Inauspicious Yogas: ಜೀವನವನ್ನು ನರಕವೇ ಮಾಡುತ್ತದೆ ಜನ್ಮ ಜಾತಕದಲ್ಲಿನ ಶಾಪಗ್ರಸ್ತ ಯೋಗಗಳು

Cursed Yogas Of Kundli - ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಜಾತಕದಲ್ಲಿ ಕೆಲವು ಯೋಗಗಳು (Kundali Yoga) ತುಂಬಾ ಅಶುಭ ಯೋಗಗಳು (Bad Yoga) ಎಂದು ಕರೆಯಲಾಗಿದೆ. ಇವುಗಳಲ್ಲಿ ಕೆಲವು ಶಾಪಗ್ರಸ್ತ ಯೋಗಗಳಾಗಿವೆ (Inauspicious Kundli Yoga). ಶಾಪಿತ ಯೋಗಗಳ ದೋಷದ ಪ್ರಭಾವದಿಂದ ಜೀವನದಲ್ಲಿ ಹಲವಾರು ರೀತಿಯ ಸಮಸ್ಯೆಗಳು ಬರುತ್ತವೆ.  

Written by - Nitin Tabib | Last Updated : Feb 27, 2022, 06:54 PM IST
  • ಈ ದೋಷಗಳ ಕಾರಣ ವಂಶವೃದ್ಧಿ ಆಗುವುದಿಲ್ಲ
  • ಜೀವನದಲ್ಲಿ ಸಂತಾನಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತವೆ.
  • ಜೀವನವೇ ನರಕವಾಗುತ್ತದೆ
Inauspicious Yogas: ಜೀವನವನ್ನು ನರಕವೇ ಮಾಡುತ್ತದೆ ಜನ್ಮ ಜಾತಕದಲ್ಲಿನ ಶಾಪಗ್ರಸ್ತ ಯೋಗಗಳು  title=
Astrology (File Photo)

ನವದೆಹಲಿ: Cursed Yogas Of Kundli -  ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಜಾತಕದಲ್ಲಿ ಇರುವ ಯೋಗಗಳು ಜೀವನದ ಸ್ಥಿತಿ ಮತ್ತು ದಿಕ್ಕನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿವೆ. ಇವುಗಳಲ್ಲಿನ ಕೆಲವು ಯೋಗಗಳ ಕಾರಣ ಇಡೀ ಜೀವನವೇ ನರಕಾಗುತ್ತದೆ. ಜಾತಕದ ಅಶುಭ ಯೋಗಗಳು ಶುಭ ಯೋಗಗಳಿಗಿಂತ ಹೆಚ್ಚು ಮತ್ತು ಬೇಗ ಪರಿಣಾಮ ಬೀರುತ್ತವೆ ಎಂದು ಜ್ಯೋತಿಷಿಗಳು ನಂಬುತ್ತಾರೆ. ಜಾತಕದ ಕೆಲವು ಶಾಪಗ್ರಸ್ತ ಯೋಗದ (Cursed Yogas) ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಪಿತೃ ದೋಷ 
ಜಾತಕದಲ್ಲಿ ಸೂರ್ಯ-ರಾಹು ಅಥವಾ ಸೂರ್ಯ-ಶನಿಯಿಂದಾಗಿ ಪಿತ್ರ ದೋಷವು ಯೋಗ ನಿರ್ಮಾಣಗೊಳ್ಳುತ್ತದೆ. ಜಾತಕದಲ್ಲಿ ಈ ದೋಷ ಇರುವವರು ಪಿತ್ರಾ ತರ್ಪಣ ಮಾಡಬೇಕು. ಇದಲ್ಲದೇ ಅಶ್ವಿನ ಮಾಸದ ಪಿತೃ ಪಕ್ಷದಲ್ಲಿ ಶ್ರಾದ್ಧವನ್ನು ಮಾಡಬೇಕು.

