ನವದೆಹಲಿ : ಬೆಳಕಿನ ಹಬ್ಬ ದೀಪಾವಳಿ (Diwali) ಹಬ್ಬ ಆರಂಭವಾಗಿದೆ. ಇಂದು ನರಕ ಚತುರ್ದಶಿ. ಈ ದಿನ, ಮನೆ ತುಂಬಾ ದೀಪವನ್ನು ಬೆಳಗುತ್ತೇವೆ. ದೀಪ ಬೆಳಗುವ ವೇಳೆ, ಮನೆಯೊಳಗಿನ ಚರಂಡಿಗಳ ಮೇಲೆ ದೀಪವನ್ನು ಬೆಳಗಿಸುವುದನ್ನು ಮರೆಯಬೇಡಿ. ವಾಸ್ತು ಪ್ರಕಾರ (Vastu Shastra) ಹೀಗೆ ಮಾಡುವುದು ಮಂಗಳಕರ ಎಂದು  ಪರಿಗಣಿಸಲಾಗುತ್ತದೆ. 


COMMERCIAL BREAK
SCROLL TO CONTINUE READING

ಸಂಪತ್ತಿಗೂ ವರುಣ ದೇವನಿಗೂ ಇದೆ ಸಂಬಂಧ : 
ವಾಸ್ತು ಶಾಸ್ತ್ರದ (Vastu Tips) ಪ್ರಕಾರ, ನೀರು ವರುಣ ದೇವನಿಗೆ ಸಂಬಂಧಿಸಿದೆ. ಆದ್ದರಿಂದಲೇ ವರುಣನ ವಾಸ ಅಂದರೆ ಸಾಗರವನ್ನು ರತ್ನಾಕರ ಎಂದು ಕರೆಯುತ್ತಾರೆ. ಈ ಕಾರಣದಿಂದಲೇ ನೀರಿನ ಹರಿವಿಗಾಗಿ ನಿರ್ಮಿಸಿರುವ ಮನೆಯ ಚರಂಡಿಗಳು (Drain) ಸದಾ ಸ್ವಚ್ಛವಾಗಿರಬೇಕು ಮತ್ತು ಅದರಲ್ಲಿ ಎಂದಿಗೂ ಕಸ ನಿಲ್ಲಬಾರದು. 


ಇದನ್ನೂ ಓದಿ : ದೀಪಾವಳಿಗೆ ಹೊಸ ಪೊರಕೆ ತಂದ ನಂತರ ಈ ತಪ್ಪು ಮಾಡಬೇಡಿ, ಅದೃಷ್ಟ ಲಕ್ಷ್ಮೀ ಮುನಿಸಿಕೊಳ್ಳಬಹುದು


ಮನೆಯಲ್ಲಿ ನೀರಿನ ಚರಂಡಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು :
ವಾಸ್ತು ಪ್ರಕಾರ (Vastu Shastra), ಮನೆಯಲ್ಲಿ ಬಳಸಿರುವ ನೀರನ್ನು ಹೊರ ಹಾಕಲು ಮಾಡಿರುವ ಡ್ರೈನ್ ಗಳಿಗೂ ಆರ್ಥಿಕ ಸ್ಥಿತಿಗೂ ನೇರವಾದ ಸಂಬಂಧವಿದೆ. ಚರಂಡಿಗಳು ಸ್ವಚ್ಚವಾಗಿರದಿದ್ದರೆ, ಆ ಆರ್ಥಿಕ ಸ್ಥಿತಿಯ ಮೇಲೆ ಪ್ರಭಾವ ಬೀರುತ್ತದೆ.  ಮನೆಯ ಡ್ರೈನ್ ಸ್ವಚ್ಛವಾಗಿರದಿದ್ದರೆ, ಅದು ಕುಟುಂಬದ ಆದಾಯದ (Income) ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗಿದೆ.  


ಚರಂಡಿಗಳ ಬಳಿ ದೀಪ ಹಚ್ಚಿ:
ಧಾರ್ಮಿಕ ಗ್ರಂಥಗಳ ಪ್ರಕಾರ ನರಕ ಚತುರ್ದಶಿಯ (Naraka Chaturdashi) ದಿನದಂದು ಮನೆಯ ಚರಂಡಿಯ ಬಳಿ ದೀಪವನ್ನು ಹಚ್ಚಬೇಕು. ಇದರೊಂದಿಗೆ ಮನೆಯ ಸುತ್ತ ಮುತ್ತಲಿನ ಚರಂಡಿಗಳನ್ನು ಸದಾ ಸ್ವಚ್ಛವಾಗಿಟ್ಟುಕೊಳ್ಳಬೇಕು. ಈ ಚರಂಡಿಗಳು ಮುಚ್ಚಿಹೋಗಿದ್ದರೆ ಅವುಗಳನ್ನು ಸ್ವಚ್ಛಗೊಳಿಸಬೇಕು. ಹೀಗೆ ಮಾಡಿದರೆ ಮಹಾಲಕ್ಷ್ಮೀ (Godess Lakshmi) ಸಂತೋಷಪಡುತ್ತಾಳೆ ಮತ್ತು ವರ್ಷವಿಡೀ ಕುಟುಂಬವನ್ನು ಹರಸುತ್ತಾಳೆ. 


ಇದನ್ನೂ ಓದಿ : Tulsi Leaves: ಈ ಸಮಸ್ಯೆ ಇರುವವರು ತಪ್ಪಿಯೂ ತುಳಸಿ ಎಲೆಯನ್ನು ತಿನ್ನಲೇಬಾರದು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