ಚಿಂತಾಮಣಿ: ಕಾಲೇಜಿನಿಂದ ಮನೆಗೆ ಹೋಗಲು ಬಿಸಿಲ ಬೇಗೆ, ಬಿಸಿಲಿನಿಂದ ಬಚಾವಾಗಲು ಬ್ಯಾಗಲ್ಲಿದ್ದ ಛತ್ರಿ ಹಿಡಿದುಕೊಂಡು ಸೂರ್ಯನಿಗೆ ಹಿಡಿ ಶಾಪ ಹಾಕುತ್ತಿರುವುದು ಚಿಂತಾಮಣಿ ನಗರದಲ್ಲಿ ಮದ್ಯಾಹ್ನ 1 ಗಂಟೆ ಸಮಯಕ್ಕೆ ನಗರದಲ್ಲಿ ತಾಪಮಾನ ಬರೋಬ್ಬರಿ 36 ಡಿಗ್ರಿ ಸೆಲ್ಷಿಯಸ್ ದಾಖಲಾಗಿದೆ. 


COMMERCIAL BREAK
SCROLL TO CONTINUE READING

ತಾಪಮಾನ ಹೆಚ್ಚಳದಿಂದಾಗಿ ರೈತರು, ವಿದ್ಯಾರ್ಥಿನಿಯರು, ವಾಹನ ಸವಾರರು, ಬಿಸಿಲಿನಿಂದ ಬಚಾವಾಗಲು, ತಲೆ ಮೇಲೆ ಟವೆಲ್, ಟೋಪಿ, ವೇಲ್ ಧರಿಸಿಸಿದ್ರೆ, ಇನ್ನು ಕೆಲವರು ಛತ್ರಿ ಹಾಗೂ ಮರಗಳ ನೆರಳಿನ ಮೊರೆ ಹೋಗಿದ್ದಾರೆ. ಇನ್ನು ಕೆಲ ಯುವಕರಂತೂ ಬಿಸಿಲಿನಿಂದ ಬಚಾವಾಗಲು ಸ್ವಿಮ್ಮಿಂಗ್ ಪೂಲ್​ನಲ್ಲಿ ಕಾಲ ಕಳೆಯುತ್ತಿದ್ದಾರೆ.


ಇದನ್ನೂ ಓದಿ- Summer Protection Tips: ಬೇಸಿಗೆಯಲ್ಲಿ ಬರಿ ಮೋಜು ಅಷ್ಟೇ ಅಲ್ಲ ಮುಖ್ಯ..! ತಪ್ಪದೆ ತಜ್ಞರ ಈ ಸಲಹೆಗಳನ್ನು ಅನುಸರಿಸಿ


ಹೌದು, ನಗರದ ರೈಲ್ವೆ ಸ್ಟೇಷನ್ ರಸ್ತೆ ವಾಯುಪುತ್ರ ನಗರದಲ್ಲಿರುವ ಸ್ವಿಮ್ಮಿಂಗ್ ಪೂಲ್ ನಲ್ಲಿ ಬೆಳಗ್ಗೆ 8:00 ಯಿಂದ ಮಧ್ಯಾಹ್ನದವರೆಗೂ ಜಿಲ್ಲೆಯಲ್ಲಿ ಬೆಸ್ಟ್ ಡ್ಯಾನ್ಸ್ ಮಾಸ್ಟರ್ ಅನ್ನಿಸಿಕೊಂಡಿರುವ ಕೇಶವ ರವರು ಶಾಲಾ ಕಾಲೇಜಿನ ಮಕ್ಕಳಿಗೆ ಸ್ವಿಮ್ಮಿಂಗ್ ಕಲಿಸುತ್ತಿದ್ದಾರೆ.  


ಇದನ್ನೂ ಓದಿ- Migraine Attacks In Summer: ಬೇಸಿಗೆಯಲ್ಲಿ ಮೈಗ್ರೇನ್ ದಾಳಿಗೆ 5 ಪ್ರಮುಖ ಕಾರಣಗಳಿವು


ಸ್ವಿಮ್ಮಿಂಗ್ ಕಲಿಯಲು ಪುಟಾಣಿ ಮಕ್ಕಳು ಖುಷಿಖುಷಿಯಾಗಿ ಬಂದು ನೀರಿನಲ್ಲಿ ಧುಮುಕಿ ಈಜು ಕಲಿಯುತ್ತಿರುವುದನ್ನು ಕಂಡು ಪೋಷಕರು ಸಹ ಫುಲ್ ಖುಷಿ ಪಡುತ್ತಿದ್ದಾರೆ. ಇದರಿಂದ ಒಂದೆಡೆ ಮಕ್ಕಳು ಬಿಸಿಲಿನ ಬೇಗೆಯಿಂದ ಪರಿಹಾರವನ್ನು ಪಡೆದರೆ, ಮತ್ತೊಂದೆಡೆ ಮಕ್ಕಳು ಈಜುವುದನ್ನು ಕೂಡ ಕಲಿತಂತಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.