ಪ್ರತಿಯೊಬ್ಬರೂ ಸುಂದರವಾದ ಮತ್ತು ಗಟ್ಟಿಯಾದ ಕೂದಲು ಇರಬೇಕು ಎಂದು ಆರೈಕೆ ಮಾಡುತ್ತಾರೆ. ಆದರೆ ಧೂಳು-ಮಣ್ಣು ಮತ್ತು ಮಾಲಿನ್ಯದಿಂದಾಗಿ ಕೂದಲು ಬೇಗನೆ ಹಾಳಾಗಲು ಪ್ರಾರಂಭಿಸುತ್ತದೆ. ಹೀಗಾಗಿ ಹೆಚ್ಚಿನ ಜನರು ಕೂದಲಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರಿಂದ ಮುಕ್ತಿ ಪಡೆಯಲು ಜನರು ದುಬಾರಿ ಮತ್ತು ರಾಸಾಯನಿಕಯುಕ್ತ ಕೂದಲು ಆರೈಕೆ ಉತ್ಪನ್ನಗಳು ಅಥವಾ ಶಾಂಪೂಗಳನ್ನು ಬಳಸುತ್ತಾರೆ. ಆದರೆ ನೀವು ಬಯಸಿದರೆ, ಮುಲ್ತಾನಿ ಮಿಟ್ಟಿಯಿಂದ ನಿಮ್ಮ ಕೂದಲನ್ನು ಉತ್ತಮಗೊಳಿಸಬಹುದು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Rashmika Mandanna: ಶೀಘ್ರದಲ್ಲೇ ರಶ್ಮಿಕಾ ರಾಜಕೀಯ ಪ್ರವೇಶ? ಕರ್ನಾಟಕದ ಸಂಸದೆ ಆಗ್ತಾರಂತೆ!


ಜನರು ಮುಲ್ತಾನಿ ಮಿಟ್ಟಿ ಹೇರ್ ಪ್ಯಾಕ್ ಅನ್ನು ಹಚ್ಚಿತ್ತಾರೆ. ಇದನ್ನು ಹಚ್ಚುವ ಮೂಲಕ ನೀವು ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಮುಲ್ತಾನಿ ಮುಟ್ಟಿಯಿಂದ ಕೂದಲು ತೊಳೆಯುವುದರಿಂದ ಏನೆಲ್ಲಾ ಲಾಭಗಳು ಸಿಗುತ್ತವೆ ಎಂಬುದನ್ನು ಇಲ್ಲಿ ತಿಳಿಸುತ್ತೇವೆ. 


ಮುಲ್ತಾನಿ ಮಿಟ್ಟಿಯಿಂದ ಕೂದಲು ತೊಳೆಯುವುದರಿಂದ ಆಗುವ ಪ್ರಯೋಜನಗಳು: 


ನೀವು ಗುಂಗುರು ಕೂದಲು ಹೊಂದಿದ್ದರೆ ಮುಲ್ತಾನಿ ಮಿಟ್ಟಿಯಿಂದ ನಿಮ್ಮ ಕೂದಲನ್ನು ತೊಳೆಯಬಹುದು. ಮುಲ್ತಾನಿ ಮಿಟ್ಟಿ ಕೂದಲನ್ನು ಮೃದು ಮತ್ತು ಸ್ಟ್ರೈಟ್‌ ಮಾಡಲು ಸಹಾಯ ಮಾಡುತ್ತದೆ. ಆದರೆ ಹೆಚ್ಚು ಗುಂಗುರು ಕೂದಲನ್ನು ಹೊಂದಿದ್ದರೆ ಅದನ್ನು ಸಂಪೂರ್ಣವಾಗಿ ಮೃದುವಾಗಿ ಮಾಡಲು ಸಮಯ ತೆಗೆದುಕೊಳ್ಳಬಹುದು.


ಕೆಲವರು ಎಣ್ಣೆಯುಕ್ತ ಕೂದಲು ಮತ್ತು ನೆತ್ತಿಯನ್ನು ಹೊಂದಿರುತ್ತಾರೆ. ಆದ್ದರಿಂದ ಮುಲ್ತಾನಿ ಮಿಟ್ಟಿಯಿಂದ ಕೂದಲನ್ನು ತೊಳೆಯುವುದು ಪ್ರಯೋಜನಕಾರಿಯಾಗಿದೆ. ಮುಲ್ತಾನಿ ಮಿಟ್ಟಿ ನೆತ್ತಿಯಲ್ಲಿ ಉಂಟಾಗುವ ಹೆಚ್ಚುವರಿ ಎಣ್ಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ಮುಲ್ತಾನಿ ಮಿಟ್ಟಿಯಿಂದ ಕೂದಲನ್ನು ತೊಳೆದರೆ, ಅದು ಕೂದಲಿನ ಜಿಗುಟುತನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ಮುಲ್ತಾನಿ ಮಿಟ್ಟಿ ಬಳಸಿ ಕೂದಲನ್ನು ತೊಳೆಯುವುದರಿಂದ ಕೂದಲು ಮತ್ತು ನೆತ್ತಿ ಸರಿಯಾಗಿ ಸ್ವಚ್ಛಗೊಳ್ಳುತ್ತದೆ. ಇದು ಕೂದಲಿನಲ್ಲಿ ಸಂಗ್ರಹವಾಗಿರುವ ಎಲ್ಲಾ ಧೂಳು, ಮಣ್ಣು ಮತ್ತು ಮಾಲಿನ್ಯಕಾರಕಗಳನ್ನು ತೆಗೆದುಹಾಕುತ್ತದೆ. ಮತ್ತೊಂದೆಡೆ, ಮುಲ್ತಾನಿ ಮಿಟ್ಟಿ ಕೂದಲು ಕಂಡೀಷನಿಂಗ್ ಅನ್ನು ಸಹ ಮಾಡುತ್ತದೆ.


ಮುಲ್ತಾನಿ ಮಿಟ್ಟಿಯನ್ನು ಹಚ್ಚುವುದರಿಂದ ನೆತ್ತಿಯಲ್ಲಿ ರಕ್ತ ಪರಿಚಲನೆ ವೇಗವಾಗುತ್ತದೆ. ಈ ಕಾರಣದಿಂದಾಗಿ ಕೂದಲಿನ ಕಿರುಚೀಲಗಳಿಗೆ ರಕ್ತದ ಹರಿವು ಹೆಚ್ಚಾಗುತ್ತದೆ. ಇದು ಕೂದಲನ್ನು ಪೋಷಿಸುತ್ತದೆ ಮತ್ತು ಬಲಗೊಳಿಸುತ್ತದೆ.


ಇದನ್ನೂ ಓದಿ:Neeraj Chopra’s Diet : ನೀರಜ್ ಚೋಪ್ರಾ ಪದಕ ಗೆಲ್ಲಲು 'ಡಯಟ್ ಪ್ಲಾನ್' ಏನು ಗೊತ್ತಾ? ಇಲ್ಲಿದೆ ನೋಡಿ


(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.