
Basant Panchami 2022 - ಹಿಂದೂ ಧರ್ಮಶಾಸ್ತ್ರಗಳಲ್ಲಿ ವಸಂತ ಪಂಚಮಿ ಹಬ್ಬವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಇದನ್ನು ಶ್ರೀ ಪಂಚಮಿ, ವಾಗೀಶ್ವರಿ ಜಯಂತಿ ಮತ್ತು ಬಸಂತ್ ಪಂಚಮಿ ಎಂದೂ ಆಚರಿಸಲಾಗುತ್ತದೆ. ಮಾಘ ಮಾಸದ ಶುಕ್ಲ ಪಂಚಮಿಯ ದಿನದಂದು ವಸಂತ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ.
Basant Panchami 2022 - ಹಿಂದೂ ಧರ್ಮಶಾಸ್ತ್ರಗಳಲ್ಲಿ ವಸಂತ ಪಂಚಮಿ ಹಬ್ಬವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಇದನ್ನು ಶ್ರೀ ಪಂಚಮಿ, ವಾಗೀಶ್ವರಿ ಜಯಂತಿ ಮತ್ತು ಬಸಂತ್ ಪಂಚಮಿ ಎಂದೂ ಆಚರಿಸಲಾಗುತ್ತದೆ. ಮಾಘ ಮಾಸದ ಶುಕ್ಲ ಪಂಚಮಿಯ ದಿನದಂದು ವಸಂತ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಫೆಬ್ರುವರಿ 5 ಅಂದರೆ ಇಂದು ಶನಿವಾರ ವಸಂತ ಪಂಚಮಿ ಆಚರಿಸಲಾಗುತ್ತಿದೆ. ವಸಂತ ಪಂಚಮಿಯ ಉತ್ಸವ ಜ್ಞಾನ, ಕಲೆ ಹಾಗೂ ಸಂಗೀತದ ದೇವಿಯಾಗಿರುವ ಸರಸ್ವತಿಗೆ ಸಮರ್ಪಿತ. ಈ ದಿನ ವಿದ್ಯಾಲಯ, ಮಹಾವಿದ್ಯಾಲಯ, ಮನೆಗಳಲ್ಲಿ ಹಾಗೂ ದೇವಸ್ಥಾನಗಳಲ್ಲಿ ದೇವಿ ಶಾರದೆಗೆ ಪೂಜೆ ಸಲ್ಲಿಸಲಾಗುತ್ತದೆ. ಹಾಗಾದರೆ ಬನ್ನಿ ಸರಸ್ವತಿ ಪೂಜೆಗೆ ಸರಿಯಾದ ಮುಹೂರ್ತ ಯಾವುದು ಹಾಗೂ ಪೂಜೆಯ ವಿಧಾನ ಏನು ತಿಳಿದುಕೊಳ್ಳೋಣ.
ವಸಂತ ಪಂಚಮಿ / ಸರಸ್ವತಿ ಪೂಜೆಯ ಮುಹೂರ್ತ(Basant Panchami Shubh Muhurat)
ವಸಂತ ಪಂಚಮಿಯ ದಿನ ಪೂಜೆಗೆ ಸರಿಯಾದ ಮತ್ತು ಶುಭ ಮುಹೂರ್ತ ಬೆಳಗ್ಗೆ 7 ಗಂಟೆ 7 ನಿಮಿಷದಿಂದ ಮಧ್ಯಾಹ್ನ 12.35ರವರೆಗೆ ಇರಲಿದೆ. ಹೀಗಿರುವಾಗ ಮಧ್ಯಾಹ್ನಕ್ಕೂ ಮುನ್ನವೇ ಸರಸ್ವತಿ ಪೂಜೆ ಮಾಡುವುದು ಶುಭ ಫಲ ನೀಡಲಿದೆ.
ಸರಸ್ವತಿ ಪೂಜೆಯ ವಿಧಿ (Saraswati Puja Vidhi)
ಸರಸ್ವತಿ ದೇವಿಯ ಪೂಜೆಯನ್ನು ಪ್ರಾರಂಭಿಸುವ ಮೊದಲು, ಸ್ನಾನ ಮಾಡಿ ಮತ್ತು ಬಿಳಿ ಅಥವಾ ಹಳದಿ ಬಟ್ಟೆಗಳನ್ನು ಧರಿಸಿ. ಇದರ ನಂತರ, ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿ ಪೂಜೆಯನ್ನು ಪ್ರಾರಂಭಿಸಿ. ಹಳದಿ ವಸ್ತ್ರವನ್ನು ಹಾಕಿ ತಾಯಿಯ ಮೂರ್ತಿಯನ್ನು ಸ್ಥಾಪಿಸಿ. ಹಾಗೇ, ಹಳದಿ ಹೂಗಳು, ಹಳದಿ ಶ್ರೀಗಂಧ, ಬಿಳಿ ಚಂದನ, ಹಳದಿ ಸಿಹಿತಿಂಡಿಗಳು, ಮೊಸರು, ಸಕ್ಕರೆ ಮಿಠಾಯಿ, ಕಡುಬು ಇತ್ಯಾದಿಗಳನ್ನು ತಾಯಿಯ ಮುಂದೆ ನೈವೇದ್ಯ ರೂಪದಲ್ಲಿ ಇರಿಸಿ. ಇದಾದ ನಂತರ ಬಲಗೈಯಿಂದ ತಾಯಿಗೆ ಬಿಳಿ ಚಂದನ, ಬಿಳಿ ಮತ್ತು ಹಳದಿ ಹೂವುಗಳನ್ನು ಅರ್ಪಿಸಿ. ಕೇಸರಿ ಮಿಶ್ರಿತ ಪಾಯಸವನ್ನು ಪ್ರಸಾದವಾಗಿ ನೀಡುವುದು ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಅರಿಶಿನದ ಮಾಲೆಯಲ್ಲಿ 'ಓಂ ಸರಸ್ವತ್ಯೈ ನಮಃ' ಎಂಬ ಈ ಮಂತ್ರವನ್ನು ಜಪಿಸುವುದು ಉತ್ತಮ. ಸರಸ್ವತಿ ದೇವಿಯ ಆರಾಧನೆಯ ಸಮಯದಲ್ಲಿ ನೀಲಿ ಅಥವಾ ಕಪ್ಪು ಬಟ್ಟೆಗಳನ್ನು ಬಳಸಬೇಡಿ.
