Vastu Tips: ಮನೆಯ ಈ ದಿಕ್ಕಿನಲ್ಲಿ ಕಿಚನ್ ಅನಾವಶ್ಯಕ ಖರ್ಚಿಗೆ ಕಾರಣವಾಗುತ್ತದೆ, ಮನೆ ಸದಸ್ಯರ ಮೇಲೂ ಕೂಡ ನಕಾರಾತ್ಮಕ ಪ್ರಭಾವ
Direction For Kitchen - ವಾಸ್ತುಶಾಸ್ತ್ರದ ಪ್ರಕಾರ ಮನೆಯ ಆಗ್ನೇಯ ಕೋನ ಕಿಚನ್ ನಿರ್ಮಾಣಕ್ಕೆ ಉತ್ತಮ ಸ್ಥಾನ ಎಂದು ಹೇಳಲಾಗುತ್ತದೆ. ದಕ್ಷಿಣ ಮತ್ತು ಪೂರ್ವ ದಿಕ್ಕುಗಳ ನಡುವಿನ ದಿಕ್ಕನ್ನು (Kitchen Vastu Tips) ಆಗ್ನೇಯ ದಿಕ್ಕು ಎಂದು ಹೇಳಲಾಗುತ್ತದೆ
ನವದೆಹಲಿ: Kitchen Vastu - ವಾಸ್ತು ಶಾಸ್ತ್ರದಲ್ಲಿ ಅಡುಗೆ ಮನೆ ಸ್ಥಾನಕ್ಕೆ ವಿಶೇಷ ಮಹತ್ವವಿದೆ. ಈ ಸ್ಥಳವು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಗೆ ಸಂಬಂಧಿಸಿದೆ ಎಂಬುದು ಧಾರ್ಮಿಕ ನಂಬಿಕೆ. ಇದಲ್ಲದೇ ಆಹಾರದ ದೇವತೆ ಅನ್ನಪೂರ್ಣೆಯೂ ಅಡುಗೆ ಮನೆಗೆ ಸಂಬಂಧಿಸಿದ್ದಾಳೆ. ಹೀಗಾಗಿ ಅಡುಗೆ ಮನೆಗೆ ಸಂಬಂಧಿಸಿದ ವಾಸ್ತು ನಿಯಮಗಳ (Vastu Shastra For Home Kitchen) ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇಂತಹ ಪರಿಸ್ಥಿತಿಯಲ್ಲಿ, ಅಡುಗೆಮನೆಗೆ ಸಂಬಂಧಿಸಿದ ಕೆಲವು ವಿಶೇಷ ವಾಸ್ತು ಸಲಹೆಗಳನ್ನು ತಿಳಿದುಕೊಳ್ಳೋಣ ಬನ್ನಿ.
ಅಡುಗೆ ಮನೆ ನಿರ್ಮಾಣಕ್ಕೆ ಆಗ್ನೇಯ ಕೋನ ಉತ್ತಮ (Vastu Tips For Kitchen)
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಅಗ್ನಿಕೋನವನ್ನು ಅಡುಗೆ ಮನೆ ನಿರ್ಮಾಣಕ್ಕೆ ಬಳಸಬೇಕು. ಆಗ್ನೇಯ ಕೋನವನ್ನು ದಕ್ಷಿಣ ಮತ್ತು ಪೂರ್ವದ ದಿಕ್ಕು ಎಂದು ಕರೆಯಲಾಗುತ್ತದೆ. ಶಕ್ತಿ ಅಂದರೆ ಬೆಂಕಿಯು ಈ ದಿಕ್ಕಿನಲ್ಲಿ ಇರುತ್ತದೆ. ಇದಲ್ಲದೆ, ಈ ದಿಕ್ಕು ಶುಕ್ರನಿಗೂ ಕೂಡ ಸಂಬಂಧಿಸಿದೆ. ಅಡುಗೆ ಮನೆಯಲ್ಲಿ ವಾಸ್ತು ದೋಷವಿದ್ದರೆ ಮನೆಯ ಮಹಿಳೆಯರ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದು ವಾಸ್ತು ಶಾಸ್ತ್ರದ ತಜ್ಞರ ಅಭಿಮತ.
