Mahashivratri: ಮಹಾಶಿವರಾತ್ರಿಯಂದು ಈ ಬಣ್ಣದ ಬಟ್ಟೆ ಧರಿಸಿ, ಪೂಜೆ ಸಲ್ಲಿಸಿದರೆ ಸಿಗುತ್ತೆ ಅದ್ಭುತ ಫಲ

Mahashivratri: ಈ ಮಹಾಶಿವರಾತ್ರಿಯಂದು ನೀವು ಯಾವ ಬಣ್ಣದ ಬಟ್ಟೆಗಳನ್ನು ಧರಿಸುತ್ತೀರಿ? ಶಿವನಿಗೆ ಬಿಳಿ ಮತ್ತು ಹಸಿರು ಬಣ್ಣಗಳು ತುಂಬಾ ಇಷ್ಟ ಎಂಬ ನಂಬಿಕೆ ಇರುವುದರಿಂದ ಇದು ತುಂಬಾ ಮುಖ್ಯವಾಗಿದೆ. ನೀವು ಈ ಎರಡು ಬಣ್ಣದ ಬಟ್ಟೆಗಳನ್ನು ಧರಿಸಿ, ಪೂಜೆ ಸಲ್ಲಿಸಿದರೆ ಭೋಲೇನಾಥನ ಕೃಪೆಗೆ ಪಾತ್ರರಾಗಬಹುದು.

Written by - Zee Kannada News Desk | Last Updated : Feb 28, 2022, 11:52 AM IST
  • ಮಹಾಶಿವರಾತ್ರಿಯಂದು ಈ ಬಣ್ಣದ ಬಟ್ಟೆಗಳನ್ನು ಧರಿಸಿ
  • ಈ ಬಣ್ಣದ ಬಟ್ಟೆ ಧರಿಸಿ, ಪೂಜೆ ಸಲ್ಲಿಸಿದರೆ ಸಿಗುತ್ತೆ ಅದ್ಭುತ ಫಲ
  • ಭೋಲೇನಾಥನ ಕೃಪೆಗೆ ಪಾತ್ರರಾಗಬಹುದು
Mahashivratri: ಮಹಾಶಿವರಾತ್ರಿಯಂದು ಈ ಬಣ್ಣದ ಬಟ್ಟೆ ಧರಿಸಿ, ಪೂಜೆ ಸಲ್ಲಿಸಿದರೆ ಸಿಗುತ್ತೆ ಅದ್ಭುತ ಫಲ  title=
ಮಹಾಶಿವರಾತ್ರಿ

ನವದೆಹಲಿ: ನೀವು ಧರಿಸುವ ಬಟ್ಟೆಯ ಬಣ್ಣವೂ ನಂಬಿಕೆಗೆ ಸಂಬಂಧಿಸಿದೆ. ಮಹಾಶಿವರಾತ್ರಿ (Mahashivaratri) ಮಾರ್ಚ್ 1 ರಂದು ಇದೆ. ಎಲ್ಲಾ ಭಕ್ತರು ತಾವು ಯಾವ ಬಣ್ಣದ ಬಟ್ಟೆಗಳನ್ನು ಧರಿಸಬೇಕೆಂದು ಯೋಚಿಸುತ್ತಾರೆ. 

ಇದನ್ನೂ ಓದಿ: Venus Transit 2022: ಮಾರ್ಚ್ 31ರವರೆಗೆ ಈ ರಾಶಿಗಳ ಜನರ ಮೇಲಿರಲಿದೆ ದೇವಿ ಲಕುಮಿಯ ಕೃಪೆ, ನೋವು-ದುಃಖಗಳು ದೂರಾಗಲಿವೆ

ಈ ಬಣ್ಣದ ಬಟ್ಟೆ ಧರಿಸಿ, ಇದರಿಂದ ಶಿವನು (Shiva) ಪ್ರಸನ್ನನಾಗುತ್ತಾನೆ ಮತ್ತು ನೀವು ಕೂಡ ಸ್ಟೈಲಿಶ್ ಆಗಿ ಕಾಣುತ್ತೀರಿ. ಶಿವರಾತ್ರಿಯ ದಿನ ಜನರು ದೇವಸ್ಥಾನಕ್ಕೆ ಹೋಗಿ ಶಿವಲಿಂಗಕ್ಕೆ ಪೂಜೆ ಸಲ್ಲಿಸುತ್ತಾರೆ. ಶಿವನ ಆರಾಧನೆಯ ಸಮಯದಲ್ಲಿ ವಿಶೇಷ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂದು ನಂಬಲಾಗಿದೆ.