ವಸಂತ ಪಂಚಮಿಯಂದು ತ್ರಿವೇಣಿ ಯೋಗ ನಿರ್ಮಾಣಗೊಳ್ಳುತ್ತಿದೆ
ವಸಂತ ಪಂಚಮಿ ವಸಂತ ಋತುವಿನ ಆರಂಭವನ್ನು ಸೂಚಿಸುತ್ತದೆ. ಬಸಂತೋತ್ಸವದ ಹಬ್ಬವನ್ನು ಪಂಚಮಿ ತಿಥಿಯಂದು ಸೂರ್ಯೋದಯ ಮತ್ತು ಮಧ್ಯಾಹ್ನದ ನಡುವೆ ಆಚರಿಸಲಾಗುತ್ತದೆ. ಈ ಬಾರಿ ವಸಂತ ಪಂಚಮಿಯ ದಿನ ತ್ರಿವೇಣಿ ಯೋಗ ನಿರ್ಮಾಣಗೊಳ್ಳುತ್ತಿದೆ. ಇದಲ್ಲದೇ ಸಿದ್ಧಯೋಗ ಸಂಜೆ 5.40ರ ವರೆಗೆ ಇರುತ್ತದೆ. ಇದೇ ವೇಳೆಗೆ ಫೆ.5ರಂದು ಸಂಜೆ 5:41ರಿಂದ ಮರುದಿನ ಫೆ.6ರಂದು ಸಂಜೆ 4:52ರವರೆಗೆ ಪ್ರಾಪ್ತಿ ಯೋಗವಿರುತ್ತದೆ. ಅಲ್ಲದೆ ರವಿಯೋಗದ ಶುಭ ಕಾಕತಾಳೀಯದಿಂದಾಗಿ ಈ ದಿನ ತ್ರಿವೇಣಿ ಯೋಗವೂ ನಿರ್ಮಾಣವಾಗುತ್ತಿದೆ.
ವಸಂತ ಪಂಚಮಿಯ ದಿನ ಈ ಮಂತ್ರಗಳನ್ನು ಪಠಿಸಿ (Basant Panchami Saraswati Mantra)
ಮಂತ್ರ 1.
ಯಾ ಕುಂದೇಂದು ತುಷಾರ ಹಾರ ಧವಳಾ, ಯಾ ಶುಭ್ರ ವಸ್ತ್ರಾವೃತಾ |
ಯಾ ವೀಣಾ ವರದಂಡ ಮಂಡಿತ ಕರಾ, ಯಾ ಶ್ವೇತ ಪದ್ಮಾಸನಾ |
ಯಾ ಬ್ರಹ್ಮಾಚ್ಯುತ ಶಂಕರ ಪ್ರಭೃತಿಭಿರ್-ದೇವೈಃ ಸದಾ ಪೂಜಿತಾ |
ಸಾ ಮಾಮ್ ಪಾತು ಸರಸ್ವತೀ ಭಗವತೀ ನಿಶ್ಶೇಷಜಾಡ್ಯಾಪಹಾ |
ಇದನ್ನೂ ಓದಿ-Viral Video: ಮೋಡ ಸ್ಫೋಟ ಹೇಗೆ ಸಂಭವಿಸುತ್ತದೆ ಹೇಗೆ ನೀರಿನ ಪ್ರವಾಹ ಸೃಷ್ಟಿಯಾಗುತ್ತದೆ?
ಮಂತ್ರ 2.
ಯಾ ದೇವೀ ಸರ್ವಭೂತೇಷು ಬುದ್ಧಿರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಇದನ್ನೂ ಓದಿ-ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ನಿಧನ: ಸಿಎಂ ಬೊಮ್ಮಾಯಿ ಸಂತಾಪ
ಮಂತ್ರ 3.
ಸರಸ್ವತಿ ಮಹಾಭಾಗೇ ವಿದ್ಯೆ ಕಮಲಲೋಚನೆ | ವಿದ್ಯಾರೂಪೆ ವಿಶಾಲಾಕ್ಷಿ ವಿದ್ಯಾಂದೇಹಿ ನಮೋಸ್ತುತೆ ||
(Disclaimer - ಇಲ್ಲಿ ನೀಡಲಾಗಿರುವ ಮಾಹಿತಿ ಧಾರ್ಮಿಕ ನಂಬಿಕೆ ಹಾಗೂ ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆಯಿರಿ. ಝೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.