Rahu-Ketu Gochar: ಜೀವನದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಲು ಬರುತ್ತಿದ್ದಾರೆ ರಾಹು ಕೇತು, ನಿಮ್ಮ ಜೀವನದಲ್ಲಗಳಿವೆ ಈ ಬದಲಾವಣೆ

Rahu Ketu Gochar 2022: ರಾಹು-ಕೇತುಗಳು 12ನೇ ಏಪ್ರಿಲ್ 2022 ರಂದು ತಮ್ಮ ರಾಶಿಚಕ್ರವನ್ನು ಬದಲಾಯಿಸಲಿದ್ದಾರೆ. 18 ತಿಂಗಳ ನಂತರ ಸಂಭವಿಸಲಿರುವ ರಾಹು-ಕೇತುಗಳ ಈ ಸಂಕ್ರಮವು ಎಲ್ಲಾ ರಾಶಿಗಳ ಮೇಲೆ ಗಮನಾರ್ಹ (Know What Impact On All Zodiac Sign) ಪರಿಣಾಮ ಬೀರುತ್ತದೆ.

Written by - Nitin Tabib | Last Updated : Apr 11, 2022, 03:57 PM IST
  • ರಾಹು-ಕೇತುಗಳು ತನ್ನ ರಾಶಿ ಬದಲಾಯಿಸುತ್ತಿವೆ
  • 18 ತಿಂಗಳ ನಂತರ ರಾಹು ಕೇತುಗಳ ಈ ಸಂಚಾರ ನಡೆಯಲಿದೆ
  • ಎಲ್ಲಾ 12 ರಾಶಿಗಳು ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ
Rahu-Ketu Gochar: ಜೀವನದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಲು ಬರುತ್ತಿದ್ದಾರೆ ರಾಹು ಕೇತು, ನಿಮ್ಮ ಜೀವನದಲ್ಲಗಳಿವೆ ಈ ಬದಲಾವಣೆ title=
Rahu Ketu Gochar 2022

Rahu Ketu Gochar 2022: ಜ್ಯೋತಿಷ್ಯದ (Astrology) ದೃಷ್ಟಿಯಿಂದ ಈ ವರ್ಷದ ಏಪ್ರಿಲ್ ತಿಂಗಳು ತುಂಬಾ ವಿಶೇಷವಾಗಿದೆ. ಈ ತಿಂಗಳಲ್ಲಿ ಶನಿ, ರಾಹು-ಕೇತು ಸೇರಿದಂತೆ ಎಲ್ಲಾ 9 ಗ್ರಹಗಳು ತಮ್ಮ ರಾಶಿಗಳನ್ನು ಬದಲಾಯಿಸುತ್ತಿವೆ. ಆದರೆ ಶನಿ ಮತ್ತು ರಾಹು-ಕೇತು ಗ್ರಹಗಳು (Rahu Ketu Rashi Parivartan) ಬಹಳ ನಿಧಾನಗತಿಯಲ್ಲಿ ಚಲಿಸುವ ಗ್ರಹಗಳಾಗಿವೆ ಮತ್ತು ದೀರ್ಘ ಸಮಯದ ನಂತರ ತನ್ನ ರಾಶಿಯನ್ನು ಬದಲಾಯಿಸುತ್ತವೆ. ಶನಿಯು ಎರಡೂವರೆ ವರ್ಷದಲ್ಲಿ ಮತ್ತು ರಾಹು-ಕೇತು 18 ತಿಂಗಳಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತವೆ. ಛಾಯಾಗ್ರಹಗಳಾಗಿರುವ ರಾಹು-ಕೇತುಗಳು (Rahu Ketu Gochar) ಒಟ್ಟಿಗೆ ರಾಶಿಯನ್ನು ಬದಲಾಯಿಸುತ್ತವೆ ಮತ್ತು ಯಾವಾಗಲೂ ಹಿಮ್ಮುಖವಾಗಿ ಚಲಿಸುತ್ತವೆ. ನಾಳೆ ಅಂದರೆ 12ನೇ ಏಪ್ರಿಲ್ 2022 ರಂದು (Ketu Rashi Parivartan On 12 April) ರಾಹು ಮೇಷ ಮತ್ತು ಕೇತು ತುಲಾ ರಾಶಿಯನ್ನು ಪ್ರವೇಶಿಸಲಿದ್ದಾರೆ. ಎಲ್ಲಾ 12 ರಾಶಿಗಳ ಮೇಲೆ ಈ ಬದಲಾವಣೆಗಳ ಪರಿಣಾಮ ಬೀರಲಿದೆ.

