Vastu Tips: ಬೇಗ ಕಂಕಣ ಬಲ ಕೂಡಿ ಬರಲು ಮಲಗುವಾಗ ಈ ದಿಕ್ಕಿನೆಡೆ ತಲೆ ಇಟ್ಟು ಮಲಗಿ
Vastu Tips: ವಾಸ್ತು ಶಾಸ್ತ್ರದ (Vastu Shastra) ಪ್ರಕಾರ, ಮಲಗುವ ಸಮಯದಲ್ಲಿ ತಲೆ ಮತ್ತು ಕಾಲುಗಳನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಬಹಳ ಮುಖ್ಯ. ಯಾವುದಾದರೊಂದು ದಿಕ್ಕಿನಲ್ಲಿ ಕಾಲು ಮತ್ತು ತಲೆ ಮಾಡಿ ಮಲಗುವುದು ಮಾನಸಿಕ ಮತ್ತು ಆರ್ಥಿಕ ತೊಂದರೆಗಳನ್ನು ತರುತ್ತದೆ ಎನ್ನಲಾಗಿದೆ. ಹಾಗಾದರೆ ಬನ್ನಿ ನಿದ್ರೆಗೆ ಸಂಬಂಧಿಸಿದ ಈ ವಾಸ್ತು ಶಾಸ್ತ್ರದ ಸಲಹೆಗಳ (Sleeping Vastu Tips) ಬಗ್ಗೆ ತಿಳಿದುಕೊಳ್ಳೋಣ.
Vastu Tips: ವಾಸ್ತು ಶಾಸ್ತ್ರದಲ್ಲಿ (Vastu Shastra) ದಿಕ್ಕುಗಳಿಗೆ (Directions)ಭಾರಿ ಮಹತ್ವ ಕಲ್ಪಿಸಲಾಗಿದೆ. ಇದರಲ್ಲಿ ದಿಕ್ಕುಗಳನ್ನು ಆಧರಿಸಿಯೇ ಶುಭ ಹಾಗೂ ಅಶುಭ, ಮಂಗಳ-ಅಮಂಗಳ ಸಂಗತಿಗಳನ್ನು ನಿರ್ಧರಿಸಲಾಗುತದೆ. ವಾಸ್ತು ಶಾಸ್ತ್ರ ನಿಯಮಗಳನ್ನು ಅನುಸರಿಸಿದರೆ ಸುಖ-ಸಮೃದ್ಧಿ ನಿಮ್ಮದಾಗುತ್ತದೆ. ಇವುಗಳನ್ನು ನಿರ್ಲಕ್ಷಿಸುವುದು ಹಲವು ಬಾರಿ ಸಂಕಷ್ಟವನ್ನು ತಂದೊಡ್ಡುತ್ತವೆ.
ಸಾಮಾನ್ಯವಾಗಿ ಜನರು ಯಾವುದಾದರೊಂದು ದಿಕ್ಕಿನಲ್ಲಿ ಕಾಲು ಮತ್ತು ತಲೆ ಮಾಡಿ ಮಲಗುತ್ತಾರೆ. ವಾಸ್ತು ಶಾಸ್ತ್ರದ (Vastu Shastra) ಪ್ರಕಾರ, ಮಲಗುವ ಸಮಯದಲ್ಲಿ ತಲೆ ಮತ್ತು ಕಾಲುಗಳನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಬಹಳ ಮುಖ್ಯ. ಯಾವುದಾದರೊಂದು ದಿಕ್ಕಿನಲ್ಲಿ ಕಾಲು ಮತ್ತು ತಲೆ ಮಾಡಿ ಮಲಗುವುದು ಮಾನಸಿಕ ಮತ್ತು ಆರ್ಥಿಕ ತೊಂದರೆಗಳನ್ನು ತರುತ್ತದೆ ಎನ್ನಲಾಗಿದೆ. ಹಾಗಾದರೆ ಯಾವ ದಿಕ್ಕಿನಲ್ಲಿ ಕಾಲುಗಳನ್ನು ಹಾಗೂ ಯಾವ ದಿಕ್ಕಿನಲ್ಲಿ ತಲೆ ಮಾಡಿ ಮಲಗಬೇಕು ತಿಳಿಯೋಣ.
