ನವದೆಹಲಿ: Mars Transit 2021 - ಇಂದು ಜೂನ್ 2. ಮಂಗಳಾದೇವ ತನ್ನ ರಾಶಿಯನ್ನು ಪರಿವರ್ತಿಸಿದ್ದಾನೆ. ಇಂದು ತನ್ನ ರಾಶಿಯನ್ನು ಪರಿವರ್ತಿಸಿರುವ ಮಂಗಳ ಕರ್ಕ ರಾಶಿಯನ್ನು ಪ್ರವೇಶಿಸಿದ್ದಾನೆ. ಜ್ಯೋತಿಷ್ಯ ಶಾಸ್ತ್ರದ (Astrology) ಅನುಸಾರ ಗ್ರಹಗಳ ರಾಶಿ ಪರಿವರ್ತನೆ (Planet Transit 2021) ಎಲ್ಲ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಮಂಗಳನ ಶುಭ ಪ್ರಭಾವದಿಂದ ವ್ಯಕ್ತಿಗೆ ಜೀವನದಲ್ಲಿ ಎಲ್ಲಾ ರೀತಿಯ ಸುಖಗಳು ಪ್ರಾಪ್ತಿಯಾಗುತ್ತವೆ ಎಂಬ ನಂಬಿಕೆ. ಇನ್ನೊಂದೆಡೆ ಅಶುಭ ಪರಿಣಾಮಗಳಿಂದ ಸಂಕಷ್ಟಗಳು ಹೆಚ್ಚಾಗುತ್ತವೆ. ಮಂಗಳ ಜುಲೈ 20ರವರೆಗೆ ಕರ್ಕರಾಶಿಯಲ್ಲಿ ಇರಲಿದ್ದಾನೆ (Mangal Gochar 2021). ಮಂಗಳನ ಕರ್ಕ ರಾಶಿ ಪ್ರವೇಶ ಕೆಲ ರಾಶಿಗಳಿಗೆ ಶುಭ ಎನ್ನಲಾಗುವುದಿಲ್ಲ. ಈ ರಾಶಿಯ ಜನರು ಜುಲೈ 20ರವರೆಗೆ ಎಚ್ಚರಿಕೆಯಿಂದ ಇರಬೇಕಾದ ಅವಶ್ಯಕತೆ ಇದೆ. ಹಾಗಾದರೆ ಬನ್ನಿ ಯಾವ ರಾಶಿಯ ಜನರಿಗೆ ಇದು (Rashi Parivartan 2021) ಸಂಕಷ್ಟದ ಕರೆಗಂಟೆ ತಿಳಿದುಕೊಳ್ಳೋಣ ಬನ್ನಿ.
ಇದನ್ನೂ ಓದಿ- ಭೋಜನದ ನಂತರ ಸಾಮಾನ್ಯವಾಗಿ ಮಾಡುವ ಈ ತಪ್ಪನ್ನು ಸರಿಪಡಿಸಿಕೊಳ್ಳಿ
>> ಕರ್ಕ ರಾಶಿ - ಮಂಗಳನ ರಾಶಿ ಪರಿವರ್ತನೆ ಶುಭವಲ್ಲ, ಕುಟುಂಬ ಸದಸ್ಯರ ಜೊತೆಗೆ ಕಾಲ ಕಳೆಯಿರಿ, ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುವ ಸಾಧ್ಯತೆ.
>> ವೃಶ್ಚಿಕ ರಾಶಿ - ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಲಿವೆ. ಮಾನಸಿಕ ಒತ್ತಡ ಹೆಚ್ಚಾಗಲಿದೆ. ಸಫಲತೆ ಸಾಧಿಸಲು ಹೆಚ್ಚಿನ ಪ್ರಯತ್ನದ ಅವಶ್ಯಕತೆ ಇದೆ.
>> ಧನು ರಾಶಿ - ಸ್ವಂತದ ಕಡೆಗೆ ಹೆಚ್ಚು ಗಮನಹರಿಸಿ, ಕುಟುಂಬ ಸದಸ್ಯರ ಜೊತೆಗೆ ಇರುಸು -ಮುರುಸು ಉಂಟಾಗುವ ಸಾಧ್ಯತೆ, ಜಾಗ್ರತೆಯಿಂದ ಹಣ ಖರ್ಚು ಮಾಡಿ. ಆರ್ಥಿಕ ಸ್ಥಿತಿ ಹದಗೆಡುವ ಸಾಧ್ಯತೆ ಇದೆ.
ಇದನ್ನೂ ಓದಿ-ಹೊರಗಿನಿಂದ ಮನೆಗೆ ಬರುವಾಗ ಈ ವಿಚಾರಗಳ ಬಗ್ಗೆ ಇರಲಿ ಎಚ್ಚರ..!
ಈ ರಾಶಿಗಳ ಜನರಿಗೆ ಮಿಶ್ರಫಲಗಳು ಸಿಗಲಿವೆ
>> ವೃಷಭ ರಾಶಿ - ವಾದವಿವಾದಗಳಿಂದ ದೂರ ಉಳಿಯಿರಿ, ಇದರಿಂದ ಹಾನಿಯಾಗುವ ಸಾಧ್ಯತೆ ಇದೆ. ಕುಟುಂಬ ಸದಸ್ಯರ ಸಾಥ್ ಸಿಗಲಿದೆ. ಕಾರ್ಯಕ್ಷೇತ್ರದಲ್ಲಿ ಬಡ್ತಿಯ ಯೋಗ ಗೋಚರಿಸುತ್ತಿದೆ. ಜಾಗ್ರತೆಯಿಂದ ಹಣ ವೆಚ್ಚ ಮಾಡಿ.
>> ಮಿಥುನ ರಾಶಿ - ಆರೋಗ್ಯದ ವಿಶೇಷ ಕಾಳಜಿವಹಿಸಿ, ಆರ್ಥಿಕ ಸ್ಥಿತಿ ಹದಗೆಡುವ ಸಾಧ್ಯತೆ. ದಾಂಪತ್ಯ ಜೀವನದಲ್ಲಿ ಆನಂದ ಅನುಭವಿಸುವಿರಿ. ವಾಗ್ವಾದದಿಂದ ದೂರ ಉಳಿಯಿರಿ.
>> ಕನ್ಯಾ ರಾಶಿ - ಸ್ಥಿತಿ ಸಾಮಾನ್ಯವಾಗಿರಲಿದೆ, ಆರೋಗ್ಯದ ಕಾಳಜಿ ವಹಿಸಿ, ಆರ್ಥಿಕ ಸ್ಥಿತಿ ಸಾಮಾನ್ಯವಾಗಿರಲಿದೆ. ಸಫಲತೆ ಸಾಧಿಸುವ ಯೋಗವಿದೆ ಆದರೆ, ಪರಿಶ್ರಮದ ಅಗತ್ಯವಿದೆ.
>> ಮಕರ ರಾಶಿ - ವಾಗ್ವಾದದಿಂದ ದೂರ ಇರಿ. ಕೌಟುಂಬಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿ ಸಾಮಾನ್ಯವಾಗಿರಲಿದೆ.
ಇದನ್ನೂ ಓದಿ- Budh Vakri 2021: ಈ ದಿನದ ಮಧ್ಯರಾತ್ರಿಯಿಂದ ಈ ರಾಶಿಯ ಜನರು ಎಚ್ಚರದಿಂದಿರಬೇಕಾಗಲಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.