ಅಡುಗೆ ಮನೆ ನೈಋತ್ಯ ದಿಕ್ಕಿನಲ್ಲಿ ಇರಬಾರದು (Vastu Shastra Tips In Kannada)
ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯನ್ನು ಮನೆಯ ನೈಋತ್ಯ ದಿಕ್ಕಿನಲ್ಲಿ ನಿರ್ಮಿಸಬಾರದು. ವಾಸ್ತವದಲ್ಲಿ, ಈ ದಿಕ್ಕಿನಲ್ಲಿ ಅಡುಗೆ ಮನೆಯು ವಾಸ್ತು ದೋಷವನ್ನು ಸೃಷ್ಟಿಸುತ್ತದೆ. ಈ ವಾಸ್ತು ದೋಷದಿಂದ ಅನಗತ್ಯ ಖರ್ಚುಗಳು ಹೆಚ್ಚಾಗಬಹುದು. ಇದರೊಂದಿಗೆ ಮನೆಯ ಆರ್ಥಿಕ ಸ್ಥಿತಿಯ ಮೇಲೂ ಕೂಡ ಇದು ಪ್ರತಿಕೂಲ ಪರಿಣಾಮ ಬೀರುತ್ತದೆ.
ಅಡುಗೆ ಮನೆಗೆ ಸಂಬಂಧಿಸಿದ ವಾಸ್ತು ಸಲಹೆಗಳು
>> ಅಡುಗೆ ಮನೆಯಲ್ಲಿ ಗ್ಯಾಸ್ ಸ್ಟೌವ್ ಇಡಲು ಸ್ಲ್ಯಾಬ್ ಪೂರ್ವ ಅಥವಾ ಉತ್ತರ ದಿಕ್ಕಿಗೆ ಇರಬೇಕು. ಅಲ್ಲದೆ, ಗೃಹಿಣಿಯು ಅಡುಗೆ ಮಾಡುವಾಗ ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಬೇಕು.
ಇದನ್ನೂ ಓದಿ-ಸದಾ ಗೆಲ್ಲುವ ತವಕದಲ್ಲಿರುತ್ತಾರೆ ಈ ನಾಲ್ಕು ರಾಶಿಯವರು ..! ನಿಮ್ಮ ರಾಶಿ ಇದರಲ್ಲಿದೆಯೇ ?
>> ವಾಸ್ತು ಶಾಸ್ತ್ರದ ಪ್ರಕಾರ, ಪಾತ್ರೆಗಳನ್ನು ತೊಳೆಯಲು ಸಿಂಕ್‌ಗೆ ಅತ್ಯಂತ ಸೂಕ್ತವಾದ ಸ್ಥಳವೆಂದರೆ ಅದು ಈಶಾನ್ಯ ದಿಕ್ಕು (ಪೂರ್ವ-ಉತ್ತರ ದಿಕ್ಕು). ಇದೇ ವೇಳೆ ಇಂಡಕ್ಷನ್, ಮೈಕ್ರೋವೇವ್ ಇತ್ಯಾದಿಗಳು ಯಾವಾಗಲೂ ಅಡುಗೆ ಮನೆಯ ಆಗ್ನೇಯ ಮೂಲೆಯಲ್ಲಿರಬೇಕು.
ಇದನ್ನೂ ಓದಿ-Mahashivratri: ಮಹಾಶಿವರಾತ್ರಿಯಂದು ಈ ಬಣ್ಣದ ಬಟ್ಟೆ ಧರಿಸಿ, ಪೂಜೆ ಸಲ್ಲಿಸಿದರೆ ಸಿಗುತ್ತೆ ಅದ್ಭುತ ಫಲ
>> ವಾಸ್ತು ಪ್ರಕಾರ, ಫ್ರಿಡ್ಜ್ ಯಾವಾಗಲೂ ಅಡುಗೆ ಮನೆಯಲ್ಲಿ ವಾಯುವ್ಯ ದಿಕ್ಕಿನಲ್ಲಿರಬೇಕು. ಇದಲ್ಲದೆ, ಆಹಾರ ಪದಾರ್ಥಗಳನ್ನು ಇಡಲು ಪಶ್ಚಿಮ ಅಥವಾ ದಕ್ಷಿಣ ದಿಕ್ಕನ್ನು ಬಳಸಬೇಕು.
ಇದನ್ನೂ ಓದಿ-ಭೂಮಿಗೆ ಭಾರ ಎನ್ನುವಂತಿರುತ್ತಾರೆ ಇಂಥಹ ಜನರು, ಇವರೊಂದಿಗೆ ಬೆರೆತರೆ ನಿಮ್ಮ ಜೀವನವು ಹಾಳಾದೀತು ..!
(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿವೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.