ಇದನ್ನೂ ಓದಿ-Friday Remedies: ಶುಕ್ರವಾರದಂದು ಈ ಕೆಲಸ ಮಾಡಿ ಲಕ್ಷ್ಮೀ ದೇವಿ ಆಶೀರ್ವಾದ ಪಡೆಯಿರಿ
ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಸರಿಯಾದ ಪದ್ಧತಿ (Right Sleeping Direction As Per Vastu)
1. ವಾಸ್ತು ಪ್ರಕಾರ, ಎಂದಿಗೂ ಉತ್ತರ ಅಥವಾ ಪಶ್ಚಿಮ ದಿಕ್ಕಿನ ಕಡೆಗೆ ತಲೆ ಮಾಡಿ ಮಲಗಬೇಡಿ. ಈ ರೀತಿ ಮಲಗುವ ನಕಾರಾತ್ಮಕ ಶಕ್ತಿ ಸಂಚಾರಕ್ಕೆ ಕಾರಣ ಹಾಗೂ ಒತ್ತಡವೂ ಹೆಚ್ಚುತ್ತದೆ. ವಾಸ್ತು ಪ್ರಕಾರ, ಒಬ್ಬರು ಯಾವಾಗಲೂ ದಕ್ಷಿಣ ಅಥವಾ ಪೂರ್ವ ದಿಕ್ಕಿನ ಕಡೆಗೆ ತಲೆ ಮಾಡಿ ಮಲಗಬೇಕು.
2. ವಾಸ್ತು ಪ್ರಕಾರ, ಮದುವೆಗೆ ಅರ್ಹರಾದ ಹುಡುಗ-ಹುಡುಗಿಯರು, ಅವರು ಉತ್ತರದ ಕಡೆಗೆ ಕಾಲು ಹಾಕಿ ಮಲಗಬೇಕು. ಹೀಗೆ ಮಾಡುವುದರಿಂದ ಶೀಘ್ರದಲ್ಲಿಯೇ ಕಂಕಣ ಬಲ ಕೂಡಿ ಬರುತ್ತದೆ.
3. ವಾಸ್ತು ಶಾಸ್ತ್ರದಲ್ಲಿ ಎಂದಿಗೂ ಮದುವೆಯಾಗದ ಮಹಿಳೆಯರು ಮನೆಯ ವಾಯುವ್ಯ ಕೋನದಲ್ಲಿ ಮಲಗಬಾರದು ಎಂದು ಹೇಳಲಾಗಿದೆ. ಈ ರೀತಿ ಮಾಡುವುದರಿಂದ ಅವರ ಮನದಲ್ಲಿ ಪ್ರತ್ಯೇಕ ಮನೆ ಮಾಡಿ ವಾಸಿಸುವ ಯೋಚನೆಗಳು ತುಂಬಿಕೊಳ್ಳುತ್ತವೆ.
ಇದನ್ನೂ ಓದಿ-Shani jayanti 2021 : ಜೂನ್ 10 ರಂದು ಶನೀಶ್ವರ ಜಯಂತಿ, ಶನಿ ದೇವರನ್ನು ಪ್ರಸನ್ನಗೊಳಿಸುವ ಬಗೆ ಯಾವುದು..?
4. ವಾಸ್ತು ಪ್ರಕಾರ, ಮನೆಯ ಹಿರಿಯರು ಪಶ್ಚಿಮ ದಿಕ್ಕಿನೆಡೆಗೆ ಕಾಲು ಚಾಚಿ ಮಲಗಬೇಕು. ಪಶ್ಚಿಮ ದಿಕ್ಕಿನಲ್ಲಿ ಕಾಲು ಚಾಚಿ ಮಲಗುವುದರಿಂದ ಅವರ ಆರೋಗ್ಯ ಸ್ಥಿತಿ ಚೆನ್ನಾಗಿರುತ್ತದೆ.
5. ವಾಸ್ತುಶಾಸ್ತ್ರದ (Vastu Shastra) ಪ್ರಕಾರ ಮನೆಯ ಮಲಗುವ ಕೋಣೆ ಅಥವಾ ಜಾಗದಲ್ಲಿ ಅಪ್ಪಿ-ತಪ್ಪಿಯೂ ಕೂಡ ಪ್ಲಾಸ್ಟಿಕ್ ಹೂವು ಅಥವಾ ಸಸ್ಯಗಳನ್ನು ಇಡಬಾರದು. ಇದರಿಂದ ಮನೆಯಲ್ಲಿ ಆರ್ಥಿಕ ಮುಗ್ಗಟ್ಟು ಉದ್ಭವಿಸುತ್ತದೆ.
6.ನಿತ್ಯ ಬೆಳಗ್ಗೆ-ಸಂಜೆ ಹೊತ್ತು ಮನೆಯ ಎಲ್ಲ ಕೋಣೆಗಳಲ್ಲಿ ಕರ್ಪೂರ ಉರಿಸಬೇಕು. ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ತೊಲಗುತ್ತದೆ.
ಇದನ್ನೂ ಓದಿ-Mangal Rashi Parivartan 2021: July 20ರವರೆಗೆ ಕರ್ಕ ರಾಶಿಯಲ್ಲಿ ಮಂಗಳ, ಈ ರಾಶಿಗಳ ಜನರ ಸಂಕಷ್ಟದಲ್ಲಿ ಹೆಚ್ಚಳ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