ಮೇಷ: ಕಠಿಣ ಪರಿಶ್ರಮದ ನಂತರ ನಿಮಗೆ ಫಲ ಸಿಗಲಿದೆ. ಎಲ್ಲವನ್ನೂ ಪ್ರಾಮಾಣಿಕವಾಗಿ ಮಾಡಿ. ಎಲ್ಲರಿಗೂ ಒಳ್ಳೆಯವರಾಗಿರಿ, ಇದು ನಿಮ್ಮ ಕೆಲಸವನ್ನು ಮಾಡಲು ನಿಮಗೆ ಸುಲಭವಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ವೃಷಭ: ಕೆಲವೊಮ್ಮೆ ಧನಲಾಭ ಮತ್ತು ಕೆಲವೊಮ್ಮೆ ಹೆಚ್ಚಿದ ಖರ್ಚುಗಳು ಬಜೆಟ್ ಅನ್ನು ಹಾಳು ಮಾಡುತ್ತವೆ. ಕಣ್ಣು ಮತ್ತು ಗಂಟಲಿನ ಬಗ್ಗೆ ಕಾಳಜಿ ವಹಿಸಿ, ಸಮಸ್ಯೆ ಇರಬಹುದು. ವಿರೋಧಿಗಳು ಅಸಮಾಧಾನಗೊಳ್ಳಬಹುದು. ವಿಶೇಷವಾಗಿ ಅಗತ್ಯ ಕೆಲಸಗಳನ್ನು ಅತ್ಯಂತ ಎಚ್ಚರಿಕೆಯಿಂದ ಮಾಡಿ.

ಮಿಥುನ: ಧನ ಲಾಭವಾಗಲಿದೆ. ನಿಮ್ಮ ಜೀವನಮಟ್ಟ ಉತ್ತಮವಾಗಿರುತ್ತದೆ. ಈ ಅವಧಿಯಲ್ಲಿ ನೀವು ಮನೆ ಮತ್ತು ಕಾರಿನ ಆನಂದ ಪಡೆಯುತ್ತೀರಿ. ಕುಟುಂಬದಲ್ಲಿ ಸಂತೋಷ ಇರಲಿದೆ. ನೀವು ಗೌರವವನ್ನು ಪದೆಯುವಿರು. ಒಟ್ಟಾರೆ, ರಾಹು-ಕೇತುಗಳ ಈ ಸಂಚಾರವು ನಿಮಗೆ ಲಾಭವನ್ನು ನೀಡಲಿದೆ.

ಕರ್ಕ: ಯಶಸ್ಸಿನ ಸಮಯ ಪ್ರಾರಂಭವಾಗುತ್ತವೆ. ಎಲ್ಲವನ್ನೂ ಸುಲಭವಾಗಿ ಮಾಡುವಿರಿ. ನೀವು ಗೌರವವನ್ನು ಪಡೆಯುತ್ತೀರಿ. ನಿಮ್ಮ ಕೆಲಸಗಳು ನಿಮಗೆ ಕೀರ್ತಿ ತರುವ ಸಾಧ್ಯತೆ ಇದೆ. ಕೌಟುಂಬಿಕ ಸಂತೋಷವನ್ನು ಅನುಭವಿಸುವಿರಿ. ಲಾಭ ಸಿಗಲಿದೆ.

ಸಿಂಹ: ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ನೀವು ಕುಟುಂಬ ಸದಸ್ಯರ  ಬೆಂಬಲವನ್ನು ಪಡೆಯುತ್ತೀರಿ, ಅದು ನಿಮಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ. ಪರೀಕ್ಷೆ-ಸಂದರ್ಶನದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ.

ಕನ್ಯಾ: ಆರೋಗ್ಯ ಸಂಬಂಧಿ ಸಮಸ್ಯೆಗಳಿರಬಹುದು. ವ್ಯಾಪಾರಸ್ಥರು ಸ್ವಲ್ಪ ಜಾಗರೂಕರಾಗಿರಬೇಕು. ನಾವು ಉತ್ತಮ ಸಂಬಂಧವನ್ನು ಮಾಡಿದರೆ, ಲಾಭ ಸಿಗಲಿದೆ.

