Watermelon : ಈ ಸಮಯದಲ್ಲಿ ಹೆಚ್ಚಾಗಿ ಬೆವರು ಬರುವುದು ಸಹಜ. ಅದರಲ್ಲೂ ಹೊರಗೆ ಹೋದರಂತೂ ಬಟ್ಟೆಯೆಲ್ಲ ಬೆವರಿನಿಂದ ತೇವವಾಗುತ್ತದೆ. ಇದಕ್ಕೆ ಕಾರಣ ನಮ್ಮ ದೇಹದಿಂದ ಪೌಷ್ಟಿಕಾಂಶಗಳ ನಷ್ಟ ಉಂಟಾಗುವುದು. ಆದರೆ ಇದನ್ನು ಸಮತೋಲನಗೊಳಿಸಿಕೊಳ್ಳಲು ಅನೇಕ ಮಂದಿ ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ತಿನ್ನುತ್ತಾರೆ.
ನಮ್ಮ ಆರೋಗ್ಯ ಯಾವಾಗಲೂ ಒಂದೇ ರೀತಿ ನಮ್ಮ ಆರೋಗ್ಯ ಕೂಡ ಬದಲಾಗುತ್ತಿರುತ್ತದೆ. ಸದ್ಯ ಈಗ ಬೇಸಿಗೆ ಕಾಲ ಆರಂಭವಾಗಿದೆ. ಹುರಿಯುವ ಬಿಸಿಲಿದೆ ಎಂಬುವುದು ಎಲ್ಲರಿಗೂ ತಿಳಿದಿದೆ. ಈ ಸಮಯದಲ್ಲಿ ಹೆಚ್ಚಾಗಿ ಬೆವರು ಬರುವುದು ಸಹಜ. ಅದರಲ್ಲೂ ಹೊರಗೆ ಹೋದರಂತೂ ಬಟ್ಟೆಯೆಲ್ಲ ಬೆವರಿನಿಂದ ತೇವವಾಗುತ್ತದೆ. ಇದಕ್ಕೆ ಕಾರಣ ನಮ್ಮ ದೇಹದಿಂದ ಪೌಷ್ಟಿಕಾಂಶಗಳ ನಷ್ಟ ಉಂಟಾಗುವುದು. ಆದರೆ ಇದನ್ನು ಸಮತೋಲನಗೊಳಿಸಿಕೊಳ್ಳಲು ಅನೇಕ ಮಂದಿ ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ತಿನ್ನುತ್ತಾರೆ.
ಕಲ್ಲಂಗಡಿ ಹಣ್ಣಿನಲ್ಲಿ ಲೈಕೋಪಿನ್, ಆಂಟಿ ಆಕ್ಸಿಡೆಂಟ್ ಅಂಶಗಳು, ವಿಟಮಿನ್ ಎ, ವಿಟಮಿನ್ ಸಿ, ಪೊಟ್ಯಾಶಿಯಂ ಮತ್ತು ಅಮೈನೋ ಆಮ್ಲಗಳು ಹೆಚ್ಚಾಗಿವೆ. ಅಲ್ಲದೇ ಈ ಹಣ್ಣು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಬಹಳ ಸಹಾಯಕವಾಗಿದೆ. ಏಕೆಂದರೆ ಇದರಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆ ಇದ್ದು, ಈ ಹಣ್ಣಿನ ಸೇವನೆ ನಮ್ಮ ಹೊಟ್ಟೆಯನ್ನು ತುಂಬಾ ಹೊತ್ತು ತುಂಬಿಸಿರುತ್ತದೆ.
ಇದನ್ನು ಓದಿ : ಬೆಂಗಳೂರಿನ ಈ ಎರಡು ನಿಲ್ದಾಣಗಳ ಮಧ್ಯೆ ಸ್ಕೈವಾಕ್ ನಿರ್ಮಾಣ ಯೋಜನೆ : ಯಾವವು ಆ ನಿಲ್ದಾಣಗಳು ತಿಳಿಯಿರಿ
ಬೇಸಿಗೆಯ ಬಿಸಿಲಿನ ಬೇಗೆಯಿಂದ ನಮ್ಮ ದೇಹವನ್ನು ಈ ಹಣ್ಣು ತಂಪಾಗಿಡುತ್ತದೆ. ಅಲ್ಲದೇ ಇದರಲ್ಲಿ 92% ನೀರಿನ ಅಂಶವಿದೆ. ಹಾಗಾಗಿ ಇದು ನಮ್ಮ ದೇಹಕ್ಕೆ ನೀರಿನ ಅಂಶವನ್ನು ಹೆಚ್ಚಾಗಿ ಒದಗಿಸುತ್ತದೆ.
