Shani jayanti 2021 : ಜೂನ್ 10 ರಂದು ಶನೀಶ್ವರ ಜಯಂತಿ, ಶನಿ ದೇವರನ್ನು ಪ್ರಸನ್ನಗೊಳಿಸುವ ಬಗೆ ಯಾವುದು..?

Shani jayanti 2021 :  ಗೊತ್ತಿದ್ದೋ ಗೊತ್ತಿಲ್ಲದೆಯೋ ಆದ ತಪ್ಪುಗಳಿಗೆ ಸರಿಯಾದ ಫಲ ನೀಡುತ್ತಾನೆ ಶನಿದೇವ  ಹಾಗಾಗಿ ಶಾಸ್ತ್ರಗಳಲ್ಲಿ ಶನಿದೇವರ ಪೂಜೆಗೆ ವಿಶೇಷ ಮಹತ್ವ ಇದೆ. ಸರಿಯಾದ ರೀತಿಯಲ್ಲಿ ಶನಿದೇವರ ಪೂಜೆ  ಮಾಡಿದರೆ ನಮ್ಮ ಗ್ರಹಗತಿಗಳು ಬದಲಾಗಲಿವೆ.

Written by - Ranjitha R K | Last Updated : Jun 7, 2021, 10:53 AM IST
  • ನಾವು ಮಾಡಿದ ಸರಿ ತಪ್ಪುಗಳಿಗೆ ಅನುಗುಣವಾಗಿ ಶನೀಶ್ವರ ಫಲ ನೀಡುತ್ತಾನೆ.
  • ಆತ ಕರ್ಮಫಲದಾತ. ನಮ್ಮ ನಮ್ಮ ಕರ್ಮಕ್ಕೆ ತಕ್ಕ ಫಲ ನೀಡುತ್ತಾನೆ ಶನೀಶ್ವರ.
  • ಜೂನ್ ಹತ್ತರಂದು ಶನೀಶ್ವರ ಜಯಂತಿ. ಶನೀಶ್ವರ ಜಯಂತಿಯ ಮಹತ್ವ ಏನು..?
Shani jayanti 2021 : ಜೂನ್ 10 ರಂದು ಶನೀಶ್ವರ ಜಯಂತಿ, ಶನಿ ದೇವರನ್ನು ಪ್ರಸನ್ನಗೊಳಿಸುವ ಬಗೆ ಯಾವುದು..? title=
Shani jayanti 2021 (file photo zee news)

ನವದೆಹಲಿ : ಶನೀಶ್ವರ ನ್ಯಾಯದ ದೇವರು. ನಾವು ಮಾಡಿದ ಸರಿ ತಪ್ಪುಗಳಿಗೆ ಅನುಗುಣವಾಗಿ ಶನೀಶ್ವರ (Lord Shani) ಫಲ ನೀಡುತ್ತಾನೆ. ಆತ ಕರ್ಮಫಲದಾತ. ನಮ್ಮ ನಮ್ಮ ಕರ್ಮಕ್ಕೆ ತಕ್ಕ ಫಲ ನೀಡುತ್ತಾನೆ ಶನೀಶ್ವರ (Shani Dev) . ಜೂನ್ ಹತ್ತರಂದು ಶನೀಶ್ವರ ಜಯಂತಿ. ಶನೀಶ್ವರ ಜಯಂತಿಯ ಮಹತ್ವ ಏನು..?ಶನಿ ದೇವರನ್ನು ಪ್ರಸನ್ನಗೊಳಿಸುವ ಬಗೆ ಯಾವುದು ಎಂದು ತಿಳಿದುಕೊಳ್ಳೋಣ. 

ಶನಿ ದೇವರ ಪೂಜೆಯ ಮಹತ್ವ ಏನು..?
ಗೊತ್ತಿದ್ದೋ ಗೊತ್ತಿಲ್ಲದೆಯೋ ಆದ ತಪ್ಪುಗಳಿಗೆ ಸರಿಯಾದ ಫಲ ನೀಡುತ್ತಾನೆ ಶನಿದೇವ (Shani deva).  ಹಾಗಾಗಿ ಶಾಸ್ತ್ರಗಳಲ್ಲಿ ಶನಿದೇವರ ಪೂಜೆಗೆ ವಿಶೇಷ ಮಹತ್ವ ಇದೆ. ಸರಿಯಾದ ರೀತಿಯಲ್ಲಿ ಶನಿದೇವರ ಪೂಜೆ (Shani pooja) ಮಾಡಿದರೆ ನಮ್ಮ ಗ್ರಹಗತಿಗಳು ಬದಲಾಗಲಿವೆ.  ಇದರ ಜೊತೆ ಶನಿದೇವರ ಅನುಗ್ರಹಕ್ಕೂ ನಾವು ಪಾತ್ರರಾಗುತ್ತೇವೆ.

