Vastu Tips: ಸಂಜೆ ಹೊತ್ತು ಈ ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡ್ಬೇಡಿ, ಜೀವನದಲ್ಲಿ ಸಂಕಷ್ಟಗಳ ಸರಮಾಲೆಯೇ ಆರಂಭವಾಗುತ್ತದೆ
Vastu Tips: ಸಂಜೆ ದೇವರ ಪೂಜೆ ಮಾಡಬೇಕು. ತುಳಸಿಯ ಕೆಳಗೆ ದೀಪವನ್ನು ಇಡಬೇಕು. ಇದರೊಂದಿಗೆ, ಬಡತನ ಅಥವಾ ತೊಂದರೆಗಳನ್ನು ಉಂಟುಮಾಡುವ ಕೆಲವು ಕೆಲಸಗಳನ್ನು ಮಾಡುವುದನ್ನು ತಪ್ಪಿಸಬೇಕು.
Vastu Tips for Evening: ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯಲು, ನೀವು ಕೆಲ ನಿಯಮಗಳನ್ನು ಪಾಲಿಸುವುದು ಅವಶ್ಯಕ. ಇದು ಜೀವನದಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ ಮತ್ತು ವ್ಯಕ್ತಿಯು ಪ್ರಗತಿ ಹೊಂದುತ್ತಾನೆ. ಆದರೆ ಈ ನಿಯಮಗಳನ್ನು (Vastu Rules) ನಿರ್ಲಕ್ಷಿಸುವುದು ಬಡತನ ಮತ್ತು ತೊಂದರೆಗಳಿಗೆ ಆಹ್ವಾನ ನೀಡಿದಂತೆ. ವಾಸ್ತು ಶಾಸ್ತ್ರದಲ್ಲಿ, ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯಲು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಕೆಲವು ವಿಷಯಗಳನ್ನು ಅನುಸರಿಸಲು ಹೇಳಲಾಗಿದೆ. ಸಂಜೆ ಹೊತ್ತು ನಿಷಿದ್ಧ ಇರುವ ಕೆಲ ಕಾರ್ಯಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ,
ಸಂಜೆ ಈ ಕೆಲಸವನ್ನು ಮಾಡಬೇಡಿ
>> ಮನೆಯನ್ನು ಸ್ವಚ್ಛಗೊಳಿಸುವುದು ಒಳ್ಳೆಯದು. ತಾಯಿ ಲಕ್ಷ್ಮಿಯು ಇದರಿಂದ ಸಂತುಷ್ಟಳಾಗುತ್ತಾಳೆ, ಆದರೆ ಸಂಜೆ ಕಸ ಗುಡಿಸುವುದು ಅಥವಾ ಸ್ವಚ್ಛಗೊಳಿಸುವುದು ತುಂಬಾ ಅಶುಭ. ವಾಸ್ತು ಶಾಸ್ತ್ರದ ಪ್ರಕಾರ ಸಂಜೆ ಪೊರಕೆಯಿಂದ ಕಸ ಗುಡಿಸುವುದರಿಂದ ಮನೆಯಲ್ಲಿ ಬಡತನ ಮತ್ತು ದಾರಿದ್ರ್ಯ ಬರುತ್ತದೆ. ಇದಲ್ಲದೇ ಮೌಲ್ಯ ನಷ್ಟ ಕೂಡ ಉಂಟಾಗುತ್ತದೆ.
>> ಸಂಜೆ ಕಛೇರಿಯಿಂದ ಬಂದ ನಂತರ ಅನೇಕ ಜನರು ಮಲಗುವ ಅಥವಾ ವಿಶ್ರಾಂತಿ ಪಡೆಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಹೀಗೆ ಮಾಡುವುದು ತುಂಬಾ ಅಶುಭಕರ. ಸಂಜೆಯ ಹೊತ್ತು ಲಕ್ಷ್ಮಿ ದೇವಿಯ ಆಗಮನದ ಸಮಯವಾಗಿದೆ, ಆದ್ದರಿಂದ ಈ ಸಮಯದಲ್ಲಿ ಮಲಗುವುದು ಜೀವನ ಪ್ರಗತಿ ಮತ್ತು ಆರ್ಥಿಕ ಪ್ರಗತಿಯಲ್ಲಿ ಅಡೆತಡೆಗಳನ್ನು ತರುತ್ತದೆ.
>> ತುಳಸಿ ಎಲೆಗಳನ್ನು ಸೂರ್ಯಾಸ್ತದ ಸಮಯದಲ್ಲಿ ಕಿತ್ತಬಾರದು, ತುಳಸಿ ಎಲೆಗಳನ್ನು ಈ ಸಮಯದಲ್ಲಿ ಮುಟ್ಟಬಾರದು. ನಿಮಗೆ ಒಂದು ವೇಳೆ ಸಂಜೆ ಹೊತ್ತು ಅಥವಾ ರಾತ್ರಿ ವೇಳೆ ತುಳಸಿ ಎಲೆಗಳು ಬೇಕಾದರೆ, ಹಗಲಿನಲ್ಲಿಯೇ ಅವುಗಳನ್ನು ಕಿತ್ತುಟ್ಟುಕೊಳ್ಳಿ.
>> ಭಿಕ್ಷುಕನು ಸಾಯಂಕಾಲ ಬಂದರೆ, ಅವನನ್ನು ಬರಿಗೈಯಲ್ಲಿ ಹಿಂತಿರುಗಿಸಬೇಡಿ, ಆದರೆ ದಾನದ ರೂಪದಲ್ಲಿ ಆತನಿಗೆ ಹುಳಿ, ಹಾಲು ಮತ್ತು ಉಪ್ಪನ್ನು ನೀಡಬೇಡಿ.
>> ಸಂಜೆ ಸಮಯದಲ್ಲಿ ಮನೆಯ ಮುಖ್ಯ ಬಾಗಿಲನ್ನು ಮುಚ್ಚಬಾರದು. ಇದು ತಾಯಿ ಲಕ್ಷ್ಮಿ ಪ್ರಕೋಪಕ್ಕೆ ಕಾರಣವಾಗುತ್ತದೆ.
ಇದನ್ನೂ ಓದಿ-ಈ Blood Group ಹೊಂದಿರುವ ಜನರು ತುಂಬಾ ಕ್ರಿಯೇಟಿವ್ ಆಗಿರುತಾರೆ, ನಿಮ್ಮ ಬ್ಲಡ್ ಗ್ರೂಪ್ ಯಾವುದು?
(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರೀಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.