ತುಲಾ: ವ್ಯಾಪಾರಸ್ಥರಿಗೆ ಲಾಭ ಹೆಚ್ಚಾಗಲಿದೆ. ಜೀವನ ಸಂಗಾತಿಯೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ. ವೈಯಕ್ತಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ ಆದರೆ ನೀವು ಶತ್ರುಗಳಿಂದ ದೂರವಿರಬೇಕು.

ವೃಶ್ಚಿಕ: ಉದ್ಯೋಗ ಮತ್ತು ವ್ಯಾಪಾರ ಎರಡರಲ್ಲೂ ಲಾಭ ಇರಲಿದೆ. ಉದ್ಯೋಗದಲ್ಲಿ ಬಡ್ತಿ ಪಡೆಯುವ ಬಲವಾದ ಅವಕಾಶಗಳಿವೆ. ವ್ಯಾಪಾರಿಗಳಿಗೆ ಹಠಾತ್ ಲಾಭವಾಗಲಿದೆ. ನೀವು ಅನಗತ್ಯ ವೆಚ್ಚಗಳನ್ನು ತಪ್ಪಿಸಿದರೆ, ಬಹಳಷ್ಟು ಉಳಿತಾಯ ಸಾಧ್ಯವಾಗಲಿದೆ  ಸಂತಾನದ ಕಡೆಯಿಂದ ನಿರಾಶೆ ಇರಲಿದೆ.

ಧನು: ಮಕ್ಕಳಿಂದ ನಿಮಗೆ ಬೆಂಬಲ ಸಿಗುವುದಿಲ್ಲ. ವ್ಯಾಪಾರದಲ್ಲಿ ಲಾಭ ಪಡೆಯಲು ಶ್ರಮಿಸುವಿರಿ. ಆದರೆ, ನಿಮಗೆ ಖಂಡಿತವಾಗಿಯೂ ಲಾಭ ಸಿಗಲಿದೆ. ನೀವು ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದರೆ ನಿಮ್ಮ ತಯಾರಿಯನ್ನು ಬಲವಾಗಿ ಇಟ್ಟುಕೊಳ್ಳಿ.

ಮಕರ: ಕೌಟುಂಬಿಕ ಸಂತೋಷ ಕಡಿಮೆಯಾಗಬಹುದು. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಹಾನಿ ಸಂಭವಿಸಬಹುದು. ಈ ಸಮಯವನ್ನು ತಾಳ್ಮೆಯಿಂದ ತೆಗೆದುಕೊಳ್ಳಿ.

ಕುಂಭ: ಈ ಸಮಯವು ಅಪಾರ ಯಶಸ್ಸು ಮತ್ತು ಲಾಭವನ್ನು ತರಲಿದೆ. ಮನೆ ಮತ್ತು ಕುಟುಂಬದ ಬೆಂಬಲವು ನಿಮ್ಮ ಜೀವನವನ್ನು ಸುಲಭಗೊಳಿಸುತ್ತದೆ. ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ನೀವು ಕೆಲವು ದೊಡ್ಡ ಜವಾಬ್ದಾರಿಯನ್ನು ಪಡೆಯಬಹುದು.

ಇದನ್ನೂ ಓದಿ-Hanuman Jayanti 2022: ಶನಿ-ರಾಹು-ಕೇತುಗಳ ಕಾಟದಿಂದ ಮುಕ್ತಿ ಪಡೆಯಲು ಈ ಉಪಾಯಗಳನ್ನು ಮಾಡಿ

ಮೀನ: ಹಣಕಾಸಿನ ವಿಷಯವನ್ನು ಎಚ್ಚರಿಕೆಯಿಂದ ನಿಭಾಯಿಸಿ, ಇಲ್ಲದಿದ್ದರೆ ನಷ್ಟವಾಗಬಹುದು. ಎಲ್ಲದರ ಮೇಲೆ ನಿಗಾ ಇರಿಸಿ. ಕೌಟುಂಬಿಕ ವಿಷಯಗಳನ್ನು ಅತ್ಯಂತ ಜಾಗರೂಕತೆಯಿಂದ ನಿಭಾಯಿಸಿ. ನಿಮ್ಮನ್ನು ನೀವು ಸಂತೋಷವಾಗಿಡಲು ಪ್ರಯತ್ನಿಸಿ.

ಇದನ್ನೂ ಓದಿ-ಈ Blood Group ಹೊಂದಿರುವ ಜನರು ತುಂಬಾ ಕ್ರಿಯೇಟಿವ್ ಆಗಿರುತಾರೆ, ನಿಮ್ಮ ಬ್ಲಡ್ ಗ್ರೂಪ್ ಯಾವುದು?

(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News