ರಾಷ್ಟ್ರ ರಾಜಧಾನಿಗೂ ಕಾಲಿಟ್ಟ ಮಂಕಿಪಾಕ್ಸ್‌: ದೇಶದಲ್ಲಿ 4ನೇ ಪ್ರಕರಣ ದಾಖಲು

ಇನ್ನು ಮಂಕಿಪಾಕ್ಸ್‌ ಪ್ರಕರಣ ಜಗತ್ತಿನಾದ್ಯಂತ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ವಿಶ್ವ ಆರೋಗ್ಯ ಸಂಸ್ಥೆ ಮಂಕಿಪಾಕ್ಸ್ ಅನ್ನು ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದೆ. 

Written by - Bhavishya Shetty | Last Updated : Jul 24, 2022, 12:31 PM IST
  • ವಿದೇಶಿ ಪ್ರಯಾಣದ ದಾಖಲೆಯಿಲ್ಲದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಪ್ರಕರಣ
  • ನವದೆಹಲಿಯಲ್ಲಿ ಮೊದಲ ಮಂಕಿಪಾಕ್ಸ್ ವೈರಸ್ ಪ್ರಕರಣ ಪತ್ತೆ
  • ಭಾರತದ ನಾಲ್ಕನೇ ಪ್ರಕರಣವಾಗಿದ್ದು, ಉಳಿದ ಮೂರು ಕೇಸ್‌ಗಳು ಕೇರಳದಲ್ಲಿ ಕಂಡುಬಂದಿದೆ
ರಾಷ್ಟ್ರ ರಾಜಧಾನಿಗೂ ಕಾಲಿಟ್ಟ ಮಂಕಿಪಾಕ್ಸ್‌: ದೇಶದಲ್ಲಿ 4ನೇ ಪ್ರಕರಣ ದಾಖಲು  title=
monkeypox

ಯಾವುದೇ ವಿದೇಶಿ ಪ್ರಯಾಣದ ದಾಖಲೆಯಿಲ್ಲದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಪ್ರಕರಣ ಕಂಡುಬಂದಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಭೀತಿ ಹೆಚ್ಚಾಗಿದೆ. ಶನಿವಾರದಂದು ಪರೀಕ್ಷೆ ನಡೆಸಲಾಗಿದ್ದು, ಈ ಸಂದರ್ಭದಲ್ಲಿ ಮಂಕಿಪಾಕ್ಸ್‌ ರೋಗವಿರುವುದು ಪತ್ತೆಯಾಗಿದೆ. ಇದು ನವದೆಹಲಿಯಲ್ಲಿ ಮೊದಲ ಮಂಕಿಪಾಕ್ಸ್ ವೈರಸ್ ಪ್ರಕರಣವಾಗಿದೆ.  ಭಾರತದ ನಾಲ್ಕನೇ ಪ್ರಕರಣವಾಗಿದ್ದು, ಉಳಿದ ಮೂರು ಕೇಸ್‌ಗಳು ಕೇರಳದಲ್ಲಿ ಕಂಡುಬಂದಿದೆ.

ಇನ್ನು ಮಂಕಿಪಾಕ್ಸ್‌ ಪ್ರಕರಣ ಜಗತ್ತಿನಾದ್ಯಂತ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ವಿಶ್ವ ಆರೋಗ್ಯ ಸಂಸ್ಥೆ ಮಂಕಿಪಾಕ್ಸ್ ಅನ್ನು ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದೆ. 

ಇದನ್ನೂ ಓದಿ: ಈ ದಿನದಂದು ದೇವಸ್ಥಾನದಲ್ಲಿ ಚಪ್ಪಲಿ ಕಳ್ಳತನವಾದ್ರೆ ಮಂಗಳಕರ! ಇದಕ್ಕಿದೆ ಪ್ರಮುಖ ಕಾರಣ

ವಿಶ್ವದ 75 ದೇಶಗಳಲ್ಲಿ ಮಂಕಿಪಾಕ್ಸ್‌ ಪ್ರಕರಣ ವ್ಯಾಪಕವಾಗಿ ಮತ್ತು ವೇಗವಾಗಿ ಹರಡುತ್ತಿದ್ದು, ಈವರೆಗೆ 16 ಸಾವಿರ ಪ್ರಕರಣಗಳು ಪತ್ತೆಯಾಗಿವೆ. ಅಷ್ಟೇ ಅಲ್ಲದೆ, 5 ಮಂದಿ ಸಾವನ್ನಪ್ಪಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಡಾ.ಟಾಡ್ರಾಯ್ಡ್ ಅಬ್ರಹಾಂ ಅವರು ಮಂಕಿಪಾಕ್ಸ್ ಅನ್ನು ಜಾಗತಿಕ ತುರ್ತು ಪರಿಸ್ಥಿತಿ ಎಂದು ಶನಿವಾರದಂದು ಘೋಷಿಸಿದ್ದಾರೆ. 

ಜೂನ್ ಅಂತ್ಯದಿಂದ ಜುಲೈವರೆಗೆ ಮಂಕಿಪಾಕ್ಸ್‌ ಪ್ರಕರಣವು ಶೇ 77ರಷ್ಟು ವೇಗವಾಗಿ ಹರಡುತ್ತಿದೆ. ಅಷ್ಟೇ ಅಲ್ಲದೆ, ಈ ರೋಗವು ಮೊದಲು ಯಾವುದೇ ಪ್ರಕರಣ ಕಂಡುಬಂದಿಲ್ಲದ ದೇಶಗಳಲ್ಲಿಯೂ ಹರಡಿದ್ದು, ಭಯ ಹೆಚ್ಚಿಸಿದೆ. 

ಮಂಕಿಪಾಕ್ಸ್‌ ಪ್ರಕರಣವು ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ ಹೆಚ್ಚು ವ್ಯಾಪಕವಾಗಿ ಹರಡುತ್ತಿದ್ದು, ಶೇ. 80 ರಷ್ಟು ಪ್ರಕರಣಗಳು ಯುರೋಪ್‌ನಲ್ಲಿ ಕಂಡುಬಂದಿವೆ. 

ಉತ್ತರ ಅಮೆರಿಕದ 44 ರಾಜ್ಯಗಳಲ್ಲಿ  2,500 ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿವೆ. ಯುರೋಪ್ ಮತ್ತು ಉತ್ತರ ಅಮೆರಿಕಾದ ಕೆಲ ಪ್ರದೇಶಗಳಲ್ಲಿ ಇಲ್ಲಿಯವರೆಗೆ ಈ ಕಾಯಿಲೆ ಪತ್ತೆಯಾಗಿರಲಿಲ್ಲ. ಆದರೆ ಇದೀಗ ಇಲ್ಲೂ ಸಹ ಮಂಕಿಪಾಕ್ಸ್‌ ಕೇಸ್‌ಗಳು ಕಂಡುಬಂದಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. 

ಇದನ್ನೂ ಓದಿ: ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧ: ಫುಲ್ ಆಕ್ಟೀವ್ ಆದ ಬಿಬಿಎಂಪಿ ಅಧಿಕಾರಿಗಳು

ಮಂಕಿಪಾಕ್ಸ್ ಪ್ರಕರಣ ಜಾಗತಿಕವಾಗಿ ವೇಗ ಪಡೆದುಕೊಳ್ಳುತ್ತಿದ್ದು, ಇದನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಡಬ್ಲ್ಯೂ ಹೆಚ್‌ಒ ಘೋಷಣೆ ಮಾಡಿದೆ. ಜನವರಿ 2020 ರಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯು ಕೊರೊನಾ ವೈರಸ್ ಅನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿತು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News