ಬಿಳಿ ಮತ್ತು ಹಸಿರು ಬಣ್ಣದ ಬಟ್ಟೆಗಳನ್ನು ಧರಿಸುವುದು ಶುಭ: 

ಶಿವನನ್ನು ಆರಾಧಿಸುವಾಗ (Worship god shiva) ಹಸಿರು ಬಟ್ಟೆಗಳನ್ನು ಧರಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಹಸಿರು ಹೊರತಾಗಿ, ನೀವು ಬಿಳಿ ಬಣ್ಣದ ಬಟ್ಟೆಗಳನ್ನು ಸಹ ಧರಿಸಬಹುದು. 

ಭೋಲೆ ಬಾಬಾ ಬಿಳಿ ಮತ್ತು ಹಸಿರು ಬಣ್ಣಗಳನ್ನು ತುಂಬಾ ಇಷ್ಟಪಡುತ್ತಾರೆ ಎಂಬುದು ಒಂದು ನಂಬಿಕೆ. ಶಿವರಾತ್ರಿಯಂದು ನೀವು ಹಸಿರು ಮತ್ತು ಬಿಳಿ ಬಟ್ಟೆಗಳನ್ನು ಧರಿಸಿದರೆ ಅದರಿಂದ ಹೆಚ್ಚಿನ ಫಲವನ್ನು ಪಡೆಯುತ್ತೀರಿ.

ಈ ಬಣ್ಣಗಳ ಬಟ್ಟೆಗಳು ಕೂಡ ಮಂಗಳಕರ: 

ನೀವು ಹಸಿರು ಅಥವಾ ಬಿಳಿ ಬಟ್ಟೆಗಳನ್ನು ಹೊಂದಿಲ್ಲದಿದ್ದರೆ ಅಥವಾ ಕೆಲವು ಕಾರಣಗಳಿಂದ ಈ ದಿನ ಈ ಬಣ್ಣಗಳನ್ನು ಧರಿಸಲು ಸಾಧ್ಯವಾಗದಿದ್ದರೆ, ನೀವು ಕೆಂಪು, ಕೇಸರಿ, ಹಳದಿ, ಕಿತ್ತಳೆ ಮತ್ತು ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸಿ ಶಿವನನ್ನು ಪೂಜಿಸಬಹುದು.

ಇದನ್ನೂ ಓದಿ: ಭೂಮಿಗೆ ಭಾರ ಎನ್ನುವಂತಿರುತ್ತಾರೆ ಇಂಥಹ ಜನರು, ಇವರೊಂದಿಗೆ ಬೆರೆತರೆ ನಿಮ್ಮ ಜೀವನವು ಹಾಳಾದೀತು ..!

ಕಪ್ಪು ಬಣ್ಣದ ಬಟ್ಟೆಗಳನ್ನು ಎಂದಿಗೂ ಧರಿಸಬೇಡಿ:

ಶಿವನಿಗೆ ಕಪ್ಪು ಬಣ್ಣ ಇಷ್ಟವಿಲ್ಲ ಎನ್ನಲಾಗುತ್ತದೆ. ಕಪ್ಪು ಬಣ್ಣವು (Black Color) ಕತ್ತಲೆಯ ಸಂಕೇತವಾಗಿದೆ ಎಂದು ನಂಬಲಾಗಿದೆ, ಆದ್ದರಿಂದ ಶಿವರಾತ್ರಿಯಂದು ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಬೇಡಿ. ಒಟ್ಟಾರೆಯಾಗಿ, ಈ ಉಲ್ಲೇಖಿಸಲಾದ ಬಣ್ಣಗಳ ಬಟ್ಟೆಗಳನ್ನು ಧರಿಸುವುದರಿಂದ ನಿಮ್ಮ ಪೂಜೆಗೆ ಉತ್ತಮ ಫಲ ದೊರೆಯಬಹುದು.

(Disclaimer: ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಮಾತ್ರ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News