ಮಾತೃ ದೋಷ
ಯಾರ ಜಾತಕದಲ್ಲಿ ಚಂದ್ರನು ಪಂಚಮ ಅಧಿಪತಿಯಾಗುತ್ತಾನೆ ಮತ್ತು ಶನಿ-ರಾಹು ಮತ್ತು ಮಂಗಳದಂತಹ ಗ್ರಹಗಳಿಂದ ಪ್ರಭಾವಿತನಾಗಿರುತ್ತಾನೆ ಅಥವಾ ಜಾತಕದ 5, 9 ನೇ ಸ್ಥಾನದಲ್ಲಿ ಗುರು ಏಕಾಂಗಿಯಾಗಿ ಕುಳಿತಿದ್ದರೆ, ಸಂತಾನ ಸುಖ ಪ್ರಾಪ್ತಿಯಲ್ಲಿ ಅಡಚಣೆ ಎದುರಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಹಸುವಿನ ಹಾಲನ್ನು ಬೆಳ್ಳಿಯ ಪಾತ್ರೆಯಲ್ಲಿ ತುಂಬಿ ಬ್ರಾಹ್ಮಣನಿಗೆ ದಾನ ಮಾಡಬೇಕು.

ಪ್ರೇತ ಶಾಪ
ಒಬ್ಬ ವ್ಯಕ್ತಿಯು ಐದನೇ ಭಾವದಲ್ಲಿ ಶನಿ, 7 ನೇ ಭಾವದಲ್ಲಿ ಸೂರ್ಯ ಹಾಗೂ ಲಗ್ನದಲ್ಲಿ ದುರ್ಬಲ ಚಂದ್ರ ಮತ್ತು ರಾಹುಗಳ ಜೊತೆಗೆ ಜಾತಕದ 12 ನೇ ಭಾವದಲ್ಲಿ ಗುರು ಇದ್ದರೆ,  ಭೂತ  ಶಾಪ ಯೋಗ ನಿರ್ಮಾಣಗೊಳ್ಳುತ್ತದೆ. ಈ ದೋಷದಿಂದಾಗಿ, ವಂಶ ವೃದ್ಧಿಯಲ್ಲಿ  ಅಡಚಣೆ ಎದುರಾಗುತ್ತದೆ. ಈ ಅನುಕ್ರಮ ಹಲವು ವರ್ಷಗಳವರೆಗೆ ಮುಂದುವರಿಯುತ್ತದೆ.

ಇದನ್ನೂ ಓದಿ-Astrology : ಈ 4 ರಾಶಿಯವರು ತುಂಬಾ ಜಿಪುಣರು, ಆದ್ರೆ, ಈ ಕೆಲಸಕ್ಕೆ ಮುಕ್ತವಾಗಿ ಹಣ ಖರ್ಚು ಮಾಡುತ್ತಾರೆ!

ಬ್ರಾಹ್ಮಣ ಶಾಪ
ಯಾರ ಜಾತಕವು ಗುರುವಿನ ಸ್ಥಾನದಲ್ಲಿ ರಾಹು, ಜಾತಕದ 5ನೇ ಭಾವದಲ್ಲಿ  ಗುರು, ಮಂಗಳ ಅಥವಾ ಶನಿ ಇದ್ದರೆ ಮತ್ತು ನವಮೇಶ ಅಷ್ಟಮದಲ್ಲಿದ್ದರೆ, ಅದು ಬ್ರಾಹ್ಮಣ ಶಾಪ ದೋಷಕ್ಕೆ ಕಾರಣವಾಗುತ್ತದೆ. ಈ ದೋಷದಿಂದ ಸಂತಾನಕ್ಕೆ ಸಂಬಂಧಿಸಿದ ಸಮಸ್ಯೆ ಎದುರಾಗುತ್ತದೆ. ಇದರ ಪರಿಹಾರಕ್ಕಾಗಿ, ಲಕ್ಷ್ಮೀ ನಾರಾಯಣನ ವಿಗ್ರಹಗಳನ್ನು ದಾನ ಮಾಡಬೇಕು. ಜೊತೆಗೆ ಗೋದಾನ, ಕನ್ಯಾದಾನ ಕೈಗೊಳ್ಳಬೇಕು.

ಇದನ್ನೂ ಓದಿ-ಮದುವೆ ನಂತರ ಮಹಿಳೆಯರಲ್ಲಿ ಆಗುವ ನಾಲ್ಕು ಪ್ರಮುಖ ಬದಲಾವಣೆಗಳು ಇವೆ ನೋಡಿ!

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿವೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆಯಿರಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ಓದಿ-Shani Sade Sati Upay: ಸಾಡೇ ಸಾತಿ ಶನಿ ಕಾಟದಿಂದ ಮುಕ್ತಿ ಪಡೆಯಲು ಸರಳ ಉಪಾಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News