ಇದನ್ನೂ ಓದಿ : Solar Eclipse 2021: ಶನಿ ಜಯಂತಿ ದಿನದಂದೇ ಸೂರ್ಯಗ್ರಹಣ, ಈ ರಾಶಿಯವರ ಮೇಲೆ ಹೆಚ್ಚು ಪರಿಣಾಮ

ಶನಿದೇವರ ಪೂಜೆಗೆ ಶುಭ ಮುಹೂರ್ತ:
ಜೂನ್ ಹತ್ತರಂದು ಶನಿ ಜಯಂತಿ (Shani Jayanthi) ಇದೆ. ಜೇಷ್ಠ ಮಾಸದ ಅಮವಾಸ್ಯೆ ಅಂದರೆ ಜೂನ್ 9 ರಂದು ಮಧ್ಯಾಹ್ನ 1 ಗಂಟೆ 57 ನಿಮಿಷದಿಂದ ಶನಿದೇವರ ಪೂಜೆಯ ಮುಹೂರ್ತ ಆರಂಭವಾಗುತ್ತದೆ. ಇದು ಜೂನ್ ಹತ್ತು ಸಂಜೆ ನಾಲ್ಕು ಗಂಟೆ 22 ನಿಮಿಷದ ತನಕ ಮುಹೂರ್ತ ಇರುತ್ತದೆ.

ಶನಿದೇವರನ್ನು ಪ್ರಸನ್ನಗೊಳಿಸುವ ಬಗೆ ಯಾವುದು..?
1. ಶನಿವಾರ ವಿಶೇಷ ವ್ರತ ಹಿಡಿಯುವುದು
2. ದಾನ ಧರ್ಮಗಳಿಂದ ಶನಿದೇವರನ್ನು ಪ್ರಸನ್ನಗೊಳಿಸಬಹುದು. ಶನಿ ಜಯಂತಿಯಂದು ಅರ್ಹರಿಗೆ ದಾನ ಮಾಡುವುದು ಶನಿದೇವರನ್ನು ಸಂಪ್ರೀತಿಗೊಳಿಸುವ ಸರ್ವೋಚ್ಚ ಉಪಾಯವಾಗಿದೆ.  
3. ವಿಧಿವತ್ತಾಗಿ ಶನಿದೇವರ ಉಪಾಸನೆ ಮಾಡುವುದು
4. ಆರ್ಥಿಕ ಸಮಸ್ಯೆಗಳಿದ್ದವರು ಶನಿವಾರ ದಿನ ಅಶ್ವತ್ಥ ಮರಕ್ಕೆ (Peepal tree) ಜಲ ಅರ್ಪಣೆ ಮಾಡಿ, ಎಳ್ಳೆಣ್ಣೆ ದೀಪ ಬೆಳಗಬಹುದು.
5. ಬೆಳಗ್ಗೆ ಶನಿದೇವರ ಮಂತ್ರ ಪಠಿಸಲು (Shani deva mantra patan) ಆಗದೇ ಹೋದರೆ ಸಂಜೆ ಶನಿದೇವರ ಮಂತ್ರ ಪಠಿಸಬಹುದು.
6. ಯಾವ ದೇಗುಲದಲ್ಲಿ ಶನಿದೇವರ ಶಿಲಾಮೂರ್ತಿ ಇದೆಯೋ ಅದೇ ದೇಗುಲದಲ್ಲಿ ಶನಿದೇವರ ಅರ್ಚನೆ ಮಾಡಿ.
7. ಶನಿ ದೇವರ ಪ್ರತೀಕವಾಗಿ ಅಶ್ವತ್ಥ ವೃಕ್ಷಕ್ಕೆ ಪೂಜೆ ಮಾಡಿ

ಇದನ್ನೂ ಓದಿ : Friday Remedies: ಶುಕ್ರವಾರದಂದು ಈ ಕೆಲಸ ಮಾಡಿ ಲಕ್ಷ್ಮೀ ದೇವಿ ಆಶೀರ್ವಾದ ಪಡೆಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News