ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ಬುಧವಾರ ಈ ಕೆಲಸ ಮಾಡಿ
ಬುಧವಾರದಂದು ಗಣಪತಿಯನ್ನು ಪೂಜಿಸಲಾಗುತ್ತದೆ ಮತ್ತು ಈ ದಿನದಂದು ಗಣೇಶನನ್ನು ಸಂತುಷ್ಟಗೊಳಿಸಿದರೆ ವಿಘ್ನ ವಿನಾಶಕನ ವಿಶೇಷ ಆಶೀರ್ವಾದ ಪ್ರಾಪ್ತಿಯಾಗಲಿದೆ ಎಂದು ನಂಬಲಾಗಿದೆ.
ಬೆಂಗಳೂರು: ಹಿಂದೂ ಧರ್ಮದಲ್ಲಿ, ಪ್ರತಿ ದಿನವನ್ನು ಕೆಲವು ದೇವರ ಹೆಸರಿಗೆ ಸಮರ್ಪಿಸಲಾಗುತ್ತದೆ ಮತ್ತು ಬುಧವಾರದಂದು ಗಣಪತಿಯನ್ನು ಪೂಜಿಸಲಾಗುತ್ತದೆ. ವಿಘ್ನ ವಿನಾಶಕನ ಜೊತೆಗೆ, ಬುಧವಾರವನ್ನು ಬುಧ ಗ್ರಹಕ್ಕೂ ಮೀಸಲಾದ ದಿನ ಎಂದು ಹೇಳಲಾಗುತ್ತದೆ. ಬುಧವನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧ ಗ್ರಹವು ಕನ್ಯಾ ಮತ್ತು ಮಿಥುನ ರಾಶಿಯ ಅಧಿಪತಿ. ಬುಧ ಗ್ರಹವನ್ನು ಜ್ಞಾನ, ಏಕಾಗ್ರತೆ, ಮಾತು, ಚರ್ಮ, ಸೌಂದರ್ಯ ಮತ್ತು ಸುಗಂಧದ ಅಂಶವಾಗಿದೆ ಎಂದು ನಂಬಲಾಗಿದೆ. ಬುಧನು ಜಾತಕದಲ್ಲಿ ಸರಿಯಾಗಿದ್ದರೆ ಎಲ್ಲವೂ ಚೆನ್ನಾಗಿರುತ್ತದೆ ಮತ್ತು ಬುಧ ದುರ್ಬಲನಾಗಿದ್ದರೆ ಜೀವನದಲ್ಲಿ ನಾನಾ ರೀತಿಯ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಜೀವನದಲ್ಲಿ ನೀವು ಆರ್ಥಿಕ ಬಿಕ್ಕಟ್ಟಿನ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಬುಧವಾರ ವಿಶೇಷ ಪರಿಹಾರ ಕೈಗೊಳ್ಳುವ ಮೂಲಕ ಈ ಸಮಸ್ಯೆಯಿಂದ ಪಾರಾಗಬಹುದು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- ಮೇ 10ರ ನಂತರ 4 ಪ್ರಮುಖ ಗ್ರಹಗಳ ರಾಶಿ ಪರಿವರ್ತನೆ: ಈ ರಾಶಿಯವರಿಗೆ ಅದೃಷ್ಟ
ಬುಧವಾರದ ದಿನ ಸಕಲ ವಿಘ್ನಗಳನ್ನೂ ನಿವಾರಿಸುವ ವಿಘ್ನ ವಿನಾಶಕನನ್ನು ಭಕ್ತಿಯಿಂದ ಪೂಜಿಸುವುದರಿಂದ ಜೀವನದಲ್ಲಿ ನಾನಾ ರೀತಿಯ ಕಷ್ಟಗಳು ಕೊನೆಗೊಳ್ಳುತ್ತವೆ ಎನ್ನಲಾಗುತ್ತದೆ. ಬುಧವಾರದಂದು ಮಾಡಿದ ವಿಶೇಷ ಪರಿಹಾರವು ನಿಮ್ಮ ಜೀವನದಲ್ಲಿ ಬರುವ ಆರ್ಥಿಕ ತೊಂದರೆಗಳನ್ನು ಕೊನೆಗೊಳಿಸಬಹುದು ಎನ್ನಲಾಗುತ್ತದೆ.
ಆರ್ಥಿಕ ಸಂಕಷ್ಟದಿಂದ ಮುಕ್ತಿ ಪಡೆಯಲು ಬುಧವಾರದಂದು ಈ ಪರಿಹಾರಗಳನ್ನು ಮಾಡಿ:
ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದರೆ, ಯಾವುದೇ ಬುಧವಾರ ಅಥವಾ ಮಾಸಿಕ ಸಂಕಷ್ಟ ಚತುರ್ಥಿಯ ದಿನದಂದು ಶ್ರೀ ಗಣೇಶ ಅಥರ್ವಶೀರ್ಷದ ಈ ಪಠಣದ ನಂತರ ಗಣೇಶನ ಮೂರ್ತಿಯನ್ನು ಮನೆಯಲ್ಲಿ ಸ್ಥಾಪಿಸಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಇರುವ ಎಲ್ಲಾ ನಕಾರಾತ್ಮಕ ಶಕ್ತಿಗಳು ನಾಶವಾಗುತ್ತವೆ ಮತ್ತು ಜೀವನದಲ್ಲಿ ಧನಾತ್ಮಕತೆ ನೆಲೆಸುತ್ತದೆ. ಈ ದಿನದಂದು ಗಣೇಶನನ್ನು ಕ್ರಮಬದ್ಧವಾಗಿ ಪೂಜಿಸುವುದರಿಂದ ಹಣಕಾಸಿನ ತೊಂದರೆಗಳು ದೂರವಾಗುತ್ತವೆ ಮತ್ತು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ ಎಂಬ ನಂಬಿಕೆ ಇದೆ.
ಇದನ್ನೂ ಓದಿ- Shukra Gochar 2022: ಮುಂದಿನ 20 ದಿನಗಳವರೆಗೆ ಈ ರಾಶಿಯವರ ಮೇಲೆ ಹಣದ ಹೊಳೆ ಹರಿಸಲಿದ್ದಾನೆ ಶುಕ್ರ
ಜೀವನದಲ್ಲಿನ ತೊಂದರೆಗಳನ್ನು ತೊಡೆದುಹಾಕಲು, ಬುಧವಾರದಂದು ಹಸುವಿಗೆ ಹುಲ್ಲು ತಿನ್ನಿಸುವುದು ಸಹ ತುಂಬಾ ಒಳ್ಳೆಯದು. ವರ್ಷಕ್ಕೊಮ್ಮೆಯಾದರೂ ಬುಧವಾರದಂದು ಹಸುವಿನ ತೂಕಕ್ಕೆ ಸಮನಾದ ಹುಲ್ಲನ್ನು ಖರೀದಿಸಿ ಗೋಶಾಲೆಗೆ ದಾನ ಮಾಡುವುದರಿಂದ ಒಳ್ಳೆಯ ಫಲ ಸಿಗುತ್ತದೆ ಎಂದು ಹೇಳಲಾಗುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.