. ತಾಜಾ ಕಲ್ಲಂಗಡಿ ಸಿಟ್ರುಲಿನ್ ಅನ್ನು ಹೊಂದಿರುತ್ತದೆ, ಇದು ಅಗತ್ಯವಾದ ಅಮೈನೋ ಆಮ್ಲವಾಗಿದೆ. ಈ ಸಿಟ್ರುಲೈನ್ ನೈಟ್ರಿಕ್ ಆಕ್ಸೈಡ್ 6 ಅನ್ನು ಉತ್ಪಾದಿಸುತ್ತದೆ. ಇದರ ಪರಿಣಾಮವಾಗಿ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಕಲ್ಲಂಗಡಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ ಮತ್ತು ಇದರ ಪರಿಣಾಮವಾಗಿ ದೇಹದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಲ್ಲಂಗಡಿ ನಿಯಂತ್ರಿಸುತ್ತದೆ. ಡಯೆಟ್ ಮಾಡುವವರಿಗೂ ಕಲ್ಲಂಗಡಿ ತುಂಬಾ ಒಳ್ಳೆಯದು
ಆದರೆ ಕೆಲ ಮಂದಿ ಕಲ್ಲಂಗಡಿಯನ್ನು ರೆಫ್ರಿಜರೇಟರ್ನಲ್ಲಿ ಇಟ್ಟು ತಿನ್ನುತ್ತಾರೆ. ಆದರೆ ಹೀಗೆ ಮಾಡುವುದರಿಂದ ಪೌಷ್ಟಿಕಾಂಶದ ಮೌಲ್ಯ ಕಡಿಮೆಯಾಗುತ್ತದೆ ಮತ್ತು ಸಾಮಾನ್ಯವಾಗಿ ಕೆಲ ಮಂದಿ ಹಣ್ಣುಗಳನ್ನು ಮಾರುಕಟ್ಟೆಯಿಂದ ಖರೀದಿಸಿ ಮನೆಗೆ ತಂದ ನಂತರ ಫ್ರಿಜ್ ನಲ್ಲಿ ಇಡುತ್ತಾರೆ. ಆದರೆ ಹಣ್ಣನ್ನು ಕತ್ತರಿಸಿ ಫ್ರಿಜ್ ನಲ್ಲಿ ಇಡುವ ಅಭ್ಯಾಸ ನಿಮಗಿದ್ದರೆ ಇನ್ಮುಂದೆ ಬಿಟ್ಟುಬಿಡಿ. ಅದರಲ್ಲೂ ಕಲ್ಲಂಗಡಿ ಹಣ್ಣನ್ನು ಅಪ್ಪಿತಪ್ಪಿಯೂ ಫ್ರಿಜ್ ನಲ್ಲಿ ಇಡಲೇಬೇಡಿ.
ಇದನ್ನು ಓದಿ : ತಡ ರಾತ್ರಿ ಬೈಕ್ ಮೇಲೆ ಔಟಿಂಗ್ ಮಾಡುತ್ತಿದ್ದ ವ್ಯಕ್ತಿ, ಮುಂದೆ ಆಗಿದ್ದು ಎದೆ ಝಲ್ ಎನ್ನಿಸವಂತಿದೆ!
ಫ್ರಿಜ್ನಲ್ಲಿಟ್ಟ ಕಲ್ಲಂಗಡಿ ಹಣ್ಣನ್ನು ತಿನ್ನುವುದನ್ನು ನಿಲ್ಲಿಸಬೇಕು. ಕಲ್ಲಂಗಡಿಯನ್ನು ರೆಫ್ರಿಜರೇಟರ್ನಲ್ಲಿ ಇಡುವುದಕ್ಕಿಂತ ಕೋಣೆಯ ಉಷ್ಣಾಂಶದಲ್ಲಿ ಇಡುವುದು ಉತ್ತಮ ಎಂದು ಸಂಶೋಧನೆ ತಿಳಿಸುತ್ತದೆ.
ಬಿಸಿಲಿನಿಂದ ಕಲ್ಲಂಗಡಿ ಹಣ್ಣನ್ನು ರೆಫ್ರಿಜಿರೇಟರ್ ನಲ್ಲಿಟ್ಟು ತಿನ್ನಲು ಬಹಳ ತಂಪಾಗಿ ಮತ್ತು ರುಚಿಕರವಾಗಿರುತ್ತದೆ. ಆದರೆ ಕತ್ತರಿಸಿದ ಕಲ್ಲಂಗಡಿ ಹಣ್ಣನ್ನು ಫ್ರಿಜ್ ನಲ್ಲಿ ಇಟ್ಟರೆ ಫುಡ್ ಪಾಯಿಸನ್ ಆಗುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ಕತ್ತರಿಸಿದ ಕಲ್ಲಂಗಡಿ ಹಣ್ಣಿನಲ್ಲಿ ಬ್ಯಾಕ್ಟೀರಿಯಾ ಬೆಳೆಯಲು ಶುರುವಾಗುತ್ತದೆ. ಇದು ಆರೋಗ್ಯಕ್ಕೆ ಬಹಳ ಹಾನಿಕರವಾಗಿರುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI